ಈಗಿನ ಕಾಲದಲ್ಲಿ ಯಾವುದಾದರೂ ಕಾರಣಕ್ಕಾಗಿ ನಾವು ಸಾಲ ಮಾಡುವ ಪರಿಸ್ಥಿತಿ ಬಂದೇ ಬರುತ್ತದೆ. ಆಗ ಹೆಚ್ಚಿನ ಜನ ಬ್ಯಾಂಕ್ ಗಳ ಮೈಕ್ರೋ ಫೈನಾನ್ಸ್ ಕಂಪನಿಗಳ ಅಥವಾ ಖಾಸಗಿ ಸಂಸ್ಥೆಗಳ ಮೊರೆ ಹೋಗುತ್ತಾರೆ. ಯಾಕೆಂದರೆ ವ್ಯಕ್ತಿಗಳ ಬಳಿ ಸಾಲ ಮಾಡುವುದರಿಂದ ಬಡ್ಡಿದರ ಹೆಚ್ಚಿರುತ್ತದೆ. ಆದ್ದರಿಂದ ಬ್ಯಾಂಕುಗಳ, ಹಣಕಾಸು ಸಂಸ್ಥೆಗಳ ವ್ಯವಹಾರ ಉತ್ತಮ ಎಂದು ಭಾವಿಸಿ ಹಾಗೂ ಅಲ್ಲಿ ಬಡ್ಡಿದರ ಕಡಿಮೆ ಇರುತ್ತದೆ ಎನ್ನುವ ಕಾರಣಕ್ಕೆ ಮತ್ತು EMI ವ್ಯವಸ್ಥೆ ಮುಂತಾದ ಸೌಲಭ್ಯಗಳು ಸಿಗುವ ಕಾರಣ ಬ್ಯಾಂಕ್ ಗಳ ಮೊರೆ ಹೋಗುತ್ತಾರೆ.
ಆದರೆ ಬ್ಯಾಂಕ್ಗಳು ಬಡ್ಡಿ ಹೆಸರಿನಲ್ಲಿ ಜನರ ಜೀವನ ಹಿಂಡಿ ಹಿಪ್ಪೆ ಮಾಡುತ್ತಿವೆ. ಇಷ್ಟ ಬಂದ ರೀತಿ ನಿಯಮ ಮಾಡಿ ಅಥವಾ ನಿಯಮ ಬದಲಾಯಿಸಿ ಗ್ರಾಹಕರಿಗೆ ಸಾಲದ ಹೊರೆ ಹೆಚ್ಚಾಗುವಂತೆ ಮಾಡಿ ನೋವು ಕೊಡುತ್ತಿವೆ. ಮನೆ ಕಟ್ಟಿಸುವುದಕ್ಕೆ ಸಾಲ ಮಾಡಿದವರು, ಸೈಟ್ ಖರೀದಿಸುವುದಕ್ಕೆ ಸಾಲ ಮಾಡಿದವರು, ವಾಹನ ಖರೀದಿಗೆ ಸಾಲ ಮಾಡಿದವರು ಅಥವಾ ತಮ್ಮ ಆಸ್ತಿಯನ್ನೇ ಅಡಮಾನ ಇಟ್ಟು ಸಾಲ ತೆಗೆದುಕೊಂಡಿದ್ದವರಿಗೂ ಕೂಡ ಬ್ಯಾಂಕುಗಳು ಬಡ್ಡಿ ದರದ ಹೆಸರಿನಲ್ಲಿ ಸುಲಿಗೆ ಮಾಡಿ ತಮ್ಮ ಕಂಪನಿಯ ಲಾಭವನ್ನು ಹೆಚ್ಚಿಸಿಕೊಳ್ಳುತ್ತಿವೆ ಹಾಗೂ ಗ್ರಾಹಕರ ಹಿತಾಸಕ್ತಿಯ ಬಗ್ಗೆ ಕಿಂಚಿತ್ತು ಕರುಣೆ ತೋರುತ್ತಿಲ್ಲ.
ಇದನ್ನೆಲ್ಲಾ ಬಹಳ ಸೂಕ್ಷ್ಮ ದೃಷ್ಟಿಯಲ್ಲಿ ಕಂಡಿದ್ದ RBI ಹೊಸತೊಂದು ನಿಯಮ ತರುವ ಮೂಲಕ ಅದಕ್ಕೆಲ್ಲ ಕಡಿವಾಣ ಹಾಕುವ ಪ್ರಯತ್ನ ಮಾಡಿದೆ. ಇತ್ತೀಚೆಗೆ RBI ಹೊಸದೊಂದು ನಿಯಮವನ್ನು ಈ ವಿಷಯಕ್ಕಾಗಿ ರೂಪಿಸಿ ಅದೇ ರೀತಿ ಎಲ್ಲಾ ಬ್ಯಾಂಕುಗಳು, ಹಣಕಾಸಿನ ಸಂಸ್ಥೆಗಳು ಮತ್ತು ಸಾಲ ನೀಡುವ ಮೈಕ್ರೋ ಫೈನಾನ್ಸ್ ಕಂಪನಿಗಳು ಇದನ್ನೇ ಪಾಲಿಸಬೇಕು ಎಂದು ಶರತ್ತು ಹಾಕಿದೆ. ಒಂದು ವೇಳೆ ತಪ್ಪಿದಲ್ಲಿ ಗ್ರಾಹಕರಿಂದ ದೂರು ದಾಖಲಾದರೆ ಅಂತಹ ಕಂಪನಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ.
ಈಗ ಬ್ಯಾಂಕುಗಳಲ್ಲಿ ಸಾಲ ಕೊಡಬೇಕು ಎಂದರೆ ಖಂಡಿತವಾಗಿಯೂ ಹಲವು ಕಾಗದ ಪತ್ರಗಳ ದಾಖಲೆ ತೆಗೆದುಕೊಳ್ಳುತ್ತಾರೆ. ಇವುಗಳ ಜೊತೆ ಮೊಬೈಲ್ ಸಂಖ್ಯೆ ಕೂಡ ಒಂದು. ಹೀಗೆ ಮೊಬೈಲ್ ಸಂಖ್ಯೆ ಪಡೆದುಕೊಂಡಿರುವ ಬ್ಯಾಂಕುಗಳೇ ಆಗಲಿ, ಸಾಲ ಕೊಡುವ ಮೈಕ್ರೋ ಫೈನಾನ್ಸ್ ಕಂಪನಿಗಳೇ ಆಗಲಿ ಇನ್ನಿತರ ಸಂಸ್ಥೆಗಳೇ ಆಗಲಿ ಸಾಲಗಾರರಿಗೆ ಅವರು ಸಾಲ ಕಟ್ಟುವ ಸಮಯ ಹಾಗೂ ಬಡ್ಡಿ ಕಟ್ಟುವ ಸಮಯ ಹತ್ತಿರ ಬಂದಾಗ ಮೆಸೇಜ್ ನೋಟಿಫಿಕೇಶನ್ ಕಳಿಸುವ ಮೂಲಕ ಮಾಹಿತಿ ಅವರಿಗೆ ತಲುಪಿಸಬೇಕು ಎಂದು ಹೇಳಿದೆ.
ಯಾಕೆಂದರೆ ಇದುವರೆಗೆ ಸಾಲ ತೆಗೆದುಕೊಂಡ ಗ್ರಾಹಕರು ಒಂದು ವೇಳೆ ಒಂದು, ಎರಡು ದಿನ ಮರೆತು ತಡ ಮಾಡಿದ್ದರು ಕೂಡ ಆ ಸಾಲ ಕೊಟ್ಟ ಕಂಪನಿಗಳು ಅವರ ಬಡ್ಡಿಯ ಮೇಲೂ ಬಡ್ಡಿ ಹಾಕಿ, ಹಣ ಪೀಕುತ್ತಿದ್ದವು. ಇದನ್ನು ನಿಲ್ಲಿಸಲು ಸರ್ಕಾರ ಈ ನಿರ್ಧಾರ ಮಾಡಿದೆ. ಇದರೊಂದಿಗೆ ಒಂದೊಂದು ಕಂಪನಿಗಳು ಹಾಗೂ ಬ್ಯಾಂಕಿನಿಂದ ಬ್ಯಾಂಕಿಗೆ ಒಂದೇ ರೀತಿಯ ಸಾಲಗಳ ಮೇಲೆ ವಿಧಿಸುವ ಬಡ್ಡಿದರದಲ್ಲಿ ಬಹಳ ವ್ಯತ್ಯಾಸ ಇರುತ್ತದೆ.
ಇದಕ್ಕೂ ಕೂಡ ಸರ್ಕಾರ ನಿಯಮ ಹೇರಿದ್ದು ಒಂದೇ ರೀತಿಯ ಸಾಲದ ಮೇಲೆ ಯಾವುದೇ ಹಣಕಾಸು ಸಂಸ್ಥೆ ಆಗಲಿ ಮೈಕ್ರೋ ಫೈನಾನ್ಸ್ ಕಂಪನಿ ಆಗಲಿ ಅಥವಾ ಬ್ಯಾಂಕುಗಳ ಆಗಲಿ ವಿಧಿಸುವ ಬಡ್ಡಿದರ ಒಂದೇ ತೆರನಾಗಿರಬೇಕು ಎಂದಿದೆ. ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ. ಹಾಗೂ ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ಶೇರ್ ಮಾಡಿ.