ನಾವು ಪ್ರತಿನಿತ್ಯ ಬಳಕೆ ಮಾಡುವ ವಸ್ತುಗಳಲ್ಲಿ ಅಡುಗೆ ಅನಿಲವು (LPG) ಕೂಡ ಮುಖ್ಯಪಾತ್ರ ವಹಿಸುತ್ತದೆ. ಯಾಕೆಂದರೆ ಈಗ ಎಲ್ಲರೂ ಅಡಿಗೆಗಾಗಿ ಗ್ಯಾಸ್ ಸಿಲೆಂಡರ್ ಗಳನ್ನು ಅವಲಂಬಿಸಿದ್ದೇವೆ. ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರಿಗೂ ಕೂಡ ಹೊಗೆ ಮುಕ್ತ ವಾತಾವರಣದಲ್ಲಿ ಅಡುಗೆ ಮಾಡುವ ಅನುಕೂಲ ಸಿಗಬೇಕು ಎಂದು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ (PM Narendra Modi) ನೇತೃತ್ವದ ಕೇಂದ್ರ ಸರ್ಕಾರವು (Government) 2016ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು (PMUY) ಜಾರಿಗೆ ತಂದಿದೆ. ಆದರೆ ಸಿಲಿಂಡರ್ ಬೆಲೆ ಒಮ್ಮೊಮ್ಮೆ ನಾಲ್ಕು ಸಂಖ್ಯೆಗೆ ದಾಟುವುದು ಇದೇ ಬಡ ಹಾಗೂ ಮಧ್ಯಮ ವರ್ಗದ ಜನತೆಗೆ ಹೊರೆ ಆಗುತ್ತಿದೆ. ಈಗ ಗ್ಯಾಸ್ ಬೆಲೆ ನಿಯಂತ್ರಣದ ಬಗ್ಗೆ ಕ್ರಮ ಕೈಗೊಂಡಿರುವ ಸರ್ಕಾರವು ಈ ಬಗ್ಗೆ ಬ್ಯಾಕ್ ಟು ಬ್ಯಾಕ್ ಸಿಹಿ ಸುದ್ದಿಗಳನ್ನು ನೀಡುತ್ತಿದೆ.
ಅಡುಗೆ ಅನಿವದ ವಿಚಾರವೂ ಗೃಹಿಣಿಯರಿಗೇ ಸಿಹಿ ಸುದ್ದಿ ಎನ್ನಬಹುದು. ಹೀಗಾಗಿ ಪ್ರಧಾನಮಂತ್ರಿ ಉಜ್ವಲ್ ಯೋಜನೆಯನ್ನು ಕೂಡ ಮಹಿಳೆಯರಿಗಾಗಿ (for womens) ಮೀಸಲಿಡಲಾಗಿದೆ. ಈ ಕಾರಣದಿಂದಾಗಿ ಮಹಿಳೆಯರ ಪಾಲಿಗೆ ವಿಶೇಷ ಆಚರಣೆಯಾದ ರಕ್ಷಾ ಬಂಧನ ವಿಶೇಷದಲ್ಲಿ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಪ್ರಧಾನ ಮಂತ್ರಿಗಳು ವಿಪರೀತವಾಗಿ ಏರಿಕೆಯಲ್ಲಿದ್ದ ಸಿಲಿಂಡರ್ ಬೆಳೆಯನ್ನು ರೂ.200 ಇಳಿಸಿ ಅನುಕೂಲತೆ ಮಾಡಿಕೊಟ್ಟಿದ್ದರು.
ಈ ಸುದ್ದಿ ಓದಿ:- ಮನೆ ಕಟ್ಟುವವರಿಗೆ ಕೇಂದ್ರಸರ್ಕಾರದಿಂದ 2.7 ಲಕ್ಷ ಸಹಾಯಧನ, ಹೇಗೆ ಅರ್ಜಿ ಸಲ್ಲಿಸಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾರು ಅರ್ಹರು ನೋಡಿ.!
ಆ ಸಮಯದಲ್ಲಿ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದವರಿಗೆ ಈಗಾಗಲೇ 200 ರೂಪಾಯಿ ಸಬ್ಸಿಡಿ ಇದ್ದ ಕಾರಣ ರೂ.750 ಗೆ ಮತ್ತು ಇತರರಿಗೆ ರೂ.905 14.5 ಕೆಜಿ ಗೃಹಪಯೋಗಿ ಸಿಲಿಂಡರ್ ಸಿಗುವಂತಾಯ್ತು.
ಈಗ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (International Womens day spcl) ವಿಶೇಷವಾಗಿ ಮತ್ತೊಮ್ಮೆ ಮಹಿಳೆಯರಿಗೆ ಕೇಂದ್ರ ಸರ್ಕಾರ ಗಿಫ್ಟ್ ನೀಡಿದೆ. ಅಡುಗೆ ಅನಿಲದ ಬೆಲೆ ಇಳಿಕೆ ವಿಚಾರದ ಕುರಿತು ಮೋದಿ ಸರ್ಕಾರ ಮತ್ತೊಂದು ಅಪ್ಡೇಟ್ ನೀಡಿದೆ ಸ್ವತಃ ಪ್ರಧಾನಮಂತ್ರಿಗಳೆ ಈ ವಿಚಾರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಮಹಿಳೆಯರಿಗೆ ಶುಭ ಕೋರಿದ್ದಾರೆ.
ಮಹಿಳಾ ದಿನಾಚರಣೆಯ ಒಂದು ದಿನದ ಹಿಂದೆಯೇ ಅಂದರೆ ಮಾರ್ಚ್ 7ನೇ ತಾರೀಕು ಪ್ರಧಾನ ಮಂತ್ರಿಗಳ ಖಾತೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದೆ. ಆ ಪ್ರಕಾರವಾಗಿ ಸಿಲೆಂಡರ್ ಬೆಲೆಯನ್ನು ಮತ್ತೊಮ್ಮೆ ರೂ.100 ಇಳಿಕೆ ಮಾಡಲಾಗಿದೆ. ಈ ಬಾರಿ ನೀಡಲಾಗಿರುವ ಕೊಡುಗೆಯ ಅನುಸಾರ ಇನ್ನು ಮುಂದೆ ಸಾಮಾನ್ಯರಿಗೆ ರೂ.805 ರೂಪಾಯಿಗೆ ಹಾಗೂ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ ಗ್ಯಾಸ್ ಸಂಪರ್ಕ ಪಡೆದವರಿಗೆ ರೂ.505 ಗೆ ಸಿಲಿಂಡರ್ ಸಿಗುತ್ತಿದೆ.
ಈ ಸುದ್ದಿ ಓದಿ:- ಶೀಘ್ರ ವಿವಾಹಕ್ಕೆ ಸರಳ ಪರಿಹಾರ, ತಾಯಿ ಬನಶಂಕರಮ್ಮನಿಗೆ ಹೀಗೆ ಸಂಕಲ್ಪ ಮಾಡಿ.!
ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಸಿಲಿಂಡರ್ ಕನೆಕ್ಷನ್ ಪಡೆದವರು ಡೆಲಿವರಿ ಪಡೆಯುವ ಸಮಯದಲ್ಲಿ 805 ರೂಪಾಯಿ ಪಾವತಿ ಮಾಡಬೇಕು ಆದರೆ ರೂ.300 ಸಬ್ಸಿಡಿ ಹಣವು ಅವರ ಖಾತೆಗೆ DBT ಮೂಲಕ ಸರ್ಕಾರದಿಂದ ಜಮೆ ಆಗುತ್ತದೆ.
ಮತ್ತೊಂದು ವಿಚಾರ ನೆನಪಿರಲಿ ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದಿರುವವರು ಈ ಸಬ್ಸಿಡಿ ಹಣ ಪಡೆಯಬೇಕು ಎಂದರೆ ಅವರ ಗ್ಯಾಸ್ ಕನೆಕ್ಷನ್ ಇ-ಕೆವೈಸಿ (e-KYC) ಆಗಿರಬೇಕು. ಹತ್ತಿರದ ಏಜೆನ್ಸಿಗಳಲ್ಲಿ ಆಫ್ ಲೈನ್ ನಲ್ಲಿ ಅಥವಾ ಆನ್ಲೈನಲ್ಲಿ ನಿಮ್ಮ ಗ್ಯಾಸ್ ಕಂಪನಿ ವೆಬ್ಸೈಟ್ ಗೆ ಭೇಟಿ ಕೊಡುವ ಮೂಲಕ ಸರಳವಾಗಿ ಪೂರ್ತಿಗೊಳಿಸಬಹುದು. ತಪ್ಪದೆ ಈ ವಿಚಾರವನ್ನು ನಿಮ್ಮ ಸ್ನೇಹಿತೆಯರು ಹಾಗೂ ಸಹೋದರಿಯರು ಮತ್ತು ಸಹೋದ್ಯೋಗಿಗಳ ಜೊತೆಗೆ ಹಂಚಿಕೊಂಡು ಎಲ್ಲರಿಗೂ ಮಾಹಿತಿ ತಲುಪುವಂತೆ ಮಾಡಿ.