ಕಾಂಗ್ರೆಸ್ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳ ಪೈಕಿ (Govt Schemes), ಈಗಾಗಲೇ ಹಲವು ಯೋಜನೆಗಳನ್ನು ಚಾಲ್ತಿಗೆ ತರುವ ಮೂಲಕ ಜನರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇನ್ನು ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿಗಳನ್ನು ಅವರ ಖಾತೆಗೆ (Bank Account) ಜಮಾ ಮಾಡುವಂತೆ ಸರ್ಕಾರ ಈ ಹಿಂದೆ ಭರವಸೆ ನೀಡಿತ್ತು.
ಇನ್ನು ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಶುರುವಾಗಿದ್ದು, ಲಕ್ಷಗಳಲ್ಲಿ ಅರ್ಜಿಗಳು (Apply Gruha Lakshmi Yojane) ಸಲ್ಲಿಕೆಯಾಗಿದೆ ಎಂದು ತಿಳಿದು ಬಂದಿದೆ. ಇನ್ನು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಪಡಿತರ ಚೀಟಿ (Ration Card) ಬಹಳ ಮುಖ್ಯ ಎನ್ನುವುದು ನಿಮ್ಮೆಲ್ಲರಿಗೂ ಸಹ ಗೊತ್ತೇ ಇದೆ.
ಈ ಫಲಾನುಭವಿಗಳ ರೇಷನ್ ಕಾರ್ಡ್ ರದ್ದು ಜೊತೆಗೆ ಅನ್ನಭಾಗ್ಯ ಅಕ್ಕಿಯೂ ಇಲ್ಲ, ಹಣವೂ ಸಿಗಲ್ಲ.!
ಗೃಹಲಕ್ಷ್ಮಿ ಯೋಜನೆ(gruhalakshmi scheme)ಗೆ ಅರ್ಜಿ ಸಲ್ಲಿಸಲು ರೇಷನ್ ಕಾರ್ಡ್(Ration card) ಬೇಕು. ಆದ್ರೆ, ಈ ರೇಷನ್ ಕಾರ್ಡ್ ಇಲ್ಲದವರು ಏನು ಮಾಡಬೇಕು?, ಅರ್ಜಿಯನ್ನು ಹೇಗೆ ಸಲ್ಲಿಸುವುದು ಎಂಬುವುದರ ಬಗ್ಗೆ ಮಾಹಿತಿಯನ್ನು ಇಂದಿನ ಈ ಲೇಖನದಲ್ಲಿ ನೀಡಲಾಗುತ್ತದೆ. ಕೊನೆವರೆಗೂ ಮಿಸ್ ಮಾಡದೇ ಓದಿ ಮಾಹಿತಿ ತಿಳಿದುಕೊಳ್ಳಿ..
ನಿಮಗೆಲ್ಲರಿಗೂ ತಿಳಿದಿರುವಂತೆ ರೇಷನ್ ಕಾರ್ಡ್ ಇಲ್ಲವೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಆಗುವುದಿಲ್ಲ. ಹೀಗಾಗಿ, ರೇಷನ್ ಕಾರ್ಡ್ ಇಲ್ಲದ ಅನೇಕ ಜನರಿಗೆ ಇದೊಂದು ಬೇಸರದ ಸಂಗತಿಯಾಗಿ ಉಳಿದಿದೆ. ಇದಕ್ಕಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ರೇಷನ್ ಕಾರ್ಡ್ ಇಲ್ಲದವರು ಏನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಒಂದನ್ನು ನೀಡಿದ್ದಾರೆ.
ಕರ್ನಾಟಕ ಬ್ಯಾಂಕ್ ನೇಮಕಾತಿ ಅಧಿಸೂಚನೆ, ಮಾಸಿಕ ವೇತನ 1,00,000 ರೂಪಾಯಿ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!
ರೇಷನ್ ಕಾರ್ಡ್ ಇಲ್ಲದವರಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಅವಕಾಶ.?
ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯನ್ನು ಕುರಿತು ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ರೇಷನ್ ಕಾರ್ಡ್ ಇಲ್ಲದಿದ್ದರೆ, ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಆಗುತ್ತಿಲ್ಲ ಎಂದು ಬೇಜಾರಾಗುವ ಅವಶ್ಯಕತೆ ಇಲ್ಲ. ಏಕೆಂದರೆ, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ನಿಗದಿಪಡಿಸಿಲ್ಲ. ಇದು ಒಂದು ನಿರಂತರ ಪ್ರಕ್ರಿಯೆಯಾಗಿದ್ದು, ನಿಮ್ಮ ರೇಷನ್ ಕಾರ್ಡಿನ ಸಮಸ್ಯೆಗಳು ಬಗೆಹರಿದ ನಂತರ ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ರೇಷನ್ ಕಾರ್ಡ್ ಇಲ್ಲದವರು ಹೊಸದಾಗಿ ರೇಷನ್ ಕಾರ್ಡನ್ನು ಮಾಡಿಸಿಕೊಂಡು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಈಗಾಗಲೇ ಸರ್ಕಾರವು ಪಡಿತರ ಚೀಟಿಯ(Ration card) ತಿದ್ದುಪಡಿ, ಹೆಸರು ಸೇರ್ಪಡೆಗೆ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ನಿಮ್ಮ ರೇಷನ್ ಕಾರ್ಡಿನಲ್ಲಿ ಹೆಸರು ವಿಳಾಸ ಅಥವಾ ಇನ್ನಿತರ ಯಾವುದೇ ಸಮಸ್ಯೆಗಳು ಇದ್ದರೆ ಅವುಗಳನ್ನು ಕೂಡಲೇ ತಿದ್ದುಪಡಿ ಮಾಡಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ಮನೆಯಲ್ಲಿ ಯಾರಾದರೂ ಹೆಸರು ಬಿಟ್ಟಿದ್ದರೆ ಅವುಗಳನ್ನು ಕೂಡ ಸೇರ್ಪಡೆ ಮಾಡಿಸಬಹುದು ಅಥವಾ ಮರಣ ಹೊಂದಿದವರ ಹೆಸರನ್ನು ಕೂಡ ತೆಗೆಸಿ ಹಾಕಲು ಅವಕಾಶವಿದೆ. ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ನೀಡಬೇಕೆಂದು ಕೋರಿ ಅರ್ಜಿಯನ್ನು ಸಲ್ಲಿಸಿದವರಿಗೆ, ಸರ್ಕಾರವು ಆದಷ್ಟು ಬೇಗ ರೇಷನ್ ಕಾರ್ಡ್ ನೀಡುವ ಪ್ರಕ್ರಿಯೆಯನ್ನು ಪ್ರಾರಂಭಗೊಳಿಸಲಿದೆ ಎಂದು ತಿಳಿಸಿದ್ದಾರೆ.
ಹಾಗಾಗಿ, ಯಾರ್ಯಾರ ಬಳಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ರೇಷನ್ ಕಾರ್ಡ್ ಇಲ್ಲ, ಅಥವಾ ಯಾರ ರೇಷನ್ ಕಾರ್ಡಲ್ಲಿ ತಪ್ಪುಗಳಿದ್ದು ಅವುಗಳನ್ನು ಸರಿಪಡಿಸಿಲ್ಲ ಅವರೆಲ್ಲರೂ ಕೂಡ ಆದಷ್ಟು ಬೇಗ ತಿದ್ದುಪಡಿಯನ್ನು ಮಾಡಿಸಿಕೊಂಡು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿ 2000 ರೂಗಳ ಫಲಾನುಭವಿಗಳಾಗಬಹುದಾಗಿದೆ.