ಸ್ಯಾಂಡಲ್ವುಡ್ ನ ಚಿತ್ರರಂಗದಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಆಗಿರುವ ನಟರುಗಳ ಪೈಕಿ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಒಬ್ಬರು. ನಟ ಗಣೇಶ್ ಜುಲೈ 2 ರಂದು ತಮ್ಮ ಹುಟ್ಟು ಹಬ್ಬವನ್ನು ತುಂಬಾ ಸರಳವಾಗಿ ಆಚರಿಸಿ ಕೊಂಡಿದ್ದಾರೆ. ಪ್ರತಿ ವರ್ಷ ತಮ್ಮ ಹುಟ್ಟುಹಬ್ಬದ ದಿನವನ್ನು ಅಭಿಮಾನಿಗಳ ಜೊತೆ ಆಚರಿಸುತ್ತಿದ್ದ ಗಣೇಶ್ ಅವರು ಈ ಬಾರಿ ಆಚರಿಸಿಕೊಳ್ಳುತ್ತಿಲ್ಲ. ಇದಲ್ಲದೆ ಟ್ವಿಟ್ಟರ್ ಫೇಸ್ಬುಕ್ ನಲ್ಲಿ ಗಣೇಶ್ ಅವರು ತಮ್ಮ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ. “ನಾನು ಈ ಬಾರಿ ನಿಮ್ಮೊಂದಿಗೆ ಹುಟ್ಟುಹಬ್ಬದ ದಿನವನ್ನು ಆಚರಿಸಿಕೊಳ್ಳಲು ಆಗುತ್ತಿಲ್ಲ ಅದಕ್ಕಾಗಿ ಕ್ಷಮೆ ಇರಲಿ ಅನಿವಾರ್ಯ ಕಾರಣಗಳಿಂದ ನಾನು ಮನೆಯಲ್ಲಿ ಇರುವುದಿಲ್ಲ ದಯವಿಟ್ಟು ಮನೆಯ ಬಳಿ ಬರಬೇಡಿ ಹಾಗೂ ನೀವು ಪ್ರತಿವರ್ಷ ನನಗೆ ತರುತ್ತಿದ್ದ ಹಾರದ ಬದಲು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಎಂದು ಪತ್ರ ಬರೆದಿದ್ದಾರೆ”.
ನನ್ನ ಕಲಾ ಬದುಕಿನ ಆರಂಭದಿಂದ ಇಲ್ಲಿಯವರೆಗೂ ಬಣ್ಣದ ಹಾದಿಯಲ್ಲಿ ನನ್ನೊಟ್ಟಿಗೆ ನೀವು ಹೆಜ್ಜೆ ಹಾಕಿ ನನ್ನ ಯಶಸ್ಸನ್ನು ನಿಮ್ಮ ಯಶಸ್ಸು ಎಂದು ಸಂಭ್ರಮಿಸಿ ಖುಷಿ ಪಟ್ಟಿದ್ದೀರಿ. ನಿಮ್ಮ ಈ ನಿಷ್ಕಲ್ಮಶ ಪ್ರೀತಿ ಹೃದಯಕ್ಕೆ ನಾನು ಸದಾ ಋಣಿ, ನನ್ನ ಹುಟ್ಟುಹಬ್ಬದ ನೆಪದಲ್ಲಾದರೂ ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಿ ನಿಮ್ಮೆಲ್ಲರ ಪ್ರೀತಿಯನ್ನು ಆಶ್ವಾದಿಸುವ ಹಂಬಲವಿದೆ ನನಗೆ ಆದರೆ ಕಾರಣಾಂತರಗಳಿಂದ ಈ ಬಾರಿ ಅದು ಸಾಧ್ಯವಾಗುತ್ತಿಲ್ಲ. ನೀವು ತರುತ್ತಿದ್ದ ಹಾರ ಕೇಕ್ ಇತ್ಯಾದಿಗಳ ಬದಲು ಸಾದ್ಯವಾದರೆ ಅಗತ್ಯವಿರುವವರಿಗೆ ಏನಾದರು ಸಹಾಯ ಮಾಡಿ ಎಂದು ಅಭಿಮಾನಿಗಳಿಗೆ ಒಂದು ಸುಧೀರ್ಘ ಪತ್ರವೊಂದನ್ನು ಗಣೇಶ್ ಅವರು ಬರೆದಿದ್ದಾರೆ. ಸದ್ಯ ಗಾಳಿಪಟ 2 ಚಿತ್ರದಲ್ಲಿ ಬ್ಯುಸಿಯಾಗಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರು ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
ಸಾಮಾನ್ಯವಾಗಿ ಸ್ಟಾರ್ ನಟರ ಹುಟ್ಟುಹಬ್ಬದ ದಿನವೆಂದರೆ ಅಭಿಮಾನಿಗಳಿಗೆ ಹಬ್ಬದಂತೆ. ತಮ್ಮ ನೆಚ್ಚಿನ ನಟನನ್ನು ಭೇಟಿಯಾಗಿ ಅವರನ್ನು ಆಲಿಂಗಿಸಿಕೊಳ್ಳುವುದರಲ್ಲಿನ ಖುಷಿ ಅಭಿಮಾನಿಗಳಿಗೆ ದೇವರ ಆಲಿಂಗನದಷ್ಟೇ ಸಂತಸವಾಗುತ್ತದೆ. ಇಂತಹ ಸಂದರ್ಭದಲ್ಲಿ ಭರ್ಜರಿಯಾಗಿ ತಮ್ಮ ನೆಚ್ಚಿನ ನಟರನ್ನು ಸ್ವಾಗತಿಸಲು ಅಭಿಮಾನಿಗಳು ಹಾರ ತುರಾಯಿ ಕೇಕ್ ಕೊಂಡೊಯ್ಯುವುದು ಸಹಜ. ಆದರೆ ಇದರ ಬದಲು ತಮ್ಮ ನೆಚ್ಚಿನ ನಟನ ಹೆಸರಲ್ಲಿ ನಿರ್ಗತಿಕರಿಗೆ, ಅನಾಥರಿಗೆ, ಅಥವಾ ವೃದ್ಧಾಶ್ರಮಗಳಿಗೆ ಸಹಾಯ ಮಾಡಿದರೆ ಅದರ ಶ್ರೇಯಸ್ಸು ನಟರಿಗೆ ಮಾತ್ರವಲ್ಲದೆ ಹಂಚಿದವರಿಗೂ ಸಲ್ಲುತ್ತದೆಯಲ್ಲವೇ. ನಮ್ಮಲ್ಲಿರುವ ಹುಚ್ಚು ಅಭಿಮಾನದ ಹೊಳೆಗೆ ತಡೆಗೋಡೆ ನಿರ್ಮಿಸಿ ಆ ಅಭಿಮಾನದ ಹೊಳೆಯನ್ನು ಸ್ವಲ್ಪ ಸ್ವಲ್ಪವಾಗಿ ಗದ್ದೆಗಳಿಗೆ ಹರಿಸಿದರೆ ಉತ್ತಮವಾದ ಹೊನ್ನನ್ನು ಬೆಳೆಯಬಹುದಲ್ಲವೇ ಒಮ್ಮೆ ಯೋಚಿಸಿ. ಇದೇ ಅರ್ಥದಲ್ಲಿಯೇ ನಮ್ಮ ಮುಂಗಾರು ಮಳೆ ಗಣೇಶ್ ಅವರು ಅಭಿಮಾನಿಗಳಿಗೆ ಕಿವಿಮಾತನ್ನು ಭಾವನಾತ್ಮಕವಾಗಿ ಪತ್ರದ ಮೂಲಕ ತಿಳಿಸ ಬಯಸಿದ್ದಾರೆ.
ಹೌದು ವ್ಯರ್ಥವಾಗಿ ಮಧ್ಯರಾತ್ರಿಯಲ್ಲಿ ಕೆಜಿಗಟ್ಟಲೆ ಕೇಕ್ ಅನ್ನು ಕಟ್ ಮಾಡಿ ಮುಖಕ್ಕೆ ಬಳಿಯುವ ಬದಲು ಎಷ್ಟೋ ಅನಾಥ ಮಕ್ಕಳು, ವೃದ್ಧ ಅನಾಥರು ಹಸಿವಿನಿಂದ ತತ್ತರಿಸುತ್ತಿದ್ದಾರೆ ಅಂಥವರಿಗೆ ಸಹಾಯ ಮಾಡಿದರೆ ಹುಟ್ಟುಹಬ್ಬ ಆಚರಿಸಿಕೊಳ್ಳುವರು ಒಂದೊತ್ತಿನ ಊಟ ನೀಡಿದ ಶ್ರೇಯಸ್ಸು ಸಿಗುವುದಿಲ್ಲವೇ? ಹಾಗೂ ಎಷ್ಟೋ ವೃದ್ಧಾಶ್ರಮ, ಅನಾಥಶ್ರಮಗಳು ಅನಾಥರನ್ನು ಪೋಷಿಸಲು ಸಾಧ್ಯವಾಗದೆ ಇಂದು ಮುಚ್ಚಿ ಹೋಗುತ್ತಿವೆ. ಇಂತಹ ಆಶ್ರಮಗಳಲ್ಲಿ ಹುಟ್ಟುಹಬ್ಬದ ದಿನ ಆಚರಿಸಿ ಕೈಲಾದಷ್ಟು ಸಹಾಯಹಸ್ತ ನೀಡಿದರೆ ಮನಃ ತೃಪ್ತಿಯಾಗುವುದಿಲ್ಲವೇ ಒಮ್ಮೆ ಯೋಚಿಸಿ ಇಂತಹ ಸ್ಥಿತಿಗಳನ್ನು ಊಹಿಸಿಯೇ ನಮ್ಮ ಸ್ಟಾರ್ ನಟರು ಇಂತಹ ಪತ್ರಗಳ ಮೂಲಕ ಅಭಿಮಾನಿಗಳನ್ನು ಎಚ್ಚರಿಸಿ ಸಹಾಯ ಹಸ್ತದ ಪಾಠ ಭೋದಿಸುತ್ತಿದ್ದಾರೆ. ಗಣೇಶ್ ಅವರ ಈ ನಿಲುವಿನ ಬಗ್ಗೆ ನಿಮ್ಮ ಅಭಿಪ್ರಾಯವೇನು.? ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ