* ಹೊಟ್ಟೆ ಹಿಡಿದು ಕೊಂಡಂತೆ ಆದಾಗ ಆರು ಚಮಚಗಳಷ್ಟು ನಿಂಬೆ ಹಣ್ಣಿನ ರಸದೊಂದಿಗೆ ಅಷ್ಟೇ ಪ್ರಮಾಣದ ನೀರನ್ನು ಬೆರೆಸಿ ದಿನಕ್ಕೆ ಮೂರು ವೇಳೆ ಕುಡಿಯುತ್ತಾ ಬಂದರೆ ಹೊಟ್ಟೆ ನಿರಾಳವಾಗುತ್ತದೆ.
* ಹೊನಗೋನ ಸೊಪ್ಪಿನೊಂದಿಗೆ ತೊಗರಿಬೇಳೆಯನ್ನು ಚೆನ್ನಾಗಿ ಹಾಕಿ ಮಾಡಿದ ಕೂಟ್ ಅನ್ನು ಅನ್ನದೊಂದಿಗೆ ಕಲಸಿ, ತುಪ್ಪವನ್ನು ಹಾಕಿ ಕೊಂಡು ತಿಂದರೆ ಕಣ್ಣುಗಳಿಗೆ ತಂಪು ಉಂಟಾಗುತ್ತದೆ.
* ಕಾಯಿಸಿದ ಹಸುಹಾಲಿಗೆ ಒಂದು ಚಹಾ ಚಮಚದ ಜೇನು ತುಪ್ಪವನ್ನು ಕಲಸಿ, ಪ್ರತಿ ದಿನವೂ ಸೇವಿಸುತ್ತಾ ಬಂದರೆ ಕೆಲವೇ ದಿನಗಳಲ್ಲಿ ರಕ್ತ ಹೀನತೆ ರೋಗವು ವಾಸಿಯಾಗುತ್ತದೆ.
* ಗೋರಂಟಿ ಗಿಡದ ಬೇರನ್ನು ಚೆನ್ನಾಗಿ ಅರೆದು ಅದನ್ನು ಪಾದಗಳಲ್ಲಿ ಆಣಿ ಇರುವ ಸ್ಥಳದಲ್ಲಿ ಇಟ್ಟು ಕಟ್ಟುತ್ತಾ ಬಂದರೆ, ಕೆಲವೇ ದಿನಗಳಲ್ಲಿ ಆಣಿ ಮಾಯವಾಗುತ್ತದೆ.
* 15 ಮಿಲಿ ಲೀಟರ್ ಗಳಷ್ಟು ಈರುಳ್ಳಿಯ ರಸವನ್ನು ಬೆಳಿಗ್ಗೆ ಸಂಜೆ ಯಂತೆ ದಿನಕ್ಕೆರಡು ಸಲ 4 ದಿನಗಳವರೆಗೆ ಸೇವಿಸಿದರೆ ಸತತ ಧೂಮ ಪಾನ ದಿಂದ ಉಂಟಾದ ಕೆಮ್ಮು ಗುಣವಾಗುತ್ತದೆ.
* ತುಳಸಿ ಎಲೆಗಳನ್ನು ದೇಹಕ್ಕೆ ಉಜ್ಜಿ ಕೊಂಡು ಮಲಗಿದರೆ ಸೊಳ್ಳೆಗಳು ಹತ್ತಿರ ಸುಳಿಯುವುದಿಲ್ಲ . ನೆಮ್ಮದಿಯಿಂದ ನಿದ್ರಿಸಬಹುದು.
* ರಕ್ತ ಗಾಯಕ್ಕೆ ಟಿಂಚರ್ ಗಿಂತಲೂ ಉತ್ತಮವಾದ ಔಷಧಿಯೆಂದರೆ ಕಾಂಚೀಸೊಪ್ಪು. ಈ ಸೊಪ್ಪಿನ ರಸವನ್ನು ರಕ್ತಗಾಯಕ್ಕೆ ಹಚ್ಚಿದರೆ ಗಾಯವು ಬೇಗನೆ ವಾಸಿಯಾಗುವುದಲ್ಲದೆ ಅದರ ನೋವು ತಗ್ಗುತ್ತದೆ.
* ವೀಳ್ಯದೆಲೆ, ಒಣಶುಂಠಿ ಮತ್ತು ಮೆಣಸು ಇವು ಮೂರನ್ನು ಬಾಯಿ ಯಲ್ಲಿ ಹಾಕಿಕೊಂಡು ಜಗಿದು ಅದರ ರಸವನ್ನು ನುಂಗಿದರೆ ದೇಹದ ವಾಯು ತೊಂದರೆ ದೂರವಾಗುತ್ತದೆ.
* ಹೊಟ್ಟೆನೋವು, ಥಂಡಿ, ಅಜೀರ್ಣ, ಹೊಟ್ಟೆ ಮಂದ ಮುಂತಾದ ತೊಂದರೆಗಳಿಗೆ ದಾಳಿಂಬೆ ಹಣ್ಣಿನ ರಸವು ಅತ್ಯಂತ ಉಪಯುಕ್ತವಾಗಿದೆ.
* ಕಬ್ಬಿಣಾಂಶದ ಕೊರತೆ ಇರುವವರು ಅದರ ವೃದ್ಧಿಗಾಗಿ ಮಾತ್ರೆ ಔಷಧಿ ಗಳನ್ನು ಸೇವಿಸುವ ಬದಲು ಸೀತಾಫಲ ಹಣ್ಣನ್ನು ಹೆಚ್ಚಾಗಿ ಸೇವಿಸಿದರೆ ಸಾಕು. ದೇಹದಲ್ಲಿ ತುರಿಕೆ, ಕಜ್ಜಿ ಮುಂತಾದ ಚರ್ಮರೋಗಗಳು ಇರು ವಂಥವರು ಹೆಚ್ಚಾಗಿ ಸೀಬೆ ಹಣ್ಣನ್ನು ಸೇವಿಸುತ್ತಾ ಬಂದರೆ ರೋಗಗಳು ನಿಯಂತ್ರಣಕ್ಕೆ ಬರುತ್ತವೆ.
* ಮಧುಮೇಹ ರೋಗಿಗಳಿಗೆ ಧಿಡೀರನೆ ಬೆವರು ಬಂದು ತಲೆ ಸುತ್ತಲಾ ರಂಭಿಸಿದರೆ ಕೂಡಲೇ ಸ್ವಲ್ಪ ತಿಂಡಿಯನ್ನು ತಿಂದರೆ ತಲೆ ತಿರುಗುವುದು ನಿಲ್ಲುತ್ತದೆ.
* ಸೇಬಿನ ಹಣ್ಣಿನ ಸಿಪ್ಪೆಯನ್ನು ರಕ್ತಗಾಯದ ಮೇಲೆ ಸವರಿದರೆ ರಕ್ತ ಸ್ರಾವವು ನಿಲ್ಲುತ್ತದೆ.
* ಮಲಬದ್ಧತೆ, ಅಜೀರ್ಣ, ಶೀತ ಮುಂತಾದವುಗಳಿಗೆ ಸೇಬಿನ ಹಣ್ಣು ಉತ್ತಮ ಔಷಧ.
* ಮೂತ್ರಕೋಶದಲ್ಲಿ ಕಲ್ಲುಗಳು ಉಂಟಾಗದಂತೆ ತಡೆಗಟ್ಟಲು ಮತ್ತು ಮೂತ್ರ ವಿಸರ್ಜನೆಯು ಸರಾಗವಾಗಿ ಆಗಲು ಸೇಬಿನ ಹಣ್ಣಿನ ಸೇವನೆ ಸೂಕ್ತವಾಗಿದೆ.
* ಜಾಯಿ ಕಾಯಿಯನ್ನು ಹಸುಹಾಲಿನ ತುಪ್ಪದಲ್ಲಿ ಹುರಿದು ನಂತರ ಅದನ್ನು ಚೆನ್ನಾಗಿ ಅರೆದು ಹಸು ಹಾಲಿನ ಮೊಸರಿನಲ್ಲಿ ಹಾಕಿಟ್ಟು ಸೇವಿಸುತ್ತಾ ಬಂದರೆ ಹೊಟ್ಟೆಯಲ್ಲಿನ ತೊಂದರೆ ನೀಗುತ್ತದೆ.
ಹೀಗೆ ಮೇಲೆ ಹೇಳಿದ ಇಷ್ಟು ಮಾತುಗಳು ನಮ್ಮ ಆರೋಗ್ಯದ ವಿಚಾರ ವಾಗಿ ಸಂಬಂಧಿಸಿದ್ದು. ಇದನ್ನು ನಾವು ಅನುಸರಿಸುವುದರಿಂದ ಒಳ್ಳೆಯ ಆರೋಗ್ಯವನ್ನು ಪಡೆದುಕೊಳ್ಳಬಹುದಾಗಿದೆ. ಅದರ ಜೊತೆ ಯಾವ ರೀತಿಯ ಹಣ್ಣುಗಳನ್ನು ತಿಂದರೆ ನಮಗೆ ಯಾವ ಪ್ರಯೋಜನ ಉಂಟಾ ಗುತ್ತದೆ ಎನ್ನುವುದನ್ನು ಸಹ ನಾವು ತಿಳಿದು ಕೊಳ್ಳೋಣ ಆದ್ದರಿಂದ ನಾವು ನಮ್ಮ ಜೀವನದಲ್ಲಿ ನಮ್ಮ ಆಹಾರ ಶೈಲಿಯನ್ನು ಬಹಳ ಒಳ್ಳೆಯ ರೀತಿಯಾಗಿ ಬದಲಾವಣೆ ಮಾಡಿಕೊಂಡರೆ ನಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.
ಬದಲಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಯನ್ನು ಎದುರಿಸುವಂತಹ ಸನ್ನಿವೇಶಗಳು ಬರುವುದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಕೂಡ ಮೇಲೆ ಹೇಳಿದ ಇಷ್ಟು ಆರೋಗ್ಯಕರವಾದಂತಹ ವಿಧಾನಗಳನ್ನು ಅಂದರೆ ಟಿಪ್ಸ್ ಗಳನ್ನು ಅನುಸರಿಸುವುದು ತುಂಬಾ ಒಳ್ಳೆಯದು.