ಹೊಸ ವರ್ಷ ಬಂದಾಗ ಮನೆಯಲ್ಲಿ ಕೆಲವು ಬದಲಾವಣೆಗಳು ಆಗುತ್ತವೆ, ಕೆಲವನ್ನು ನಮ್ಮ ಜೀವನದಲ್ಲೂ ಕೂಡ ನಾವು ಬದಲಾವಣೆ ಮಾಡಿಕೊಳ್ಳಲು ಬಯಸುತ್ತೇವೆ. ಈ ರೀತಿ ಪ್ರತಿ ವರ್ಷ ಬದಲಾಗುವ ವಿಷಯಗಳಲ್ಲಿ ಕ್ಯಾಲೆಂಡರ್ ಕೂಡ ಒಂದು ಆದರೆ ಇದು ಸರಳ ವಿಚಾರ ಅಲ್ಲ ಹೊಸ ವರ್ಷದಲ್ಲಿ ಏನು ಬದಲಾಗದೆ ಇದ್ದರೂ ಖಂಡಿತ ಹೊಸ ಕ್ಯಾಲೆಂಡರ್ ತಂದೆ ತರುತ್ತೇವೆ.
ನೀವು ಕೂಡ ಈಗ 2024 ಹೊಸ ವರ್ಷಕ್ಕೆ ಹೊಸ ಕ್ಯಾಲೆಂಡರ್ ತಂದಿದ್ದರೆ ಈ ಅಂಶಗಳನ್ನು ತಿಳಿದುಕೊಳ್ಳಿ. ವಾಸ್ತು ಶಾಸ್ತ್ರದ ಪ್ರಕಾರ ಕ್ಯಾಲೆಂಡರ್ ಅನ್ನು ಸರಿಯಾದ ದಿಕ್ಕಿನಲ್ಲಿ ಹಾಕಿದರೆ ಮಾತ್ರ ಒಳ್ಳೆಯ ಫಲಗಳನ್ನು ಕಾಣಲು ಸಾಧ್ಯ ಹಾಗೆ ತಪ್ಪಾದ ಸ್ಥಳದಲ್ಲಿ ಹಾಕಿದರೆ ಅನವಶ್ಯಕವಾಗಿ ಎಷ್ಟೋ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಕ್ಯಾಲೆಂಡರ್ ನ ವಾಸ್ತು ನಿಯಮದ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಂಡಿರಲೇಬೇಕು. ಅದರ ಕುರಿತು ಕೆಲ ಪ್ರಮುಖ ಮಾಹಿತಿ ಹೀಗಿದೆ ನೋಡಿ
* ಕ್ಯಾಲೆಂಡರ್ ನ್ನು ದಕ್ಷಿಣ ದಿಕ್ಕಿನ ಕಡೆಗೆ ಅಥವಾ ದಕ್ಷಿಣ ದಿಕ್ಕಿನ ಗೋಡೆಗೆ ಹಾಕುವುದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ, ಅದರಲ್ಲೂ ಹಿರಿಯರ ಆರೋಗ್ಯಗಳು ಗಂಭೀರವಾಗುವ ಸಾಧ್ಯತೆಗಳು ಇರುತ್ತವೆ.
* ಮನೆಯಲ್ಲಿ ಸಕಾರಾತ್ಮಕ ವಾತಾವರಣವಿದ್ದರೆ ಎಲ್ಲರ ಮನಸಿನಲ್ಲಿ ಹರುಷ ಸಂತೋಷ ಹಾಗೂ ಮನೆಯ ವಾತಾವರಣ ನೆಮ್ಮದಿಯಾಗಿ ಇರುತ್ತದೆ. ಈ ರೀತಿಯಾದ ವಾತಾವರಣ ಸೃಷ್ಟಿ ಆಗಬೇಕು ಎಂದರೆ ಕ್ಯಾಲೆಂಡರ್ ನ್ನು ಯಾವಾಗಲು ಪೂರ್ವ ಪಶ್ಚಿಮ ಮತ್ತು ಉತ್ತರ ದಿಕ್ಕಿನಲ್ಲಿ ಮಾತ್ರ ಹಾಕಬೇಕು
* ಹೊಸ ವರ್ಷಕ್ಕೆ ಖಂಡಿತವಾಗಿ ಹೊಸ ಕ್ಯಾಲೆಂಡರ್ ತರುತ್ತೇವೆ ಮತ್ತು ಹೊಸ ಕ್ಯಾಲೆಂಡರ್ ನ್ನು ನಮ್ಮ ಮನೆಯ ಗೋಡೆಗಳಿಗೆ ಹಾಕುತ್ತೇವೆ. ಆಗ ತಪ್ಪದೆ ಹಳೆಯ ಕ್ಯಾಲೆಂಡರ್ ನ್ನು ತೆಗೆಯಬೇಕು. ಕೆಲವರು ಹಳೆಯ ಕ್ಯಾಲೆಂಡರ್ ಮೇಲೆ ಹೊಸ ಕ್ಯಾಲೆಂಡರ್ ಹಾಕಿ ಎರಡು ಮೂರು ವರ್ಷದ ಹಳೆ ಕ್ಯಾಲೆಂಡರ್ ಗಳನ್ನು ಕೂಡ ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ.
ಈ ರೀತಿ ಮಾಡುವುದು ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿಯನ್ನುಂಟು
ಮಾಡುತ್ತವೆ. ನೀವು ಮುಂದುವರೆಯಲು ಸಾಧ್ಯವಾಗುವುದಿಲ್ಲ ನಿಮಗೆ ಎಲ್ಲಾ ಕೆಲಸದಲ್ಲೂ ಕೂಡ ವಿಳಂಬವಾಗುತ್ತದೆ. ಇದನ್ನು ತಪ್ಪಿಸಲು ಹೊಸ ಕ್ಯಾಲೆಂಡರ್ ಹಾಕಿದ ತಕ್ಷಣ ಹಳೆ ಕ್ಯಾಲೆಂಡರ್ ತೆಗೆಯಿರಿ, ನಿಮಗೆ ಆ ಕ್ಯಾಲೆಂಡರ್ ಅವಶ್ಯಕತೆ ಇದ್ದರೆ ಅದನ್ನು ಸುತ್ತಿ ಬೇರೆ ಎಲ್ಲಾದರೂ ಯಾರಿಗೂ ಕಾಣದಂತೆ ಇಟ್ಟುಕೊಳ್ಳಿ
* ವಾಸ್ತು ಶಾಸ್ತ್ರವು ಹೇಳುವ ಪ್ರಕಾರ ಯಾವುದೇ ಕೆಲಸ ಕ್ಯಾಲೆಂಡರ್ ಗಳನ್ನು ಮನೆಯ ಮುಖ್ಯದ್ವಾರದ ಮುಂದೆ ಅಥವಾ ಹಿಂದೆ ಹಾಕಬಾರದು
* ಪೂರ್ವ ದಿಕ್ಕು ಅಂದರೆ ಸೂರ್ಯನ ದಿಕ್ಕು ಎಂದು ಹೇಳುತ್ತಾರೆ ಕೆಂಪು ಬಣ್ಣದ ಕ್ಯಾಲೆಂಡರ್ ನ್ನು ಈ ದಿಕ್ಕಿಗೆ ಹಾಕಿ ಪ್ರತಿದಿನ ನೋಡುವುದರಿಂದ ನಮ್ಮ ವೃತ್ತಿ ಜೀವನದಲ್ಲಿ ಅಭಿವೃದ್ಧಿ ಹೊಂದುತ್ತೇವೆ ಮತ್ತು ಮಕ್ಕಳು ಕೂಡ ವಿದ್ಯಾಭ್ಯಾಸದಲ್ಲಿ ಹೆಸರು ಪಡೆಯುತ್ತಾರೆ
* ಉತ್ತರ ದಿಕ್ಕಿಗೆ ಕ್ಯಾಲೆಂಡರ್ ಹಾಕುವಾಗ ಕ್ಯಾಲೆಂಡರ್ ನಲ್ಲಿ ಅಥವಾ ಕ್ಯಾಲೆಂಡರ್ ಜೊತೆಗೆ ನದಿ ಹರಿಯುವುದು ಜಲಪಾತ ಈ ರೀತಿಯ ಪ್ರಕೃತಿಗೆ ಸಂಬಂಧಪಟ್ಟ ಸೀನರಿ ಕೂಡ ಹಾಕಿದರೆ ಉತ್ತಮ ಫಲಗಳನ್ನು ಕಾಣಬಹುದು
* ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಆಗಬೇಕು ಜೀವನದಲ್ಲಿ ಸಮೃದ್ಧಿ ಹೊಂದಿರಬೇಕು ಎಂದು ಬಯಸಿದರೆ ಅಂತವರು ಬಂಗಾರದ ಬಣ್ಣದಲ್ಲಿ ಕ್ಯಾಲೆಂಡರ್ ಹಾಕಬೇಕು
* ಕ್ಯಾಲೆಂಡರ್ ಹರಿದು ಹೋದರೆ ತಕ್ಷಣ ಅದನ್ನು ಬದಲಾಯಿಸಿ ಹೊಸ ಕ್ಯಾಲೆಂಡರ್ ಹಾಕಿ
* ಕ್ಯಾಲೆಂಡರ್ ಹಾಕಿದ ಮೇಲೆ ಪ್ರತಿ ತಿಂಗಳು 1ನೇ ತಾರೀಕು ತಪ್ಪದೇ ಕ್ಯಾಲೆಂಡರ್ ಬದಲಾಯಿಸಬೇಕು. ಕೆಲವರು 2, 3, 5ನೇ ತಾರೀಕಾದರೂ ಕ್ಯಾಲೆಂಡರ್ ತಿರುವಿ ಹಾಕಿರುವುದಿಲ್ಲ. ಇದು ಕೂಡ ನಿಮ್ಮ ಏಳಿಗೆಗೆ ಅಡ್ಡಿ ಪಡಿಸುತ್ತದೆ.