ರಾಜ್ಯದ ಜನತೆಗೆ ಸಿಹಿಸುದ್ಧಿ, ಗ್ಯಾರೆಂಟಿ ಇಲ್ಲದೆ ಕೇಂದ್ರ ಸರ್ಕಾರದಿಂದ 50,000 ರವರೆಗೆ ಸಾಲ ಸೌಲಭ್ಯ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ…

ದೇಶದ ಜನತೆಗೆ ಕೇಂದ್ರ ಸರ್ಕಾರವು (Central government) ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ. ಕಳೆದ ಕೆಲವು ವರ್ಷಗಳಿಂದ ಬಾರಿ ಮುನ್ನಡೆಯಲ್ಲಿರುವ ಪ್ರಧಾನಮಂತ್ರಿ ಆತ್ಮ ನಿರ್ಭಯ ಭಾರತ (Atma Nirbar Bharath) ಧ್ಯೇಯದಡಿ ರಾಜ್ಯದಲ್ಲಿ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ (PM Swanidhi Scheme) ಯಾವುದೇ ಗ್ಯಾರೆಂಟಿ ಇಲ್ಲದೆ ರೂ.50,000ದವರೆಗೂ ಕೂಡ ಅರ್ಹರಿಗೆ ಸಾಲ (loan) ಸೌಲಭ್ಯ ನೀಡಲು ಸರ್ಕಾರವು ಅರ್ಜಿ ಆಹ್ವಾನ ಮಾಡಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು ಎನ್ನುವುದರ ಕುರಿತು ಪ್ರಮುಖ ವಿಚಾರಗಳನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ರಾಜ್ಯದಲ್ಲಿ ಬೀದಿ ಬಳಿ ವ್ಯಾಪಾರ ಮಾಡುವಂತಹ ಆಧಾರ ಇಲ್ಲದೇ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳಿಗೆ ಯಾವುದೇ ದಾಖಲೆ ಪತ್ರ ಇಲ್ಲದಿದ್ದರೂ ಕೂಡ ಸಾಲ ಸೌಲಭ್ಯವನ್ನು ನೀಡುವ ಯೋಜನೆ ಇದಾಗಿದೆ.

ಈ ಯೋಜನೆಯ ಪ್ರಯೋಜನ ಪಡೆಯಲು ಹಣ್ಣು ವ್ಯಾಪಾರಿಗಳು, ತರಕಾರಿ ವ್ಯಾಪಾರಿಗಳು, ಹೂವು ವ್ಯಾಪಾರಿಗಳು, ದಿನಗೂಲಿಗಳು, ನ್ಯೂಸ್ ಪೇಪರ್ ಹಾಕುವವರು, ಹಾಲು ಮಾರಾಟ ಮಾಡುವವರು, ಮೀನು ಮಾರಾಟಗಾರರು, ದಿನಗೂಲಿಗೆ ದುಡಿಯುವ ಗುಜರಿಗಳು ಮುಂತಾದ ಪ್ರತಿದಿನವೂ ರಸ್ತೆ ಬಳಿ ನಿಂತು ವ್ಯಾಪಾರ ಮಾಡುವಂತಹವರು ಅರ್ಜಿ ಸಲ್ಲಿಸಬಹುದು.

ಈ ಮೇಲೆ ತಿಳಿಸಿದ ವರ್ಗಕ್ಕೆ ಸೇರುವವರು ಪ್ರಧಾನಮಂತ್ರಿ ಸ್ವಯ ನಿಧಿ ಯೋಜನೆಯ ಅನುಕೂಲತೆ ಪಡೆಯಲು ಆನ್ಲೈನ್ ಮೂಲಕ ಪ್ರಧಾನ ಮಂತ್ರಿ ಸ್ವನಿಧಿ ಪೋರ್ಟಲ್ ಗೆ ಹೋಗಿ ಅರ್ಜಿ ಸಲ್ಲಿಸಿ, ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಈ ಬಗ್ಗೆ ಒಂದು ಮಾಹಿತಿಯನ್ನು ಸ್ವತಃ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು ಪತ್ರಿಕಾಗೋಷ್ಠಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅನ್ವಯಿಸುತ್ತದೆ ಎನ್ನುವ ವಿಷಯವನ್ನು ಕೂಡ ತಿಳಿಸಿದ್ದಾರೆ. ಈ ಯೋಜನೆ ಮೂಲಕ ಸಿಗುವ ಅನುದಾನ ಎಷ್ಟು ಎಂದು ನೋಡುವುದಾದರೆ ಮೊದಲ ಬಾರಿಗೆ ರೂ.10,000ಗಳನ್ನು ಅರ್ಹ ಫಲಾನುಭವಿಗಳಿಗೆ ಸಾಲವನ್ನಾಗಿ ನೀಡಲಾಗುತ್ತದೆ, ಇದಕ್ಕೆ ಎಂಟು ತಿಂಗಳ ಕಾಲಾವಕಾಶ ಇರುತ್ತದೆ.

8 ತಿಂಗಳುಗಳಲ್ಲಿ ಈ ಸಾಲವನ್ನು ಫಲಾನುಭವಿಗಳು ತೀರಿಸಿದ್ದಲ್ಲಿ 18 ತಿಂಗಳ ಅವಧಿಗೆ 20000 ರೂ.ಗಳನ್ನು ಮತ್ತೆ ಸಾಲವಾಗಿ ನೀಡಲಾಗುತ್ತದೆ. ಈ ಸಾಲವೂ ಮುಗಿದ ಬಳಿಕ 36 ತಿಂಗಳುಗಳ ಕಾಲಾವಕಾಶದಲ್ಲಿ ಅವರಿಗೆ 50,000ರೂ. ಗಳನ್ನು ನೀಡಲಾಗುತ್ತದೆ. ಈ ಸಾಲವನ್ನು ಕೂಡ 36 ಕಂತುಗಳ ಸಮಯದೊಳಗೆ ಅವರು ತೀರಿಸಬೇಕು.

ಸರ್ಕಾರದಿಂದ ಸಿಗುತ್ತಿರುವ ಒಂದು ಅತ್ಯುತ್ತಮ ಯೋಜನೆ ಇದಾಗಿದ್ದು ಆರ್ಥಿಕವಾಗಿ ಬಹಳ ಕಷ್ಟದಲ್ಲಿರುವವರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಪ್ರಯತ್ನಿಸಬಹುದು. ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಆಯಾ ಪುರಸಭೆ, ನಗರಸಭೆ ಅಥವಾ ತಾಲೂಕು ಕಾರ್ಯಾಲಯ ಜಿಲ್ಲಾ ಕಾರ್ಯಲಯಳಿಗಳಿಗೆ ಭೇಟಿ ಕೊಟ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಅರ್ಹರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸಿದವರು ನಿಜವಾಗಿಯೂ ಅನುದಾನ ಪಡೆಯಲು ಅರ್ಹ ಎನ್ನುವುದನ್ನು ಕಂಡುಹಿಡಿದು ಹಣ ವರ್ಗಾವಣೆ ಮಾಡುವ ಜವಾಬ್ದಾರಿಯು ನಗರ ಸಭೆ ಹಾಗೂ ಪುರಸಭೆ ವ್ಯಾಪ್ತಿಗೆ ಬರುವ ಅಧಿಕಾರಗಳದ್ದೇ ಆಗಿರುತ್ತದೆ. ಅರ್ಜಿ ಪರಿಶೀಲನೆ ನಡೆದು ಅನುಮೋದನೆಯಾದರೆ ಅಂತಹ ಫಲಾನುಭವಿಗಳ ಖಾತೆಗೆ DBT ಮೂಲಕ ಹಣ ವರ್ಗಾವಣೆ ಆಗುತ್ತದೆ. ಅವಶ್ಯಕತೆ ಇರುವವರಿಗೆಲ್ಲಾ ಯೋಜನೆ ಮಾಹಿತಿ ತಲುಪಿಸುವ ಸಲುವಾಗಿ ಪರಿಚಯಸ್ಥರು ಹಾಗೂ ಸ್ನೇಹಿತರ ಜೊತೆಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ.

https://youtu.be/ZeiLv6VxuZ4?si=2EFW-Swot54BcY_A

Leave a Comment

WhatsApp Group Join Now
Telegram Group Join Now