ಮಾನವನ ದೇಹವೂ ಕೂಡ ಒಂದು ಯಂತ್ರ ಇದ್ದಂತೆ. ದೇಹದ ಒಳಗೆ ಹಲವಾರು ಅಂಗಗಳಿದ್ದು ಪ್ರತಿಯೊಂದು ಕೂಡ ಒಂದಕ್ಕೊಂದು ಸಮಯಕ್ಕೆ ಸರಿಯಾಗಿ ಹೊಂದಿಕೊಂಡು ಕಾರ್ಯನಿರ್ವಹಿಸಿದರೆ ಮಾತ್ರ ನಾವು ನಾರ್ಮಲ್ ಆಗಿರಲು ಸಾಧ್ಯ. ಈ ಎಲ್ಲಾ ಅಂಗಗಳನ್ನು ನಿರ್ವಹಿಸುವ ಮುಖ್ಯವಾದ ಭಾಗ ಮೆದುಳು ಎನ್ನುವುದು ಕೂಡ ನಮ್ಮ ಎಲ್ಲರಿಗೂ ಗೊತ್ತಿದೆ.
ಹಾಗಾಗಿ ಮೆದುಳಿನ ಆರೋಗ್ಯ ಬಹಳ ಮುಖ್ಯ. ಮೆದುಳು ಉತ್ತಮ ಸ್ಥಿತಿಯಲ್ಲಿದ್ದಾಗ ಮಾತ್ರ ಮೆದುಳು ಕೊಟ್ಟ ಸಲಹೆಯಂತೆ ದೇಹದ ಇತರ ಅಂಗಗಳು ಕೂಡ ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ ಮೆದುಳು ಮಂಕಾದರೆ ಪರಿಣಾಮ ದೇಹದ ಎಲ್ಲಾ ಅಂಗಗಳ ಮೇಲೂ ಆಗುತ್ತದೆ.
ನಿದ್ರಾಹೀನತೆ, ಮಾನಸಿಕ ಸಮಸ್ಯೆಗಳು, ಸ್ಟ್ರೋಕ್ ಆಗುವುದು ಮೆಮೊರಿ ಲಾಸ್ ಇನ್ನು ಮುಂತಾದ ಮೆದುಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೂ ಕೂಡ ಮೆದುಳಿನ ಆರೋಗ್ಯ ಕೆಟ್ಟಿರುವುದೇ ಕಾರಣ. ಹಾಗಾದರೆ ಮೆದುಳು ಚುರುಕಾಗಿರಬೇಕು,ಮೆದುಳಿನ ಕಾರ್ಯ ಸರಾಗವಾಗಬೇಕು ಎಂದರೆ ಯಂತ್ರಗಳಿಗೆ ಗ್ರೀಸ್ ಹಾಕುವಂತೆ ಮೆದುಳಿಗೂ ಎಣ್ಣೆ ಹಾಕಬೇಕು.
ಆದರೆ ನೇರವಾಗಿ ಮೆದುಳಿಗೆ ಎಣ್ಣೆ ಹಾಕಲು ಆಗುವುದಿಲ್ಲ ಎಂದು ಎಲ್ಲರಿಗೂ ಗೊತ್ತು. ಇದಕ್ಕಾಗಿ ನಮ್ಮ ಹಿರಿಯರು ಒಂದು ಉಪಾಯ ಕಂಡುಕೊಂಡಿದ್ದರು. ಇಂದು ನಾವು ಅದನ್ನು ಮೌಢ್ಯತೆ ಎಂದು ಹೇಳಿಕೊಂಡು ಅಥವಾ ಪಾಶ್ಚಾತ್ಯ ಜೀವನಶೈಲಿಗೆ ಒಗ್ಗಿಕೊಂಡು ನಮ್ಮ ಹಳೆಯ ಪದ್ಧತಿಗಳನ್ನು ಮರೆತು ವಿನಾಕಾರಣ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ.
ಇವುಗಳಲ್ಲಿ ಒಂದು ನಶ್ಯ ಕರ್ಮ ಎಂದು ಹೇಳಲಾಗುವ ಮೂಗಿಗೆ ಎಣ್ಣೆ ಹಾಕುವ ಚಿಕಿತ್ಸೆ ಆಗಿನ ಕಾಲದಲ್ಲಿ ಮಕ್ಕಳಿಗೆ ಸ್ನಾನ ಮಾಡಿಸುವಾಗ ಮೂಗಿಗೆ, ಕಿವಿಗೆ, ನೆತ್ತಿಗೆ, ಹೊಕ್ಕಳಿಗೆ, ಎಣ್ಣೆ ಹಾಕಿ ಸ್ನಾನ ಮಾಡಿಸುತ್ತಿದ್ದರು. ಆದರೆ ಈಗ ಅದನ್ನು ಎಲ್ಲರೂ ಮರೆತು ಹೋಗಿದ್ದಾರೆ. ಇದನ್ನು ಹಿರಿಯರು ಕೂಡ ಹಾಕಿಕೊಳ್ಳಬಹುದು.
ಮೂಗಿಗೆ ಈ ಎರಡು ಹನಿ ಎಣ್ಣೆ ಹಾಕುವುದು ಸಂಜೀವಿನಿಯಂತೆ 20ಕ್ಕೂ ಹೆಚ್ಚು ದೇಹದ ಸಮಸ್ಯೆಗೆ ಬಹಳ ಉತ್ತಮ ಪರಿಣಾಮಗಳನ್ನು ಬೀರುತ್ತದೆ. ಅದರಲ್ಲೂ ಮೆದುಳಿನ ಆರೋಗ್ಯ ಸುಧಾರಣೆಯಾಗಲು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಇದು ಮೂಗಿನಿಂದನೆ ತಲುಪಿ ಮೆದುಳಿಗೆ ತಲುಪುತದೆ.
ಮೆದುಳು ಆರೋಗ್ಯವಾಗಿದ್ದರೆ ನಾವು ಕೂಡ ಆಕ್ಟಿವ್ ಆಗಿರುತ್ತದೆ, ಲವಲವಿಕೆಯಿಂದ ಎಲ್ಲಾ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುತ್ತೇವೆ ಹಾಗಾಗಿ ಇನ್ನು ಮುಂದಾದರು ಈ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು ಯಾವುದೇ ರೀತಿಯ ಮಾನಸಿಕ ತೊಂದರೆಗಳು ಅಥವಾ ಮಾನಸಿಕ ಒತ್ತಡಗಳು, ಆರೋಗ್ಯ ಸಮಸ್ಯೆಗಳು ಎಲ್ಲದಕ್ಕೂ ಇದು ಉತ್ತಮ ಚಿಕಿತ್ಸೆಗಾಗಿ ಕಾರ್ಯ ನಿರ್ವಹಿಸುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ, ಗೊರಕೆ ಹೊಡೆಯುವವರಿಗೆ ನಿಧಾನವಾಗಿ ಕಂಟ್ರೋಲ್ ಆಗುತ್ತದೆ. ಆಯುರ್ವೇದದಲ್ಲೂ ಕೂಡ ಈ ಚಿಕಿತ್ಸೆಯನ್ನು ಸೂಚಿಸಲಾಗಿದೆ. ಆದರೆ ಶಸ್ತ್ರ ಚಿಕಿತ್ಸೆಗೆ ಈಗಾಗಲೇ ಒಳಪಟ್ಟಿರುವವರು ಯಾವುದೇ ಕಾರಣಕ್ಕೂ ಇದನ್ನು ಪಾಲಿಸಬಾರದು ಅಥವಾ ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದರೆ ವೈದ್ಯರು ಎಚ್ಚರಿಕೆಯಿಂದ ಇರಲು ಸೂಚಿಸಿದ್ದರೆ ಇದನ್ನು ಪಾಲಿಸಬಾರದು.
ಯಾವುದೇ ವ್ಯಕ್ತಿ ಈ ಅಭ್ಯಾಸ ಮಾಡಿಕೊಳ್ಳುವುದರಿಂದ ಬಹಳ ಒಳ್ಳೆಯದಾಗುತ್ತದೆ. ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಬೇಸಿಗೆ ಕಾಲದಲ್ಲಿ ತುಪ್,ಪ ಮಳೆಗಾಲದಲ್ಲಿ ಸಾಸಿವೆ ಎಣ್ಣೆ, ಚಳಿಗಾಲದಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಕುತ್ತಾರೆ ಶುದ್ಧವಾದ ಹರಳೆಣ್ಣೆಯನ್ನು ಕೂಡ ಸ್ವಲ್ಪ ಬೆಚ್ಚಗೆ ಮಾಡಿ ಮೂಗಿಗೆ ಹಾಕಬಹುದು.