ಪ್ರತಿಯೊಬ್ಬರೂ ಕೂಡ ತಮ್ಮ ಮನೆಯನ್ನು ಚೆನ್ನಾಗಿ ಇಟ್ಟುಕೊಳ್ಳುತ್ತಿರುತ್ತಾರೆ ಹಾಗೂ ಯಾವ ರೀತಿಯಾಗಿ ವಾಸ್ತು ಪ್ರಕಾರ ಯಾವ ಸ್ಥಳದಲ್ಲಿ ಯಾವುದು ಇರಬೇಕು ಅದೇ ರೀತಿಯಾಗಿ ಅವರು ಮನೆಯನ್ನು ನಿರ್ಮಿಸಿ ಕೊಂಡಿರುತ್ತಾರೆ ಆದರೆ ಕೆಲವೊಂದಷ್ಟು ಜನರು ಕೆಲವೊಂದು ತಪ್ಪುಗಳನ್ನು ಮಾಡಿರುತ್ತಾರೆ.
ಹೌದು ವಾಸ್ತು ಶಾಸ್ತ್ರದ ಪ್ರಕಾರ ಯಾವು ದೇ ರೀತಿಯ ನಿಯಮಗಳನ್ನು ಅನುಸರಿಸಿರುವುದಿಲ್ಲ ಅದರಿಂದ ಅವರು ಮನೆಯಲ್ಲಿ ಹಲವಾರು ರೀತಿಯ ಕಷ್ಟದ ಪರಿಸ್ಥಿತಿಗಳನ್ನು ನಷ್ಟವನ್ನು ಅನುಭವಿಸುತ್ತಿರುತ್ತಾರೆ. ಆದ್ದರಿಂದ ಮನೆಯನ್ನು ಒಮ್ಮೆ ಮಾತ್ರ ಕಟ್ಟಿಸಲು ಸಾಧ್ಯ ಆದ್ದರಿಂದ ಅದನ್ನು ಆದಷ್ಟು ಮನೆಯ ವಿಚಾರಕ್ಕೆ ಸಂಬಂಧಿಸಿದ ವಿಷಯಗಳನ್ನು ತಿಳಿದು ಕೊಂಡು ಅದರಂತೆ ಮನೆಯನ್ನು ನಿರ್ಮಾಣ ಮಾಡುವುದು ಬಹಳ ಮುಖ್ಯ.
ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಬಹು ಮುಖ್ಯ ವಿಚಾರ.!
ಮನೆ ಕಟ್ಟಿದ ನಂತರ ಅದರಿಂದ ನಷ್ಟವನ್ನು ಅನುಭವಿಸುವುದರ ಬದಲು ಸಮಸ್ಯೆ ಬಾರದಂತೆ ಅದನ್ನು ಮೊದಲು ಎಚ್ಚರಿಕೆ ವಹಿಸಿ ಸರಿಪಡಿಸಿಕೊಳ್ಳುವುದು ಬಹಳ ಒಳ್ಳೆಯದು. ಹಾಗಾದರೆ ಈ ದಿನ ಮನೆಯ ಸಂಸ್ಕಾರದ ವಿಚಾರವಾಗಿ ಅಂದರೆ ಮನೆಯನ್ನು ನಾವು ಯಾವ ರೀತಿಯಾಗಿ ಇಟ್ಟುಕೊಳ್ಳಬೇಕು ಮನೆಯ ಯಾವ ದಿಕ್ಕಿನಲ್ಲಿ ಯಾವ ವಸ್ತುಗಳನ್ನು ಇಡಬೇಕು ಯಾವ ಸ್ಥಿತಿನಲ್ಲಿ ಯಾವ ಸ್ಥಳ ಬರಬೇಕು ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ ಹಾಗಾದರೆ ಈ ದಿನ ಅವೆಲ್ಲವನ್ನು ಸಹ ತಿಳಿದುಕೊಳ್ಳುತ್ತಾ ಹೋಗೋಣ.
* ಅಡುಗೆ ಮನೆ ಮತ್ತು ದೇವರ ಕೋಣೆಯ ಪಕ್ಕದಲ್ಲಿ ಎಂದಿಗೂ ಕೂಡ ಬಚ್ಚಲು ಮನೆ ಇರಬಾರದು.
* ನೀವು ಊಟ ಮಾಡುವಂತಹ ಸಮಯದಲ್ಲಿ ಯಾರಾದರೂ ನಿಮ್ಮ ಮನೆಗೆ ಬಂದು ಏನನ್ನಾದರೂ ಕೇಳಿದರೆ ಎಂಜಲು ಕೈಯಲ್ಲಿ ಏನನ್ನು ಕೊಡಬೇಡಿ ಬದಲಿಗೆ ಕೈಯನ್ನು ಸ್ವಚ್ಛ ಮಾಡಿಕೊಂಡು ಆನಂತರ ಅವರು ಕೇಳಿದಂತಹ ವಸ್ತುವನ್ನು ಕೊಡುವುದು ಒಳ್ಳೆಯದು.
ನಿಮ್ಮ ಬಿಪಿಯನ್ನು ಕಡಿಮೆ ಮಾಡಲು ಉಪಯುಕ್ತವಾದ 10 ಮನೆಮದ್ದುಗಳು.!
* ಹಾಗೆಯೇ ಎಂಜಲು ಕೈಯಿಂದ ತಟ್ಟೆ ಮತ್ತು ಊಟ ಮಾಡಿದ ಎಲೆ ಯನ್ನು ತಡೆಯಬಾರದು.
* ಹೊಸ ಬಟ್ಟೆಯನ್ನು ಖರೀದಿ ಮಾಡಿ ಮನೆಗೆ ತಂದು ಅದನ್ನು ಹಾಗೆಯೇ ಸುಮ್ಮನೆ ಇಡಬಾರದು.
* ಹೆಣ್ಣು ಮಕ್ಕಳು ದೇವಸ್ಥಾನಕ್ಕೆ ಹೋಗುವಾಗ ಅರಿಶಿನ ಕುಂಕುಮ ಹೂವನ್ನು ಮುಡಿದು ಕೊಳ್ಳದೆ ಹೋಗಬಾರದು.
* ಮನೆಯಲ್ಲಿ ಹೆಣ್ಣು ಮಕ್ಕಳು ಕೆಟ್ಟ ಪದಗಳನ್ನು ಉಪಯೋಗಿಸಿ ಯಾರೊಂದಿಗೂ ಜಗಳವಾಡಬಾರದು.
* ಮನೆಯ ಮಹಾಲಕ್ಷ್ಮಿ ಯಾದ ಹೆಣ್ಣು ಮುಸ್ಸಂಜೆ ಹೊತ್ತು ಕಣ್ಣೀರು ಹಾಕಬಾರದು.
* ಹಾಗೆಯೇ ಮಂಗಳವಾರ ಮತ್ತು ಶುಕ್ರವಾರದ ದಿನ ಹೆಣ್ಣು ಮಕ್ಕಳು ಕಣ್ಣೀರು ಹಾಕಲೇಬಾರದು.
ಚಹಾ ಕುಡಿಯುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.!
* ಮದುವೆಯಾದ ಹೆಣ್ಣು ಮುತ್ತೈದೆ ಭಾಗ್ಯ ಪಡೆದುಕೊಂಡಿರುವ ಕಾಲುಂಗುರ ಮತ್ತು ಮಾಂಗಲ್ಯವನ್ನು ತೆಗೆದು ಇಡಬಾರದು ಹಾಗೆಯೇ ಮನೆಯಿಂದ ಹೊರಗಡೆ ಹೋಗಬಾರದು ಇದರಿಂದ ಲಕ್ಷ್ಮಿ ಕೃಪೆ ಸಿಗುವುದಿಲ್ಲ.
* ದೇವರಿಗೆ ಉಪಯೋಗಿಸುವಂತಹ ಅರಿಶಿಣ ಮತ್ತು ಕುಂಕುಮವನ್ನು ಮನೆಗೆ ಬಂದ ಮಹಿಳೆಯರಿಗೆ ಕೊಡಬಾರದು ಏಕೆಂದರೆ ದೇವರಿಗೆ ಹಚ್ಚುವ ಕುಂಕುಮ ಮಡಿಯಲ್ಲಿ ಇರಬೇಕು.
* ಅನ್ನವನ್ನು ಯಾವುದೇ ಕಾರಣಕ್ಕೂ ಕಾಲಿನಿಂದ ತುಳಿಯಬಾರದು.
* ಊಟ ಮಾಡಿದ ನ೦ತರ ಕೈ ಒಣಗಿಸಬಾರದು ಅದರ ಜೊತೆಗೆ
ಊಟ ಮಾಡಿದ ತಟ್ಟೆಯನ್ನು ಒಣಗಿಸಬಾರದು.
* ಅಡುಗೆ ಮನೆಯನ್ನು ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಏಕೆ ಎಂದರೆ ಅಡುಗೆ ಮನೆಯಲ್ಲಿ ಸಾಕ್ಷಾತ್ ಅನ್ನಪೂರ್ಣೇಶ್ವರಿ ನೆಲೆಸಿರುತ್ತಾಳೆ. ಆದ್ದರಿಂದ ನಾವು ಆದಷ್ಟು ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಒಳ್ಳೆಯದು ಹಾಗೇನಾದರೂ ಅಲ್ಲಿ ಕಸ, ಧೂಳು, ಮಿಕ್ಕಂತಹ ಅನ್ನ ಎಲ್ಲವನ್ನು ಹಾಗೆ ಇಟ್ಟರೆ ಅನ್ನಪೂರ್ಣೇಶ್ವರಿಯ ಕೋಪಕ್ಕೆ ನಾವು ಗುರಿಯಾಗಬೇಕಾಗುತ್ತದೆ. ಹಾಗೂ ಮುಂದಿನ ದಿನದಲ್ಲಿ ನಮಗೆ ಆಹಾರದ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ನಾವು ನಮ್ಮ ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಒಳ್ಳೆಯದು