ಹೆಣ್ಣು ಮಕ್ಕಳ ಸೌಂದರ್ಯದ ಗುಟ್ಟು ಕೂದಲಿನಲ್ಲೇ ಅಡಗಿದೆ ಎಂದರೆ ತಪ್ಪಾಗುವುದಿಲ್ಲ. ಉದ್ದವಾದ ದಟ್ಟವಾದ ಕಪ್ಪಾದ ಸೊಂಪಾದ ಕೂದಲು ಹೊಂದಿರುವ ಹೆಣ್ಣು ಮಕ್ಕಳು ಗುಂಪಿನ ಮಧ್ಯೆ ಇದ್ದರೂ ಕೂಡ ಕಣ್ಣಿಗೆ ಬೀಳುತ್ತಾರೆ. ಸಿನಿಮಾ ತಾರೆಗಳಿಂದ ಹಿಡಿದು ಸಾಮಾನ್ಯರವರಿಗೆ ಎಲ್ಲಾ ಹೆಣ್ಣು ಮಕ್ಕಳಿಗೂ ಕೂಡ ಈ ರೀತಿ ಆರೋಗ್ಯಕರವಾದ ಉದ್ದವಾದ ಕೂದಲು ಇರಬೇಕು ಎನ್ನುವ ಇಚ್ಛೆ ಇರುತ್ತದೆ.
ಅದಕ್ಕಾಗಿ ದುಬಾರಿ ಶಾಂಪೂ ಆಯಿಲ್ ಎಲ್ಲವನ್ನು ಹಾಕಿದರೂ ಪ್ರಯೋಜನವಾಗುತ್ತಿಲ್ಲ ಎಂದು ನೊಂದುಕೊಳ್ಳುವವರು ಕೂಡ ಇದ್ದಾರೆ. ಈಗ ಎಲ್ಲಾ ಹೆಣ್ಣು ಮಕ್ಕಳಿಗಾಗಿ ಕೆಲವು ಬಹಳ ಸುಲಭವಾಗಿ ಕೂದಲ ಆರೈಕೆಗೆ ಸರಳವಾದ ಮನೆಮದ್ದುಗಳನ್ನು ತಿಳಿಸಿಕೊಡುತ್ತಿದ್ದೇವೆ.
* ಪ್ರತಿದಿನವೂ ಕೂಡ ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಲೇಟಾಗಿ ತಲೆ ಕೂದಲನ್ನು ಬಾಚಬೇಕು, ಇದರಿಂದ ಕೂದಲ ಬೇರು ಗಟ್ಟಿಯಾಗುತ್ತದೆ, ಸಿಕ್ಕಾಗಿ ಕೂದಲು ಹಾನಿಯಾಗುವುದು ತಪ್ಪುತ್ತದೆ. ಕೂದಲ ಬುಡದಲ್ಲಿರುವ ಎಣ್ಣೆಯ ಜಿಡ್ಡಿನಾಂಶ ಎಲ್ಲ ಕೂದಲಿಗೂ ಹರಡಿ ಕೂದಲು ಕಾಂತಿಯುತವಾಗಲು ಸಹಾಯವಾಗುತ್ತದೆ.
ಈ ಸುದ್ದಿ ಓದಿ:- ತುಲಾ ರಾಶಿಯವರ ಸಹಜ ಗುಣ ಸ್ವಭಾವಗಳು, ತುಲಾ ರಾಶಿಯವರಿಗೆ ಹೆಚ್ಚು ಮೋ’ಸವಾಗುವುದು ಏಕೆ ಮತ್ತು ಇವರಿಗೆ ಹೊಂದುವ ವೃತ್ತಿ ಯಾವುದು?..
* ಬೆಟ್ಟದ ನೆಲ್ಲಿಕಾಯಿಯನ್ನು ಚೆನ್ನಾಗಿ ಅರೆದು ಪೇಸ್ಟ್ ಮಾಡಿ ಆ ಪೇಸ್ಟ್ ನ್ನು ಸ್ನಾನ ಮಾಡುವ ಒಂದು ತಾಸಿನ ಮುಂಚೆ ಕೂದಲಿನ ಬುಡಕ್ಕೆ ಹಚ್ಚಿ ಸ್ನಾನ ಮಾಡುವುದರಿಂದ ಕೂದಲಿನ ಶೈನಿಂಗ್ ಹೆಚ್ಚಾಗುತ್ತದೆ ಕೂದಲು ಗಟ್ಟಿಯಾಗಿ ಉದುರುವ ಸಮಸ್ಯೆ ನಿಲ್ಲುತ್ತದೆ.
* ಮೆಂತ್ಯೆಯನ್ನು ಚೆನ್ನಾಗಿ ನೆನೆಸಿ ರುಬ್ಬಿ ಆ ಪೇಸ್ಟ್ ನ್ನು ತಲೆಗೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ಬೆಚ್ಚಗಿನ ನೀರಿನಲ್ಲಿ ತಲೆ ಕಳೆದುಕೊಳ್ಳುವುದರಿಂದ ತಲೆ ಹೊಟ್ಟು ನಿವಾರಣೆ ಆಗುತ್ತದೆ ಮತ್ತು ಕೂದಲಿಗೆ ಶೈನಿಂಗ್ ಬರುತ್ತದೆ, ದೇಹವು ತಂಪಾಗುತ್ತದೆ.
* ವಾರದಲ್ಲಿ ಎರಡು ದಿನ ಮಾತ್ರ ತಲೆ ಸ್ನಾನ ಮಾಡಬೇಕು, ಉಳಿದ ದಿನಗಳಲ್ಲಿ ಚೆನ್ನಾಗಿ ಕೂದಲಿಗೆ ಎಣ್ಣೆ ಹಚ್ಚಿ ಜಡೆ ಬಾಚಬೇಕು.
* ಕೊಬ್ಬಿನಾಂಶ ಹೆಚ್ಚಿರುವ ಪದಾರ್ಥಗಳನ್ನು ಕರಿದ ಆಹಾರ ಪದಾರ್ಥಗಳನ್ನು ಮತ್ತು ಬೇಕರಿ ಪದಾರ್ಥಗಳ ಸೇವನೆ ಕಡಿಮೆ ಮಾಡುವುದರಿಂದ ಕೂದಲಿನ ಆರೋಗ್ಯ ವೃದ್ಧಿಸುತ್ತದೆ.
ಈ ಸುದ್ದಿ ಓದಿ:- ಸಿಂಹ ರಾಶಿಯವರಿಗೆ ಏಪ್ರಿಲ್ 2024ರ ಶುಕ್ರ ಪ್ರಭಾವ ನಿಮ್ಮ ಜೀವನದಲ್ಲಿ ನೀವು ಊಹಿಸದ ಒಂದು ಅದ್ಭುತ ಬದಲಾವಣೆಯಾಗಲಿದೆ.!
* ತಲೆ ಸ್ನಾನ ಮಾಡುವ ಹಿಂದಿನ ದಿನ ನಾಲ್ಕು ಚಮಚ ಕೊಬ್ಬರಿ ಎಣ್ಣೆಗೆ ಒಂದು ಚಮಚ ನಿಂಬೆರಸ ಮಿಕ್ಸ್ ಮಾಡಿ ತಲೆಗೆ ಹಚ್ಚಿ ರಾತ್ರಿ ಪೂರ ನೆನೆಸಿ ಮರುದಿನ ತಲೆ ಸ್ನಾನ ಮಾಡುವುದರಿಂದ ಕೂದಲಿನ ಆರೋಗ್ಯ ಸುಧಾರಿಸುತ್ತದೆ
* ಉಳಿದ ದಿನಗಳಲ್ಲಿ ತಲೆಗೆ ಎಣ್ಣೆ ಹಚ್ಚುವಾಗ ಕೊಬ್ಬರಿ ಎಣ್ಣೆ ಹಾಗೂ ಹರಳೆಣ್ಣೆಯನ್ನು ಮಿಕ್ಸ್ ಮಾಡಿ ಅದನ್ನು ಸ್ವಲ್ಪ ಬೆಚ್ಚಗೆ ಮಾಡಿ ನಂತರ ತಲೆಕೂದಲಿಗೆ ಹಚ್ಚಿದರೆ ಒಳ್ಳೆಯದು
* ವಾರಕ್ಕೆ ಒಮ್ಮೆ ಕೂದಲು ಬಾಚುವ ಬಾಚಣಿಕೆಯನ್ನು ಸ್ವಚ್ಛ ಮಾಡಿಟ್ಟುಕೊಳ್ಳಬೇಕು
* ತಲೆ ಕೂದಲು ಒರೆಸುವ ವಸ್ತ್ರಗಳನ್ನು ಶುದ್ಧವಾಗಿಟ್ಟುಕೊಳ್ಳಬೇಕು ಮತ್ತು ವಾರಕ್ಕೆ ಎರಡು ಬಾರಿ ಬದಲಾಯಿಸಬೇಕು
* ತಲೆ ದಿಂಬಿನ ಕವರ್ ಕೂಡ ವಾರಕ್ಕೊಮ್ಮೆ ಬದಲಾಯಿಸಬೇಕು.
* ಸಣ್ಣ ಈರುಳ್ಳಿಯನ್ನು ಪೇಸ್ಟ್ ಮಾಡಿ ತಲೆ ಕೂದಲಿಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ. ದಟ್ಟವಾಗಿ ಶೈನಿಂಗ್ ಕೂಡ ಬರುತ್ತದೆ
* ಆದಷ್ಟು ಶುದ್ಧವಾದ ಕೊಬ್ಬರಿ ಎಣ್ಣೆಯನ್ನು ಬಳಸಬೇಕು ಮತ್ತು ಕೊಬ್ಬರಿ ಎಣ್ಣೆಗೆ ಸಮಪ್ರಮಾಣದಲ್ಲಿ ಕರಿಬೇವಿನ ಎಲೆ ಮೆಹಂದಿ ಎಲೆ, ಕೆಂಪು ದಾಸವಾಳ, ಬೆಟ್ಟದ ನೆಲ್ಲಿಕಾಯಿ ಚೂರು ಇವುಗಳನ್ನು ಚೆನ್ನಾಗಿ ಒಣಗಿಸಿ ಇದರ ಜೊತೆಗೆ ಮೆಂತ್ಯೆ ಉರಿದು ಎಲ್ಲವನ್ನು ಪುಡಿ ಮಾಡಿ ಕೊಬ್ಬರಿ ಎಣ್ಣೆಗೆ ಹಾಕಿ ಹದಕ್ಕೆ ಕುದಿಸಬೇಕು ಮತ್ತು ಎಣ್ಣೆ ಆರಿದ ಬಳಿಕ ಅದನ್ನು ಒಂದು ಗಾಜಿನ ಶಿಕ್ಷೆಯಲ್ಲಿ ಶೇಖರಿಸಿ ಮೂರು ದಿನ ಸೂರ್ಯನ ಬೆಳಕಿಗೆ ಇಟ್ಟು ನಂತರ ತಂಪಾದ ಸ್ಥಳದಲ್ಲಿ ಸ್ಟೋರ್ ಮಾಡಿ ತಲೆ ಕೂದಲಿಗೆ ಹಚ್ಚಬೇಕು ಇದು ಕೂದಲಿನ ಬೆಳವಣಿಗೆಗೆ ತುಂಬಾ ಸಹಾಯಕ.