ಗೃಹ ಜ್ಯೋತಿ (Gruhajyothi Scheme) ಯೋಜನೆಯಡಿ ಕಳೆದ ಆರೇಳು ತಿಂಗಳಿಂದ ಉಚಿತ ವಿದ್ಯುತ್ (free Current) ಸೌಲಭ್ಯ ಪಡೆಯುತ್ತಿದ್ದ ಎಲ್ಲಾ ಗ್ರಾಹಕರಿಗೂ ಇಂಧನ ಇಲಾಖೆ (Power Department) ಕಡೆಯಿಂದ ಬಿಗ್ ಅಪ್ಡೇಟ್ ಇದೆ. ಅದೇನೆಂದರೆ, ಇನ್ನು ಮುಂದೆ ಎಲ್ಲರಿಗೂ ಕೂಡ ಶೂನ್ಯ ದರ ವಿದ್ಯುತ್ ಬಿಲ್ ಬರುವುದಿಲ್ಲ ಅಲ್ಲದೇ ಸರ್ಕಾರದ ಈ ನಿಯಮವನ್ನು ಮೀರುವ ಕುಟುಂಬಗಳು ಉಚಿತ ವಿದ್ಯುತ್ ಸೌಲಭ್ಯ ಕಳೆದುಕೊಂಡು ಪೂರ್ತಿ ಬಿಲ್ ಪಾವತಿ ಮಾಡಬೇಕು.
ಹಾಗಾದರೆ ಇನ್ನು ಮುಂದೆ ಆ ಕುಟುಂಬಗಳು ಉಚಿತ ವಿದ್ಯುತ್ ಪಡೆಯುವುದಕ್ಕೆ ಸಾಧ್ಯವೇ ಇಲ್ಲವೇ? ಅಷ್ಟಕ್ಕೂ ಆ ನಿಯಮವೇನು? ಇಲಾಖೆಯು ಗೃಹಜ್ಯೋತಿ ಫಲಾನುಭವಿಗಳಿಗೆ ವಿಧಿಸಿರುವ ಕಂಡೀಶನ್ ಏನು? ಎನ್ನುವ ಎಲ್ಲಾ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು (Congress Party) ಅಧಿಕಾರಕ್ಕೆ ಬಂದ ಮೇಲೆ ನುಡಿದಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಗೃಹಜ್ಯೋತಿ ಯೋಜನೆಯು ಕೂಡ ಒಂದು. ಆ ಪ್ರಕಾರವಾಗಿ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿರುವ ಪ್ರತಿ ಕುಟುಂಬವು ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದೆ.
ಆದರೆ ಆ ಕುಟುಂಬವು 2022-23ನೇ ಸಾಲಿನಲ್ಲಿ ಬಳಸಿದ್ದ ವಿದ್ಯುತ್ ಬಳಕೆಯ ಸರಾಸರಿಗಿಂತ 10% ಹೆಚ್ಚುವರಿ ಯೂನಿಟ್ ಮಾತ್ರ ಉಚಿತವಾಗಿ ಬಳಸಬಹುದು ಎನ್ನುವ ಕಂಡೀಶನ್ ಹೇರಲಾಗಿದೆ. ಹೀಗಿದ್ದೂ ಕರ್ನಾಟಕ ಕೋಟ್ಯಾಂತರ ಕುಟುಂಬಗಳು ಜುಲೈ 2024 ರಿಂದಲೇ ಈ ಫ್ರೀ ವಿದ್ಯುತ್ ಸೌಲಭ್ಯವನ್ನು ಪಡೆದಿವೆ. ಆದರೆ ಫೆಬ್ರವರಿ ತಿಂಗಳಿನಲ್ಲಿ ಬಂದಿರುವ ವಿದ್ಯುತ್ ಬಿಲ್ ಎಲ್ಲರನ್ನು ಗಾಬರಿಗೊಳಿಸಿದೆ.
ಯಾಕೆಂದರೆ ಕಳೆದ ಆರು ತಿಂಗಳಿನಿಂದ ಜೀರೋ ಬಿಲ್ ಪಡೆಯುತ್ತಿದ್ದ ಕುಟುಂಬಗಳಿಗೆ ಈಗ ವಿದ್ಯುತ್ ಬಿಲ್ ಪಾವತಿಸುವಂತೆ ಬಿಲ್ ನೀಡಲಾಗಿದೆ. ಇದು ಜನಸಾಮಾನ್ಯರಲ್ಲಿ ಗೊಂದಲ ಸೃಷ್ಟಿಸಿದ ಕಾರಣ ಇಲಾಖೆ ಅಧಿಕಾರಿಗಳೇ ಇದರ ಬಗ್ಗೆ ಸ್ಪಷ್ಟತೆ ಕೊಟ್ಟಿದ್ದಾರೆ. ಅವರು ನೀಡಿರುವ ಮಾಹಿತಿಯ ಪ್ರಕಾರ ಕುಟುಂಬವು ಗೃಹಜೋತಿ ಯೋಜನೆ ಆರಂಭವಾಗುವುದಕ್ಕೂ ಹಿಂದಿನ ಒಂದು ವರ್ಷದಲ್ಲಿ ಬಳಸಿದ್ದ ವಿದ್ಯುತ್ ಬಳಕೆಯ ಶೇಕಡ 10% ಹೆಚ್ಚಿಗೆ ಬಳಸಬಹುದು.
ಉದಾಹರಣೆಗೆ ಅಲ್ಲಿಯವರೆಗೂ ಕುಟುಂಬದ ಸರಾಸರಿ ಬಳಕೆ 100 ಯೂನಿಟ್ ಆಗಿದ್ದರೆ 10% ಹೆಚ್ಚುವರಿಯಾಗಿ 10 ಯೂನಿಟ್ ಪಡೆದು ಒಟ್ಟು 110 ಯೂನಿಟ್ ವರೆಗೂ ಉಚಿತ ವಿದ್ಯುತ್ ಅನುಕೂಲತೆ ಪಡೆಯಬಹುದು. 110 ಯೂನಿಟ್ ಮೀರಿ 200 ಯೂನಿಟ್ ಒಳಗೆ ವಿದ್ಯುತ್ ಬಳಕೆ ಮಾಡಿದ್ದಲ್ಲಿ ಉದಾಹರಣೆಗೆ ಆ ತಿಂಗಳಿನಲ್ಲಿ 190 ಯೂನಿಟ್ ಬಳಸಿದ್ದಾರೆ ಎಂದರೆ ಹೆಚ್ಚುವರಿ 80 ಯೂನಿಟ್ ಗೆ ವಿದ್ಯುತ್ ಬಿಲ್ ಪಾವತಿ ಮಾಡಬೇಕು.
ಒಂದು ವೇಳೆ ಕುಟುಂಬವೂ 200 ಯೂನಿಟ್ ಗಡಿ ದಾಟಿ ವಿದ್ಯುತ್ ಬಳಕೆ ಮಾಡಿದರೆ ಪೂರ್ತಿ ಬಿಲ್ ಪಾವತಿ ಮಾಡಬೇಕು ಎನ್ನುವ ಆದೇಶವನ್ನು ನೀಡಿದ್ದಾರೆ. ಕಳೆದ ತಿಂಗಳಿನಲ್ಲಿ ಈ ರೀತಿ ಅನೇಕ ಕುಟುಂಬಗಳು ಶೂನ್ಯ ವಿದ್ಯುತ್ ದರ ಬಿಲ್ ಪಡೆಯುವ ಜಾಗದಲ್ಲಿ ಬದಲಾಗಿ ಹೆಚ್ಚುವರಿ ವಿದ್ಯುತ್ ಬಿಲ್ ಮತ್ತು ಕೆಲವು ಕುಟುಂಬಗಳು 200 ಯೂನಿಟ್ ಕಡೆಯೂ ದಾಟಿ ಪೂರ್ತಿ ಕರೆಂಟ್ ಬಿಲ್ ಕಟ್ಟಿವೆ.
ಬೇಸಿಗೆ ಸಮೀಪಿಸಿರುವುದರಿಂದ ಎಲ್ಲರ ಮನೆಯಲ್ಲೂ ಫ್ಯಾನ್, AC & TV ಮುಂತಾದ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆ ಹೆಚ್ಚಾಗಿರುವುದೇ ಈ ರೀತಿ ವಿದ್ಯುತ್ ಬಿಲ್ ಹೆಚ್ಚಾಗುವುದಕ್ಕೆ ಕಾರಣ ಎಂದು ಅಂದಾಜಿಸಲಾಗಿದೆ. ಮತ್ತು ಒಂದು ವೇಳೆ ಕುಟುಂಬಗಳು ಮುಂದಿನ ತಿಂಗಳಿನಲ್ಲಿ ಅವರ ಸರಾಸರಿ ಎಷ್ಟು ಅಥವಾ ಅದಕ್ಕಿಂತ ಕಡಿಮೆ ಬಳಕೆ ಮಾಡಿದರೆ ಎಂದಿನಂತೆ ಜೀರೋ ಬಿಲ್ ನೀಡಲಾಗುತ್ತಿದೆ ಎನ್ನುವ ಸಮಾಧಾನಕರ ಸಂಗತಿಯನ್ನು ತಿಳಿಸಿದ್ದಾರೆ.