ಗಜಕರ್ಣ, ಕಜ್ಜಿ, ತುರಿಕೆ, ಈ ಒಂದು ಸಮಸ್ಯೆ ಕೆಲವೊಂದು ಜನರಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿರುತ್ತದೆ ಹೌದು ಈ ಸಮಸ್ಯೆ ಬೇರೊಬ್ಬರಲ್ಲಿ ಹೇಳಿಕೊಳ್ಳುವುದಕ್ಕೂ ಕೂಡ ಸ್ವಲ್ಪ ಮುಜುಗರ ಪಡುವಂತಹ ಸಮಸ್ಯೆಯಾಗಿದ್ದು ಇದು ಅತಿ ಹೆಚ್ಚಿನ ತೊಂದರೆಯನ್ನು ಉಂಟುಮಾಡು ತ್ತದೆ ಎಂದೇ ಹೇಳಬಹುದು.
ಹೌದು ಯಾರು ಹೆಚ್ಚಾಗಿ ಬೆವರುತ್ತಾರೋ ಅಂತವರಲ್ಲಿ ಈ ರೀತಿಯ ಸಮಸ್ಯೆ ಕಾಣಿಸಿ ಕೊಳ್ಳುವುದು ಸರ್ವೇಸಾಮಾನ್ಯ ಹೌದು. ನಮ್ಮ ದೇಹದ ಕೆಲವೊಂದಷ್ಟು ಭಾಗಗಳಲ್ಲಿ ಬೆವರು ಉಂಟಾಗುತ್ತದೆ. ಅಂತಹ ಸ್ಥಳಗಳಲ್ಲಿ ಈ ಒಂದು ಗಜಕರ್ಣ ಕಜ್ಜಿ ತುರಿಕೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
ಹಾಗೆಂದ ಮಾತ್ರಕ್ಕೆ ಪ್ರತಿಯೊಬ್ಬರಿಗೂ ಈ ಸಮಸ್ಯೆ ಉಂಟಾಗುತ್ತದೆ ಎಂದರ್ಥ ಅಲ್ಲ ಹೆಚ್ಚಾಗಿ ಬೆವರುವಂತಹ ಜನರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗೂ ಯಾರು ತಮ್ಮ ದೇಹದ ಶುಚಿತ್ವವನ್ನು ಸರಿಯಾಗಿ ಕಾಪಾಡಿ ಕೊಳ್ಳುವುದಿಲ್ಲವೋ ಅಂತವರಲ್ಲಿಯೂ ಸಹ ಈ ಸಮಸ್ಯೆ ಕಾಣಿಸಿ ಕೊಳ್ಳುವುದು ಸರ್ವೇಸಾಮಾನ್ಯ.
ಹಾಗಾಗಿ ಪ್ರತಿಯೊಬ್ಬರೂ ಕೂಡ ತಮ್ಮ ದೇಹದ ಆರೋಗ್ಯವನ್ನು ಅಂದರೆ ತಮ್ಮ ದೇಹದ ಒಳಗಿನ ಆರೋಗ್ಯ ವನ್ನು ಕಾಪಾಡಿಕೊಳ್ಳುವುದರ ಜೊತೆಗೆ ತಮ್ಮ ದೇಹದ ಹೊರಗಿನ ಭಾಗವನ್ನು ಕೂಡ ಶುಚಿತ್ವವಾಗಿ ಅಂದರೆ ಆರೋಗ್ಯವಾಗಿ ಇಟ್ಟುಕೊಳ್ಳು ವಂತೆ ನೋಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ.
ಇಲ್ಲವಾದಲ್ಲಿ ಮೇಲೆ ಹೇಳಿದಂತಹ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಈ ಸಮಸ್ಯೆ ಒಮ್ಮೆ ಬಂತು ಎಂದರೆ ಅದನ್ನು ದೂರ ಮಾಡಿಕೊಳ್ಳುವುದು ಕಷ್ಟ. ಹಾಗಾಗಿ ಈ ಸಮಸ್ಯೆ ಬರುವುದಕ್ಕೂ ಮೊದಲು ಯಾವ ಕೆಲವು ಆರೋಗ್ಯಕರ ವಿಧಾನವನ್ನು ಅನುಸರಿಸಬೇಕು ಎನ್ನುವುದನ್ನು ತಿಳಿದುಕೊಂಡು ಆ ರೀತಿಯಾಗಿ ಇರುವುದು ತುಂಬಾ ಒಳ್ಳೆಯದು.
ಉದಾಹರಣೆಗೆ ಕಂಕಳಿನ ಭಾಗದಲ್ಲಿ, ಕುತ್ತಿಗೆ, ತೊಡೆಯ ಭಾಗಗಳಲ್ಲಿ ಕಾಲುಗಳ ಬೆರಳುಗಳಲ್ಲಿಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಹೌದು ಈ ಸ್ಥಳದಲ್ಲಿ ಬೆವರು ನಿಲ್ಲುವುದರಿಂದ ಸಮಸ್ಯೆಗಳು ಕಾಣಿಸಿಕೊಳ್ಳು ವುದು ಸರ್ವೇಸಾಮಾನ್ಯ.
ಹೆಚ್ಚಿನ ಜನ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳುವುದಕ್ಕೆ ಕೆಲವೊಂದು ಕ್ರೀಮ್ ಗಳನ್ನು ಸಹ ಹಚ್ಚಿಕೊಳ್ಳುತ್ತಾರೆ. ಆದರೆ ಅದು ಸಂಪೂರ್ಣವಾಗಿ ಹೋಗುವುದಿಲ್ಲ ಸ್ವಲ್ಪ ದಿನಗಳ ಮಟ್ಟಿಗೆ ಹೋದರೂ ಮತ್ತೆ ಅದೇ ಸ್ಥಳದಲ್ಲಿ ಸಮಸ್ಯೆ ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗುತ್ತದೆ.
ಹಾಗಾಗಿ ಈ ವಿಧಾನವನ್ನು ಅನುಸರಿಸುವುದರ ಬದಲು ಈಗ ನಾವು ಹೇಳುವಂತಹ ಈ ಒಂದು ವಿಧಾನವನ್ನು ನೀವು ಒಂದು ವಾರ ಮಾಡಿ ಹಚ್ಚಿದರೆ ಸಾಕು ನಿಮ್ಮ ಕಜ್ಜಿ ಗಜಕರ್ಣ ತುರಿಕೆಯಂತಹ ಸಮಸ್ಯೆ ಸಂಪೂರ್ಣವಾಗಿ ದೂರವಾಗುತ್ತದೆ. ಹಾಗಾದರೆ ಅದನ್ನು ಮಾಡುವುದು ಹೇಗೆ ಅದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ. ಒಂದು ಹಿಡಿ ಬೇವಿನ ಸೊಪ್ಪು, ಒಂದು ನಿಂಬೆಹಣ್ಣು, ಅರ್ಧ ಚಮಚ ಅರಿಶಿನ.
ಮಾಡುವ ವಿಧಾನ :- ಬೇವಿನ ಸೊಪ್ಪನ್ನು ಚೆನ್ನಾಗಿ ಕುಟ್ಟಿ ಅದರ ರಸವನ್ನು ತೆಗೆದುಕೊಳ್ಳಬೇಕು ನಂತರ ಅದಕ್ಕೆ ಸ್ವಲ್ಪ ನಿಂಬೆಹಣ್ಣಿನ ರಸ ಚಿಟಿಕೆ ಅರಿಶಿಣ ಹಾಕಿ ಮಿಶ್ರಣ ಮಾಡಿ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಕಡ್ಡಾಯವಾಗಿ ಮೂರು ತಿಂಗಳುಗಳ ಕಾಲ ಕಜ್ಜಿ ತುರಿಕೆ ಆಗಿರುವ ಸ್ಥಳಕ್ಕೆ ಹಚ್ಚಬೇಕು.
ಈ ರೀತಿ ಈ ವಿಧಾನ ಅನುಸರಿಸುವುದರಿಂದ ನಿಮಗೆ ಈ ಒಂದು ಸಮಸ್ಯೆ ಸಂಪೂರ್ಣವಾಗಿ ದೂರವಾಗುವುದರ ಜೊತೆಗೆ ಅದರ ಒಂದು ಕಲೆಯು ಕೂಡ ನಿಮಗೆ ತಿಳಿಯದ ಹಾಗೆ ಮಾಯವಾಗುತ್ತದೆ. ಈ ವಿಧಾನ ನಿಮಗೆ ನಿಧಾನವಾದರೂ ಸಹ ಇದರಿಂದ ಸಂಪೂರ್ಣವಾದ ಪ್ರಯೋಜನವನ್ನು ನೀವು ಪಡೆದುಕೊಳ್ಳಬಹುದು. ಇದರಲ್ಲಿ ಯಾವುದೇ ರೀತಿಯ ಕೆಮಿಕಲ್ ಇಲ್ಲದೆ ಇರುವುದರಿಂದ ಇದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ.