Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅಂತು-ಇಂತು ಮಂಗಳ ಗೌರಿ ಧಾರಾವಾಹಿ ಮುಕ್ತಾಯದ ಡೇಟ್ ಅನೌನ್ಸ್ ಮಾಡಿದ ನಿರ್ದೇಶಕ.

Posted on June 28, 2022 By Kannada Trend News No Comments on ಅಂತು-ಇಂತು ಮಂಗಳ ಗೌರಿ ಧಾರಾವಾಹಿ ಮುಕ್ತಾಯದ ಡೇಟ್ ಅನೌನ್ಸ್ ಮಾಡಿದ ನಿರ್ದೇಶಕ.

ಕೊನೆಗೂ ಮಂಗಳ ಗೌರಿ ಸೀರಿಯಲ್ ಅತಿ ಶೀಘ್ರದಲ್ಲಿಯೇ ಮುಕ್ತಾಯಗೊಳ್ಳಲಿದೆ ಇದರ ಜೊತೆಗೆ ನೀವೇನಾದರೂ ಮಂಗಳಗೌರಿ ಮದುವೆ ಸೀರಿಯಲ್ ನ ಅಭಿಮಾನಿಯಾಗಿದ್ದರೆ ನಿಮಗೂ ಕೂಡ ತಕ್ಕ ಮಟ್ಟಿಗೆ ಖುಷಿ ಕೊಡುವ ವಿಷಯ ಏನೆಂದರೆ. ಈ ಮಂಗಳ ಗೌರಿ ಮದುವೆ ಸೀರಿಯಲ್ ಪುಟ್ಟಗೌರಿ ಮದುವೆ ಸೀರಿಯಲ್ ಮುಂದುವರೆದ ಭಾಗವಾಗಿದೆ. ಇದೀಗ ಮಂಗಳ ಗೌರಿ ಮದುವೆ ಸೀರಿಯಲ್ 10 ವರ್ಷಗಳನ್ನು ಪೂರೈಸಿ ಕೊಂಡಿದ್ದು ಈ ಸೀರಿಯಲ್ ಗೆ ಹಲವಾರು ಅಭಿಮಾನಿಗಳು ಸಹ ಇದ್ದಾರೆ. ಹಾಗೆ ಈ ಸೀರಿಯಲ್ ಅನ್ನು ಯಾವಾಗ ಮುಗಿಸುತ್ತಾರೆ ಎಂಬುವವರು ಸಹ ಇದ್ದಾರೆ, ಮತ್ತು ಈ ಸೀರಿಯಲ್ ಮುಗಿದುಹೋಗಿ ಗೊತ್ತಿದೆಯಲ್ಲ ಎಂದು ಬೇಸರಗೊಳ್ಳುವ ಅವರು ಸಹ ಇದ್ದಾರೆ, ಆದರೆ ಈಗ ಮಂಗಳ ಗೌರಿ ಮದುವೆ ಸೀರಿಯಲ್ ಶೀಘ್ರದಲ್ಲಿಯೇ ಮುಕ್ತಾಯಗೊಳ್ಳುವ ಹಂತಕ್ಕೆ ಬಂದಿದೆ ಎಂಬ ಮಾಹಿತಿ ಹೊರ ಬಂದಿದೆ.

ಕೆಲವು ವೀಕ್ಷಕರಿಗೆ ಮಂಗಳ ಗೌರಿ ಸೀರಿಯಲ್ ಮುಗಿಯುತ್ತಿದೆ ಎಂದು ಕೇಳಿದ ತಕ್ಷಣ ಕೆಲವರಿಗೆ ಖುಷಿಯಾಗುತ್ತದೆ ಆದರೆ ಕೆಲವರಿಗೆ ಬೇಸರವಾಗುತ್ತದೆ ಆದರೆ ಅವರಿಗೂ ಸಹ ಖುಷಿಯಾಗುವoತಹ ವಿಷಯ ಏನೆಂದರೆ, ಈ ಸೀರಿಯಲ್ ನ ಕೊನೆಯ ಭಾಗ ಕ್ಲೈಮ್ಯಾಕ್ಸ್ ಬರೋಬ್ಬರಿ ಮೂರು ತಿಂಗಳು ಅಂದರೆ ಜೂನ್ ಜುಲೈ-ಆಗಸ್ಟ್ ಈ ಮೂರು ತಿಂಗಳುಗಳ ಕಾಲ ನಡೆಯಲಿದೆ ಎಂಬ ಮಾಹಿತಿ ಹೊರ ಬಂದಿದೆ ಸೆಪ್ಟೆಂಬರ್ ನಲ್ಲಿ ಈ ಸೀರಿಯಲ್ ಮುಕ್ತಾಯ ಗೊಳ್ಳಲಿದೆ. ಹಾಗೆಯೇ ಮಂಗಳಗೌರಿ ಮದುವೆ ಕಲರ್ಸ್ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ಕನ್ನಡ ಸೂಪರ್‌ಹಿಟ್ ಧಾರಾವಾಹಿಯಾಗಿದ್ದು ಧಾರಾವಾಹಿಯಲ್ಲಿ ಕಾವ್ಯ ಶ್ರೀ ಮತ್ತು ಗಗನ್ ಚಿನ್ನಪ್ಪ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಧಾರಾವಾಹಿಯನ್ನು ಹಿಂದೆ ಪುಟ್ಟ ಗೌರಿ ಮದುವೆ ಎಂದು ಕರೆಯಲಾಗುತ್ತಿತ್ತು, 2018 ರಲ್ಲಿ ಧಾರಾವಾಹಿ ಹೆಸರನ್ನು ಮಂಗಳಗೌರಿ ಮದುವೆ ಎಂದು ಮರುನಾಮಕರಣ ಮಾಡಲಾಯಿತು. ಈ ಧಾರಾವಾಹಿಯನ್ನು 12 ಮಾರ್ಚ್ 2012 ರಂದು ಪ್ರಥಮ ಪ್ರದರ್ಶನ ಮಾಡಲಾಯಿತು, ಇದು ಭಾರತೀಯ ದೂರದರ್ಶನ ಉದ್ಯಮದಲ್ಲಿ ದೀರ್ಘಾವಧಿಯ ಧಾರಾವಾಹಿಗಳಲ್ಲಿ ಒಂದಾಗಿದೆ. ಈ ಹಿಂದೆ ಧಾರಾವಾಹಿಯಲ್ಲಿ ರಕ್ಷಿತ್ ಗೌಡ ಮತ್ತು ರಂಜಿನಿ ರಾಘವನ್ ನಟಿಸಿದ್ದರು, ನಂತರ ಅವರನ್ನು ಬದಲಾಯಿಸಲಾಯಿತು. ಮಂಗಳಗೌರಿ ಮದುವೆ ಕನ್ನಡ ದೂರದರ್ಶನದಲ್ಲಿ ಹೆಚ್ಚು ಇಷ್ಟಪಡುವ ದೈನಂದಿನ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಕಾರ್ಯಕ್ರಮವು ಆಗಾಗ್ಗೆ ಟ್ವಿಸ್ಟ್ ಮತ್ತು ಟರ್ನ್‌ಗಳನ್ನು ಪರಿಚಯಿಸುವ ಮೂಲಕ ವೀಕ್ಷಕರನ್ನು ರಂಜಿಸುತ್ತಿದೆ. ವಾಸ್ತವವಾಗಿ, ವಾಹಿನಿಯು ಪ್ರಸಾರ ಮಾಡಿದ ಮೊದಲ ಐದು ಶೋಗಳಲ್ಲಿ ಮತ್ತು TRP ಚಾರ್ಟ್‌ಗಳಲ್ಲಿ ಉತ್ತಮ ಸ್ಕೋರ್ ಗಳಿಸಿದ ಏಕೈಕ ಕಾರ್ಯಕ್ರಮ ಇದಾಗಿದೆ.

ಈ ಸೀರಿಯಲ್ ಹಲವಾರು ಕಾರ್ಯಕ್ರಮಗಳಲ್ಲಿ ಅಂದರೆ ಕೆಲವೊಂದು ಊರುಗಳಿಗೆ ಹೋಗಿ ಅಲ್ಲಿ ಸೀರಿಯಲ್ ಸಂತೆ ಎಂಬ ಕಾರ್ಯಕ್ರಮಗಳನ್ನು ಮಾಡಿ ಅಲ್ಲಿ ಜನಗಳ ಮೆಚ್ಚುಗೆಯನ್ನು ಪಡೆದುಕೊಂಡಿದೆ ಮತ್ತು ವಾಹಿನಿಯಲ್ಲಿ ಪಾತ್ರ ನಿರ್ವಹಿಸುತ್ತಿರುವ ಪ್ರತಿಯೊಬ್ಬರನ್ನು ಕೂಡ ಪ್ರೇಕ್ಷಕರು ನೇರವಾಗಿ ಮಾತನಾಡಿ ಸುವಂತಹ ಅವಕಾಶವಿತ್ತು ಆದ್ದರಿಂದಲೇ ಹಲವಾರು ಪ್ರೇಕ್ಷಕರು ಸೀರಿಯಲ್ ಸಂತೆ ಗೆ ಬರುತ್ತಿದ್ದರು. ವೀಕ್ಷಕರು ಸೀರಿಯಲ್ ನಲ್ಲಿ ಪಾತ್ರ ನಿರ್ವಹಿಸುತ್ತಿದ್ದ ಹೆಚ್ಚಿನ ನಟ ನಟಿಯರನ್ನು ತಮ್ಮ ಮನೆಯ ಮಕ್ಕಳು ಎಂದೆ ಭಾವಿಸುತ್ತಿದ್ದರು, ಇದರಿಂದ ಸೀರಿಯಲ್ ನ ಎಲ್ಲಾ ನಟ-ನಟಿಯರಿಗೆ ಮತ್ತು ಎಲ್ಲಾ ರಂಗದಲ್ಲಿಯೂ ಕೆಲಸ ನಿರ್ವಹಿಸುತ್ತಿರುವ ವರೆಗೂ ಒಂದು ಉತ್ತೇಜನ ಸಿಗುತ್ತಿತ್ತು ಎಂದು ಹೇಳಲು ತಪ್ಪಾಗುವುದಿಲ್ಲ. ಸದ್ಯಕ್ಕೆ ಮಂಗಳಗೌರಿ ಮುಕ್ತಾಯವಾಗುತ್ತಿರುವುದರಿಂದ ಸಾಕಷ್ಟು ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. ಮಂಗಳ ಗೌರಿ ಧಾರಾವಾಹಿ ಮುಕ್ತಾಯ ವಾಗುತ್ತಿರುವುದು ನಿಮ್ಮಲ್ಲಿ ಬೇಸರ ತಂದಿದೆಯಾ ಅಥವಾ ಇಲ್ಲವಾ ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

Serial Loka Tags:Mangala gowri, Puttagowri
WhatsApp Group Join Now
Telegram Group Join Now

Post navigation

Previous Post: ದುಬಾರಿ ಬೆಲೆಯ ಕ್ಲಾಸಿ ಗಿಫ್ಟ್ ನೀಡಿದ ಶಿವಣ್ಣ, ಗಿಫ್ಟ್ ನೋಡಿ ಭಾವುಕರಾದ ಅನುಶ್ರೀ ಈ ವಿಡಿಯೋ ನೋಡಿ.
Next Post: ದರ್ಶನ್ ಅಂದು ಜೈಲು ಸೇರಲು ನಿಜವಾದ ಕಾರಣ ಏನು ಗೊತ್ತಾ.? ಇಷ್ಟು ದಿನ ತಿಳಿದಿದ್ದು ಸುಳ್ಳು. ಸತ್ಯಾಂಶ ಇಲ್ಲಿದೆ ನೋಡಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore