ರಾಶಿ ಕುಂಡಲಿಯಲ್ಲಿ ಏಳನೇ ರಾಶಿಯಾಗಿರುವ ತುಲಾ ರಾಶಿ ವಾಯು ತತ್ವ ರಾಶಿ ಮತ್ತು ಚರಾ ರಾಶಿ. ಈ ರಾಶಿಯ ದಿಕ್ಕು ಪಶ್ಚಿಮ ಮತ್ತು ಬಣ್ಣ ಕಪ್ಪು. ತುಲಾ ರಾಶಿಯ ರಾಶಿಯಾಧಿಪತಿ ಶುಕ್ರ ಇದೆಲ್ಲದರ ಪ್ರಭಾವದಿಂದ ತುಲಾ ರಾಶಿಯ ಗುಣ ಸ್ವಭಾವದ ಬಗ್ಗೆ ಹೇಳುವುದಾದರೆ ಬಹಳ ಲವಲವಿಕೆಯಿಂದ ಇರುವ ರಾಶಿಯಾಗಿದೆ.
ಬೆಳಗ್ಗೆ ಎದ್ದು ಮನೆ ಕೆಲಸ ಮಾಡಿ ಆಫೀಸ್ ಗೆ ಹೋಗಿ ದುಡಿದು, ಮತ್ತೆ ಬಂದು ಮನೆ ಕೆಲಸಗಳಲ್ಲಿ ಅಷ್ಟೇ ಚಟುವಟಿಕೆಯಿಂದ ಇರುವಂತಹ ಸಾಮರ್ಥ್ಯ ಮತ್ತು ಮನಸ್ಥಿತಿ ಇರುವ ರಾಶಿಯಾಗಿದೆ ಆದರೆ ಬೆಳಗ್ಗೆ ಬೇಗ ಎದ್ದು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡರೆ ಅಷ್ಟೇ ಇವರ ಈ ದಿನ ಸುಖಕರ ಇಲ್ಲ ದಿನಪೂರ್ತಿ ಕಿರಿಕಿರಿ ಅನುಭವಿಸುತ್ತಿರುತ್ತಾರೆ.
ಈ ರಾಶಿಯವರಿಗೆ ಪಾಶ್ಚಿಮಾತ್ಯ ದೇಶದ ಬಗ್ಗೆ ಬಹಳ ವ್ಯಾಮೋಹ ಇರುತ್ತದೆ. ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಅಥವಾ ಉದ್ಯೋಗ ಮಾಡಬೇಕು ಅಥವಾ ವಿದೇಶದಲ್ಲಿ ಸೆಟಲ್ ಆಗಬೇಕು ಎನ್ನುವ ಇಚ್ಛೆ ಬಹಳ ಇರುತ್ತದೆ ಮತ್ತು ಇದಕ್ಕಾಗಿ ಪ್ರಯತ್ನ ಪಡುತ್ತಿರುತ್ತಾರೆ.
ಇದಿಷ್ಟು ಅಲ್ಲದೆ ನೀವು ಯಾವಾಗಲೂ ಉದ್ಯೋಗ ಅಥವಾ ವ್ಯಾಪಾರ ಅಥವಾ ಕಾರ್ಯಗಳನ್ನು ನೀವು ವಾಸಿಸುವ ಸ್ಥಳದಿಂದ ಎಡಕ್ಕೆ ಇರುವ ಸ್ಥಳಗಳನ್ನು ಆರಿಸಿಕೊಳ್ಳುತ್ತೀರಿ. ಪಶ್ಚಿಮ ದಿಕ್ಕಿನ ಪ್ರಭಾವ ಕೂಡ ಇದಕ್ಕೆ ಕಾರಣ ಆಗಿರಬಹುದು ಇದು ಕೂಡ ನಿಮಗೆ ಬಹಳಷ್ಟು ಪಾಸಿಟಿವ್ ಎನರ್ಜಿ ಕೊಡುತ್ತೇವೆ.
ಶುಕ್ರನ ಪ್ರಭಾವದಿಂದ ಇವರಿಗೆ ಕಲೆ ಮೇಲೆ ಅಪಾರ ಆಸಕ್ತಿ ಇರುತ್ತದೆ ಹಾಗೆಯೇ ಕಲೆ ಮತ್ತು ಸೃಜನಶೀಲತೆ ಎನ್ನುವುದು ಇವರಿಗೆ ಒಲಿದು ಬಂದಿರುತ್ತದೆ. ಅದೇ ರೀತಿಯಾಗಿ ಶುಕ್ರನ ಬಲದಿಂದಾಗಿ ಬಹಳ ಬೇಗ ಪ್ರೀತಿಯಲ್ಲಿ ಬೀಳುವ ರಾಶಿ ಕೂಡ ಇವರೇ ಆಗಿರುತ್ತಾರೆ. ಇವರು ಬಹಳ ಬೇಗ ಮತ್ತೊಬ್ಬರನ್ನು ನಂಬುತ್ತಾರೆ ಮತ್ತು ಅವರ ಭಾವನೆಗಳಿಗೆ ಸ್ಪಂದಿಸುತ್ತಾರೆ.
ಲವ್ ಆಟ್ ಫಸ್ಟ್ ಸೈಟ್ ಎನ್ನುವುದನ್ನು ಬಹಳ ನಂಬುವ ರಾಶಿಯವರು. ಮೊದಲ ನೋಟದಲ್ಲಿ ಅಂದ ಚೆಂದ ಬುದ್ಧಿವಂತಿಕೆ ಕ್ರಿಯೇಟಿವಿಟಿಯನ್ನು ನೋಡಿ ಇವರು ಮಾರುಹೋಗುತ್ತಾರೆ. ಇವರ ಇದೇ ಗುಣದಿಂದಾಗಿ ಇವರಿಗೆ ಅನೇಕ ತೊಂದರೆಗಳು ಬರುತ್ತದೆ. ಇದೇ ವಿಚಾರದ ಬಗ್ಗೆ ಇವರಿಗೆ ಅನೇಕ ಬಾರಿ ಮೋ’ಸಗಳು ಕೂಡ ಆಗುತ್ತದೆ.
ವ್ಯಕ್ತಿತ್ವದ ಬಗ್ಗೆ ಹೇಳುವುದಾದರೆ ಈ ರಾಶಿಯ ರಾಶಿ ಚಿಹ್ನೆಯ ತಕ್ಕಡಿ ಆಗಿರುವುದರಿಂದ ಇದೇ ರೀತಿ ಮನಸ್ಥಿತಿ ಹೊಂದಿರುತ್ತಾರೆ. ನ್ಯಾಯ, ನೀತಿ, ಸತ್ಯ, ಧರ್ಮ ಎನ್ನುವುದರ ಮೇಲೆ ನಂಬಿಕೆ ಇಟ್ಟು ಆ ಪ್ರಕಾರವಾಗಿ ನಡೆದುಕೊಳ್ಳುವವರು ಇವರು.
ತುಲಾ ರಾಶಿಯವರು ಬ್ಯೂಟಿಷಿಯನ್ ಅಥವಾ ಬೋಟಿಕ್ ಅಥವಾ ಫ್ಯಾಷನ್ ಡಿಸೈನಿಂಗ್ ಈ ರೀತಿ ವೃತ್ತಿಗಳಲ್ಲಿ ಮತ್ತು ಕಲೆಯನ್ನು ಪ್ರತಿನಿಧಿಸುವ ಸಂಗೀತ ಸಾಹಿತ್ಯ ನಟನೆ ಇತ್ಯಾದಿ ಕ್ಷೇತ್ರಗಳಲ್ಲಿ ತೊಡಗಿಕೊಂಡರೆ ಮತ್ತು ಪೊಲೀಸ್ ಇಲಾಖೆ, ನ್ಯಾಯಾಂಗ ಇಲಾಖೆ, ವೈದ್ಯಕೀಯ ಕ್ಷೇತ್ರ ಇತ್ಯಾದಿಗಳಲ್ಲಿ ಅಥವಾ ವಿದೇಶಗಳಿಗೆ ಹೋಗಿ ವೃತ್ತಿ ಮಾಡುವ ಕ್ಷೇತ್ರಗಳನ್ನು ಆಯ್ದುಕೊಂಡರೆ ಜೀವನದಲ್ಲಿ ಬಹಳ ಯಶಸ್ಸು ಆಗುತ್ತಾರೆ.
ತುಲಾ ರಾಶಿಯವರಿಗೆ ಒಂದು ಸಲಹೆಯೇನೆಂದರೆ ನೀವು ಆದಷ್ಟು ನಿಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನಿಮಗೆ ಆಗುವ ಅನೇಕ ಅ’ಪಾ’ಯಗಳನ್ನು ತಪ್ಪಿಸುತ್ತದೆ ಹಾಗೂ ತತ್ ಕ್ಷಣಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಬದಲು ಆಲೋಚಿಸಿ ನಿಧಾನವಾಗಿ ನಿರ್ಧಾರಕ್ಕೆ ಬರುವುದು ನಿಮ್ಮ ಬದುಕಿಗೆ ಬಹಳ ಒಳ್ಳೆಯದು.