Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಕಳೆದ ತಿಂಗಳಷ್ಟೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಶಂಭು ಮತ್ತು ಅನಿಕಾ ಪಾತ್ರಧಾರಿ ಸುಹಾಸ್ & ಗ್ಯಾಬ್ರಿಯಾಲ ಇದೀಗ...

ಕಳೆದ ತಿಂಗಳಷ್ಟೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಶಂಭು ಮತ್ತು ಅನಿಕಾ ಪಾತ್ರಧಾರಿ ಸುಹಾಸ್ & ಗ್ಯಾಬ್ರಿಯಾಲ ಇದೀಗ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ ಈ ವಿಡಿಯೋ ನೋಡಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಕಮಲಿ ಧಾರಾವಾಹಿ ಒಂದು ಕಾಲದಲ್ಲಿ ತುಂಬಾನೇ ಸೆನ್ಸೇಷನ್ ಮತ್ತು ಖ್ಯಾತಿಯನ್ನು ಪಡೆದುಕೊಂಡಿದ್ದಂತಹ ಧಾರವಾಹಿ. ಪ್ರತಿನಿತ್ಯವೂ ಕೂಡ ಸಾಕಷ್ಟು ಅಭಿಮಾನಿಗಳು ಈ ಧಾರಾವಾಹಿ ಕಾದು ಕುಳಿತಿದ್ದರು ಟಿ ಆರ್ ಪಿ ಲೋಕದಲ್ಲಿಯೂ ಕೂಡ ಹೊಸದೊಂದು ಸಂಚಲನವನ್ನೇ ಸೃಷ್ಟಿ ಮಾಡಿತು. ಅದರಲ್ಲಿಯೂ ಕೂಡ ಅನಿಕಾ ಪಾತ್ರಧಾರಿಯನ್ನು ಯಾರಿಂದಲೂ ಕೂಡ ಮರೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಧಾರವಾಹಿ ಪ್ರಾರಂಭವಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡ ತನ್ನ ಬೇಡಿಕೆಯನ್ನು ಅಷ್ಟೇ ಉಳಿಸಿಕೊಂಡಿದ್ದಾರೆ ಪ್ರೇಕ್ಷಕರನ್ನು ತನ್ನತ್ತ ಗಮನ ಸೆಳೆಯುವುದರಲ್ಲಿ ಅನಿತಾ ಅವರು ನಿಸ್ಸಿಮರು ಅಂತಾನೆ ಹೇಳಬಹುದು.

ಧಾರವಾಹಿಯಲ್ಲಿ ರುಷಿ ಅವರನ್ನು ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುತ್ತಿದ್ದು ಆತನನ್ನು ಮದುವೆಯಾಗಬೇಕು ಎಂಬ ಆಸೆ ಕನಸನ್ನು ಒತ್ತಿರುತ್ತಾರೆ. ಆದರೆ ಅದಕ್ಕೆ ಅವಕಾಶ ದೊರೆಯುವುದಿಲ್ಲ ಏಕೆಂದರೆ ರಿಷಿ ಮತ್ತು ಕಮಲಿ ಇಬ್ಬರು ಕೂಡ ಒಬ್ಬರನ್ನು ಒಬ್ಬರು ಪ್ರೀತಿಸುತ್ತಿದ್ದು ಅವರಿಬ್ಬರು ವಿವಾಹವಾಗುತ್ತಾರೆ. ಈ ವಿವಾಹದಿಂದ ಬೇಸರದಂತಹ ಅನಿಕಾ ಅವರಿಬ್ಬರನ್ನು ಬೇರ್ಪಡಿಸುವುದಕ್ಕೆ ಯಾವ ಮಟ್ಟಕ್ಕೆ ಇಳಿದಿದ್ದಳು ಎಂಬುವುದು ನಿಮ್ಮೆಲ್ಲರಿಗೂ ತಿಳಿದೇ ಇದೆ. ಇದು ಕೇವಲ ಕಿರುತರ ಲೋಕ ಆದರೆ ನಿಜ ಜೀವನದಲ್ಲಿಯೂ ಕೂಡ ಅನಿಕಾ ಪಾತ್ರಧಾರಿಯಾ ಗ್ಯಾಬ್ರಿಯಲ್ಲ ಕಮಲಿ ಧಾರಾವಾಹಿಯಲ್ಲಿ ಶಂಭು ಪಾತ್ರವನ್ನು ನಿರ್ವಹಿಸುತ್ತಿದ್ದಂತಹ ಸುಹಾಸ್ ಅವರನ್ನು ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುತ್ತಿದ್ದಾರೆ.

ಇವರಿಬ್ಬರು ಕಳೆದ ಮೂರು ವರ್ಷಗಳಿಂದಲೂ ಕೂಡ ಒಬ್ಬರನ್ನು ಒಬ್ಬರು ಪ್ರೀತಿಸುತ್ತಿದ್ದರು ಆದರೆ ಈ ವಿಚಾರವನ್ನು ಎಲ್ಲಿಯೂ ಕೂಡ ರಿವೀಲ್ ಮಾಡಿರಲಿಲ್ಲ. ಆದರೆ ಕಳೆದ ತಿಂಗಳಿನಲ್ಲಿಷ್ಟೇ ಖಾಸಗಿ ಹೋಟೆಲ್ ಒಂದರಲ್ಲಿ ಸುಹಾಸ್ ಮತ್ತು ಗಾಬ್ರಿಯಲ್ಲ ಇಬ್ಬರು ಕೂಡ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡುವುದರ ಮೂಲಕ ನಾವಿಬ್ಬರು ಜೊತೆಯಾಗಿ ಬಾಳಲು ಸಿದ್ಧರಾಗಿದ್ದೇವೆ ನಿಮ್ಮ ಪ್ರೀತಿ ವಿಶ್ವಾಸ ಮತ್ತು ಪ್ರೋತ್ಸಾಹ ನಮ್ಮ ಮೇಲೆ ಹೀಗೆ ಇರಲಿ ಎಂದು ಸುಹಾಸ್ ಮತ್ತು ಗ್ಯಾಬ್ರಿಯಾಲ್ಲ ಇಬ್ಬರು ಕೂಡ ಬರೆದುಕೊಂಡಿದ್ದರು. ಈ ಫೋಟೋ ಮತ್ತು ವಿಡಿಯೋ ನೋಡಿದಂತಹ ಅಭಿಮಾನಿಗಳು ನಿಜಕ್ಕೂ ಕೂಡ ಒಂದು ಕ್ಷಣ ಶಾ.ಕ್ ಆಗಿದ್ದರು.

ಏಕೆಂದರೆ ಪ್ರೀತಿಸುತ್ತಿದ್ದಂತಹ ವಿಚಾರವನ್ನು ಹೇಳಿಕೊಂಡಿರಲಿಲ್ಲ ಮೊಟ್ಟಮೊದಲ ಬಾರಿಗೆ ಉಂಗುರವನ್ನು ಬದಲಾಯಿಸಿಕೊಳ್ಳುವುದರ ಮೂಲಕ ಪ್ರೇಮಿಗಳು ಎಂಬುದನ್ನು ಅವರ ಹಾಕಿದ್ದಾರೆ. ಇನ್ನು ಸುಹಾಸ್ ಅವರು ಮೂಲತಹ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು ಗ್ಯಾಬ್ರಿಯಲ್ಲ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದವರು ಮೊದಮೊದಲು ಇವರಿಬ್ಬರ ವಿವಾಹಕ್ಕೆ ಪ್ರೀತಿಗೆ ಮನೆಯವರ ವಿರೋಧವು ಕೂಡ ಇತ್ತು. ಆದರೆ ಒಂದು ವರ್ಷಗಳ ಸಮಯಾವಕಾಶವನ್ನು ತೆಗೆದುಕೊಂಡು ಇಬ್ಬರೂ ಕೂಡ ತಮ್ಮ ಕುಟುಂಬಸ್ಥರನ್ನು ಒಪ್ಪಿಸಿ ಮದುವೆಗೆ ಒಪ್ಪಿಗೆಯನ್ನು ಪಡೆದಿದ್ದಾರೆ. ಅಂದ ಹಾಗೆ ಈ ವಿವಾಹ ಹಿಂದೂ ಸಂಪ್ರದಾಯದಂತೆಯೂ ನಡೆಯುವುದಿಲ್ಲ ಕ್ರಿಶ್ಚಿಯನ್ ಸಂಪ್ರದಾಯದಂತೆಯೂ ನಡೆಯುವುದಿಲ್ಲ ಬದಲಿಗೆ ಕೋರ್ಟ್ ನಿಯಮದಂತೆ ಈ ಮದುವೆ ನಡೆಯಲಿದೆ ಎಂದು ಸ್ವತಃ ಅನಿಕಾ ಪಾತ್ರದಾರಿಯ ಗ್ಯಾಬ್ರಿಯಲ ಅವರೇ ಹೇಳಿಕೊಂಡಿದ್ದಾರೆ.

ಸದ್ಯಕ್ಕೆ ಇದೀಗ ಇವರಿಬ್ಬರೂ ಕೂಡ ಮದುವೆಯ ಸಂಭ್ರಮದಲ್ಲಿದ್ದು ಪ್ರಿ ವೆಡ್ಡಿಂಗ್ ಫೋಟೋಶೂಟ್ ಅನ್ನು ಕೂಡ ಮಾಡಿಸಿಕೊಂಡಿದ್ದಾರೆ ಬಿಳಿ ಬಣ್ಣದ ಗೌನ್ ಹಾಕಿ ಅನಿಕಾ ಅವರು ಸೆಂಡ್ರೆಲ್ಲಾ ಮಾದರಿಯಲ್ಲಿ ಕಾಣುತ್ತಿದ್ದಾರೆ. ಸುಹಾಸ್ ಅವರು ಕೂಡ ಬಿಳಿ ಮತ್ತು ನೀಲಿ ಬಣ್ಣದ ಉಡುಗೆಯನ್ನು ತೊಟ್ಟು ಸಖತ್ ಸ್ಮಾರ್ಟ್ ಆಗಿ ಕಾಣುತ್ತಿದ್ದಾರೆ. ಈ ಫೋಟೋ ಮತ್ತು ವಿಡಿಯೋ ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕೆಲವು ಅಭಿಮಾನಿಗಳು ಮಾತ್ರ ನಿಮ್ಮಿಬ್ಬರ ಧರ್ಮ ಬೇರೆಯಾಗಿದೆ ಆದರೂ ಕೂಡ ವಿವಾಹವಾಗುತ್ತಿದ್ದೀರಾ ಮುಂದೆ ನಿಮ್ಮ ದಾಂಪತ್ಯ ಜೀವನ ಹೇಗಿರಲಿದೆಯೋ ಏನೋ ಎಂದು ಟ್ರೋಲ್ ಮಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.