ಸಾಮಾನ್ಯವಾಗಿ ನಾವು ಶುದ್ಧವಾದ ತೆಂಗಿನ ಎಣ್ಣೆ ಬೇಕು ಎಂದರೆ ಒಳ್ಳೆಯ ಕಂಪನಿಯ ಹೆಸರನ್ನು ತಿಳಿದುಕೊಂಡು ಆ ಕಂಪನಿಯ ಕೊಬ್ಬರಿ ಎಣ್ಣೆಯನ್ನು ತಂದು ಅದನ್ನು ತಲೆಗೆ ಹಚ್ಚುವುದು ಅಥವಾ ಅಡುಗೆಗೆ ಉಪಯೋಗಿಸುವುದು ಹೀಗೆ ಹಲವಾರು ಕೆಲಸಗಳಿಗೆ ಕೊಬ್ಬರಿ ಎಣ್ಣೆ ಯನ್ನು ಉಪಯೋಗಿಸುತ್ತಿರುತ್ತೇವೆ. ಆದರೆ ಈ ದಿನ ನಾವು ಹೇಳುವ ವಿಧಾನ ನೀವು ತಿಳಿದರೆ ಇನ್ನು ಮುಂದೆ ನೀವೇ ಶುದ್ಧವಾದoತಹ ತೆಂಗಿನ ಎಣ್ಣೆಯನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳುತ್ತೀರಿ.
ಹೌದು ಅಷ್ಟು ಸುಲಭವಾದ ವಿಧಾನ ಇದಾಗಿದ್ದು ಈ ಒಂದು ವಿಧಾನ ನಿಮಗೆ ಹೆಚ್ಚಿನ ಶ್ರಮ ಕೊಡುವುದಿಲ್ಲ ಬದಲಿಗೆ ಸುಲಭವಾಗಿ ಯಾವುದೇ ರೀತಿಯ ಶ್ರಮ ಇಲ್ಲದೆ ತಯಾರಿಸಬಹುದಾಗಿದೆ. ಹಾಗಾದರೆ ಶುದ್ಧವಾದ ತೆಂಗಿನ ಎಣ್ಣೆಯನ್ನು ಹೇಗೆ ಮನೆಯಲ್ಲಿ ಸುಲಭವಾಗಿ ತಯಾರಿಸುವುದು ಹಾಗೂ ಯಾವ ವಿಧಾನಗಳನ್ನು ಅನು ಸರಿಸುವುದರ ಮೂಲಕ ಶುದ್ಧವಾದ ತೆಂಗಿನ ಎಣ್ಣೆ ಪಡೆಯಬಹುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.
ನಾವು ಎಷ್ಟೇ ಶುದ್ಧವಾದ ಕೊಬ್ಬರಿ ಎಣ್ಣೆಯನ್ನು ಮಾರುಕಟ್ಟೆಗಳಿಂದ ತಂದರು ಕೂಡ ಅದರಲ್ಲಿ ಇಂತದ್ದೇ ಪದಾರ್ಥ ಇದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ ಹೌದು. ಅದರಲ್ಲಿ ಕೆಲವೊಂದು ಕೆಮಿಕಲ್ ಪದಾರ್ಥಗಳನ್ನು ಮಿಶ್ರಣ ಮಾಡಿರುತ್ತಾರೆ. ಆದರೆ ಅದು ನಮಗೆ ತಿಳಿಯುವುದಿಲ್ಲ ಬದಲಿಗೆ ಇದು ಶುದ್ಧವಾದ ತೆಂಗಿನ ಎಣ್ಣೆ ಎನ್ನುವುದರ ಮೂಲಕ ಅದನ್ನು ಅಡುಗೆಗಳಿಗೆ ತಲೆಗೆ ಹಚ್ಚುವುದಕ್ಕೆ ಮಸಾಜ್ ಮಾಡುವುದಕ್ಕೆ ಉಪಯೋಗಿಸುತ್ತಲೇ ಇರುತ್ತೇವೆ.
ಆದರೆ ಇನ್ನು ಮುಂದೆ ನೀವು ಅಂಗಡಿಯಿಂದ ತರುವ ಅವಶ್ಯಕತೆ ಇರುವುದಿಲ್ಲ. ಬದಲಿಗೆ ಒಣಕೊಬ್ಬರಿ ಇದ್ದರೆ ತೆಂಗಿನ ಎಣ್ಣೆಯನ್ನು ನೀವೇ ತಯಾರಿಸಿಕೊಳ್ಳಬಹುದು. ಹಾಗಾದರೆ ಆ ಒಂದು ವಿಧಾನ ಯಾವುದು ಹಂತ ಹಂತವಾಗಿ ನಾವು ಯಾವ ವಿಧಾನಗಳನ್ನು ಅನುಸರಿಸಬೇಕಾಗು ತ್ತದೆ ಎಂದು ಈ ಕೆಳಗೆ ತಿಳಿಯೋಣ.
* ಮೊದಲು ಅರ್ಧ ಕೆಜಿ ಕೊಬ್ಬರಿಯನ್ನು ಸಂಪೂರ್ಣವಾಗಿ ಸ್ವಚ್ಛವಾಗಿ ತೊಳೆದುಕೊಳ್ಳಬೇಕು ನಂತರ ಅದರ ಮೇಲೆ ನೀರು ತೇಲುವಷ್ಟು ಹಾಕಿ ಇಡೀ ರಾತ್ರಿ ಹಾಗೆ ಬಿಡಬೇಕು. ನಂತರ ಬೆಳಗ್ಗೆ ಆ ಕೊಬ್ಬರಿಯನ್ನು ಸಣ್ಣ ಸಣ್ಣದಾಗಿ ಕತ್ತರಿಸಿಕೊಳ್ಳಬೇಕು.
ಸಣ್ಣದಾಗಿ ಕತ್ತರಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ ಎನ್ನುವವರು ಚಿಪ್ಸ್ ಕಟ್ಟರ್ ನಲ್ಲಿ ಕೊಬ್ಬರಿಯನ್ನು ತುರಿದುಕೊಳ್ಳಬೇಕು. ನಂತರ ಆ ಕೊಬ್ಬರಿಯನ್ನು ಅದೇ ನೀರಿಗೆ ಹಾಕಿ ಬಿಡಬೇಕು.
* ನಂತರ ಆ ಪಾತ್ರೆಯನ್ನು ಸ್ಟವ್ ಮೇಲೆ ಇಟ್ಟು ನಿಮಗೆ ಬಿಸಿ ತಾಕೋ ಅಷ್ಟು ಬಿಸಿ ಮಾಡಿದರೆ ಸಾಕು ಆನಂತರ ಕೊಬ್ಬರಿ ಸ್ವಲ್ಪ ತಣ್ಣಗಾದ ಮೇಲೆ ಅದನ್ನು ಮಿಕ್ಸಿ ಜಾರಿಗೆ ಹಾಕಿ ಅದರಲ್ಲಿಯೇ ಇರುವಂತಹ ನೀರನ್ನು ಹಾಕಿ ನುಣ್ಣನೆ ರುಬ್ಬಿಕೊಳ್ಳಬೇಕು.
* ನಂತರ ಒಂದು ಶೋಧಿಸುವ ಪಾತ್ರೆ ತೆಗೆದುಕೊಂಡು ಅದರ ಮೇಲೆ ಒಂದು ಕಾಟನ್ ಬಟ್ಟೆ ಹಾಕಿ ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಶೋಧಿಸಿಕೊಳ್ಳಬೇಕು. ಬಟ್ಟೆಯಲ್ಲಿ ಹಾಕುವುದರಿಂದ ಅದನ್ನು ಹಿಂಡುವ ಮೂಲಕ ಮತ್ತಷ್ಟು ಆ ಕೊಬ್ಬರಿಯಲ್ಲಿ ಇರುವಂತಹ ಅಂಶವನ್ನು ತೆಗೆದುಕೊಳ್ಳಬಹುದು.
* ಈ ರೀತಿ ಸಿಕ್ಕಂತಹ ಹಾಲನ್ನು ಒಂದು ದಿನ ಪೂರ್ತಿ ಫ್ರಿಜ್ ನಲ್ಲಿ ಇಡಬೇಕು ಆನಂತರ ಅದರ ಮೇಲೆ ಇರುವಂತಹ ಗಟ್ಟಿಯ ಅಂಶವನ್ನೆಲ್ಲ ಒಂದು ಬಾಣಲಿಗೆ ಹಾಕಿಕೊಳ್ಳಬೇಕು ಅದನ್ನು ಚೆನ್ನಾಗಿ ಬಿಸಿ ಮಾಡುವು ದರ ಮೂಲಕ ಅದು ಸಂಪೂರ್ಣವಾಗಿ ಕಪ್ಪಾಗುವ ತನಕ ಅದನ್ನು ಹಾಗೆ ಬಿಡಬೇಕು. ಆಗ ನಿಮಗೆ ಶುದ್ಧವಾದ ಕೊಬ್ಬರಿ ಎಣ್ಣೆ ಸಿಗುತ್ತದೆ. ಅದನ್ನು ಕೂಡ ಸಂಪೂರ್ಣವಾಗಿ ಶೋಧಿಸಿಕೊಂಡು ಆನಂತರ ಮತ್ತೆ ಅದನ್ನು ಐದು ನಿಮಿಷ ಬಿಸಿ ಮಾಡಿಕೊಳ್ಳುವುದರಿಂದ ಶುದ್ಧವಾದ ಕೊಬ್ಬರಿ ಎಣ್ಣೆ ನಿಮಗೆ ಸಿಗುತ್ತದೆ.