ಕರ್ನಾಟಕ ರಾಜ್ಯದ ಎಲ್ಲ ರೈತರಿಗೂ ಕೂಡ ಪಶುಸಂಗೋಪನೆ ಇಲಾಖೆಯಿಂದ ಒಂದು ಸಿಹಿ ಸುದ್ದಿ ಇದೆ. ಪ್ರತಿಯೊಬ್ಬ ರೈತನು ಕೂಡ ಈ ಅಗತ್ಯ ಮಾಹಿತಿಯನ್ನು ತಿಳಿದುಕೊಳ್ಳಲೇಬೇಕು. ರೈತನು ಕೃಷಿ ಚಟುವಟಿಕೆ ಜೊತೆಗೆ ಅದಕ್ಕೆ ಪೂರಕವಾಗಿರುವ ಪಶುಸಂಗೋಪನೆಯಲ್ಲಿ ಕೂಡ ತೊಡಗಿಕೊಂಡಿರುತ್ತಾನೆ. ಪ್ರತಿಯೊಬ್ಬ ರೈತನು ತನ್ನ ಮನೆಯಲ್ಲಿ ಹಸು, ಕರು, ಎಮ್ಮೆ, ಮೇಕೆ ಕುರಿ ಸಾಕಾಣಿಕೆ ಮಾಡುತ್ತಿರುತ್ತಾನೆ.
ಆತನ ಕೃಷಿ ಜೊತೆಗೆ ಪಶು ಸಂಗೋಪನೆ ಕೂಡ ವ್ಯವಸಾಯದ ಒಂದು ಭಾಗವೇ ಆಗಿರುತ್ತದೆ. ಈ ರೀತಿಯ ರೈತರಿಗೆಲ್ಲ ಸರ್ಕಾರದಿಂದ ಬಿಗ್ ಅಪ್ಡೇಟ್ ಇದೆ, ಅದೇನೆಂದರೆ ಆರೋಗ್ಯ ಇಲಾಖೆಯಲ್ಲಿ ಆಶಾ ಕಾರ್ಯಕರ್ತೆಯರು ಇರುವ ರೀತಿಯಲ್ಲಿಯೇ ಪಶುಸಂಗೋಪನಾ ಇಲಾಖೆ ವತಿಯಿಂದ ಪಶುಸಖಿಯರನ್ನು ತರಬೇತಿ ಕೊಟ್ಟು ಇಲಾಖೆಯ ಯೋಜನೆಯ ವಿವರಗಳು ರೈತನಿಗೆ ತಲುಪಿಸುವ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳಿಗೆ ಒಬ್ಬರಂತೆ ರಾಜ್ಯದಲ್ಲಿ ಒಟ್ಟು 5,962 ಪಶು ಸಖಿಯರನ್ನು ಆಯ್ಕೆ ಮಾಡಿ ತರಬೇತಿ ಕೊಟ್ಟು ನೇಮಿಸಲಾಗಿದೆ.
ಕನಿಷ್ಠ ವಿದ್ಯಾರ್ಹತೆ 8ನೇ ತರಗತಿಯನ್ನು ಹೊಂದಿರುವ ಪಶು ಸಂಗೋಪನೆಯಲ್ಲಿ ಆಸಕ್ತಿ, ಜಾನುವಾರುಗಳ ಬಗ್ಗೆ ಸಾಮಾನ್ಯ ಜ್ಞಾನ ಇರುವ ಗ್ರಾಮೀಣ ಭಾಗದ ಮಹಿಳೆಯರಿಗೆ ಕನಿಷ್ಠ 18 ದಿನಗಳ ಸಾಮಾನ್ಯ ತರಬೇತಿ ನೀಡಿ ನೇಮಿಸಿಕೊಳ್ಳಲಾಗಿದೆ. ಈ ಕಾರ್ಯಗಾರದ ಸಮಯದಲ್ಲಿ ಜಾನುವಾರುಗಳ ವೈಜ್ಞಾನಿಕ ಸಾಕಣೆ ಮತ್ತು ಪೋಷಣೆ, ರೋಗ ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ತಿಳಿಸಿಕೊಟ್ಟು ಪಶುಸಖಿಯರನ್ನು ತರಬೇತಿಗಳಿಸಿ ಬಳಿಕ ಕೆಲಸಕ್ಕೆ ನಿಯೋಜಿಸಲಾಗುತ್ತದೆ.
ಪಶು ವೈದ್ಯರ ಮಾರ್ಗದರ್ಶನದಲ್ಲಿ ನೇಮಕಗೊಂಡ ಪಶು ಸಖಿಯರು ಕೆಲಸ ಮಾಡಲಿದ್ದಾರೆ. ಇಲಾಖೆ ವತಿಯಿಂದ ಪ್ರತಿ ಮನೆ ಬಾಗಿಲು ಕೂಡ ಈ ಪಶುಸಖಿಯರೇ ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆ, ಪ್ರಥಮ ಚಿಕಿತ್ಸೆ ನೀಡಲು ಬರಲಿದ್ದಾರೆ. ಪಶು ಸಂಗೋಪನಾ ಇಲಾಖೆಯ ಈ ಹೊಸ ಯೋಜನೆ ರೈತರ ಪಾಲಿಗೆ ವರದಾನವಾಗಿದೆ ಎಂದೇ ಹೇಳಬಹುದು.
ಯಾಕೆಂದರೆ, ಗ್ರಾಮೀಣ ಪ್ರದೇಶದಲ್ಲಿ ಪಶು ವೈದ್ಯರ ಕೊರತೆಯನ್ನು ಇದು ಅಲ್ಪಮಟ್ಟಿಗೆ ತುಂಬಲಿದೆ ಎಂದು ನಿರೀಕ್ಷಿಸಲಾಗಿದೆ ಮತ್ತು ರೈತರಿಗೆ ಅವರ ಅಗತ್ಯದ ಸಮಯದಲ್ಲಿಯೇ ಜಾನುವಾರುಗಳ ಆರೋಗ್ಯ ವ್ಯತ್ಯಾಸವಾದಾಗ ಸರಿಯಾದ ಚಿಕಿತ್ಸೆ ಸಿಗಲಿದೆ. ಆದ್ದರಿಂದ ರಾಜ್ಯದ ಪಶು ಸಂಗೋಪನ ಮತ್ತು ಪಶು ವೈದ್ಯಕೀಯ ಇಲಾಖೆಯ ಸೌಲಭ್ಯಗಳನ್ನ ಜಾನುವಾರುಗಳನ್ನು ಸಾಕುವ ರೈತರಿಗೆ ತಲುಪಿಸುವ ಉದ್ದೇಶದಿಂದೊಂದಿಗೆ.
ರಾಜ್ಯದಾದ್ಯಂತ ಗ್ರಾಮ ಪಂಚಾಯತಿಗಳಿಗೆ ಒಬ್ಬರಂತೆ ಈಗ ಮೊದಲನೆಯ ಹಂತದಲ್ಲಿ ಒಟ್ಟು 5,692 ಮಂದಿ ಪಶು ಸಖಿಯರನ್ನು ನೇಮಿಸಲಾಗಿದೆ. ಜಾನುವಾರಗಳಿಗೆ ಆರೋಗ್ಯ ಹದಗೆಟ್ಟು ಯಾವುದೇ ರೋಗ ಲಕ್ಷಣ ಕಂಡು ಬಂದರೆ ತಕ್ಷಣ ಅದನ್ನ ಪಶು ಸಂಗೋಪನಾ ಇಲಾಖೆಗೆ ತಿಳಿಸಿದರೆ ಶೀಘ್ರವಾಗಿ ನಿಮ್ಮ ಗ್ರಾಮ ಪಂಚಾಯಿತಿಯ ಪಶು ಸಖಿಯರು ಚಿಕಿತ್ಸೆಗೆ ಸ್ಪಂದಿಸುತ್ತಾರೆ.
ಇಲಾಖೆ ಮತ್ತು ರೈತರ ನಡುವೆ ಇರುವ ಅಂತರವನ್ನು ತಗ್ಗಿಸಿ ಸೇತುವೆಯಾಗಿ ಕಾರ್ಯನಿರ್ವಹಿಸಲು ಹಾಗೂ ವಿಸ್ತರಣಾ ಚಟುವಟಿಕೆಗಳನ್ನು ಸಮರ್ಪಕವಾಗಿ ತಲುಪಿಸಲು ಮತ್ತು ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಉದ್ಯೋಗಾವಕಾಶವನ್ನು ನೀಡಲು ಈ ಯೋಜನೆಯನ್ನು ಜಾರಿ ಮಾಡಿ ದೇಶದಲ್ಲಿ ಯೋಜನೆ ಅನುಷ್ಠಾನದಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿ ಇದೆ ಎನ್ನುವ ಖ್ಯಾತಿಗೂ ಕರ್ನಾಟಕ ಒಳಗಾಗಿದೆ. ಈ ರೀತಿ ನೇಮಕಗೊಳ್ಳುವ ಪಶುಸಖಿಯರಿಗೆ ಕೇಂದ್ರ ಸರ್ಕಾರದಿಂದ ತಿಂಗಳಿಗೆ ರೂ.3,800 ಸಂಭಾವನೆ ನೀಡಲಾಗುತ್ತದೆ. ಈ ಮಾಹಿತಿಯನ್ನು ಪ್ರತಿಯೊಬ್ಬ ರೈತನಿಗೂ ಶೇರ್ ಮಾಡಿ ಅನುಕೂಲ ಮಾಡಿ ಕೊಡಿ.