ಪ್ರತಿಯೊಬ್ಬರಿಗೂ ಕೂಡ ತಮ್ಮ ಮಕ್ಕಳು ಅದೃಷ್ಟವಂತರಾಗಬೇಕು, ಕೀರ್ತಿವಂತರಾಗಬೇಕು ಅವರಿಗೆ ಜೀವನದ ಎಲ್ಲಾ ಸುಖ ಸಂಪತ್ತು ಸಿಗಬೇಕು ಎಂದು ಬಲವಾದ ಇಚ್ಛೆ ಇರುತ್ತದೆ. ಇದಕ್ಕಾಗಿ ಅವರು ಮಾಡದ ಪೂಜೆ ಇರುವುದಿಲ್ಲ ಮತ್ತು ಪಡೆಯದ ಕಷ್ಟ ಇರುವುದಿಲ್ಲ.
ಮಕ್ಕಳು ಹುಟ್ಟುವ ಪೂರ್ವದಿಂದ ತಯಾರಾಗುವ ಇವುಗಳು ತಂದೆ-ತಾಯಿ ಬದುಕಿರುವವರೆಗೂ ಕೂಡ ಮಕ್ಕಳ ಸೇವೆಗಾಗಿ ನಡೆಯುತ್ತಿರುತ್ತವೆ ಆದರೆ ಕೆಲವು ಮಕ್ಕಳು ಮಾತ್ರ ಬಹಳ ಅದೃಷ್ಟವಂತರಾಗಿ ಹುಟ್ಟುವಾಗಲೇ ಭಾಗ್ಯ ಪಡೆದುಕೊಂಡು ಬಂದಿರುತ್ತಾರೆ, ಇನ್ನು ಕೆಲವರು ಬಹಳ ಕಷ್ಟಪಟ್ಟು ಇಂತಹ ಸಕ್ಸಸ್ ಪಡೆದುಕೊಳ್ಳಬೇಕು.
ಹಾಗಾದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರವಾಗಿ ಯಾವ ವಾರ ಜನಿಸಿದ ಮಕ್ಕಳಿಗೆ ಈ ರೀತಿ ಅದೃಷ್ಟ ಇರುತ್ತದೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಸ ಬಯಸುತ್ತಿದ್ದೇವೆ. ವಾರದಲ್ಲಿ ಏಳು ದಿನಗಳು ಇರುತ್ತವೆ. ಈ ಏಳು ದಿನಗಳಲ್ಲಿ ಹುಟ್ಟುವ ಮಕ್ಕಳು ಕೂಡ ಭಗವಂತನ ಸೃಷ್ಟಿಯೇ. ಇದರಲ್ಲಿ ಒಂದು ವಾರ ಹುಟ್ಟಿದ ಮಕ್ಕಳಿಗೆ ಮಾತ್ರ ದೇವರ ಆಶೀರ್ವಾದ ಇರುತ್ತದೆ ಎಂದು ಹೇಳುವುದು ತಪ್ಪಾಗುತ್ತದೆ.
ಈ ಸುದ್ದಿ ಓದಿ:- ಪ್ರಾಣ ಹೋದರೂ ಸರಿ ಈ 9 ವಿಷಯಗಳನ್ನು ಯಾರಿಗೂ ಹೇಳಬೇಡಿ.!
ಆದರೆ ಮಕ್ಕಳು ಹುಟ್ಟುವ ಘಳಿಗೆ, ಜನ್ಮ ನಕ್ಷತ್ರ, ತಿಥಿ, ರಾಶಿ, ವಾರ ಅವರ ಹಸ್ತ ರೇಖೆ ಮತ್ತು ಪೂರ್ವ ಜನ್ಮಗಳ ಕರ್ಮನುಸಾರವಾಗಿ ಅವರ ಅದೃಷ್ಟ ನಿರ್ಧಾರವಾಗಿರುತ್ತದೆ. ಇದರಲ್ಲಿ ಕೆಲವು ಗುಣಗಳು ರಾಶಿಯಿಂದ ಕೆಲವು ಗುಣಗಳು ನಕ್ಷತ್ರದಿಂದ ಕೆಲವು ಗುಣಗಳು ಅವರು ಹುಟ್ಟುವ ವಾರದಿಂದ ಬಂದಿರುತ್ತವೆ.
ಅದರ ಪ್ರಕಾರವಾಗಿ ಅವರವರ ಅದೃಷ್ಟದುರದೃಷ್ಟವನ್ನು ಊಹಿಸಬಹುದು, ವ್ಯಕ್ತಿತ್ವವನ್ನು ಗುರುತಿಸಬಹುದು. ಆ ಪ್ರಕಾರವಾಗಿ ಯಾವ ವಾರ ಹುಟ್ಟಿದ ಮಕ್ಕಳು ಯಾವ ರೀತಿ ಅದೃಷ್ಟವನ್ನು ಪಡೆದಿರುತ್ತಾರೆ ಎನ್ನುವುದನ್ನಷ್ಟೇ ತಿಳಿಸುತ್ತಿದ್ದೇವೆ.
ಭಾನುವಾರ:- ಭಾನುವಾರ ಹುಟ್ಟಿದ ಮಕ್ಕಳಿಗೆ ಆಡಳಿತದ ಗುಣ ಹುಟ್ಟಿನಿಂದಲೇ ಬಂದಿರುತ್ತದೆ. ನವಗ್ರಹಗಳಿಗೆ ಸೂರ್ಯನೇ ಅಧಿಪತಿ ಅಂತೆಯೇ ಆದಿತ್ಯನ ಅನುಗ್ರಹವಿರುವ ಭಾನುವಾರದ ದಿನ ಜನಿಸಿದವರು ಅದೇ ರೀತಿ ಗುಣಗಳನ್ನು ಹೊಂದಿರುತ್ತಾರೆ. ಇವರು ಸೂರ್ಯನಂತೆ ಕೀರ್ತಿವಂತರಾಗುತ್ತಾರೆ ಮತ್ತು ಉಜ್ವಲ ಭವಿಷ್ಯವನ್ನು ಹೊಂದಿರುತ್ತಾರೆ ಇವರಿಗೆ ಸರ್ಕಾರಿ ಹುದ್ದೆಗಳು ಅಥವಾ ರಾಜಕೀಯ ಅತ್ಯುನ್ನತ ಪದವಿಗಳು ಹುಡುಕಿ ಬರುತ್ತವೆ.
ಈ ಸುದ್ದಿ ಓದಿ:- ವಯಸ್ಸಾಗುವವರೆಗೂ ಆರೋಗ್ಯದಿಂದ ಇರಲು ಈ ಸುಲಭ ಟಿಪ್ಸ್ ಗಳನ್ನು ಫಾಲೋ ಮಾಡಿ.!
ಸೋಮವಾರ:- ಸೋಮವಾರ ಹುಟ್ಟಿದವರು ಬಹಳ ಸುಂದರವಾಗಿರುತ್ತಾರೆ ಮತ್ತು ಇವರು ಬಹಳ ಅಂತರ್ಮುಖಿಗಳಾಗಿರುತ್ತಾನೆ. ಇವರ ಮನಸ್ಸು ಬಹಳ ವಿಶಾಲವಾಗಿರುತ್ತದೆ ತಾಯಿಯಂತೆ ಎಲ್ಲರ ಬಗ್ಗೆ ಕಾಳಜಿ ಮಾಡುವಂತಹ ಗುಣ ಹೊಂದಿರುತ್ತಾರೆ. ಇವರಿಗೆ ಕುಟುಂಬವೇ ಸರ್ವಸ್ವ ವಾಗಿರುತ್ತದೆ ಕುಟುಂಬದಲ್ಲಿ ಬಹಳ ಸಂತೋಷ ಕಾಣುತ್ತಾರೆ ಇವರ ಸಂಗಾತಿಗೆ ಪ್ರಾಮಾಣಿಕರಾಗಿರುತ್ತಾರೆ ಹಾಗೂ ಉತ್ತಮ ಸಂತಾನವನ್ನು ಪಡೆಯುತ್ತಾರೆ
ಮಂಗಳವಾರ:- ಮಂಗಳವಾರ ಹುಟ್ಟಿದವರು ಬಹಳ ಧೈರ್ಯವಂತರಾಗಿರುತ್ತಾರೆ ಮತ್ತು ತಮ್ಮವರಿಗಾಗಿ ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳುತ್ತಾರೆ. ಇವರಿಗೆ ಮನೆಯ ಜವಾಬ್ದಾರಿಗಳು ಬಹಳ ಬೇಗ ಹೆಗಲಿಗೆ ಬೀಳುತ್ತವೆ. ದೇಶ ಕಾಯುವ ಸೈನಿಕನಾಗುವ ಅಥವಾ ಪೊಲೀಸ್ ಇಲಾಖೆಗೆ ಸೇರುವ ಅದೃಷ್ಟಗಳು ಈ ವಾರ ಜನಿಸಿದವರಿಗೆ ಇರುತ್ತದೆ.
ಬುಧವಾರ:- ಬುಧನ ಅನುಗ್ರಹ ಹೊಂದಿರುವ ವಾರ. ಬುದ್ಧಿ ಕಾರಕನಾಗಿರುವ ಬುಧಗ್ರಹದ ಆಶೀರ್ವಾದದಿಂದ ಇವರು ಬಹಳ ಬುದ್ಧಿವಂತರನೆಸಿಕೊಳ್ಳುತ್ತಾರೆ. ವ್ಯಾಪಾರ ವ್ಯವಹಾರಗಳಲ್ಲಿ ಬಹಳ ಲಾಭ ಮಾಡುವಂತಹ ಮತ್ತು ಮಧ್ಯಸ್ಥಿಕೆ ಕೆಲಸಗಳನ್ನು ಮಾಡಿ ಲಾಭ ಗಳಿಸುವಂತಹ ಕಲೆ ಇವರಿಗೆ ಹುಟ್ಟಿನಿಂದಲೇ ಬಂದಿರುತ್ತದೆ.
ಈ ಸುದ್ದಿ ಓದಿ:- ಕೂದಲ ಆರೈಕೆಗೆ ಕೆಲವು ಸುಲಭ ಟಿಪ್ಸ್ ಗಳು…
ಗುರುವಾರ:- ಗುರುವಾರ ಹುಟ್ಟಿದವರು ಯಾವಾಗಲೂ ವಿದೇಶ ಪ್ರಯಾಣ, ವಿದೇಶದಲ್ಲಿ ವಿದ್ಯಾಭ್ಯಾಸ, ಉದ್ಯೋಗ ಅಥವಾ ವಿದೇಶದಲ್ಲಿ ಹೋಗಿ ಸೆಟಲ್ ಆಗಲು ಆಸೆ ಪಡುತ್ತಾರೆ. ಎಲ್ಲರಿಗೂ ಮಾರ್ಗದರ್ಶನ ಮಾಡುವಂತಹ ಅನುಭವಗಳನ್ನು ಬಹಳ ಚಿಕ್ಕ ವಯಸ್ಸಿಗೆ ಪಡೆಯುತ್ತಾರೆ ಮತ್ತು ಬಹಳ ಬೇಗ ಆಧ್ಯಾತ್ಮದತ್ತ ಆಕರ್ಷಿತರಾಗುತ್ತಾರೆ.
ಶುಕ್ರವಾರ:- ಶುಕ್ರವಾರ ಜನಿಸಿದ ಹೆಣ್ಣು ಮಕ್ಕಳಾಗಲಿ, ಗಂಡು ಮಕ್ಕಳಾಗಲಿ ಲಕ್ಷ್ಮಿ ಪುತ್ರ ಆಗಿರುತ್ತಾರೆ ಎಂದು ಹೇಳಬಹುದು. ಇವರಿಗೆ ತಾಯಿ ಮಹಾಲಕ್ಷ್ಮಿ ಸಂಪೂರ್ಣ ಅನುಗ್ರಹ ಇರುತ್ತದೆ. ಜೀವನದಲ್ಲಿ ಅವರಿಗೆ ಕಷ್ಟಗಳು ಕಡಿಮೆ ಅದರಲ್ಲೂ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳು ಬರುವುದಿಲ್ಲ. ಕಲೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಬಹಳ ಸಾಧಕರಾಗುತ್ತಾರೆ
ಶನಿವಾರ:- ಶನಿವಾರ ಜನಿಸಿದವರು ಬಹಳ ನೀತಿವಂತರಾಗಿರುತ್ತಾರೆ. ತೀರ್ಪುಗಾರರ ಸ್ಥಾನದಲ್ಲಿ ಕುಳಿತುಕೊಳ್ಳುವಂತ ಗುಣಸ್ವಭಾವ ಹೊಂದಿರುತ್ತಾರೆ. ಯಾವಾಗಲೂ ಒಂದಲ್ಲ ಒಂದು ಕಾರಣಕ್ಕಾಗಿ ಕುಟುಂಬದಿಂದ ದೂರದಲ್ಲಿಯೇ ಇರುತ್ತಾರೆ ತಮ್ಮ ಧರ್ಮ ಮಾರ್ಗದಿಂದ ಬದುಕುವ ಇವರು ಇತರರಿಗೆ ಸ್ಪೂರ್ತಿಯಾಗುತ್ತಾರೆ.