ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಚನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಹಲವು ಬಾರಿ ವಿಘ್ನವಾಗಿದೆ ಎಂದೇ ಹೇಳಬಹುದು. ಯಾಕೆಂದರೆ ಈ ಹಿಂದೆ ಅರ್ಜಿ ಸ್ವೀಕಾರ ಮಾಡುವ ಪ್ರಕ್ರಿಯೆಯನ್ನು ಸರ್ಕಾರ ತಡವಾಗಿ ಆರಂಭಿಸಿತು. ಅದಕ್ಕಾಗಿ ಸೂಚಿಸಿದ ದಿನಾಂಕದ ಮೇಲೆ ಹಲವು ಬಾರಿ ತಾಂತ್ರಿಕ ಸಮಸ್ಯೆಗಳ ಕಾರಣ ಹೇಳಿ ಮುಂದೂಡಿ ಅಂತಿಮವಾಗಿ ಆಗಸ್ಟ್ 19ರಿಂದ ಅರ್ಜಿ ಸ್ವೀಕಾರ ಮಾಡಲು ಅನುಮತಿಸಿತು.
ಅರ್ಜಿ ಸಲ್ಲಿಸುವ ವೇಳೆ ಕೂಡ ಕಂಡಿಷನ್ ಹಾಕಿದ ಸರ್ಕಾರ ಸಹಾಯವಾಣಿಯನ್ನು ನೀಡಿ ಅರ್ಜಿ ಸಲ್ಲಿಸುವವರು ಮೊದಲು ಪಡಿತರ ಚೀಟಿ ಸಂಖ್ಯೆಯನ್ನು ಸಹಾಯವಾಣಿ ಸಂಖ್ಯೆಗೆ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಮೂಲಕ SMS ಕಳುಹಿಸಿ ವೇಳಾಪಟ್ಟಿಯನ್ನು ಪಡೆದು ಅದೇ ಸಮಯದಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು ಅದರಲ್ಲೂ ಕೂಡ ಸರ್ಕಾರ ಸೂಚಿಸಿರುವ ಸೇವಾ ಕೇಂದ್ರಗಳಾದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಿತು.
ಒಂದು ದಿನಕ್ಕೆ 60 ಜನರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇದ್ದದ್ದರಿಂದ ಬಹಳಷ್ಟು ತಡವಾಗಿದೆ ಎನ್ನುವುದನ್ನು ಅರಿತು ನಂತರ ವೇಳಾಪಟ್ಟಿ ಇಲ್ಲದಿದ್ದರೂ ಕೂಡ ಹತ್ತಿರದಲ್ಲಿರುವ ಸೇವಾ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದೆಂದು ಹೇಳಿತು. ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2000 ಸಹಾಯಧನ ನೀಡುವ ಈ ಮಹತ್ವಕಾಂಕ್ಷೆಯ ಯೋಜನೆ ಬಗ್ಗೆ ಫಲಾನುಭವಿಗಳಾಗಲು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಈವರೆಗೆ 1.05 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಅಂಕಿ ಅಂಶವನ್ನು ಸರ್ಕಾರ ತಿಳಿಸುತ್ತಿದೆ. ಅದೇ ಬೆನ್ನಲ್ಲೇ ಯೋಜನೆಯ ಲಾಂಚ್ (launch) ಯಾವಾಗ ಎನ್ನುವ ಪ್ರಶ್ನೆಗಳು ಎದುರಾಗುತ್ತಿವೆ. ಆದೇಶ ಪತ್ರ ಹೊರಡಿಸಿದಾಗ ಮಾನ್ಯ ಮುಖ್ಯಮಂತ್ರಿಗಳು ಆಗಸ್ಟ್ 15ರಂದು ಸ್ವತಂತ್ರ ದಿನಾಚರಣೆ ಪ್ರಯುಕ್ತವಾಗಿ ಕಾರ್ಯಕ್ರಮ ನಡೆಸಿ ಅದ್ದೂರಿಯಾಗಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುವುದು.
ಶಿಕ್ಷಕರ ನೇಮಕಾತಿ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ…
ಆಗಸ್ಟ್ 16 ರಂದು ಎಲ್ಲಾ ಫಲಾನುಭವಿಗಳ ಖಾತೆಗೆ ರೂ. 2000 ಸಹಾಯಧನವು DBT ಮೂಲಕ ವರ್ಗಾವಣೆಯಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ಪದೇಪದೇ ಈ ದಿನಾಂಕ ಮುಂದಕ್ಕೆ (postponed) ಹೋಗುತ್ತಿದೆ. ಮಹಿಳೆಯರು ತಮ್ಮ ಖಾತೆಗೆ ಯಾವ ದಿನಾಂಕದಂದು 2000 ಸಹಾಯಧನ ಸಿಗಲಿದೆ ಎಂದು ಬಾರಿ ಕುತೂಹಲದಲ್ಲಿ ಇದ್ದಾರೆ.
ಎರಡು ದಿನಗಳ ಹಿಂದಷ್ಟೇ ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ (D.K Shivakumar) ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ (Pressmeet) ಆಗಸ್ಟ್ 27ನೇ ತಾರೀಕಿನಂದು ಬೆಳಗಾವಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.
AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ವಾದ್ರಾ ಅವರು ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬರಲಿದ್ದಾರೆ. ಆಗಸ್ಟ್ 28 ರಂದು ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗುತ್ತದೆ ಎಂದು ತಿಳಿಸಿದ್ದರು.
ಆದರೆ ಈಗ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ (CM Siddaramaiah) ಅವರು ಬೆಳಗಾವಿಯಲ್ಲಿ (Belagavi) ಕಾರ್ಯಕ್ರಮ ನಡೆಸಲು ನಿರ್ಧಾರವಾಗಿರುವ ಜಿಲ್ಲಾ ಕ್ರೀಡಾಂಗಣ ಮತ್ತು CBEd ಆವರಣ ಸ್ಥಳ ಪರಿಶೀಲನೆಗೆ ಹೋಗಿದ್ದ ವೇಳೆ ಆಗಸ್ಟ್ 27ರಂದು ಕಾರ್ಯಕ್ರಮ ನಡೆಯುವುದಿಲ್ಲರ ಇನ್ನು ಎರಡು ದಿನ ಮುಂದೆ ಹೋಗಲಿದೆ ಆಗಸ್ಟ್ 29 ಅಥವಾ 30ನೇ ತಾರೀಕಿನಂದು ಈ ಕಾರ್ಯಕ್ರಮ ನಡೆಯಲಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.