ನವಗ್ರಹಗಳಲ್ಲಿ ರಾಹುವನ್ನು ಅತ್ಯಂತ ಕೆಟ್ಟ ಗ್ರಹ ಎನ್ನಲಾಗುತ್ತಿದೆ. ರಾಹುವನ್ನು ಪಾಪಗ್ರಹ ಎಂದು ಕರೆಯಲಾಗುತ್ತದೆ ಮತ್ತು ರಾಹುವಿನ ಸಂಚಾರವು ಸಂಬಂಧಪಟ್ಟ ರಾಶಿಗಳಲ್ಲಿ ಅಶುಭ ಫಲಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ರಾಹು ಯಾವಾಗಲೂ ಹಿಮ್ಮುಖವಾಗಿ ಚಲನೆ ಮಾಡುವುದು ಮತ್ತು ನವಗ್ರಹಗಳಲ್ಲಿ ಶನಿಯನ್ನು ಹೊರತುಪಡಿಸಿದರೆ ರಾಹುಗ್ರಹವೇ ಬಹಳ ಮಂದಗತಿಯಲ್ಲಿ ಸಾಗುವ ಗ್ರಹವಾಗಿದೆ.
ರಾಹುವಿನ ಸಂಕ್ರಮಣವು 12 ರಾಶಿಗಳ ಮೇಲು ಕೂಡ ಪರಿಣಾಮ ಬೀರುತ್ತದೆ. ರಾಹು ಗ್ರಹವು ಒಂದು ಗ್ರಹದಿಂದ ಮತ್ತೊಂದು ಗ್ರಹಕ್ಕೆ ಹೋಗಲು 18 ತಿಂಗಳ ಸಮಯ ತೆಗೆದುಕೊಳ್ಳುತ್ತದೆ. ರಾಹು ಕಳೆದ ವರ್ಷ ಅಂದರೆ 2023ರ ಅಕ್ಟೋಬರ್ ಕೊನೆಯಲ್ಲಿ ಮೀನ ರಾಶಿ ಪ್ರವೇಶಿಸಿದ್ದಾರೆ ಇದರ ಪ್ರಭಾವ ಈ ವರ್ಷ ಪೂರ್ತಿ ಇರಲಿದೆ, 2025ಕ್ಕೆ ಕುಂಭ ರಾಶಿಗೆ ಬರಲಿದ್ದಾರೆ.
ಇದರ ಪ್ರಭಾವವು ರಾಶಿ ಚಕ್ರದಲ್ಲಿ ಮೂರು ರಾಶಿಗಳ ಮೇಲೆ ಬಹಳ ಗಂಭೀರಕರ ಪರಿಣಾಮವನ್ನು ಉಂಟು ಮಾಡುತ್ತಿದೆ. ರಾಹುವಿನ ಸಂಚಾರದಿಂದ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬರುವ ಈ ಮೂರು ರಾಶಿಗಳು ಯಾವುವೆಂದರೆ ಕನ್ಯಾ ರಾಶಿ, ಧನು ರಾಶಿ ಮತ್ತು ಕುಂಭ ರಾಶಿ. ರಾಹು ಈ ರಾಶಿಗಳ ಮೇಲೆ ಯಾವ ರೀತಿಯಾಗಿ ಕೆಟ್ಟ ಪರಿಣಾಮಗಳನ್ನು ಬೀರುತ್ತಾನೆ.
ಈ ಸುದ್ದಿ ಓದಿ:-ಯಾವ ವಾರ ಜನಿಸಿದ ಮಕ್ಕಳು ಅದೃಷ್ಟವಂತರು ನೋಡಿ.!
ಇವುಗಳ ಪ್ರಭಾವ ಕಡಿಮೆ ಮಾಡಿಕೊಂಡು ಬರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ದೈವ ಬಲಕ್ಕಾಗಿ ನವಗ್ರಹಗಳ ಆರಾಧನೆ ಮತ್ತು ನಿಮ್ಮ ಕುಲ ದೇವತೆಗಳ ಆರಾಧನೆ ಮಾಡಿ. ಯಾವ ರೀತಿಯ ಸಮಸ್ಯೆಗಳನ್ನು ಈ ಮೂರು ರಾಶಿಯವರು ಎದುರಿಸಲು ತಯಾರಾಗಿರಬೇಕಾಗಿರುತ್ತದೆ ಎಂಬ ವಿವರ ಹೀಗಿದೆ ನೋಡಿ.
* ಕನ್ಯಾ ರಾಶಿ:- ರಾಹುವಿನ ಈ ಸಂಕ್ರಮಣದ ಪ್ರಭಾವದಿಂದಾಗಿ ಕನ್ಯಾ ರಾಶಿಯವರಿಗೆ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ಸ್ವಲ್ಪ ಮನಸ್ತಾಪ ಏರ್ಪಡುತ್ತದೆ. ಕೆಲಸ ಕಾರ್ಯಗಳಿಗೂ ಕೂಡ ಹತ್ತಾರು ರೀತಿಯ ಅಡೆತಡೆಗಳು ಎದುರಾಗುತ್ತದೆ. ನೀವು ನಿಮ್ಮ ಗ್ರಹಗತಿಗಳನ್ನು ಅರಿತು ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳದೆ ಇರುವುದು ಬಹಳ ಒಳ್ಳೆಯದು.
ಹಾಗೆಯೇ ನೀವು ನಿಮಗೆ ಉಂಟಾಗುವ ಸಮಸ್ಯೆಗಳ ಬಗ್ಗೆ ಎಚ್ಚರಿಕೆಯಿಂದ ಕೂಡ ಇರಬೇಕು. ಯಾಕೆಂದರೆ ರಾಹುವಿನ ಪ್ರಭಾವದಿಂದಾಗಿ ನೀವು ಎದುರಿಸುವ ಸಮಸ್ಯೆಗಳಿಂದ ನಿಮ್ಮ ಮನಸ್ಸು ಬಹಳ ವಿಚಲಿತವಾಗುತ್ತದೆ. ನಿಮ್ಮ ರಾಶಿಯಲ್ಲಿರುವ ಇತರೆ ಗ್ರಹಗಳ ಪ್ರಭಾವದಿಂದ ಒಳಿತು ಕೂಡ ಆಗುತ್ತದೆ ಹಾಗಾಗಿ ಈ ಸಮಯ ಮುಗಿಯುವವರೆಗೆ ತಾಳ್ಮೆಯಿಂದ, ಜಾಗ್ರತೆಯಿಂದ ಧೈರ್ಯವಾಗಿ ಇರಿ.
ಈ ಸುದ್ದಿ ಓದಿ:-ಪ್ರಾಣ ಹೋದರೂ ಸರಿ ಈ 9 ವಿಷಯಗಳನ್ನು ಯಾರಿಗೂ ಹೇಳಬೇಡಿ.!
* ಧನು ರಾಶಿ:- ಧನು ರಾಶಿಯವರಿಗೆ ಕಷ್ಟಗಳು ಹೊಸದೇನಲ್ಲ ಇವುಗಳು ಹುಟ್ಟಿದಾಗಲಿಂದಲೂ ಅಭ್ಯಾಸ ಆಗಿರುತ್ತದೆ ಆದರೆ ನಿಮ್ಮ ಆರೋಗ್ಯದ ಸಮಸ್ಯೆಗಳು ನಿಮ್ಮನ್ನು ಬಹಳ ಯೋಚನೆಗೆ ಗುರಿ ಮಾಡುತ್ತವೆ. ರಾಹು ನೆರವಾಗಿ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಾನೆ ಹಾಗಾಗಿ ಆರೋಗ್ಯದ ವಿಚಾರದಲ್ಲಿ ಕಾಳಜಿಯಿಂದ ಇರಿ ಹಾಗೂ ಸ್ವಲ್ಪ ಆರೋಗ್ಯ ಹಾಳಾದರೂ ತಕ್ಷಣವೇ ಚಿಕಿತ್ಸೆ ತೆಗೆದುಕೊಳ್ಳುವ ಮೂಲಕ ಚೇತರಿಸಿಕೊಳ್ಳಲು ಪ್ರಯತ್ನಿಸಿ
ಕುಂಭ ರಾಶಿ:- ಕುಂಭ ರಾಶಿಯವರು ಹಣಕಾಸಿನ ವಿಚಾರದಲ್ಲಿ ಈ ಸಮಯದಲ್ಲಿ ಬಹಳ ಜಾಗರೂಕರಾಗಿ ಇರಬೇಕು. ಯಾವುದೇ ಹಣಕಾಸಿನ ವ್ಯವಹಾರ ಮಾಡುವ ಮುನ್ನ ಎರಡು ಸಾರಿ ಯೋಚಿಸಿ ನಿರ್ಧಾರಕ್ಕೆ ಬನ್ನಿ. ಕೆಲಸ ಕಾರ್ಯಗಳಲ್ಲಿ ಅಡತಡೆ ಆಗಬಹುದು ಮತ್ತು ಕಚೇರಿಗಳಲ್ಲಿ ಮೆಲಾಧಿಕಾರಿಗಳಿಂದ ಒತ್ತಡ ಬರಬಹುದು ಯಾವುದೇ ಕಾರಣಕ್ಕೂ ವಾದ ಮಾಡಲು ಹೋಗಬೇಡಿ ಕುಂಭ ರಾಶಿಯವರಿಗೆ ಹೆಚ್ಚು ಪ್ರಯಾಣ ಮಾಡಬೇಕಾಗಿ ಬರುತ್ತದೆ.