ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬರಿಗೂ ಕೂಡ 5 ಕೆಜಿ ಅಕ್ಕಿಯ ಹಣವನ್ನು ಅವರ ಅಕೌಂಟ್ ಗೆ ಜಮೆ ಮಾಡಲಾಗುತ್ತಿದೆ. ಹೌದು ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಅವರು ಪ್ರತಿಯೊಬ್ಬರಿಗೂ ಕೂಡ ತಲಾ 10 ಕೆಜಿ ಅಕ್ಕಿಯನ್ನು ಕೊಡುವುದಾಗಿ ಗ್ಯಾರಂಟಿಯನ್ನು ಕೊಟ್ಟಿದ್ದರು. ಆದರೆ ಇದಕ್ಕೆ ಕೇಂದ್ರ ಸರ್ಕಾರ ಒಪ್ಪುತ್ತಿಲ್ಲ.
ಅದಕ್ಕಾಗಿ ಕಾಂಗ್ರೆಸ್ ಪಕ್ಷ 5 ಕೆಜಿ ಅಕ್ಕಿಯನ್ನು ಕೊಡಲು ಸಾಧ್ಯವಿಲ್ಲ ಅಂದರೆ ಅಕ್ಕಿಯ ಕೊರತೆ ಇರುವುದರಿಂದ ನಾವು 5 ಕೆಜಿ ಅಕ್ಕಿಯ ಬೆಲೆ ಎಷ್ಟಾಗುತ್ತದೆಯೋ ಅಷ್ಟು ಹಣವನ್ನು ಆ ಒಂದು ಮನೆ ಸದಸ್ಯರ ಬ್ಯಾಂಕ್ ಖಾತೆಗೆ ಹಾಕುತ್ತೇವೆ ಎನ್ನುವಂತಹ ಮಾಹಿತಿಯನ್ನು ಹೇಳಿದ್ದರು.
ಅದೇ ರೀತಿಯಾಗಿ ಈಗಾಗಲೇ ಹಲವಾರು ಜನರಿಗೆ ಈ ಒಂದು ಯೋಜನೆಯ ಅಡಿಯಲ್ಲಿ ಮನೆಯಲ್ಲಿ ಎಷ್ಟು ಜನ ಇರುತ್ತಾರೋ ಅಷ್ಟು ಜನಕ್ಕೆ ಅಂದರೆ ಒಬ್ಬರಿಗೆ 170 ರುಪಾಯಿ ಯಂತೆ ಎಷ್ಟು ಜನ ಇರುತ್ತಾರೆ ಅಷ್ಟು ಹಣವನ್ನು ಅವರ ಬ್ಯಾಂಕ್ ಖಾತೆಗೆ ಹಾಕಲಾಗಿದೆ. ಹೌದು ಆದರೆ ಕೆಲವೊಂದಷ್ಟು ಜನರಿಗೆ ಈ ಒಂದು ಹಣ ಜಮಯಾಗಿಲ್ಲ. ಇದಕ್ಕೆ ಕಾರಣ ಗಳು ಹಲವಾರು ಇದೆ. ಹಾಗಾದರೆ ಈ ಒಂದು ಕಾರಣಗಳು ಏನು ಎಂದು ನೋಡುವುದಾದರೆ.
• ಅವರ ಆಧಾರ್ ಕಾರ್ಡ್ ಹಾಗೂ ಅವರ ಬ್ಯಾಂಕ್ ಪಾಸ್ ಬುಕ್ ಗೆ ಲಿಂಕ್ ಇಲ್ಲ ಎಂದರೆ ಈ ರೀತಿಯಾದಂತಹ ಹಣ ಬರಲು ಸಾಧ್ಯವಾಗು ವುದಿಲ್ಲ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ರೀತಿ ಸರಿಯಾದ ವ್ಯವಸ್ಥೆಯನ್ನು ಮಾಡಿಸಿ ಆನಂತರ ನಿಮಗೆ ಆಹಾರ ಇಲಾಖೆಯ ಕಡೆಯಿಂದ ಹಣ ಬರುತ್ತದೆ.
• ಇನ್ನು ಎರಡನೆಯ ಕಾರಣ ಏನು ಎಂದು ನೋಡುವುದಾದರೆ ನಿಮ್ಮ ಮೊಬೈಲ್ ಸಂಖ್ಯೆ ನಿಮ್ಮ ಆಧಾರ್ ಕಾರ್ಡ್ ಹಾಗೂ ನಿಮ್ಮ ಬ್ಯಾಂಕ್ ಪಾಸ್ ಬುಕ್ ಇಷ್ಟಕ್ಕೂ ಕೂಡ ಲಿಂಕ್ ಇರಬೇಕು. ಈ ರೀತಿ ಇಲ್ಲ ಎಂದಂತಹ ಸಮಯದಲ್ಲಿಯೂ ಕೂಡ ನಿಮಗೆ ಹಣ ಸರಿಯಾಗಿ ಬರುವುದಿಲ್ಲ. ಹಾಗಾಗಿ ಈ ಎಲ್ಲಾ ಮಾಹಿತಿಗಳನ್ನು ತಿಳಿದು ಇವುಗಳನ್ನು ಮೊದಲು ಸರಿಪಡಿಸಿ ಆನಂತರ ನೀವು ಈ ಒಂದು ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ಬರುವಂತಹ ಹಣವನ್ನು ನೀವು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.
ಹಾಗೇನಾದರೂ ನಿಮ್ಮ ಖಾತೆಗೆ ಹಣ ಯಾವುದೇ ಕಾರಣಕ್ಕೂ ಬಂದಿಲ್ಲ ಎಂದರೆ ಅದನ್ನು ಹೇಗೆ ತಿಳಿಯುವುದು ಎಂದು ನೋಡುವುದಾದರೆ.
• ಮೊದಲು ಅನ್ನಭಾಗ್ಯ ಯೋಜನೆಯ ವೆಬ್ಸೈಟ್ ಗೆ ಹೋಗಿ ಅಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಗೂ ಅಲ್ಲಿ ನಿಮ್ಮ ಹೆಸರು ಎಲ್ಲವನ್ನು ಸಹ ಭರ್ತಿ ಮಾಡಿ ಆನಂತರ ವೆರಿಫಿಕೇಶನ್ ಕೊಟ್ಟರೆ ಅಲ್ಲಿ ನಿಮಗೆ PAV ಎಂದು ತೋರಿಸುತ್ತಿದ್ದರೆ ಅಲ್ಲಿ ನೀವು ಕೊಟ್ಟಿರುವಂತಹ ಮಾಹಿತಿ ಸರಿ ಇಲ್ಲ ಹಾಗೂ ಯಾವುದೋ ತಪ್ಪಿದೆ ಎನ್ನುವುದನ್ನು ಅಲ್ಲಿ ತೋರಿಸುತ್ತದೆ. ಆನಂತರ ನೀವು ಅದನ್ನು ಪರಿಶೀಲಿಸಿ ನೀವು ಹಣವನ್ನು ಪಡೆಯ ಬಹುದು. PAV ಎಂದರೆ “ಪೇಮೆಂಟ್ ನಾಟ್ ಅಟ್ ರಿಸೀವ್ಡ್”. ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಒಂದು ವೆಬ್ಸೈಟ್ ನಲ್ಲಿ ಹೋಗಿ ಯಾಕೆ ಇನ್ನೂ ಹಣ ಬಂದಿಲ್ಲ ಎನ್ನುವುದನ್ನು ಪರಿಶೀಲಿಸಿ ತಕ್ಷಣವೇ ಅದನ್ನು ಸರಿಪಡಿಸಿಕೊಳ್ಳುವುದು ಉತ್ತಮ.