ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಹಲವಾರು ಜನರಿಗೆ ನಿದ್ರಾಹೀನತೆಯ ಸಮಸ್ಯೆ ಎನ್ನುವುದು ಇದೆ. ಹೌದು ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಅನುಸರಿಸುತ್ತಿರುವಂತಹ ಜೀವನ ಶೈಲಿ ಆಹಾರ ಶೈಲಿಯಿಂದ ಈ ಒಂದು ನಿದ್ರಾಹೀನತೆಯ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಪ್ರತಿಯೊಬ್ಬರೂ ಕೂಡ ಇತ್ತೀಚಿನ ದಿನದಲ್ಲಿ ತಮ್ಮ ಕೆಲಸದ ವಿಚಾರವಾಗಿ ಹಲವಾರು ರೀತಿಯ ಕಷ್ಟಕರವಾದಂತಹ ಕೆಲಸಗಳನ್ನು ಇಡೀ ರಾತ್ರಿ ಮಾಡುವಂತಹ ಸಂದರ್ಭಗಳು ಕೂಡ ಇರುತ್ತದೆ. ಇದರಿಂದಾಗಿ ಒಬ್ಬ ವ್ಯಕ್ತಿ ನಿದ್ರೆಯ ಸಮಯದಲ್ಲಿ ನಿದ್ರೆಯನ್ನು ಮಾಡಲು ಕೂಡ ಸಾಧ್ಯವಾಗುವುದಿಲ್ಲ ಆದ್ದರಿಂದ ಆ ವ್ಯಕ್ತಿ ತನ್ನ ಜೀವನದಲ್ಲಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಒಬ್ಬ ವ್ಯಕ್ತಿ ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿ ರುವುದಕ್ಕೆ ಕಾರಣ ಏನು ಹಾಗೂ ಈ ಒಂದು ಸಮಸ್ಯೆ ಬಂದ ಮೇಲೆ ಯಾವ ಕೆಲವು ಪರಿಹಾರ ಮಾರ್ಗಗಳನ್ನು ಅನುಸರಿಸುವುದರಿಂದ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.
ಹಾಗೂ ರಾತ್ರಿ ಊಟ ಆದ ಮೇಲೆ ಪ್ರತಿಯೊಬ್ಬರು ಮಾಡಬೇಕಾಗಿರುವಂತಹ ಪ್ರಮುಖವಾದ 10 ಕೆಲಸಗಳು ಏನು ಹೀಗೆ ಮಾಡುವುದರಿಂದ ಯಾವ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದರ ಮೂಲಕ ಪ್ರತಿಯೊಬ್ಬರು ಗಾಢವಾದ ನಿದ್ರೆಯನ್ನು ಮಾಡಬಹುದು ಹೀಗೆ ಇನ್ನೂ ಹಲವಾರು ವಿಷಯವಾಗಿ ಸಂಬಂಧಿಸಿದ ಮಾಹಿತಿಯನ್ನು ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.
ಇತ್ತೀಚಿನ ದಿನದಲ್ಲಿ ಹೆಚ್ಚಿನ ಜನ ಸರಿಯಾದ ಸಮಯಕ್ಕೆ ನಿದ್ರೆ ಮಾಡು ತ್ತಿಲ್ಲ ಹೌದು ಕೆಲಸದ ಒತ್ತಡದಿಂದ ಅವರು ಹೆಚ್ಚಿನ ಸಮಯದವರೆಗೆ ಕೆಲಸವನ್ನೇ ಮಾಡುತ್ತಿರುತ್ತಾರೆ ಒಂದೇ ಸಮನೆ ಕುಳಿತುಕೊಂಡು ಕೆಲಸವನ್ನು ಮಾಡುತ್ತಿರುತ್ತಾರೆ. ಇದರಿಂದ ಅವರ ದೇಹಕ್ಕೆ ಯಾವುದೇ ರೀತಿಯ ಕೆಲಸ ಇರುವುದಿಲ್ಲ ಕೇವಲ ಅವರ ಕೈ ಮತ್ತು ಕಣ್ಣಿಗೆ ಮಾತ್ರ ಕೆಲಸ ಇರುತ್ತದೆ ಇದರಿಂದ ಅವರಿಗೆ ಯಾವುದೇ ರೀತಿಯ ಚಲನವಲ ನದ ಬಗ್ಗೆಯೂ ಕೂಡ ಗಮನವೂ ಇರುವುದಿಲ್ಲ.
ಇದರಿಂದಾಗಿ ಅವರ ದೇಹದಲ್ಲಿ ವಾತ ಪಿತ್ತ ಕಫದ ಪ್ರಮಾಣ ಹೆಚ್ಚಾಗುತ್ತಿರುತ್ತದೆ ಇದರಿಂದಾಗಿ ಯೂ ಕೂಡ ದೇಹದಲ್ಲಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಪ್ರತಿನಿತ್ಯ ಸರಿಸುಮಾರು 8 ಗಂಟೆಗಳ ಕಾಲವಾದರೂ ಗಾಢವಾದoತಹ ನಿದ್ರೆಯನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಆ ವ್ಯಕ್ತಿ ಆರೋಗ್ಯದಿಂದ ಇರಲು ಅವನು ಎಂಟು ಗಂಟೆಗಳ ಕಾಲ ನಿದ್ರಿಸಬೇಕಾಗಿರುವುದು ಬಹಳ ಮುಖ್ಯವಾಗಿರುತ್ತದೆ.
* ಶಾರೀರಿಕವಾಗಿ ಶ್ರಮ ಇಲ್ಲದೇ ಇದ್ದರೆ ಗಾಡವಾದ ನಿದ್ರೆ ಬರುವುದಿಲ್ಲ ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಬೆವರು ಸುರಿಯುವಂತಹ ಕೆಲಸವನ್ನು ಮಾಡಬೇಕು ಅಂದರೆ ಅವನ ಶರೀರಕ್ಕೆ ಶ್ರಮ ಇದ್ದರೆ ಮಾತ್ರ ಅವನಿಗೆ ಗಾಢವಾದ ನಿದ್ರೆ ಬರುತ್ತದೆ.
ಹಾಗಾದರೆ ಈ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬೇಕು ಎಂದರೆ ಯಾವ ಕೆಲವು ಕ್ರಮಗಳನ್ನು ಅನುಸರಿಸಬೇಕು ಎಂದು ನೋಡುವುದಾದರೆ ಪ್ರತಿನಿತ್ಯ ಕಪಾಲಭಾತಿ, ಬ್ರಾಮರಿ, ನಾಡಿ ಶುದ್ದಿ ಪ್ರಾಣಾಯಾಮ, ಉಜ್ಜಾಯಿ ಪ್ರಾಣಯಾಮ, ಮತ್ತು ಬಸ್ತ್ರಿಕ ಪ್ರಾಣಾ ಯಾಮವನ್ನು ಮಾಡಬೇಕು.
ಈ ರೀತಿ ಪ್ರತಿನಿತ್ಯ ಪ್ರಾಣಾಯಾಮವನ್ನು ಮಾಡುವುದರಿಂದ ಮನೋ ರೋಗಗಳು ಬರುವುದಿಲ್ಲ ಇದರಿಂದ ನಿದ್ರಾ ಹೀನತೆಯ ಸಮಸ್ಯೆ ದೂರವಾಗುತ್ತದೆ. ಇದರ ಜೊತೆಗೆ ನಾವು ಪ್ರತಿನಿತ್ಯ ಮಲಗುವ 2 ಗಂಟೆಯ ಮೊದಲು ನಮ್ಮ ಆಹಾರವನ್ನು ಸೇವನೆ ಮಾಡಿರಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.