ಮನೆಗಳಿಗೆ ಪೇಂಟಿಂಗ್ ಮಾಡಿಸುವುದು ಮನೆಗಳ ಅಲಂಕಾರವನ್ನು ಹೆಚ್ಚಿಸುತ್ತದೆ. ಹಾಗಾಗಿ ಹೊಸ ಮನೆ ಕಟ್ಟಿಸುವವರು, ಶುಭ ಸಮಾರಂಭ ಇದ್ದಾಗ ಹಳೆ ಮನೆಯವರು ಕೂಡ ಪೇಂಟ್ ಮಾಡಿಸುತ್ತಾರೆ. ಇನ್ನು ಹೆಚ್ಚು ಬಾಡಿಗೆದಾರರು ವಾಸ ಮಾಡುವಂತಹ ಏರಿಯಾಗಳಲ್ಲಿ ಇದ್ದರೆ ಪ್ರತಿ ಬಾರಿ ಕೂಡ ಓನರ್ಗಳು ಮನೆ ಖಾಲಿ ಮಾಡಿಸಿದಾಗ ಪೇಂಟ್ ಮಾಡಿಸುತ್ತಾರೆ.
ಹಾಗಾಗಿ ಪೇಂಟ್ ಬಿಸಿನೆಸ್ ಸ್ಟಾರ್ಟ್ ಮಾಡುವುದು ಒಳ್ಳೆಯ ಬಿಸಿನೆಸ್ಸೇ ಸರಿ ಈ ರೀತಿ ಪೇಂಟ್ ಬಿಸಿನೆಸ್ ಆರಂಭ ಮಾಡುವ ಮುನ್ನ ಕೆಲವೊಂದು ಟೆಕ್ನಿಕ್ ಗಳನ್ನು ಇಟ್ಟುಕೊಂಡು ನಂತರ ಬಿಸಿನೆಸ್ ಸ್ಟಾರ್ಟ್ ಮಾಡಿದರೆ ನೀವು ಅಂದುಕೊಂಡಂತೆ ಲಾಭ ಗಳಿಸಬಹುದು. ಅವುಗಳ ಬಗ್ಗೆ ಹೆಚ್ಚು ವಿವರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಪೇಂಟ್ ಬಿಸಿನೆಸ್ ಮಾಡುವುದಾದರೆ ಎರಡು ರೀತಿ ನೀವು ಆರಂಭಿಸಬಹುದು, ಮೊದಲನೆಯದಾಗಿ ಹೋಲ್ ಸೇಲ್ ಅಂಗಡಿಗಳಲ್ಲಿ ನೀವು ದೊಡ್ಡ ಮಟ್ಟಕ್ಕೆ ಪೇಂಟ್ ಗಳನ್ನು ಖರೀದಿಸಿ ತಂದು ನಿಮ್ಮ ಶಾಪ್ ಗಳಲ್ಲಿ ಇಟ್ಟುಕೊಂಡು ಮಾರಾಟ ಮಾಡಬಹುದು. ಈ ರೀತಿ ಮಾಡುವುದರಿಂದ ಹೆಚ್ಚು ಲಾಭ ಸಿಗುತ್ತದೆ ಎಂದು ಹೇಳಲು ಆಗುವುದಿಲ್ಲ.
ಅನ್ನದಾತನಿಗೆ ಸಾಲ ಮನ್ನಾ ಭಾಗ್ಯ ಕರುಣಿಸಿದ ನೂತನ ಸರ್ಕಾರ, ಈಗಲೇ ಅರ್ಜಿ ಸಲ್ಲಿಸಿ.!
ಯಾಕೆಂದರೆ, ಈಗಾಗಲೇ ಮಾರ್ಜಿನ್ ಇಟ್ಟುಕೊಂಡೆ ಹೋಲ್ ಸೇಲ್ ಅಂಗಡಿಯವರು ನಿಮಗೆ ಸೇಲ್ ಮಾಡಿರುತ್ತಾರೆ. ನೀವು ಅದರಲ್ಲಿ ಮಾರ್ಜಿನ್ ಇಟ್ಟುಕೊಂಡೇ ಮಾರಬೇಕಾಗುತ್ತದೆ. ಹಾಗಾಗಿ ಜನ ನೇರವಾಗಿ ಹೋಲ್ಸೇಲ್ ಅಂಗಡಿಗೆ ಖರೀದಿಸಲು ಹೋಗಬಹುದು ಅಥವಾ ಸಣ್ಣಪುಟ್ಟ ಪರ್ಚೇಸ್ ಗೆ ಮಾತ್ರ ನಿಮ್ಮ ಬಳಿ ಬರಬಹುದು. ಹಾಗಾಗಿ ಇದಕ್ಕಿರುವ ಇನ್ನೊಂದು ಮಾರ್ಗದ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.
ಎರಡನೇ ವಿಧಾನ ನೇರವಾಗಿ ಕಂಪೆನಿಗಳಿಂದ ಡೀಲರ್ ಶಿಪ್ ತೆಗೆದುಕೊಂಡು ಪೇಂಟಿಂಗ್ ಶಾಪ್ ಇಡುವುದು. ಈ ರೀತಿ ಮಾಡುವುದರಿಂದ ನಿಮಗೆ ಅಧಿಕ ಲಾಭ ಸಿಗುತ್ತದೆ. ಏಕೆಂದರೆ ಈಗಾಗಲೇ ಮಾರುಕಟ್ಟೆಯಲ್ಲಿ ಹೆಸರು ಮಾಡಿರುವ ಬ್ರಾಂಡ್ ಗಳಾದ ಬರ್ಗರ್, ಏಷ್ಯನ್ ಪೇಂಟ್, ನೆರಾಲಕ್ ಮುಂತಾದ ಕಂಪನಿಗಳ ಡೀಲರ್ ಶಿಪ್ ಪಡೆದರೆ ಈಗಾಗಲೇ ಹೆಸರಿರುವುದರಿಂದ ಹೆಚ್ಚು ಅಡ್ವಟೈಸ್ ಮಾಡುವ ಅಗತ್ಯ ಇಲ್ಲ ಕಸ್ಟಮರ್ ಗಳು ಅದನ್ನೇ ಬಂದು ಕೇಳುತ್ತಾರೆ.
ಜೊತೆಗೆ ಕಂಪನಿಯು ತನ್ನ ಪ್ರಚಾರವನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಪಾಂಪ್ಲೆಟ್ ಗಳು, ಟೂಲ್ ಗಳನ್ನು ಉಚಿತವಾಗಿ ಕೊಡುತ್ತದೆ. ನೀವು ಈ ಬಿಸಿನೆಸ್ ಎಂದು ತೋರಿಸಿ ಬ್ಯಾಂಕ್ ಅಲ್ಲಿ ಲೋನ್ ಕೂಡ ಪಡೆದು ಈ ಬಿಸಿನೆಸ್ ಆರಂಭ ಮಾಡಬಹುದು. ಅದು ಒಂದು ಅನುಕೂಲತೆ ಇದೆ. ಹಾಗಾದ್ರೆ ಪೇಂಟಿಂಗ್ ಬಿಸಿನೆಸ್ ಡೀಲರ್ಷಿಪ್ ಪಡೆಯುವುದು ಹೇಗೆ ಎಂದು ನೋಡುವುದಾದರೆ ಅದಕ್ಕೂ ಮೊದಲು ನೀವು ಕಂಪನಿಗಳ ಕೆಲ ಕಂಡೀಶನ್ ಪೂರೈಸಬೇಕು.
ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ಮುಂದಿನ ತಿಂಗಳು ಉಚಿತ 5kg ಅಕ್ಕಿ 170 ಹಣ ಸಿಗೋದು.!
ಅದೇನೆಂದರೆ ನೀವು ಒಂದು ಶಾಪ್ ಓಪನ್ ಮಾಡಿರಬೇಕು, ಆ ಶಾಪ್ ಅಲ್ಲಿ GST ರಿಜಿಸ್ಟರ್ ಮಾಡಿಸಬೇಕು, ಶಾಪ್ ಹೆಸರಿನಲ್ಲಿ ಯಾವುದಾದರೂ ಹತ್ತಿರದ ಬ್ಯಾಂಕ್ ಅಲ್ಲಿ ಉಳಿತಾಯ ಖಾತೆ ತೆರೆದಿರಬೇಕು. ಡಾಲರ್ ಶಿಪ್ ಪಡೆಯುವ ಕಂಪನಿಗೆ ಐದು ಬ್ಲಾಂಕ್ ಚೆಕ್ ಗಳನ್ನು ಕೂಡ ಕೊಡಬೇಕು.
ಪ್ರತಿ ಕಂಪನಿಗೆ ಕೂಡ ಒಬ್ಬರು ಮಾರ್ಕೆಟಿಕ್ ಹೆಡ್ ಇರುತ್ತಾರೆ. ನೀವು ಅವರನ್ನು ಸಂಪರ್ಕಿಸಿದರೆ ಹೆಚ್ಚಿನ ಮಾಹಿತಿ ಸಿಗುತ್ತದೆ. ನಂತರ ನೀವು ನಿಮ್ಮ ದಾಖಲೆಗಳ ಸಲ್ಲಿಸಿ ಅರ್ಜಿ ಹಾಕುವುದರಿಂದ 10 ದಿನದ ಒಳಗೆ ನಿಮಗೆ ಡೀಲರ್ ಶಿಪ್ ಸಿಗಬಹುದು. ಆಮೇಲೆ ನೀವು 2-3 ಲಕ್ಷ ಬಂಡವಾಳಕ್ಕೆ ಪೇಂಟ್ ತಂದು ಅಂಗಡಿಯಲ್ಲಿ ಇಡಬೇಕು, ಇದರ ಜೊತೆಗೆ ಪೇಂಟಿಂಗ್ ಮಿಷನ್ ಗಳು ಇನ್ನು ಮುಂತಾದ ಕೆಲ ಅವಶ್ಯಕ ವಸ್ತುಗಳು ಹಾಗೂ ಶಾಪ್ ರೆಂಟ್, ಅಡ್ವಾನ್ಸ್ , ಫರ್ನಿಚರೈಸ್ ಮಾಡುವುದು ಇದೆಲ್ಲ ಸೇರಿ ಒಟ್ಟಾರೆಯಾಗಿ 5 ಲಕ್ಷಕ್ಕಿಂತ ಹೆಚ್ಚು ಬಂಡವಾಳ ಬೇಕಾಗುತ್ತದೆ.
ಬಿಜಿನೆಸ್ ಪ್ರಾಫಿಟ್ ನೋಡುವುದಾದರೆ ಸೀಸನ್ ಆಧಾರದ ಮೇಲೆ ಮತ್ತು ನೀವು ಯಾವ ಕಂಪನಿಯ ಡೀಲರ್ ಶಿಪ್ ಪಡೆದಿದ್ದೀರ ನಿಮ್ಮ ಶಾಪ್ ಯಾವ ಏರಿಯಾದಲ್ಲಿ ಇದೆ ಎನ್ನುವುದರ ಆಧಾರದ ಮೇಲೆ ಮತ್ತು ನಿಮಗೆ ಬರುವ ಕಸ್ಟಮರ್ ಗಳ ಆಸಕ್ತಿ ಆಧಾರದ ಮೇಲೆ ಅದು ನಿರ್ಧಾರ ಆಗುತ್ತದೆ.