ಕಳೆದ ಕೆಲವು ವರ್ಷಗಳಿಂದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸರ್ಕಾರದ ಕಡೆಯಿಂದ 19,000ರೂ. ಸಹಾಯಧನವು ಕುರಿ ಮೇಕೆ ಶೆಡ್ ನಿರ್ಮಾಣ ಮಾಡುವವರಿಗೆ ಸಿಗುತ್ತಿತ್ತು. ಈಗ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಗ್ರಾಮೀಣಾಭಿವೃದ್ಧಿ ಎನ್ನುವ ಉದ್ದೇಶದಿಂದ ರಾಜ್ಯದ ಎಲ್ಲಾ ರೈತರಿಗೆ 68,000 ರೂ. ಸಹಾಯಧನವನ್ನು ಮೇಕೆ ಶೆಡ್ ಮತ್ತು ಕುರಿ ಶೆಡ್ ನಿರ್ಮಾಣ ಮಾಡುವವರಿಗೆ ಕೊಡುತ್ತಿದ್ದಾರೆ.
ನಮ್ಮ ರಾಜ್ಯದಲ್ಲಿರುವ ಅನೇಕ ಕುರಿ ಮೇಕೆ ಸಾಕಣೆ ಮಾಡುವ ರೈತರಿಗೆ ಈ ಯೋಜನೆಗಳಿಗೆ ಅರ್ಜಿಯಲ್ಲಿ ಹೇಗೆ ಸಲ್ಲಿಸಬೇಕು ಯಾವ ರೀತಿ ಇದರ ಫಲಾನುಭವಿಗಳು ಆಗಬೇಕು ಎನ್ನುವ ಮಾಹಿತಿ ಸಿಗದೇ ವಂಚಿತರಾಗುತ್ತಿದ್ದಾರೆ. ಈ ಲೇಖನದಲ್ಲಿ ಇದರ ಬಗ್ಗೆ ತಿಳಿಸಿಕೊಡುವ ಪ್ರಯತ್ನವನ್ನು ಮಾಡಲಾಗಿದೆ.
ಗೃಹಲಕ್ಷ್ಮಿ ಯೋಜನೆ ಹಣ ಆಗಸ್ಟ್ 2 ಸಿಗಲ್ಲ ಮುಖ್ಯಮಂತ್ರಿಗಳಿಂದ ಸ್ಪಷ್ಟನೆ ಮತ್ತೊಂದು ಹೊಸ ನಿರ್ಧಾರ ಕೈಗೊಂಡ ಸರ್ಕಾರ.!
ಕರ್ನಾಟಕದ ಯಾವುದೇ ರೈತರು ಕೂಡ ಈ ಯೋಜನೆಯ ಫಲಾನುಭವಿಗಳಾಗಬಹುದು. ನೀವು ಮಾಡಬೇಕಾಗಿರುವುದು ಇಷ್ಟೇ, ನೀವು ವಾಸಿಸುತ್ತಿರುವ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯಿತಿಯಲ್ಲಿ PDO ಅಧಿಕಾರಿಗಳ ಬಳಿ ಅಥವಾ ನೀವೇ ಆರಿಸಿದ ಗ್ರಾಮ ಪಂಚಾಯಿತಿ ಸದಸ್ಯರ ಬಳಿ ಹೋಗಿ ನಿಮ್ಮನ್ನು ಸಹ ಸರ್ಕಾರದಿಂದ 68,000 ಸಹಾಯಧನ ಬರುತ್ತಿರುವ ಈ ಕುರಿ ಮೇಕೆ ಶೆಡ್ ನಿರ್ಮಾಣ ಯೋಜನೆಯಲ್ಲಿ ಸೇರಿಸಲು ಮನವಿ ಮಾಡಿಕೊಳ್ಳಬೇಕು.
ಪ್ರತಿ ವರ್ಷವೂ ಕೂಡ ಒಂದು ಗ್ರಾಮ ಪಂಚಾಯಿತಿಗೆ ಇಂತಿಷ್ಟು ಮೇಕೆ ಶೆಡ್ ಗಳು ಹಾಗೂ ಇಂತಿಷ್ಟು ಕುರಿ ಶೆಡ್ ಗಳ ನಿರ್ಮಾಣಕ್ಕೆ ಹಣ ಮೀಸಲು ಎಂದು ನೀಡಲಾಗಿರುತ್ತದೆ. ಜೊತೆಗೆ ಮತ್ತೊಂದು ಪ್ರಮುಖ ವಿಷಯ ಏನು ಎಂದರೆ ಒಂದು ಆಕ್ಷನ್ ಪ್ಲಾನ್ ಅಲ್ಲಿ ಇಷ್ಟೇ ಜನ ಫಲಾನುಭವಿಗಳು ಇರಬೇಕು ಅಥವಾ ಇಷ್ಟೇ ಜನ ಅರ್ಜಿ ಸಲ್ಲಿಸಬೇಕು ಎನ್ನುವ ಯಾವ ನಿಯಮವು ಕೂಡ ಇಲ್ಲ.
ಒಂದು ಭಾಗದಲ್ಲಿ ಈ ರೀತಿ ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡುವ ರೈತರ ಸಂಖ್ಯೆ ಹೆಚ್ಚಾಗಿರುತ್ತದೆ. ಮತ್ತೊಂದು ಭಾಗದಲ್ಲಿ ಆ ಸಂಖ್ಯೆ ವಿರಳವಾಗಿರಬಹುದು ಆದ್ದರಿಂದ ಈ ರೀತಿ ಯಾವುದೇ ಮಿತಿಯನ್ನು ಸರ್ಕಾರ ಹೇರಿಲ್ಲ. ಆ ನಿಟ್ಟಿನಲ್ಲಿ ನಿಮ್ಮ ಗ್ರಾಮ ಪಂಚಾಯಿತಿದ ಸದಸ್ಯರು ಅಥವಾ ಅಧ್ಯಕ್ಷರು ಅಥವಾ PDO ಅಧಿಕಾರಿಗಳ ಬಳಿ ಮನವಿ ಸಲ್ಲಿಸಬೇಕು.
ಇನ್ನೂ ಸಹ 19 ಸಾವಿರದ ಯೋಜನೆ ಜಾರಿಯಲ್ಲಿರುವುದು ಹಾಗೂ 68,000 ಯೋಜನೆಗಳು ಇರುವುದರಿಂದ ಸ್ಪಷ್ಟವಾಗಿ ನೀವು 68,000 ಸಹಾಯಧನ ಇರುವ ಯೋಜನೆಗೆ ಮನವಿ ಮಾಡಬೇಕು. ಯಾಕೆಂದರೆ ಈಗ ಮಾಡಿರುವ ಈ 68,000 ಸಹಾಯಧನದ ಸಿಗುವ ಶೆಡ್ ನಿರ್ಮಾಣದಲ್ಲಿ ಎಲ್ಲವೂ ಸುಸ್ತಜಿತವಾಗಿದೆ . ಈ ಶೆಡ್ ಗಳ ಸೈಜ್, ಅಟ್ಟಣಿಕೆ, ರೂಫ್ ಮತ್ತು ಮಧ್ಯಂತರ ರೂಫ್ ಎಲ್ಲದರ ಬಗ್ಗೆ ಸ್ಪಷ್ಟತೆ ಇದೆ.
ಶಿಕ್ಷಕರ ನೇಮಕಾತಿ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ…
ಈ ಪ್ಲಾನ್ ಪ್ರಕಾರ ನಿರ್ಮಾಣ ಮಾಡುವುದರಿಂದ ಸರ್ಕಾರದ ಸಹಾಯಧನ 68,000 ಅಲ್ಲಿ ರೈತರಿಗೆ ಅನುಕೂಲವಾಗುವಂತಹ ಒಳ್ಳೆಯ ವ್ಯವಸ್ಥೆಯ ಶೆಡ್ ನಿರ್ಮಾಣ ಆಗಲಿದೆ. ಈ 68,000ಗಳಲ್ಲಿ 18,000 ಕೂಲಿ ಹಾಗೂ ಉಳಿದ ಹಣ ಸಾಮಗ್ರಿ ಖರ್ಚಿಗಾಗಿ ಇರುತ್ತದೆ. ಈ ಯೋಜನೆ ಸಂಪೂರ್ಣವಾಗಿ ರೈತರ ಅಭಿವೃದ್ಧಿಗಾಗಿ ಮೀಸಲಾಗಿರುವ ಯೋಜನೆ ಆಗಿದೆ.
ಆದ್ದರಿಂದ ರಾಜ್ಯದ ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡುವ ರೈತರುಗಳು ಈ ಹೊಸ ಆಕ್ಷನ್ ಪ್ಲಾನ್ ಅಲ್ಲಿ ಹೆಸರು ಸೇರಿಸಿ ಅಪ್ರೂವಲ್ ಆಗಿ ಬಂದ ಬಳಿಕ ಅದನ್ನು ಉಪಯೋಗಿಸಿಕೊಂಡು ಶೆಡ್ ನಿರ್ಮಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಮ ಪಂಚಾಯಿತಿ ಸಂಪರ್ಕಿಸಿ. ಈ ಮಾಹಿತಿ ಹೆಚ್ಚಿನ ರೈತರಿಗೆ ತಲುಪುವಂತೆ ಶೇರ್ ಮಾಡಿ.