ಆರೋಗ್ಯ ಎನ್ನುವುದು ಬೆಲೆ ಕಟ್ಟಲಾಗದ ಆಸ್ತಿಯಾಗಿದೆ. ನಾವು ಹಣದಿಂದ ಏನು ಬೇಕಾದರೂ ಕಂಡುಕೊಳ್ಳಬಹುದು ಆದರೆ ಆರೋಗ್ಯ ಕೊಂಡುಕೊಳ್ಳಲು ಆಗುವುದಿಲ್ಲ. ಅನಾರೋಗ್ಯ ಉಂಟಾದಾಗ ಚಿಕಿತ್ಸೆ ಕೊಡಿಸಬಹುದು ಹೊರತು ನಾವು ಆರೋಗ್ಯವಂತ ವ್ಯಕ್ತಿಯಂತೆ ಇರಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇರುತ್ತದೆ ಇದನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು.
ಕೆಲವರು ವಯಸ್ಸಾದರು ಕೂಡ ಆರೋಗ್ಯವಾಗಿಯೇ ಇರುತ್ತಾರೆ ಹೆಚ್ಚು ಲವಲವಿಕೆಯಿಂದ ಚೈತನ್ಯದಿಂದ ಇರುತ್ತಾರೆ. ಬಿಪಿ, ಶುಗರ್ ಅಥವಾ ಮತ್ಯಾವುದೇ ಆರೋಗ್ಯ ವ್ಯತ್ಯಾಸಗಳು ಕೂಡ ಇವರನ್ನು ಕಾಡುವುದಿಲ್ಲ. ವಯೋ ಸಹಜ ಕಾಯಿಲೆಗಳು ಕೂಡ ಬಾಧಿಸುವುದಿಲ್ಲ. ಈ ರೀತಿ ನೀವು ಕೂಡ ಇರಬೇಕು ಎಂದಿದ್ದರೆ ಇಂದಿನಿಂದಲೇ ನಾವು ಹೇಳುವ ಈ ಸರಳ ಟಿಪ್ ಗಳನ್ನು ಫಾಲೋ ಮಾಡಿ ಸಾಕು.
* ಪುಡಿ ಉಪ್ಪು ಬಳಸುವುದನ್ನು ನಿಲ್ಲಿಸಿ, ಇದರ ಬದಲು ಪುಡಿ ಉಪ್ಪು ಬಳಸುವ ಕಡೆಗಳಲ್ಲಿ ಹರಳು ಉಪ್ಟನ್ನೇ ಬಳಸಿ
* ರಾತ್ರಿ ಊಟ ಆದ ತಕ್ಷಣ ಮಲಗುವ ಅಭ್ಯಾಸ ತಪ್ಪಿಸಿ. ಮಲಗುವ ಕನಿಷ್ಠ 2 ಗಂಟೆಗಳ ಮೊದಲೇ ಊಟ ಮಾಡಿ ಹಾಗೂ ಊಟ ಆದ ಮೇಲೆ ಕನಿಷ್ಟ 500 ಹೆಜ್ಜೆಗಳನ್ನಾದರೂ ನಡೆಯಿರಿ
* ಎಮ್ಮೆಯ ಹಾಲು ಎಮ್ಮೆಯ ತುಪ್ಪ ಬಳಸುವುದು ನಿಲ್ಲಿಸಿ. ಇದರ ಬದಲು ಹಸುವಿನ ಹಾಲು, ಹಸುವಿನ ತುಪ್ಪವನ್ನು ಬಳಸಿ ಅದರಲ್ಲೂ ನಾಡು ಹಸುವಿನ ಹಾಲು ಮತ್ತು ತುಪ್ಪ ಬಳಸುವುದು ಬಹಳ ಒಳ್ಳೆಯದು
* ಉಪ್ಪು, ಸಕ್ಕರೆ ಮತ್ತು ಮೈದಾವನ್ನು ಬಿಳಿ ರೂಪದ ವಿಷಗಳು ಎಂದು ಹೇಳಲಾಗುತ್ತದೆ ಹಾಗಾಗಿ ಆದಷ್ಟು ಈ ಪದಾರ್ಥಗಳನ್ನು ಕಡಿಮೆ ಬಳಸಿ.
* ರಾತ್ರಿಯ ಹೊತ್ತು ಮೊಸರಿನ ಸೇವನೆ ಅಥವಾ ಮೊಸರನ್ನದ ಸೇವನೆ ಕಡಿಮೆ ಮಾಡಿ
* ಬೆಳಿಗ್ಗೆ ಎದ್ದ ಕೂಡಲೇ ಬ್ರಷ್ ಮಾಡಿ ಒಂದು ಲೋಟ ಬೆಚ್ಚಗಿನ ಅಥವಾ ಬಿಸಿಯಾದ ನೀರನ್ನು ಸಿಪ್ ಬೈ ಸಿಪ್ ಕುಡಿಯಿರಿ
* ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಯಾವುದೇ ಕಾರಣಕ್ಕೂ ಚಹಾ ಅಥವಾ ಕಾಫಿಯನ್ನು ಕುಡಿಯಬೇಡಿ.
* ಒಂದು ದಿನಕ್ಕೆ ಅತಿಯಾಗಿ ಚಹಾ ಅಥವಾ ಕಾಫಿಯನ್ನು ಕುಡಿಯಬೇಡಿ ದಿನದಲ್ಲಿ ಒಂದು ಬಾರಿ ಅಥವಾ ಎರಡು ಬಾರಿ ಕಡಿಮೆ ಪ್ರಮಾಣದಲ್ಲಿ ಸೇವಿಸಿ. ಹಂತ ಹಂತವಾಗಿ ಅಡಿಕ್ಷನ್ ಕಡಿಮೆ ಮಾಡಿಕೊಳ್ಳುತ್ತಾ ಬನ್ನಿ.
* ಒಂದು ದಿನದಲ್ಲಿ 12 ಲೋಟ ನೀರನ್ನು ತಪ್ಪದೆ ಕುಡಿಯಬೇಕು
* ಊಟ ಮಾಡುವುದಕ್ಕಿಂತ 45 ನಿಮಿಷಗಳ ಮೊದಲು ಒಂದು ಲೋಟ ನೀರು ಕುಡಿಯಿರಿ
* ಸೂರ್ಯಾಸ್ತದ ಮುಂಚೆ ರಾತ್ರಿ ಊಟ ಮಾಡಿಕೊಳ್ಳುವುದು ಒಳ್ಳೆಯದು. ಸಂಜೆ 5:00ರ ನಂತರ ಹೆವಿ ಪದಾರ್ಥಗಳನ್ನು ಸೇವಿಸಬೇಡಿ
* ಬೆಳಗ್ಗೆ ಎದ್ದ ತಕ್ಷಣ ಕಣ್ಣುಗಳನ್ನು ಶುದ್ಧವಾದ ತಣ್ಣೀರಿನಿಂದ ತೊಳೆಯಿರಿ
* ಪ್ರತಿದಿನವೂ ಕನಿಷ್ಠ 20 ನಿಮಿಷಗಳ ಬೆಳಿಗ್ಗೆ ಅಥವಾ ಸಂಜೆಯ ವಾಕ್ ಮತ್ತು ಅರ್ಧ ತಾಸು ಯೋಗ ವ್ಯಾಯಾಮಕ್ಕೆ ಮೀಸಲಿರಲಿ
* ದಿನಕ್ಕೆ ಒಂದಾದರು ಸೇಬಿನ ಹಣ್ಣನ್ನು ಸೇವಿಸಿ ಇದು ಅನೇಕ ರೋಗಗಳನ್ನು ದೂರ ಇಡುತ್ತದೆ.
* ಪ್ರತಿದಿನವೂ ಒಂದು ತುಳಸಿ ದಳವನ್ನು ಸೇವಿಸಿ ಇದು ಕೂಡ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
* ಆಹಾರ ಪರಿಪೂರ್ಣವಾಗಿರಲಿ. ನೀವು ತಿನ್ನುವ ಆಹಾರದಲ್ಲಿ ಧಾನ್ಯಗಳು, ತರಕಾರಿಗಳು, ಸೊಪ್ಪುಗಳು ಈ ರೀತಿ ಎಲ್ಲ ರೀತಿಯ ಪೋಷಕಾಂಶಗಳು ಇರುವ ವಸ್ತುಗಳು ಇರಲಿ.
* ಒಂದು ಲೋಟ ಬಿಸಿ ನೀರಿಗೆ ಒಂದು ಹೋಳು ನಿಂಬೆರಸ ಹಾಕಿಕೊಂಡು ಮುಂಜಾನೆ ಅಥವಾ ಸಂಜೆ ಸಮಯ ಕುಡಿಯುವುದರಿಂದ ದೇಹ ಡಿ ಟಾಕ್ಸಿನ್ ಆಗುತ್ತದೆ.