ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಫ್ರಿಡ್ಜ್ ಇದ್ದೇ ಇರುತ್ತದೆ ಎಂದೇ ಹೇಳಬಹುದು. ಆದರೆ ಕೆಲವೊಂದಷ್ಟು ಜನರ ಮನೆ ಯಲ್ಲಿ ಇರುವುದಿಲ್ಲ ಅಂತವರು ಯಾವುದೇ ರೀತಿಯ ಹೂವನ್ನು ಹೆಚ್ಚು ದಿನಗಳ ವರೆಗೆ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಅಂದರೆ ಒಂದ ರಿಂದ ಎರಡು ದಿನ ಇಟ್ಟುಕೊಳ್ಳಬಹುದೇ ಹೊರತು ಇನ್ನು ಹೆಚ್ಚಿನ ದಿನಗಳವರೆಗೆ ಅದನ್ನು ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ.
ಹೌದು ಹಾಗಾಗಿ ಅವರು ಹೆಚ್ಚಿನ ಖರೀದಿ ಮಾಡುವುದಿಲ್ಲ ಎಂದೇ ಹೇಳ ಬಹುದು. ಆದರೆ ಈ ದಿನ ನಾವು ಹೇಳುವಂತಹ ಟಿಪ್ಸ್ ಅನುಸರಿಸಿದರೆ ಯಾವುದೇ ಫ್ರಿಡ್ಜ್ ಇಲ್ಲದೆ ಇದ್ದರೂ ಕೂಡ ಹೆಚ್ಚು ದಿನಗಳವರೆಗೆ ಹೂವನ್ನು ಇಟ್ಟುಕೊಳ್ಳಬಹುದು. ಹಾಗಾದರೆ ಈ ದಿನ ಯಾವ ಕೆಲವು ಟಿಪ್ಸ್ ಗಳನ್ನು ಅನುಸರಿಸುವುದ ರಿಂದ ಹೂಗಳನ್ನು ಹೆಚ್ಚು ದಿನಗಳ ವರೆಗೆ ಇಟ್ಟುಕೊಳ್ಳಬಹುದು ಹಾಗೂ ಅಡುಗೆಮನೆಯ ವಿಚಾರವಾಗಿ ಕೆಲವೊಂದಷ್ಟು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.
* ಮೊದಲನೆಯದಾಗಿ ಯಾವುದೇ ರೀತಿಯ ಹೂವಾಗಿದ್ದರೂ ಅದನ್ನು ಮೊದಲು ಒಂದು ಟಿಶ್ಯೂ ಪೇಪರ್ ಒಳಗಡೆ ಹಾಕಿ ಅದನ್ನು ಮುಚ್ಚ ಬೇಕು ಆನಂತರ ಅದರ ಮೇಲೆ ನ್ಯೂಸ್ ಪೇಪರ್ ತೆಗೆದುಕೊಂಡು ಬುತ್ತಿ ಕಟ್ಟುವ ಹಾಗೆ ಕಟ್ಟಿ ಅದನ್ನು ಒಂದು ಪಾತ್ರೆಯ ಒಳಗೆ ಹಾಕಬೇಕು ಅದು ಸಂಪೂರ್ಣವಾಗಿ ಗಾಳಿ ಆಡುವ ಹಾಗೆ ಇರಬಾರದು ಸ್ವಲ್ಪ ಗಾಳಿ ಆಡುವ ರೀತಿ ಇರಬೇಕು ಈ ರೀತಿ ನೀವು ಫ್ರಿಡ್ಜ್ ನಲ್ಲಿ ಇಡುವುದರಿಂದ ಹೂವನ್ನು 15 ರಿಂದ 20 ದಿನ ಇಡಬಹುದು.
* ಅದೇ ರೀತಿಯಾಗಿ ಫ್ರಿಡ್ಜ್ ಇಲ್ಲದೆ ಇರುವವರು ಹೂವನ್ನು ಹೆಚ್ಚು ದಿನ ಗಳವರೆಗೆ ಹೇಗೆ ಇಟ್ಟುಕೊಳ್ಳುವುದು ಹಾಗೂ ಅವರು ಯಾವ ಟಿಪ್ಸ್ ಅನುಸರಿಸಬೇಕು ಎಂದು ನೋಡುವುದಾದರೆ. ಸಾಮಾನ್ಯವಾಗಿ ನೀವು ಯಾವುದೇ ದಿನಸಿ ಸಾಮಾನುಗಳನ್ನು ಕೊಂಡರೆ ಇತ್ತೀಚಿಗೆ ಬಟ್ಟೆ ಬ್ಯಾಗ್ ಗಳನ್ನು ಕೊಡುತ್ತಾರೆ ಅದನ್ನು ಮೊದಲು ಸ್ವಲ್ಪ ತೇವ ಮಾಡಿಕೊಂಡು ಅದರ ಒಳಗಡೆ ಹೂವನ್ನು ಇಟ್ಟು ಅದನ್ನು ಒಂದು ಪಾತ್ರೆಯಲ್ಲಿ ಹಾಕಿ ಮುಚ್ಚಿಡಬೇಕು.
ಈ ರೀತಿ ನೀವು ಹೂವನ್ನು ತೆಗೆದುಕೊಂಡ ನಂತರ ಅದರ ಮೇಲೆ ಸ್ವಲ್ಪ ನೀರನ್ನು ಚಿಮುಕಿಸಿ ಹಾಗೆಯೇ ಪಾತ್ರೆಯಲ್ಲಿ ಇಡು ವುದರಿಂದ ಎಂಟರಿಂದ ಹತ್ತು ದಿನಗಳ ಕಾಲ ಫ್ರಿಡ್ಜ್ ಇಲ್ಲದೆ ಹೂವನ್ನು ಅದೇ ರೀತಿಯಾಗಿ ಇಟ್ಟುಕೊಳ್ಳಬಹುದು. ಈ ಒಂದು ಮಾಹಿತಿ ಪ್ರತಿಯೊಬ್ಬರಿಗೂ ಕೂಡ ಅನುಕೂಲವಾಗುತ್ತದೆ ಎಂದು ಹೇಳಬಹುದು ಆದರೆ ಅದರ ಮೇಲೆ ನೀರು ಚಿಮುಕಿಸುವುದನ್ನು ಮಾತ್ರ ಮರೆಯ ಬಾರದು.
* ಅದೇ ರೀತಿಯಾಗಿ ಸೇಮಂತಿಗೆ ಗುಲಾಬಿ ಹೂಗಳನ್ನು ಫ್ರಿಡ್ಜ್ ನಲ್ಲಿ ಒಂದು ತಿಂಗಳ ತನಕ ಹೇಗೆ ಇಡುವುದು ಎಂದು ನೋಡುವುದಾದರೆ ಯಾವುದಾದರೂ ಒಂದು ಪ್ಲಾಸ್ಟಿಕ್ ಡಬ್ಬಿ ತೆಗೆದುಕೊಳ್ಳಬೇಕು ಅದರ ಸುತ್ತ ನ್ಯೂಸ್ ಪೇಪರ್ ಹಾಕಬೇಕು ಹಾಗೂ ಕೆಳಗೆ ಕೂಡ ನ್ಯೂಸ್ ಪೇಪರ್ ಹಾಕಬೇಕು ತಂದಿರುವಂತಹ ಹೂವಿನಲ್ಲಿ ಯಾವುದೇ ರೀತಿಯ ತೇವಾಂಶ ಇಲ್ಲದ ಹಾಗೆ ಒಣಗಿಸಿ.
ಆನಂತರ ಅದನ್ನು ಆ ಪ್ಲಾಸ್ಟಿಕ್ ಬಾಕ್ಸ್ ಒಳಗಡೆ ಇಟ್ಟು ಫ್ರಿಡ್ಜ್ ನಲ್ಲಿ ಇಡುವುದರಿಂದ ಒಂದು ತಿಂಗಳವರೆಗೆ ಇಡಬಹುದು. ಅದೇ ರೀತಿಯಾಗಿ ಕಟ್ಟಿದ ಹೂವನ್ನು ಸಹ ಇದೇ ರೀತಿಯಾಗಿ ಚಿಕ್ಕ ಬಾಕ್ಸ್ ನಲ್ಲಿ ಟಿಶ್ಯೂ ಪೇಪರ್ ಹಾಕಿ ಮೇಲೆ ಮುಚ್ಚಿ ಆನಂತರ ಇಡುವುದರಿಂದಲೂ ಕೂಡ ಈ ಹೂವನ್ನು ಒಂದು ತಿಂಗಳವರೆಗೆ ಇಡಬಹುದು.