ಇತ್ತೀಚಿನ ದಿನದಲ್ಲಿ ಮಂಡಿ ನೋವು ಸಾಮಾನ್ಯವಾಗಿ ಪ್ರತಿಯೊಬ್ಬರ ಲ್ಲಿಯೂ ಕೂಡ ಕಾಣಿಸಿಕೊಳ್ಳುವಂತಹ ಸಮಸ್ಯೆಯಾಗಿದ್ದು ಈ ಸಮಸ್ಯೆ ಬಂದವರು ಇದರಿಂದ ಹಲವಾರು ರೀತಿಯ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದೇ ಹೇಳಬಹುದು.
ಹೌದು ಮಂಡಿ ನೋವು ಇರುವಂತಹ ವ್ಯಕ್ತಿಗಳು ಹೆಚ್ಚಿನ ದೂರ ನಡೆಯಲು ಸಾಧ್ಯವಾಗುವುದಿಲ್ಲ ಕೆಳಗಡೆ ಕುಳಿತರೆ ಮೇಲೆ ಎದ್ದೇಳುವುದಕ್ಕೂ ಬೇರೆಯವರ ಸಹಾಯ ಪಡೆಯುತ್ತಾರೆ. ಇಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ.
ಹಾಗಾದರೆ ಈ ದಿನ ಮಂಡಿ ನೋವಿನ ಸಮಸ್ಯೆ ನಿಮ್ಮ ಜೀವನದಲ್ಲಿ ಯಾವುದೇ ಕಾರಣಕ್ಕೂ ಬರಬಾರದು ಎಂದರೆ ಯಾವ ರೀತಿಯ ಕೆಲವು ಉತ್ತಮವಾದ ವಿಧಾನಗಳನ್ನು ಅನುಸರಿಸಬೇಕು ಹಾಗೂ ಮಂಡಿ ನೋವು ಬರದೇ ಇರಬೇಕು ಎಂದರೆ ನಾವು ಯಾವ ರೀತಿಯಾದಂತಹ ಜೀವನಶೈಲಿಯನ್ನು ಅನುಸರಿಸಬೇಕು
ಹಾಗೂ ನಮ್ಮ ದಿನನಿತ್ಯದ ಜೀವನದಲ್ಲಿ ಯಾವ ರೀತಿಯ ಕೆಲವು ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಈ ಕೆಳಗೆ ತಿಳಿಯೋಣ.
1. ಮೊದಲನೆಯದಾಗಿ ಪ್ರತಿಯೊಬ್ಬರೂ ಕೂಡ ತಮ್ಮ ದೇಹದ ತೂಕದ ಬಗ್ಗೆ ಹೆಚ್ಚಿನ ಗಮನವನ್ನು ವಹಿಸಬೇಕು. ಮಂಡಿ ಎನ್ನುವಂತದ್ದು ಎರಡು ಮೂಳೆಗಳಿಂದ ಸೇರಿರುವಂತಹ ಒಂದು ವ್ಯವಸ್ಥೆ. ಇದು ನಮ್ಮ ಇಡೀ ದೇಹದ ತೂಕವನ್ನು ತಡೆದುಕೊಳ್ಳುವಂತಹ ಶಕ್ತಿಯನ್ನು ಹೊಂದಿರುತ್ತದೆ ಆದರೆ ಅದು ಹೆಚ್ಚಾದರೆ ಮೂಳೆಗಳ ಮಧ್ಯೆ ಇರುವಂತಹ ಒಂದು ಅಂಶ ದಿನೇ ದಿನೇ ಸವೆಯುತ್ತಾ ಬರುತ್ತದೆ.
ಆದ್ದರಿಂದ ನಮ್ಮ ದೇಹದ ತೂಕವನ್ನು ಸರಿಯಾಗಿ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದರ ಜೊತೆಗೆ ನಾವು ನಮ್ಮ ದಿನನಿತ್ಯದ ಜೀವನದಲ್ಲಿ ನಮ್ಮ ಆಹಾರ ಪದ್ಧತಿ ಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬೇಕು. ಉತ್ತಮವಾದಂತಹ ಆಹಾರಗಳನ್ನು ಸೇವನೆ ಮಾಡಬೇಕು ಪ್ರತಿನಿತ್ಯ ಯೋಗಾಭ್ಯಾಸ ಪ್ರಾಣಾಯಾಮ ಧ್ಯಾನ ಹೀಗೆ ಇಂತಹ ಕೆಲವೊಂದಷ್ಟು ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು.
2. ಎರಡನೆಯದು ನಿಯಮಿತ ವ್ಯಾಯಾಮ :- ಪ್ರತಿಯೊಬ್ಬರೂ ಕೂಡ ಪ್ರತಿನಿತ್ಯ ನಿಯಮಿತವಾಗಿ ವ್ಯಾಯಾಮವನ್ನು ಮಾಡುವುದರಿಂದ ನಮ್ಮ ಮಂಡಿ ಸುತ್ತಮುತ್ತ ಇರುವಂತಹ ಮಾಂಸ ಖಂಡ ಗಟ್ಟಿಯಾಗಿರುತ್ತದೆ. ಇದರ ಜೊತೆ ನಮ್ಮ ಇಡೀ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿರುತ್ತದೆ ಹಾಗಾದರೆ ಯಾವ ರೀತಿಯಾದಂತಹ ವ್ಯಾಯಾಮಗಳನ್ನು ಮಾಡಬೇಕು ಎಂದು ನೋಡುವುದಾದರೆ
* ವಾಕಿಂಗ್ ಮಾಡುವುದು
* ಸೈಕ್ಲಿಂಗ್
* ಸ್ವಿಮ್ಮಿಂಗ್
ಇದರ ಜೊತೆ ಕುಳಿತುಕೊಂಡೆ ಮಾಡುವಂತಹ ಎರಡು ವ್ಯಾಯಾಮ ಹಾಗೂ ಮಲಗಿಕೊಂಡು ಮಾಡುವಂತಹ ಎರಡು ವ್ಯಾಯಾಮಗಳನ್ನು ಮಾಡುವುದರಿಂದ ನಮ್ಮ ಮಂಡಿಗಳ ಮೇಲೆ ಉಂಟಾಗುವಂತಹ ಸವಕಳಿಯನ್ನು ನಾವು ತಡೆಯಬಹುದು.
3. ನಮ್ಮ ಮೊಣಕಾಲನ್ನು ನಾವು ಕಾಪಾಡಿಕೊಳ್ಳುವುದು :- ಹೌದು ನಾವು ಮೆಟ್ಟಿಲುಗಳನ್ನು ಹತ್ತುವ ಸಮಯದಲ್ಲಿ
ಯಾವುದಾದರೂ ಭಾರವಾಗಿರುವ ವಸ್ತುವನ್ನು ಎತ್ತುವಂತಹ ಸಮಯ ದಲ್ಲಿ ನಾವು ನಮ್ಮ ಬೆನ್ನಿನ ಮೂಳೆಗೆ ಹೆಚ್ಚಿನ ಒತ್ತಡವನ್ನು ಹಾಕುವುದ ರಿಂದ ನಮ್ಮ ಮಂಡ್ಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಉದಾಹರಣೆಗೆ ಯಾವುದಾದರೂ ಭಾರವಾದ ವಸ್ತುವನ್ನು ಎತ್ತಬೇಕು ಎಂದರೆ ನಮ್ಮ ಬೆನ್ನು ಹಿಂಭಾಗದಲ್ಲಿ ಇರುವ ಹಾಗೆ ಕೈಯಿಂದ ಮಾತ್ರ ಎತ್ತಬೇಕು ಬದಲಿಗೆ ಬೆನ್ನನ್ನು ಬಗ್ಗಿಸಿ ಎತ್ತುವುದರಿಂದ ನಮ್ಮ ಬೆನ್ನಿನ ಮೂಳೆ ಹಾಗೂ ಮೊಣಕಾಲಿಗೆ ಹೆಚ್ಚು ಒತ್ತಡ ಬೀಳುತ್ತದೆ ಇದರಿಂದ ನಮ್ಮ ಮೂಳೆಗಳ ಸವೆತವು ಕೂಡ ಹೆಚ್ಚಾಗುತ್ತದೆ.
ಹಾಗಾಗಿ ಪ್ರತಿ ಯೊಬ್ಬರೂ ಕೂಡ ಯಾವುದೇ ರೀತಿಯ ಕೆಲಸವನ್ನು ಮಾಡುತ್ತಿದ್ದರೆ ವಾಕಿಂಗ್ ಮಾಡುತ್ತಿದ್ದಾರೆ ಜಿಮ್ ಗೆ ಹೋಗಿ ವ್ಯಾಯಾಮ ಮಾಡುತ್ತಿದ್ದರೆ ಕಡ್ಡಾಯವಾಗಿ ಮಾಡುವ ಅವಶ್ಯಕತೆ ಇರುವುದಿಲ್ಲ ಬದಲಿಗೆ ಇಂತಿಷ್ಟು ಸಮಯವನ್ನು ನಾವು ಕೊಡಬೇಕು.
ಅಂದರೆ ಒಂದೇ ಬಾರಿ ಪ್ರತಿನಿತ್ಯ ಮಾಡುವ ಅವಶ್ಯಕತೆ ಇಲ್ಲ ಬದಲಿಗೆ ಒಂದು ದಿನ ಮಾಡಿದರೆ ಮತ್ತೊಂದು ದಿನ ಬೇರೆ ಎಕ್ಸರ್ಸೈಜ್ ಮಾಡುವುದರ ಮೂಲಕ ಆ ಒಂದು ದೇಹದ ಭಾಗಕ್ಕೆ ನಾವು ವಿಶ್ರಾಂತಿಯನ್ನು ಕೊಡಬೇಕಾಗುತ್ತದೆ ಈ ರೀತಿ ಮಾಡುವುದರಿಂದ ನಮ್ಮ ಮೂಳೆ ಸವೆತವನ್ನು ತಡೆಗಟ್ಟಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.