Saturday, April 19, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeUseful Informationಆರೋಗ್ಯದ ಸೂತ್ರ.!

ಆರೋಗ್ಯದ ಸೂತ್ರ.!

 

* ಬೆಳಿಗ್ಗೆ ಸೂರ್ಯೋದಯಕ್ಕಿಂತ ಮೊದಲು ಏಳುವುದು ಎದ್ದು ಬಾಯಿ ತೊಳೆದು 2 ಲೋಟ ತಾಮ್ರದ ಪಾತ್ರೆಯಲ್ಲಿಯ ನೀರು ಸೇವನೆ ಕಡ್ಡಾಯ
* ಬೆಳಗಿನ ಪ್ರಾಥರ್ವಿಧಿ ಮುಗಿಸಿದ ನಂತರ ಒಂದು ಗಂಟೆ ವಯಸ್ಸಿಗೆ ಅನುಗುಣವಾದ ವ್ಯಾಯಾಮ, ನಡಿಗೆ, ಯೋಗ ಮತ್ತು ಪ್ರಾಣಾಯಾಮ ಮುದ್ರೆಗಳನ್ನು ತಜ್ಞರಿಂದ ತಿಳಿದು ಮಾಡುವುದು.

* ವ್ಯಾಯಾಮದ ನಂತರ ಸ್ನಾನ ಮಾಡುವುದು, ತಲೆ ಸ್ನಾನ ಕಡ್ಡಾಯ. ತಲೆಗೆ ಶೀಗೆಕಾಯಿ ಚೂರ್ಣ ಹಾಗೂ ಮೈಗೆ ಕಡಲೆ ಬೇಳೆ ಹಿಟ್ಟು, ಹೆಸರು ಹಿಟ್ಟು, ಅಕ್ಕಿಹಿಟ್ಟು ಉಪಯೋಗ ಒಳ್ಳೆಯದು. ಸ್ನಾನದ ಸಮಯದಲ್ಲಿ ತಣ್ಣೀರಿನಲ್ಲಿ ಕಣ್ಣುನ್ನು ಅದ್ದಿ ಪಿಳುಕಿಸಬೇಕು. (20 ಸೆಕೆಂಡ್) ವಾರಕ್ಕೆ 1 ಸಾರಿ ಎಣ್ಣೆ ಸ್ನಾನ ತುಂಬಾ ಒಳ್ಳೆಯದು.

* ಸ್ನಾನದ ನಂತರ ತಮ್ಮ ಪೂಜಾ, ಧ್ಯಾನ, ಓಂಕಾರ ಮುಂತಾದವು ಗಳನ್ನು ತಮ್ಮ ಉಪಸನಾ ಪದ್ಧತಿಯನ್ನು ನಡೆಸುವುದು ಒಳ್ಳೆಯದು.
* ಪ್ರತಿ ಊಟ ಅಥವಾ ಉಪಾಹಾರದ ನಂತರ ಕನಿಷ್ಠ ನೂರು ಹೆಜ್ಜೆ ಕಡ್ಡಾಯ ನಡಿಗೆ ಉತ್ತಮ ಮತ್ತು ದಿನದಲ್ಲಿ 2 ಕಿಲೋ ಮೀಟರ್ ನಡೆಯುವುದು ಅನಿವಾರ್ಯ ಹಾಗೂ ಊಟದ ನಂತರ 5 ನಿಮಿಷ ವಜ್ರಾಸನ ಜೀರ್ಣಕ್ರಿಯೆಗೆ ತುಂಬಾ ಸಹಕಾರಿ.

* ದಿನಾಲು ಊಟವನ್ನು ಸಮಯಕ್ಕೆ ಸರಿಯಾಗಿ ಮಾಡುವುದು ತುಂಬಾ ಉತ್ತಮ. ವಾರದಲ್ಲಿ ಒಂದು ಹೊತ್ತಿನ ಉಪವಾಸ ಆರೋಗ್ಯಕ್ಕೆ ತುಂಬಾ ಸಹಕಾರಿ ಊಟದ ಒಂದು ಗಂಟೆ ನಂತರ ಹೆಚ್ಚು ನೀರು ಸೇವಿಸುವುದು ಜೀರ್ಣಕ್ಕೆ ಒಳ್ಳೆಯದು.
* ನಮಗೆ ಸಮಯ ಸಿಕ್ಕಾಗಲೆಲ್ಲಾ ಹಾಗೂ ಪ್ರವಾಸದಲ್ಲಿ ದೀರ್ಘ ಉಸಿರಾಟ ಮಾಡುವುದು ರಕ್ತ ಪರಿಚಲನೆಗೆ ಸಹಕಾರಿಯಾಗುತ್ತದೆ. ಹಾಗೇ ಯಾವುದಾದರೂ ಮುದ್ರೆ ಮಾಡುತ್ತಿರಬೇಕು.

* ವಾರದಲ್ಲಿ 2 ಸಲ ತಲೆ ಹಾಗೂ ದೇಹವನ್ನು ಎಣ್ಣೆಯಿಲ್ಲದೆ ಒಣದಾಗಿ ಉಜ್ಜಿಕೊಳ್ಳಬೇಕು.
* ಕನಿಷ್ಠ 10 ದಿನಕ್ಕೊಮ್ಮೆ ಉಗುರು ತೆಗೆಯಬೇಕು.
* ತಿಂಗಳಿಗೆ ಒಂದು ದಿನ ಬೆಳಿಗ್ಗೆ ಹೊಟ್ಟೆ ತುಂಬಾ ಬಿಸಿ ನೀರು ಸೇವಿಸಬೇಕು.
* ದಿನಾಲು ಜಲನೇತಿ ಮಾಡುವುದು ಒಳ್ಳೆಯದು.
* ದಿನಾಲು 1 ಸಾರಿಯಾದರೂ ನಗುವುದು ಒಳ್ಳೆಯದು.

* ದಿನಕ್ಕೆ 1 ಸಾರಿಯಾದರೂ ಪ್ರಕೃತಿಗೆ ಅನುಗುಣವಾಗಿ, ಎಳನೀರು, ಕಬ್ಬಿನ ಹಾಲು, ಹಸುವಿನ ಹಾಲು, ಹಣ್ಣಿನ ರಸ, ಮಜ್ಜಿಗೆ, ಕರಿಕೆ ರಸ, ಗೋದಿ ಹುಲ್ಲಿನ ರಸ, ಯಾವುದಾದರು ಒಂದನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.
* ದಿನಕ್ಕೆ 3 ರಿಂದ 4 ಲೀಟರ್ ನೀರು ಕಡ್ಡಾಯ ಸೇವಿಸುವುದು.
* ಮಾತನಾಡದೆ “ಮೌನ ಭೋಜನ” ಬಹಳ ಶ್ರೇಷ್ಠ. ದಿನದಲ್ಲಿ ಸ್ವಲ್ಪ ಸಮಯ ಅಥವಾ ವಾರದಲ್ಲಿ 4 ಗಂಟೆ ಮೌನ ಒಳ್ಳೆಯದು.
* ನಿಂತು ಮೂತ್ರ ವಿಸರ್ಜನೆ ಮಾಡುವುದರಿಂದ ಕಿಡ್ನಿಗೆ ತೊಂದರೆಯಾಗುತ್ತದೆ.
* ದಿನದಲ್ಲಿ ಬೆವರು ಬರುವಂತೆ ಪರಿಶ್ರಮಪಡಬೇಕು.

* ಹಗಲು ವಿಶ್ರಾಂತಿ ಪಡೆಯಬಹುದು, ಆದರೆ ನಿದ್ರೆ ಒಳ್ಳೆಯದಲ್ಲ.
ಹೀಗೆ ಮೇಲೆ ಹೇಳಿದ ಇಷ್ಟು ಮಾಹಿತಿಗಳು ಕೂಡ ನಮ್ಮ ಆರೋಗ್ಯಕ್ಕೆ ಬಹಳ ಅನುಕೂಲವಾಗುವಂತಹ ವಿಧಾನಗಳಾಗಿದ್ದು ಪ್ರತಿಯೊಬ್ಬರೂ ಕೂಡ ಇದನ್ನು ಅನುಸರಿಸುವುದರಿಂದ ತಮ್ಮ ಜೀವನ ಪರ್ಯಂತ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳನ್ನು ಕೂಡ ಎದುರಿಸುವ ಅವಶ್ಯಕತೆ ಬರುವುದಿಲ್ಲ.

ಬದಲಿಗೆ ಯಾವುದೇ ರೀತಿಯ ಸಮಸ್ಯೆ ಬಾರ ದಂತೆ ನೀವೇ ನಿಮ್ಮ ಜೀವನಶೈಲಿ ಆಹಾರ ಶೈಲಿಯಿಂದ ದೂರ ಮಾಡಿ ಕೊಳ್ಳಬಹುದು. ಆದ್ದರಿಂದ ಪ್ರತಿಯೊಬ್ಬರೂ ಕೂಡ ಮೇಲೆ ಹೇಳಿದ ಈ ವಿಧಾನಗಳನ್ನು ಅನುಸರಿಸುವುದು ತುಂಬಾ ಒಳ್ಳೆಯದು.

ಆದರೆ ಹೆಚ್ಚಿನ ಜನ ಇಂತಹ ಯಾವುದೇ ವಿಚಾರದ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ ಬದಲಿಗೆ ವಿರುದ್ಧವಾದ ಆಹಾರ ಶೈಲಿ, ಜೀವನ ಶೈಲಿಯನ್ನು ಅನುಸರಿ ಸುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ತಂದುಕೊಳ್ಳು ತ್ತಾರೆ ಅದರ ಬದಲು ಈಗ ಮೇಲೆ ಹೇಳಿದ ಈ ಆರೋಗ್ಯ ಸೂತ್ರಗಳನ್ನು ಅನುಸರಿಸುವುದರಿಂದ ಉತ್ತಮವಾದಂತಹ ಆರೋಗ್ಯವನ್ನು ಪಡೆದು ಕೊಳ್ಳಬಹುದು.