ಬಾತ್ರೂಮ್ ನಲ್ಲಿರುವಂತಹ ಬಕೆಟ್ ಅನ್ನು ನಾವು ಪದೇಪದೇ ಸ್ವಚ್ಛವಾಗಿ ತೊಳೆಯುವುದಿಲ್ಲ ಬದಲಿಗೆ ನೀರನ್ನು ಹಾಕಿ ತೊಳೆದು ಹಾಗೆ ಇಡುತ್ತೇವೆ ಅದರಿಂದ ಬಕೆಟ್ ನಲ್ಲಿ ಒಂದು ರೀತಿಯ ಕೊಳೆ ಕಟ್ಟಿಕೊಂಡಿರುತ್ತದೆ. ಈ ಬಕೆಟ್ ನಲ್ಲಿ ನೀರನ್ನು ಹಾಕಿ ನಾವು ಸ್ನಾನ ಮಾಡುವುದರಿಂದ ಅದರಲ್ಲಿ ಇರುವಂತಹ ಕೊಳೆ ಅಂಶವು ನಮ್ಮ ದೇಹಕ್ಕೆ ಸೇರಿ ಹಲವಾರು ರೀತಿಯ ರೋಗಗಳು ಸಹ ಬರಬಹುದು.
ಹಾಗಾಗಿ ನಾವು ಬಾತ್ರೂಮ್ ನಲ್ಲಿರುವಂತಹ ಬಕೆಟ್ ಹಾಗೂ ಚೊಂಬನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹಾಗೂ ಅದರಲ್ಲಿ ಯಾವುದೇ ರೀತಿಯ ಮಣ್ಣು ಕೂರದ ಹಾಗೆ ಅದನ್ನು ಉಜ್ಜಿ ತಿಕ್ಕಿ ತೊಳೆಯುವುದು ಬಹಳ ಮುಖ್ಯವಾಗಿರುತ್ತದೆ.
ಮನೆಯಲ್ಲಿರುವಂತಹ ಕೆಲವೊಂದಷ್ಟು ಜನ ಮನೆಗೆ ಯಾರಾದರೂ ಅತಿಥಿಗಳು ಬರುತ್ತಿದ್ದ ಸಮಯವನ್ನು ನೋಡಿ ಆಗ ಮಾತ್ರ ಬಾತ್ರೂಮ್ ಹಾಗೂ ಅಲ್ಲಿ ಇರುವಂತಹ ವಸ್ತುಗಳನ್ನು ಸ್ವಚ್ಛವಾಗಿ ಇಡಲು ಪ್ರಯತ್ನಿಸುತ್ತಾರೆ. ಆದರೆ ಈ ರೀತಿ ಮಾಡುವುದರ ಬದಲು ಎರಡು ದಿನಗಳಿ ಗೊಮ್ಮೆ ನಿಮ್ಮ ಬಾತ್ರೂಮ್ ಅನ್ನು ಹಾಗೂ ಅಲ್ಲಿರುವಂತಹ ವಸ್ತು ಗಳನ್ನು ಸ್ವಚ್ಛವಾಗಿ ಮಾಡಿಕೊಂಡರೆ ಯಾರೇ ತಕ್ಷಣ ಬಂದರೂ ತಲೆಕೆಡಿಸಿಕೊಳ್ಳುವಂತಹ ಅವಶ್ಯಕತೆ ಬರುವುದಿಲ್ಲ.
ಮನೆಗೆ ತಕ್ಷಣವೇ ಯಾರೇ ಬಂದರೂ ಕೂಡ ನಮ್ಮ ಮನೆ ಸ್ವಚ್ಛವಾಗಿದ್ದರೆ ಅವರು ಕೂಡ ಸಂತೋಷ ಪಡುತ್ತಾರೆ ನಾವು ಕೂಡ ಇದೇ ರೀತಿಯಾಗಿ ಇಟ್ಟುಕೊಳ್ಳ ಬೇಕು ಎಂದು ಪ್ರಯತ್ನಿಸುತ್ತಾರೆ. ಹಾಗಾದರೆ ಈ ದಿನ ಬಾತ್ರೂಮ್ ಹಾಗೂ ಬಾತ್ರೂಮ್ ನಲ್ಲಿ ಇರುವಂತಹ ಬಕೆಟ್ ಹಾಗೂ ಚೊಂಬನ್ನು ಹೇಗೆ ಸ್ವಚ್ಛ ಮಾಡುವುದು ಹಾಗೂ ಅದಕ್ಕೆ ಯಾವ ಪದಾರ್ಥಗಳು ಬೇಕಾಗುತ್ತದೆ.
ಅದನ್ನು ಯಾವ ವಿಧಾನ ಅನುಸರಿಸಿ ಸಂಪೂರ್ಣವಾಗಿ ಸ್ವಚ್ಛ ಮಾಡ ಬಹುದು ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ. ಬಾತ್ರೂಮ್ ಬಕೆಟ್ ಹಾಗೂ ಚೊಂಬನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಬೇಕು ಎಂದರೆ ಯಾವ ಬಹಳ ಪ್ರಮುಖವಾದ ಪದಾರ್ಥಗಳು ಬೇಕಾಗುತ್ತದೆ ಎಂದು ನೋಡುವುದಾದರೆ.
* ಅಡುಗೆ ಸೋಡಾ
* ವಿನಿಗರ್
* ಉಪ್ಪು.
ಕೆಲವೊಂದಷ್ಟು ಜನರಿಗೆ ಆಶ್ಚರ್ಯ ಎನಿಸಬಹುದು ಹೌದು. ಏನಿದು ಅಡುಗೆಗೆ ಉಪಯೋಗಿಸುವಂತಹ ಪದಾರ್ಥಗಳನ್ನು ನಾವು ಬಳಸಿ ಕೊಂಡು ಹೇಗೆ ಬಾತ್ರೂಮ್ ನಲ್ಲಿ ಇರುವಂತಹ ಬಕೆಟ್ ಹಾಗೂ ಚೊಂಬನ್ನು ಸ್ವಚ್ಛ ಮಾಡಬಹುದು ಎಂದು. ಆದರೆ ಇದು ಸತ್ಯ ಹೌದು ಈ ಮೂರು ಪದಾರ್ಥದಲ್ಲಿ ಇರುವಂತಹ ಅಂಶ ಅಡುಗೆಯ ರುಚಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಬಾತ್ರೂಮ್ ನಲ್ಲಿ ಇರುವಂತಹ ವಸ್ತುಗಳನ್ನು ಸಹ ಸ್ವಚ್ಛ ಮಾಡುವುದಕ್ಕೆ ಅಷ್ಟೇ ಅನುಕೂಲಕರವೂ ಸಹ ಆಗಿದೆ.
ಹಾಗಾದರೆ ಇದನ್ನು ಹೇಗೆ ಬಳಸುವುದು ಎಂದು ನೋಡುವುದಾದರೆ. ಒಂದು ಬಕೆಟ್ ನಲ್ಲಿ ಉಪ್ಪು ಅಡುಗೆ ಸೋಡಾ ವಿನಿಗರ್ ಇಷ್ಟನ್ನು ಹಾಕಿ ಬಾತ್ರೂಮ್ ನಲ್ಲಿ ಇರುವಂತಹ ಬಕೆಟ್ ಹಾಗೂ ಚೊಂಬಿಗೆ ಸ್ವಲ್ಪ ಉಜ್ಜಿ 5 ರಿಂದ 10 ನಿಮಿಷ ಬಿಟ್ಟು ಆನಂತರ ಮತ್ತೆ ಸ್ವಲ್ಪ ಇದನ್ನು ಹಾಕಿ ಸ್ವಲ್ಪ ಉಜ್ಜಿದರೆ ಸಾಕು ಬಕೆಟ್ ಹಾಗೂ ಚೊಂಬಿನಲ್ಲಿ ಇರುವಂತಹ ಎಲ್ಲಾ ಕೊಳೆಯ ಅಂಶ ಹಾಗೂ ಮಣ್ಣಿನ ಅಂಶ ಸಂಪೂರ್ಣವಾಗಿ ಹೋಗುತ್ತದೆ.
ಈ ವಿಧಾನ ಬಹಳ ಸುಲಭವಾಗಿದ್ದು ಇವುಗಳನ್ನು ಸುಲಭವಾಗಿ ಸ್ವಚ್ಛ ಮಾಡಬಹುದು. ಇದಕ್ಕೆ ಯಾವುದೇ ರೀತಿಯ ಹೆಚ್ಚಿನ ಹಣಕಾಸಿನ ಅವಶ್ಯಕತೆ ಇರುವುದಿಲ್ಲ. ಬದಲಿಗೆ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಉಪಯೋಗಿಸುವುದರ ಮೂಲಕ ಇದನ್ನು ಸ್ವಚ್ಛ ಮಾಡಬಹುದಾಗಿದೆ.