Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Haripriya Vasista Simha: ನಟಿ ಹರಿಪ್ರಿಯಾ & ನಟ ವಸಿಷ್ಠ ಸಿಂಹ ಮದುವೆಯ ಅರಶಿಣ ಶಾಸ್ತ್ರದ ಕ್ಯೂಟ್ ವಿಡಿಯೋ. ಈ ಜೋಡಿ ನೋಡಲು ಎರಡು ಕಣ್ಣು ಸಾಲದು ಮದುವೆ ಸಂಭ್ರಮ ಹೇಗೆ ನೆಡೆಯುತ್ತಿದೆ ನೋಡಿ.

Posted on January 25, 2023 By Kannada Trend News No Comments on Haripriya Vasista Simha: ನಟಿ ಹರಿಪ್ರಿಯಾ & ನಟ ವಸಿಷ್ಠ ಸಿಂಹ ಮದುವೆಯ ಅರಶಿಣ ಶಾಸ್ತ್ರದ ಕ್ಯೂಟ್ ವಿಡಿಯೋ. ಈ ಜೋಡಿ ನೋಡಲು ಎರಡು ಕಣ್ಣು ಸಾಲದು ಮದುವೆ ಸಂಭ್ರಮ ಹೇಗೆ ನೆಡೆಯುತ್ತಿದೆ ನೋಡಿ.

ಅರಿಶಿಣ ಶಾಸ್ತ್ರದ ಫೋಟೋಸ್ ಹಂಚಿಕೊಂಡ ಸಿಂಹಪ್ರಿಯ ಜೋಡಿ. ಕಳೆದ ಒಂದು ವರ್ಷದಿಂದ ಸಾಕಷ್ಟು ಸೆಲೆಬ್ರಿಟಿಗಳು (Celebrates) ಮದುವೆ ಬಂಧನಕ್ಕೆ (Marriage) ಒಳಗಾಗುತ್ತಿದ್ದಾರೆ. ಕಳೆದ ವರ್ಷವೇ ಹಲವಾರು ಮಂದಿ ಎಂಗೇಜ್ಮೆಂಟ್ (Engagement) ಮಾಡಿಕೊಂಡು ಮದುವೆಯ ಆಗಿದ್ದರೆ, ವರ್ಷಾಂತದಲ್ಲಿ ನಿಶ್ಚಿತಾರ್ಥ ಮಾಡಿಕೊಂಡವರು ಈ ವರ್ಷದ ಆರಂಭದಲ್ಲೇ ಮದುವೆ ಆಗವುದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಈಗ ವರ್ಷದ ಮೊದಲ ಸೆಲಬ್ರೆಟಿ ಜೋಡಿ ಆಗಿ ಹರಿಪ್ರಿಯ (Haripriya) ಮತ್ತು ವಸಿಷ್ಠ ಸಿಂಹ (Vasista Simha) ಅವರು ಮದುವೆ ಆಗುತ್ತಿದ್ದಾರೆ. ನವಂಬರ್ ತಿಂಗಳ ಅಂತ್ಯದಲ್ಲಿಯೇ ಇವರಿಬ್ಬರ ನಿಶ್ಚಿತಾರ್ಥ ಕೂಡ ಆಗಿತ್ತು, ಆದರೆ ಇವರಿಬ್ಬರು ವರ್ಷದ ಹಿಂದೆ ಪ್ರೀತಿಯಲ್ಲಿ ಬಿದ್ದಿದ್ದರು ಎನ್ನುವ ಗುಟ್ಟನ್ನು ಎಲ್ಲೂ ಬಿಟ್ಟು ಕೊಟ್ಟಿರಲಿಲ್ಲ. ತಮ್ಮ ಪ್ರೀತಿ ವಿಷಯವನ್ನು ರಹಸ್ಯವಾಗಿಯೇ ಇಟ್ಟುಕೊಂಡಿದ್ದ ಇಬ್ಬರೂ ಎಂಗೇಜ್ಮೆಂಟ್ ಆಗುವ ಕೆಲ ದಿನಗಳ ಹಿಂದಷ್ಟೇ ಅದನ್ನು ಹಂಚಿಕೊಂಡಿದ್ದಾರೆ.

ಇಬ್ಬರು ಒಟ್ಟಿಗೆ ಸಮಯ ಕಳೆಯುತ್ತಿದ್ದ ಫೋಟೋಗಳು ಹಾಗೂ ವಿಡಿಯೋಗಳನ್ನು ಇಬ್ಬರು ಸಹ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಮೊದಮೊದಲಿಗೆ ಯಾವುದೋ ಸಿನಿಮಾದ ಶೂಟಿಂಗ್ ಇರಬೇಕು ಎಂದುಕೊಂಡಿದ್ದ ಅಭಿಮಾನಿಗಳಿಗೆ ದಿಢೀರ್ ಎಂದು ನಿಶ್ಚಿತಾರ್ಥ ಆಗುವ ಮೂಲಕ ಸರ್ಪ್ರೈಸ್ ಕೊಟ್ಟಿದ್ದರು. ನಾಯಿಮರಿಕೊಟ್ಟು ವಸಿಷ್ಠ ಸಿಂಹ ಅವರು ಪ್ರೀತಿಯ ಪ್ರಪೋಸ್ (love propose) ಮಾಡಿದ ವಿಷಯವನ್ನು ಅದೇ ನಾಯಿಮರಿ ಜೊತೆ ವಿಡಿಯೋ ಮಾಡಿ ಹರಿಪ್ರಿಯಾ ಹರಿಬಿಟ್ಟಿದ್ದರು.

ಆ ಬಳಿಕ ಎಲ್ಲರಿಗೂ ದೃಢಪಟ್ಟಿತ್ತು ಇವರಿಬ್ಬರು ಪ್ರೀತಿಸಿ ಜೋಡಿಯಾಗುತ್ತಿದ್ದಾರೆ ಎಂದು. ಇದಾದ ಬಳಿಕ ಪ್ರತಿದಿನ ಕೂಡ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರ ಜೋಡಿ ಬಗ್ಗೆ ಸಾಕಷ್ಟು ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇವೆ. ಕಳೆದ ಒಂದು ವಾರದಿಂದ ಇಬ್ಬರು ಜೋಡಿಯಾಗಿ ಒಂದೇ ರೀತಿಯ ಒಂದೇ ಬಣ್ಣದ ಉಡುಗೆ ತೊಟ್ಟು ಸಾಕಷ್ಟು ಸೆಲೆಬ್ರೆಟಿಗಳ ಮನೆಗೆ ಹೋಗಿ ಸಿಂಹಪ್ರಿಯ ಮದುವೆಗೆ ಆಹ್ವಾನ ಪತ್ರಿಕೆಯನ್ನು ಕೊಟ್ಟು ಬಂದಿದ್ದಾರೆ.

ಶಿವರಾಜಕುಮಾರ್, ರವಿಚಂದ್ರನ್, ಸುಮಲತಾ ಅಂಬರೀಶ್, ಸುದೀಪ್ ಇನ್ನು ಸಾಕಷ್ಟು ತಾರೆಗಳ ಮನೆಗೆ ಇಬ್ಬರು ಒಟ್ಟೊಟ್ಟಿಗೆ ಹೋಗಿ ಮದುವೆ ಓಲೆ (Marriage Invitation) ಹಂಚಿ ಬಂದಿದ್ದ ಫೋಟೋಗಳನ್ನು ಕೂಡ ಶೇರ್ ಮಾಡಿದ್ದರು. ಈ ದಿನ ಅವರ ಅರಿಶಿಣ ಶಾಸ್ತ್ರ ( Yellow ceremony) ನಡೆದಿದೆ, ಅರಿಶಿನ ಶಾಸ್ತ್ರದ ಫೋಟೋಗಳನ್ನು ಕೂಡ ಇಬ್ಬರು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸುತ್ತಲೂ ಅರಿಶಿನದ ಹೂ ಮತ್ತು ಹಳದಿ ವಸ್ತುಗಳಿಂದ ಅಲಂಕೃತವಾದ ಸೆಟ್ಟಿನಲ್ಲಿ ಬಿಳಿ ಬಟ್ಟೆಯಲ್ಲಿ ರಾಜಕುಮಾರ ಹಾಗೂ ರಾಜಕುಮಾರಿಯಂತೆ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿ ಕಂಗೊಳಿಸುತ್ತಿದ್ದಾರೆ.

ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರು ಎಂದೂ ಒಟ್ಟಿಗೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ ಆದರೆ ಇವರಿಬ್ಬರ ನಡುವೆ ಪ್ರೀತಿ ಮೂಡಿದೆ ಎನ್ನುವುದೇ ತುಂಬಾ ಕುತೂಹಲದ ವಿಚಾರ. ಇನ್ನು ಹೇಳಬೇಕು ಎಂದರೆ ವಸಿಷ್ಠ ಸಿಂಹ ಅವರಿಗಿಂತ ಮುಂಚೆಯೇ ಹರಿಪ್ರಿಯಾ ಅವರು ತಮ್ಮ ಕೆರಿಯರ್ ಶುರು ಮಾಡಿದ್ದರು. ಆದರೂ ಹರಿಪ್ರಿಯಾ ಅವರ ಗುಣಕ್ಕೆ ಮನಸೋತು, ಹರಿಪ್ರಿಯಾ ಅವರಿಗೆ ಪ್ರೀತಿಗೆ ಬಿದ್ದು ಅವರ ಮನ ಒಲಿಸಿ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ ಸಿಂಹ. ಈಗ ಇವರು ಕರ್ನಾಟಕದಲ್ಲಿ ಸಿಂಹ ಪ್ರಿಯ ಜೋಡಿ ಎಂದೇ ಹೆಸರಾಗುತ್ತಿದ್ದಾರೆ.

ನಮ್ಮಲ್ಲಿ ವಿಷ್ಣುವರ್ಧನ್ ಅವರ ಕಾಲದಿಂದ ಹಿಡಿದು ಈಗಿನ ಯಶ್ ಅವರವರೆಗೂ ಸಾಕಷ್ಟು ತಾರೆಗಳು ತಮ್ಮ ರಂಗದಲ್ಲಿರುವ ಆಯ್ದುಕೊಂಡು ಸಂಗಾತಿ ಮಾಡಿಕೊಂಡಿದ್ದಾರ ಮತ್ತು ಸಾಕಷ್ಟು ವರ್ಷಗಳವರೆಗೆ ಸುಖೀ ದಾಂಪತ್ಯವನ್ನು ನಡೆಸಿದ್ದಾರೆ. ಈಗ ಹೊಸ ಬದುಕಿನ ಹೊಸಿಲಲ್ಲಿ ನಿಂತಿರುವ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಕೂಡ ಅವರಂತೆ ಮಾದರಿ ಜೋಡಿಗಳಾಗಿ ನೂರು ಕಾಲ ಜೊತೆಯಾಗಿ ಸುಖವಾಗಿ ಬಾಳಲಿ ಎಂದು ಹರಸೋಣ.

View this post on Instagram

A post shared by Hariprriya Simha (@iamhariprriya)

Entertainment Tags:Haripriya Vasista Simha Wedding, Hariprriya, Vasista Simha
WhatsApp Group Join Now
Telegram Group Join Now

Post navigation

Previous Post: ಎಲ್ರೂ ಐ ಸ್ಟಾಂಡ್ ವಿತ್ ದರ್ಶನ್ ಅಂತಾರೆ, ಅಪ್ಪು ಏನ್ ತಪ್ಪು ಮಾಡಿದ್ರು.? ಒಬ್ಬರಾದ್ರು ಐ ಸ್ಟಾಂಡ್ ವಿತ್ ಅಪ್ಪು ಅನ್ಲಿಲ್ವಲ್ಲ ಎಂದು ರೊಚ್ಚಿಗೆದ್ದ ನಟ ಪ್ರಥಮ್.
Next Post: ನಮಾಜ್ ಮಾಡಿ ಕ್ರಾಂತಿ ಸಿನಿಮಾ ಬಿಡುಗಡೆಗೆ ಯಾವುದೇ ತೊಂದರೆ ಬರದಿರಲಿ ಎಂದು ಬೇಡಿಕೊಂಡ ಕುರುಕ್ಷೇತ್ರ ಸಿನಿಮಾದ ಭೀಮಾ ಪಾತ್ರದಾರಿಯ ಬಾಲಿವುಡ್ ನಟ ಡ್ಯಾನೀಶ್ ಅಕ್ತರ್ ಸೈಫಿ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore