ಲೇಬರ್ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬರಿಗೂ ಕೂಡ ರಾಜ್ಯ ಸರ್ಕಾರದಿಂದ ಹೊಸ ಗುಡ್ ನ್ಯೂಸ್ ಸಿಕ್ಕಿದೆ. ಹೌದು ನಿಮ್ಮ ಮಕ್ಕಳು ಕಾಲೇಜು ಮಟ್ಟದಲ್ಲಿ ವ್ಯಾಸಂಗವನ್ನು ಪಡೆಯುತ್ತಿದ್ದರೆ ಈಗ ನಾವು ಹೇಳುವಂತಹ ಮಾಹಿತಿ ನಿಮಗೆ ತುಂಬಾ ಅನುಕೂಲವಾಗಿರುತ್ತದೆ ಎಂದೇ ಹೇಳಬಹುದು.
ಹಾಗಾದರೆ ಈ ದಿನ ಲೇಬರ್ ಕಾರ್ಡ್ ಹೊಂದಿರು ವಂತಹ ಜನರು ತಮ್ಮ ಮಕ್ಕಳ ವಿಷಯವಾಗಿ ಅಂದರೆ ಮಕ್ಕಳಿಗೆ ಎಷ್ಟು ಸ್ಕಾಲರ್ ಶಿಪ್ ಹಣ ಸಿಗುತ್ತದೆ ಹಾಗೂ ಯಾವ ವಿದ್ಯಾಭ್ಯಾಸ ಹೊಂದಿದ ವರಿಗೆ ಈ ಹಣ ಸಿಗುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. 2024 ರಲ್ಲಿ ಲೇಬರ್ ಕಾರ್ಡ್ ಹೊಂದಿರುವಂತಹ ಜನರ ಮಕ್ಕಳು ಈ ಒಂದು ಸ್ಕಾಲರ್ ಶಿಪ್ ಹಣವನ್ನು ಪಡೆಯುವುದಕ್ಕೆ ಅರ್ಜಿಯನ್ನು ಕರೆದಿದ್ದಾರೆ.
ಇದನ್ನು ಓದಿ:- ಗೃಹ ಜ್ಯೋತಿ ದೊಡ್ಡ ಬದಲಾವಣೆ.! ಇನ್ಮುಂದೆ 10 ಯೂನಿಟ್ ಮಾತ್ರ ಉಚಿತ.!
ಹೌದು ಹಾಗಾಗಿ ಯಾರೆಲ್ಲ ಲೇಬರ್ ಕಾರ್ಡ್ ಹೊಂದಿರುತ್ತಾರೋ ಅವರು ತಮ್ಮ ಮಕ್ಕಳಿಗೆ ಸ್ಕಾಲರ್ ಶಿಪ್ ಹಣವನ್ನು ಪಡೆಯಬೇಕು ಎಂದು ಅರ್ಜಿಯನ್ನು ಸಲ್ಲಿಸುವುದು ಬಹಳ ಮುಖ್ಯವಾಗಿರುತ್ತದೆ. ಶೈಕ್ಷ ಣಿಕ ಪ್ರೋತ್ಸಾಹ ಸಹಾಯ ಧನಕ್ಕಾಗಿ ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿ ಗಳಿಂದ ಆನ್ಲೈನ್ ಅರ್ಜಿಯನ್ನು ಕರೆಯಲಾಗಿದೆ.
ಪ್ರೌಢಶಾಲೆ, ಪಿಯುಸಿ ಡಿಪ್ಲೋಮೋ, ಐಟಿಐ, ಪದವಿ, ಸ್ನಾತಕೋತ್ತರ ಪದವಿ ಇಂಜಿನಿಯರಿಂಗ್ ವೈದ್ಯಕೀಯ ಓದುತ್ತಿರುವ ವಿದ್ಯಾರ್ಥಿಗಳು ಹಾಗೆ ಲೇಬರ್ ವೆಲ್ಫೇರ್ ಬೋರ್ಡ್ ಸ್ಕಾಲರ್ ಶಿಪ್ 2023, 2024 ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ವಂತಿಕೆ ಪಾವತಿಸುವ ಸಂಘಟಿತ ಕಾರ್ಮಿಕ ಮಕ್ಕಳಿಂದ ಪ್ರೌಢಶಾಲೆಯಿಂದ ಸ್ನಾತಕೋತ್ತರ ಪದವಿಯವರಿಗೆ ಹಾಗೂ ವೈದ್ಯಕೀ ಯ ಅಥವಾ ಇಂಜಿನಿಯರಿಂಗ್ ನಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ
2023 ಹಾಗೂ 2024ನೇ ಸಾಲಿಗೆ ಶೈಕ್ಷಣಿಕ ಪ್ರೋತ್ಸಾಹ ಧನವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನ ಮಾಡಿದ್ದಾರೆ. ಕಾರ್ಮಿಕ ರೈತರ ಮಾಸಿಕ ವೇತನವು 35,000 ಮೀರಿರಬಾರದು. ಒಂದು ಕುಟುಂಬದಲ್ಲಿ ಒಬ್ಬ ವಿದ್ಯಾರ್ಥಿಗೆ ಮಾತ್ರ ಈ ಒಂದು ಸೌಲಭ್ಯ ವನ್ನು ನೀಡಲಾಗುತ್ತದೆ ಎಂದು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ರಾಶಿಯವರು ಲಕ್ಷ್ಮಿಯ ಮಕ್ಕಳಿದ್ದಂತೆ ಸಂಪತ್ತು ಹಣ ಸಂತೋಷ ಇವರದ್ದೇ ಎನ್ನುತ್ತೆ ಜ್ಯೋತಿಷ್ಯ.!
ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯವನ್ನು ಪಡೆಯಬೇಕು ಎನ್ನುವಂತಹ ಮಕ್ಕಳು ಆನ್ಲೈನ್ ಮೂಲಕ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ವೆಬ್ಸೈಟ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಹಿಂದಿನ ತರಗತಿಯಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಯು ಶೇಕಡ 50 ಅಂಕಗಳನ್ನು ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿದ್ಯಾರ್ಥಿಯು ಶೇಖಡ 45ರಷ್ಟು ಅಂಕಗಳನ್ನು ಪಡೆದು ಪಾಸ್ ಆಗಿರಬೇಕು.
ಪ್ರೌಢಶಾಲೆಯ 8ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿ ಗಳಿಗೆ 6,000 ಹಣವನ್ನು ಹಾಗು ಪಿಯುಸಿ, ಐಟಿಐ, ಡಿಪ್ಲೋಮೋ ಟಿಸಿಎಚ್ ಹೀಗೆ ಇತ್ಯಾದಿ ವಿದ್ಯಾರ್ಥಿಗಳಿಗೆ 8,000 ಹಾಗೂ ಪದವೀಧರ ವಿದ್ಯಾರ್ಥಿಗಳಿಗೆ 10,000 ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 12,000. ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ 20,000 ರೂಪಾಯಿಗಳ ವರೆಗೆ ಸಹಾಯ ಪ್ರೋತ್ಸಾಹ ಧನ ನೀಡಲಾಗುತ್ತಿದೆ.
ಹಾಗಾಗಿ ಯಾರೆಲ್ಲಾ ಕಾರ್ಮಿಕ ಕಾರ್ಡ್ ಹೊಂದಿರುತ್ತಾರೋ ಅಂತಹ ಮಕ್ಕಳು ಆನ್ಲೈನ್ ಮೂಲಕ ನಾವು ಮೇಲೆ ಹೇಳಿದ ವೆಬ್ಸೈಟ್ ನಲ್ಲಿ ಹೋಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಹಾಗೂ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಕೊನೆಯ ದಿನಾಂಕ ಯಾವುದು ಎಂದು ನೋಡುವುದಾದರೆ ಜನವರಿ 31, 2024. ಹಾಗಾಗಿ ಈ ತಾರೀಖಿನ ಒಳಗಾಗಿ ಅರ್ಜಿಯನ್ನು ಸಲ್ಲಿಸುವುದು ಬಹಳ ಮುಖ್ಯವಾಗಿರುತ್ತದೆ.
ಇದನ್ನು ಓದಿ:- ಹುಟ್ಟಿದ ತಿಂಗಳ ಪ್ರಕಾರ ಹುಡುಗಿಯರ ಸ್ವಭಾವ ಹಾಗೂ ಮನಸ್ಥಿತಿ….!!