ಸಾಮಾನ್ಯವಾಗಿ ಮನೆಯಲ್ಲಿರುವಂತಹ ಮಹಿಳೆಯರು ಯಾವುದೇ ಪದಾರ್ಥವನ್ನು ಕೂಡ ಸುಲಭವಾಗಿ ಆಚೆ ಬಿಸಾಡುವುದಿಲ್ಲ ಬದಲಿಗೆ ಅದನ್ನು ಹೇಗೆ ಮತ್ತೆ ಬಳಸಬಹುದು ಎಂದು ಯೋಚಿಸುತ್ತಿರುತ್ತಾರೆ. ಅದೇ ರೀತಿಯಾಗಿ ಹೆಚ್ಚಿನ ಜನ ಹಳೆಯದಾಗಿರುವಂತಹ ಬಟ್ಟೆ ಅದರಲ್ಲೂ ಕಾಟನ್ ಬಟ್ಟೆಗಳನ್ನು ಮನೆ ಸ್ವಚ್ಛ ಮಾಡುವುದಕ್ಕೆ ಅಡುಗೆ ಮನೆಯನ್ನು ಸ್ವಚ್ಛ ಮಾಡುವುದಕ್ಕೆ ಹಳೆಯ ಬಟ್ಟೆಗಳನ್ನು ಉಪಯೋಗಿಸುತ್ತಿರುತ್ತಾರೆ.
ಅದೇ ರೀತಿಯಾಗಿ ಈ ದಿನ ಹಳೆಯ ಟೀ ಶರ್ಟ್ ಅನ್ನು ಹೇಗೆ ನೆಲ ಶುಚಿಗೊಳಿಸುವಂತಹ ಮಾಪ್ ಆಗಿ ಹೇಗೆ ತಯಾರಿಸುವುದು ಅದನ್ನು ತಯಾರಿಸುವುದಕ್ಕೆ ನಾವು ಯಾವುದೆಲ್ಲ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ.
ಟೀ ಶರ್ಟ್ ಎಂದರೆ ಎಲ್ಲಾ ರೀತಿಯ ಟೀ ಶರ್ಟ್ ಗಳು ಸಹ ಇದಕ್ಕೆ ಆಗುವುದಿಲ್ಲ. ನಾವು ನೆಲವನ್ನು ಒರೆಸುವಂತಹ ಸಂದರ್ಭದಲ್ಲಿ ಅದರಲ್ಲಿ ಇರುವಂತಹ ಎಲ್ಲಾ ಕೊಳೆಯನ್ನು ಹೀರಿಕೊಳ್ಳುವ ಹಾಗೂ ನೀರನ್ನು ಬಹಳ ಚೆನ್ನಾಗಿ ಅಬ್ಸರ್ವ್ ಮಾಡುವಂತಹ ಟಿ-ಶರ್ಟ್ ಇದ್ದರೆ ಮಾತ್ರ ಈ ಒಂದು ಮಾಪ್ ತಯಾರಿಸಲು ಸಾಧ್ಯವಾಗುತ್ತದೆ.
ಈ ಸುದ್ದಿ ಓದಿ:-ಹಳೆ ಸೀರೆಯಲ್ಲಿ ಒಂದು ರೂಪಾಯಿ ಖರ್ಚು ಇಲ್ಲದೆ ಡೋರ್ ಮ್ಯಾಟ್ ತಯಾರಿಸಿ
ಅದರಲ್ಲೂ ಕಾಟನ್ ಟೀ ಶರ್ಟ್ ಇದ್ದರೆ ಇನ್ನು ಉತ್ತಮ ಅದರಲ್ಲಿ ಕೊಳೆಯೂ ಸಹ ಸುಲಭ ವಾಗಿ ಹೋಗುತ್ತದೆ ಹಾಗೂ ಅದನ್ನು ಸಹ ಸುಲಭವಾಗಿ ಮಾಡಬಹುದು. ಹಾಗಾದರೆ ಮಾಪ್ ತಯಾರಿಸುವ ಮುಂಚೆ ಟೀ ಶರ್ಟ್ ಅನ್ನು ನಾವು ಹೇಗೆ ಕತ್ತರಿಸಿ ಇಟ್ಟುಕೊಳ್ಳಬೇಕು ಎಂದು ಈಗ ತಿಳಿಯೋಣ.
* ಮೊದಲು ಟಿ-ಶರ್ಟ್ ನಲ್ಲಿ ಇರುವಂತಹ ಎಲ್ಲಾ ಮಂದವಾಗಿರುವ ಬಟ್ಟೆಯನ್ನು ಕತ್ತರಿಸಿ ತೆಗೆಯಬೇಕು ಅಂದರೆ ಟಿ-ಶರ್ಟ್ ಕಾಲರ್ ಸ್ಲೀವ್ಸ್ ನಲ್ಲಿರುವಂತಹ ಮಂದವಾದ ಬಟ್ಟೆ ಹಾಗೂ ಬಟನ್ ಹಾಕುವಂತಹ ಸ್ಥಳದಲ್ಲಿ ಇರುವಂತಹ ಬಟ್ಟೆ ಇವೆಲ್ಲವನ್ನು ಸಹ ಕತ್ತರಿಸಿ ತೆಗೆಯಬೇಕು.
ಆನಂತರ ನಿಮಗೆ ಸುಲಭವಾಗಿರುವಂತಹ ಎರಡು ಲೇಯರ್ ಇರುವಂತ ಎರಡು ಪೀಸ್ ಬಟ್ಟೆ ಸಿಗುತ್ತದೆ ಅದರಲ್ಲಿ ಮೇಲ್ಭಾಗದಲ್ಲಿ ಸ್ವಲ್ಪ ಹಾಗೆ ಬಿಟ್ಟು ಉಳಿದ ಕೆಳಗಡೆ ಭಾಗದಿಂದ ಮೇಲಕ್ಕೆ ಕತ್ತರಿಸಿ ಇಟ್ಟುಕೊಳ್ಳಬೇಕು.
ಈ ಸುದ್ದಿ ಓದಿ:-ಮೊಬೈಲ್‌ನಲ್ಲಿ ದೇವರ ವಾಲ್ ಪೇಪರ್ ಇದ್ರೆ ಹುಷಾರ್.!
ಈ ರೀತಿ ತಯಾರಾದಂತಹ ಎಲ್ಲ ಬಟ್ಟೆಯನ್ನು ಒಂದು ಕಡೆ ಇಟ್ಟುಕೊಂಡು ಮನೆಒರೆಸುವಂತಹ ಮಾಪ್ ಅಂದರೆ ಸ್ಟಿಕ್ ಇದ್ದರೆ ಅದನ್ನು ತೆಗೆದುಕೊಳ್ಳಬೇಕು ಅದಕ್ಕೆ ಮೊದಲೇ ಕತ್ತರಿಸಿ ಇಟ್ಟುಕೊಂಡಂತಹ ಬಟ್ಟೆಯನ್ನು ಸುತ್ತುತ್ತಾ ಕೊನೆಯ ಭಾಗಕ್ಕೆ ಒಂದು ಚಿಕ್ಕ ಮೊಳೆಯನ್ನು ಇಟ್ಟು ಆ ಒಂದು ಸ್ಟಿಕ್ ಗೆ ಹಾಕಬೇಕು.
ಈ ರೀತಿ ಹಾಕುವುದರಿಂದ ಬಟ್ಟೆ ಆ ವೊಂದು ಕಡ್ಡಿಯಲ್ಲಿ ಬಿಗಿಯಾಗಿ ಕೂರುತ್ತದೆ ಹಾಗೂ ಸುತ್ತ ಚಿಕ್ಕದಾಗಿರುವಂತಹ ಮೊಳೆಯನ್ನು ಇದೇ ರೀತಿಯಾಗಿ ಹಾಕಬೇಕು. ಈ ರೀತಿ ಮಾಡುವುದರಿಂದ ಸುಲಭವಾಗಿ ನೀವು ನಿಮ್ಮ ಮನೆಯಲ್ಲಿ ನೆಲ ಒರೆಸುವಂತಹ ಮಾಪ್ ಅನ್ನು ತಯಾರಿಸಿಕೊಳ್ಳಬಹುದು.
ಇದೇ ರೀತಿಯಾಗಿ ಎಷ್ಟೇ ಹಳೆಯ ಬಟ್ಟೆ ಇದ್ದರೂ ಸಹ ನೆಲಒರೆಸುವಂತಹ ಮಾಪ್ ಅನ್ನು ನೀವು ಇನ್ನು ಮುಂದೆ ಮಾರುಕಟ್ಟೆಗಳಲ್ಲಿ ಖರೀದಿಸುವ ಅವಶ್ಯಕತೆ ಇರುವುದಿಲ್ಲ. ಬದಲಿಗೆ ಬಟ್ಟೆಯನ್ನು ಮತ್ತೆ ಉಪಯೋಗಿಸಿ ದಂತಾಗುತ್ತದೆ ಹಾಗೂ ನೀವೇ ನಿಮ್ಮ ಮನೆಯಲ್ಲಿಯೇ ಯಾವುದೇ ಹಣಕಾಸು ಕರ್ಚು ಇಲ್ಲದೆ ತಯಾರಿಸಿದಂತೆಯೂ ಕೂಡ ಆಗುತ್ತದೆ.
ಈ ಸುದ್ದಿ ಓದಿ:-ಹೀಗೆ ಮಾಡಿದರೆ ಒಂದು ಇರುವೆ ಕೂಡ ನಿಮ್ಮ ಮನೆಯಲ್ಲಿ ಬರಲ್ಲ.!
ಆದ್ದರಿಂದ ಮೇಲೆ ಹೇಳಿದ ಈ ವಿಧಾನವನ್ನು ಅನುಸರಿಸುವುದರ ಮೂಲಕ ನೀವು ಮ್ಯಾಪ್ ಅನ್ನು ಸುಲಭವಾಗಿ ನಿಮ್ಮ ಮನೆಯಲ್ಲಿ ತಯಾರಿಸಿಕೊಳ್ಳಬಹುದು. ಈ ರೀತಿ ಪ್ರತಿಯೊಬ್ಬ ಮಹಿಳೆಯು ಕೂಡ ತನ್ನ ಮನೆಯಲ್ಲಿಯೇ ಇಂತಹ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುವುದರಿಂದ ಅನಗತ್ಯವಾಗಿ ಖರ್ಚಾಗುವಂತಹ ಹಣವನ್ನು ಕಡಿಮೆ ಮಾಡಬಹುದು. ಅದು ಅವರಿಗೆ ತುಂಬಾ ಅನುಕೂಲವು ಸಹ ಆಗುತ್ತದೆ ಅದೇ ಹಣವನ್ನು ಬೇರೆ ಕೆಲಸ ಕಾರ್ಯಗಳಿಗೆ ಉಪಯೋಗಿಸ ಬಹುದು.