ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರಿಗಾಗಿ (Government Schemes for Farmers) ಹಲವಾರು ಯೋಜನೆಗಳನ್ನು ರೂಪಿಸಿ ಅನುಕೂಲತೆ ಮಾಡಿಕೊಡುತ್ತಿವೆ. ಈ ನಿಟ್ಟಿನಲ್ಲಿ ಈ ವರ್ಷ ಕರ್ನಾಟಕ ರಾಜ್ಯ ಸರ್ಕಾರವು ರೈತ ಸಿರಿ ಯೋಜನೆಯಡಿ (Raita Siri Scheme) ಸಣ್ಣ ಹಾಗೂ ಅತಿ ಸಣ್ಣ ರೈತನಿಗೆ ಸಿರಿ ಧಾನ್ಯ ಬೆಳೆಯುವುದನ್ನು ಪ್ರೋತ್ಸಾಹಿಸುವುದಕ್ಕಾಗಿ.
ಗರಿಷ್ಠ ರೂ.10,000 ದವರೆಗೆ ಕೂಡ ಪ್ರೋತ್ಸಾಹಧನ ನೀಡಲು ನಿರ್ಧರಿಸಿದ್ದು ಈ ಯೋಜನೆಯಲ್ಲಿ ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡಲು ಬಯಸಿದೆ. ಯಾವ ರೈತರು ಈ ಯೋಜನೆಗೆ ಅರ್ಹರು ಹೇಗೆ ಇದರ ಪ್ರಯೋಜನ ಪಡೆದುಕೊಳ್ಳಬಹುದು ಎನ್ನುವ ಪೂರ್ತಿ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ.
ಈ ಸುದ್ದಿ ಓದಿ:- ರೇಷ್ಮೆ ಸೀರೆಗೆ ಎಣ್ಣೆ ಕಲೆ ಆದರೆ ಈ ವಸ್ತು ಸಾಕು 2 ನಿಮಿಷದಲ್ಲಿ ಕಲೆ ಮಾಯ.!
ಯೋಜನೆಯ ಹೆಸರು:- ರೈತ ಸಿರಿ ಯೋಜನೆ
ಉದ್ದೇಶ:-
* ರಾಜ್ಯದಲ್ಲಿ ಸಿರಿಧಾನ್ಯ ಉತ್ಪಾದನೆ ಹೆಚ್ಚಿಸಲು ರೈತರಿಗೆ ಪ್ರೋತ್ಸಾಹ ನೀಡಿ ಸಿರಿಧಾನ್ಯ ಬೆಳೆಯುವ ಪ್ರದೇಶ ವಿಸ್ತರಣೆ ಮಾಡುವುದು.
* ಸಿರಿಧಾನ್ಯವು ಹೆಚ್ಚು ಪೌಷ್ಟಿಕ ಆಹಾರ ಇರುವುದರಿಂದ ಇದನ್ನು ಬೆಳೆಯುವ ರೈತರಿಗೆ ಲಾಭ ಮತ್ತು ಖರೀದಿ ಮಾಡುವ ಗ್ರಾಹಕನಿಗೆ ಕೂಡ ಆರೋಗ್ಯ ಭಾಗ್ಯ ದೊರಕುತ್ತದೆ ಎನ್ನುವ ಪರೋಕ್ಷ ಚಿಂತನೆ
* ಸಿರಿಧಾನ್ಯ ಸುಸ್ಥಿರ ಕೃಷಿ ಆಗಿರುವುದರಿಂದ ಭೂಮಿಯ ಫಲವತ್ತತೆ ಉಳಿಯುತ್ತದೆ ಪರಿಸರ ಸಂರಕ್ಷಣೆಯಾಗುತ್ತದೆ.
ಸಿಗುವ ಸಹಾಯಧನ:-
* ಸಿರಿಧಾನ್ಯ ಬೆಳೆಯುವ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಗೆ ಗರಿಷ್ಠ 2 ಹೆಕ್ಟೇರ್ ಗೆ ಗರಿಷ್ಠ ರೂ.10,000 ದವರೆಗೆ ಸರ್ಕಾರದಿಂದ ಪ್ರೋತ್ಸಾಹ ಧನ ಸಿಗುತ್ತದೆ
* ಈ ಹಣವು DBT ಮೂಲಕ ಎರಡು ಕಂತುಗಳಲ್ಲಿ ನೇರವಾಗಿ ರೈತನ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ.
ಈ ಸುದ್ದಿ ಓದಿ:- ಈ ಕ್ಷೇತ್ರದಲ್ಲಿ ತೀರ್ಥ ಸ್ನಾನ ಮಾಡಿ ಹರಕೆ ಕಟ್ಟಿಕೊಂಡು ಮನೆಗೆ ಹೋದರೆ ನೀವು ತಲುಪುವುದರ ಒಳಗೆ ಸಮಸ್ಯೆ ಪರಿಹಾರ ಆಗುವುದು ಗ್ಯಾರಂಟಿ.!
ಅರ್ಜಿ ಸಲ್ಲಿಸಲು ಕಂಡಿಷನ್ ಗಳು:-
* ಫಲಾನುಭವಿಯು ರೈತರಾಗಿದ್ದು, ಅವರ ಹೆಸರಲ್ಲಿ ಜಮೀನನ್ನು ಹೊಂದಿರಬೇಕು.ಜಂಟಿ ಖಾತೆ ಹೊಂದಿದ್ದಲ್ಲಿ, ಇತರೆ ಖಾತೆದಾರರ ಒಪ್ಪಿಗೆ ಪತ್ರ ಕೂಡ ಪಡೆದಿರಬೇಕು.
* ತಂದೆ ಅಥವಾ ತಾಯಿ ಹೆಸರಲ್ಲಿ ಜಮೀನಿದ್ದು, ಅವರು ಮರಣ ಹೊಂದಿದ್ದಲ್ಲಿ ಮಾತ್ರ ಗ್ರಾಮ ಲೆಕ್ಕಿಗರಿಂದ ದೃಢೀಕರಿಸಿ, ಕುಟುಂಬದ ಇತರೆ ಸದಸ್ಯರಿಂದ ಒಪ್ಪಿಗೆ ಪಡೆದು ಅರ್ಜಿ ಸಲ್ಲಿಸಬೇಕು.
* ಮಹಿಳೆಯ ಹೆಸರಲ್ಲಿ ಖಾತೆ ಹೊಂದಿದ್ದು, ಕುಟುಂಬದ ಇತರೆ ಪುರುಷ ಸದಸ್ಯರ ಹೆಸರಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ಮಾನ್ಯವಾಗುವುದಿಲ್ಲ
* ರೈತರು ಸಿರಿಧಾನ್ಯಗಳಾದ ಊದಲು, ನವಣೆ, ಹಾರಕಾ, ಕೊರಲೆ, ಸಾಮೆ ಮತ್ತು ಬರಗು ಸಿರಿಧಾನ್ಯಗಳನ್ನು ಪ್ರಮುಖ ಬೆಳೆಯಾಗಿ ಬೆಳೆದಿರಬೇಕು.
* ಗರಿಷ್ಠ 2 ಹೆಕ್ಟೇರ್ ಗಿಂತ ಹೆಚ್ಚಿನ ಕೃಷಿ ಭೂಮಿ ಹೊಂದಿದ ರೈತನು ಅರ್ಹನಾಗಿರುವುದಿಲ್ಲ.
ಈ ಸುದ್ದಿ ಓದಿ:- ಮನೆಯಲ್ಲಿ ಫ್ರಿಡ್ಜ್ ಇದೆಯಾ? ಗೋಡೆ ಪಕ್ಕವೇ ಇಡುತ್ತಿದ್ದೀರಾ? ಇಂದೇ ಬದಲಾಯಿಸಿ ಅದಕ್ಕೂ ಮುನ್ನ ಈ ವಿಷಯಗಳನ್ನು ತಿಳಿದುಕೊಂಡಿರಿ.!
ಅರ್ಜಿ ಸಲ್ಲಿಸುವ ವಿಧಾನ:-
* ರೈತ ಸಿರಿ ಯೋಜನೆಗೆ ಅರ್ಜಿ ಸಲ್ಲಿಸುವ ರೈತನು ಕೇಳಲಾಗುವ ಜಿಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹತ್ತಿರದಲ್ಲಿರುವ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ನೇರವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು, ಅಲ್ಲಿನ ಸಿಬ್ಬಂದಿ ಕಡೆಯಿಂದ ಹೆಚ್ಚಿನ ಮಾಹಿತಿಯನ್ನು ಕೂಡ ಪಡೆಯಬಹುದು
* ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಚ್ಛಿಸುವುದಾದರೆ ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಕೊಡಿ ಅಲ್ಲಿನ ಅಧಿಕಾರಿಗಳಿಂದ ಯೋಜನೆ ಕುರಿತ ಮಾಹಿತಿ ಪಡೆದು ಅರ್ಜಿ ಸಲ್ಲಿಸಿ
ಬೇಕಾಗುವ ದಾಖಲೆಗಳು:-
* ರೈತನ ಆಧಾರ್ ಕಾರ್ಡ್
* ರೈತನ ಹೆಸರಿನಲ್ಲಿ ಕೃಷಿ ಭೂಮಿ ಇರುವ ಬಗ್ಗೆ ದಾಖಲೆಗಳು * ಬ್ಯಾಂಕ್ ಪಾಸ್ ಬುಕ್ ವಿವರ
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
* ಇತ್ತೀಚಿನ ಭಾವಚಿತ್ರ
* ಸಿರಿಧಾನ್ಯ ಬೆಳೆದಿರುವುದಾಗಿ ಗ್ರಾಮ ಪಂಚಾಯಿತಿಯಿಂದ ಪಡೆದುಕೊಳ್ಳುವ ದೃಢೀಕರಣ ಪತ್ರ
* ಇನ್ನಿತರ ಪ್ರಮುಖ ದಾಖಲೆಗಳು.