ಹಳ್ಳಿ ಅಂದ್ಮೇಲೆ ಪ್ರತಿಯೊಬ್ಬರು ಸ್ವಂತ ಮನೆ ಹೊಂದಿರ್ತಾರೆ. ಪಟ್ಟಣ ಪ್ರದೇಶಗಳ ಹಾಗೆ ಬಾಡಿಗೆಗೆ ಇರೋದಿಲ್ಲ. ಸ್ವಂತ ಮನೆ ಇರೋದು ಕಾಲಕ್ಕೆ ತಕ್ಕಂತೆ ಸರ್ಕಾರದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮನೆ ಹೊಂದಿರುವವರು ಅದರ ಖಾತೆಯನ್ನು ಮಾಡಿಸಿರುವುದಿಲ್ಲ ಅಥವಾ ಖಾತೆಯನ್ನು ಬದಲಾವಣೆ ಮಾಡಿಸಿರುವುದಿಲ್ಲ.
ಅದರಂತೆ ಮನೆ ಮಾಲೀಕನ ನಿ.ಧನವಾದ ನಂತರ ಅವನ ಹೆಸರಿನಲ್ಲಿದ್ದ ಮನೆಯನ್ನ ಬೇರೆಯವರ ಹೆಸರಿಗೆ ವರ್ಗಾಯಿಸುವ ಗೋಜಿಗೆ ಯಾರು ಹೋಗುವುದಿಲ್ಲ. ಇದು ಮುಂದೆ ಹಲವಾರು ತೊಂದರೆಗಳಿಗೆ ಕಾರಣವಾಗುತ್ತದೆ. ಹಾಗಾದರೆ, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮನೆಗಳನ್ನು ಈ ಸ್ವತ್ತು ಮಾಡಿಸುವುದು ಹೇಗೆ ಎಂಬುದನ್ನು ಇಂದಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.
ಈ ಸ್ವತ್ತು ಎಂದರೆ, ಆಸ್ತಿಗಳನ್ನ ಗಣಕೀಕರಣದ ಮೂಲಕ ಖಾತೆ ಮಾಡಿಸಿ ಒದಗಿಸುವ ಸೇವೆಯನ್ನು ಸಾಮಾನ್ಯವಾಗಿ ಈ ಸ್ವತ್ತು ಎಂದು ಹೇಳಬಹುದು. ಆಸ್ತಿಗಳಿಗೆ ಈ ಸ್ವತ್ತು ಮಾಡಿಸಬೇಕಾದರೆ ಬೇಕಾಗುವ ದಾಖಲೆಗಳು ಯಾವವು ಎಂದರೆ ಗ್ರಾಮ ಠಾಣಾ ವ್ಯಾಪ್ತಿಯಲ್ಲಿನ ಮನೆಯ ಹಕ್ಕು ಪತ್ರ, ಅದು ಕ್ರಯಾ ಪತ್ರ ಆಗಿರಬಹುದು ಅಥವಾ ಹೊಸದಾಗಿ ಸೃಷ್ಟಿಸಿದ ಮನೆಯ ಪತ್ರ ಆಗಿರಬಹುದು ಅಥವಾ ಮನೆಯ ನೋಂದಣಿ ಪತ್ರ ಆಗಿರಬಹುದು.
ಎರಡನೆಯದಾಗಿ ಅರ್ಜಿದಾರರ ಆಧಾರ್ ಕಾರ್ಡ್ ಹಾಗೂ ಫೋಟೋ ಹಾಗೂ ಮನೆಯ ನಕ್ಷೆಯನ್ನ ಕಡ್ಡಾಯವಾಗಿ ಕೊಡಬೇಕು ಇದರ ಜೊತೆಗೆ ಕಟ್ಟಡದ ವಿದ್ಯುತ್ ಬಿಲ್ ಅಥವಾ ತೆರಿಗೆ ರಶೀದಿ ಹಾಗೂ ಭರ್ತಿ ಮಾಡಿದ ನಮೂನೆ ಇತ್ಯಾದಿ ದಾಖಲೆಗಳನ್ನು ನೀಡಬೇಕು. ಭರ್ತಿ ಮಾಡಿದ ಅರ್ಜಿಯೊಂದಿಗೆ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳನ್ನು ಸೇರಿಸಿ ಗ್ರಾಮ ಪಂಚಾಯಿತಿಗೆ ಸಲ್ಲಿಸಬೇಕು ಸಲ್ಲಿಸಿದ ನಂತರ ರಶೀದಿಯನ್ನು ಮರೆಯದೆ ಪಡೆಯಬೇಕು.
ನಂತರ ಗ್ರಾಮ ಪಂಚಾಯಿತಿಯಲ್ಲಿನ ಕಂಪ್ಯೂಟರ್ ಆಪರೇಟರ್ ಈ ಸ್ವತ್ತು ವೆಬ್ಸೈಟ್ನಲ್ಲಿ ಈ ಮಾಹಿತಿಯನ್ನು ದಾಖಲಿಸುತ್ತಾರೆ. ಇದಾದ ನಂತರ ಪಿ ಡಿ ಓ ದಾಖಲೆ ಹಾಗೂ ಸ್ಥಳದ ಪರಿಶೀಲನೆ ಮಾಡುತ್ತಾರೆ ಇದಾದ ನಂತರ ಪ್ರೆಸೆಂಟ್ ಆಸ್ತಿಗೆ ನಕ್ಷೆ ಇದ್ದಲ್ಲಿ ಆಸ್ತಿಗೆ ಹೊಸ ಸಂಖ್ಯೆಯ ಸಹಿತ ಈ ಸ್ವತ್ತು ಪ್ರಮಾಣ ಪತ್ರವನ್ನು ನೀಡುತ್ತಾರೆ. ಒಂದು ವೇಳೆ ನಕ್ಷೆ ಇಲ್ಲದೆ ಹೋದಲ್ಲಿ ಆಸ್ತಿಯನ್ನು ಅಳತೆ ಮಾಡಿ ಹೊಸದಾಗಿ ನಕ್ಷೆ ರಚಿಸಲು ನೋಟಿಸ್ ಅನ್ನ ಸರ್ವೆ ಇಲಾಖೆಗೆ ಕಳಿಸುತ್ತಾರೆ.
e swathu karnataka
ಈ ಎಲ್ಲ ದಾಖಲೆಗಳನ್ನು ಕೊನೆಯದಾಗಿ ಒಮ್ಮೆ ಪಿಡಿಓ ಪರಿಶೀಲಿಸಿ ಅನುಮೋದನೆ ಮಾಡಿದ ನಂತರ ಈ ಕಾರ್ಯ ಮುಕ್ತಾಯಗೊಳ್ಳುತ್ತದೆ. ಈ ಎಲ್ಲಾ ನಮೂನೆಗಳಿಗೆ ನಮೂನೆ 9 ಮತ್ತು 11 ಎಂದು ಕರೆಯಲಾಗುತ್ತದೆ. ಈ ಎರಡು ದಾಖಲೆಗಳು ನಿಮ್ಮ ಕೈ ಸೇರಿದರೆ ಅದೊಂದು ಕಾನೂನು ಬದ್ಧ ಮನೆ ಪತ್ರ ಎಂದು ಎನಿಸಿಕೊಳ್ಳುತ್ತದೆ.
ಈ ಸ್ವತ್ತು ಮಾಡಿಸುವವರು ಗಮನದಲ್ಲಿಡಬೇಕಾದ ಕೆಲವು ಅಂಶಗಳು ಯಾವುವು ಎಂದು ನೋಡುವುದಾದರೆ,
* ಮೊದಲನೆಯದಾಗಿ ಗ್ರಾಮ ವ್ಯಾಪ್ತಿಯಲ್ಲಿ ಬರುವ ಮನೆಗಳಿಗೆ ಮಾತ್ರ ಈ ಸ್ವತ್ತು ಮಾಡಿಸಲಾಗುತ್ತದೆ.
* ಎರಡನೆಯದಾಗಿ ಹಳ್ಳಿಗಳಲ್ಲಿರುವ ಪ್ರತಿಯೊಂದು ಮನೆಗೂ ಈ ಸ್ವತ್ತು ಮೂಲಕ ಆಸ್ತಿಯನ್ನು ನೋಂದಾವಣೆ ಮಾಡಿಕೊಳ್ಳಬೇಕು. ಏಕೆಂದರೆ, ಈ ಸ್ವತ್ತು ಮಾಡಿಸದೆ ಇದ್ದರೆ ಬ್ಯಾಂಕಿನ ಸಾಲ ಸೌಲಭ್ಯಗಳು ಸಿಗುವುದಿಲ್ಲ. ಜೊತೆಗೆ ಆಸ್ತಿ ವರ್ಗಾವಣೆ ಸಂದರ್ಭದಲ್ಲಿ ಈ ಸ್ವತ್ತು ಕಡ್ಡಾಯವಾಗಿ ಬೇಕಾಗುತ್ತದೆ. ಈ ಸ್ವತ್ತು ಸಕಾಲ ಯೋಜನೆಯ ಅಡಿಯಲ್ಲಿ ಬರುವುದರಿಂದ ನೀವು ಅರ್ಜಿ ಸಲ್ಲಿಸಿದ ಒಂದು ವಾರದ ಒಳಗಾಗಿ ನಿಮ್ಮ ಈ ಸ್ವತ್ತು ಮಾಡಿಸುವ ಕಾರ್ಯ ಪೂರ್ಣಗೊಳ್ಳುತ್ತದೆ.