ಮನೆಗಳಿಗೆ ಅಲಂಕಾರಿಕ ವಸ್ತುವಾಗಿ ಬಳಸುವ ಹೂವಿನ ಹಾರಗಳನ್ನು ಅಂಗಡಿಗಳಲ್ಲಿ ಖರೀದಿಸಲು ಹೋದರೆ ಅದರ ಅಸಲಿ ಬೆಲೆಗಿಂತಲೂ ದುಪ್ಪಟ್ಟು ಹಣ ಹೇಳುತ್ತಾರೆ. ಇದರಿಂದ ಗೃಹಿಣಿಯರು ಬೇಸರಗೊಂಡು ಚೌಕಸಿ ಮಾಡಿ ಸಾಕಾಗಿ ವಾಪಸ್ ಬರುತ್ತಾರೆ. ಅದರ ಬದಲು ಅವರಿಗೆ ಬಿಡುವಿರುವ ಸಮಯದಲ್ಲಿ ಮನೆಯಲ್ಲಿ ಯಾರ ಸಹಾಯವಿಲ್ಲದೆ ಒಬ್ಬರೇ ಕುಳಿತುಕೊಂಡು ಒಂದು ಗಂಟೆಯಲ್ಲಿ ನಿಮ್ಮ ಮನೆಯಲ್ಲಿ ಇರುವ ವಸ್ತುಗಳನ್ನೇ ಬಳಸಿಕೊಂಡು ನಿಮಗೆ ಇಷ್ಟವಾದ ಡಿಸೈನ್ ನೀವೇ ಮಾಡಿಕೊಳ್ಳಬಹುದು.
ಇದರಿಂದ ನೂರಾರು ರುಪಾಯಿಗಳನ್ನು ಕೂಡ ಉಳಿಸಬಹುದು. ಈ ತೋರಣ ಹಾಗೂ ಹಾರಗಳನ್ನು ಮನೆಯಲ್ಲಿ ಮಾಡುವ ವಿಧಾನ ಹೇಗೆ ಎನ್ನುವುದನ್ನು ಈ ಅಂಕಣದಲ್ಲಿ ನಾವು ತಿಳಿಸುತ್ತಿದ್ದೇವೆ. ಇದನ್ನು ಮಾಡಲು ಬೇಕಾಗಿರುವುದು, ಪ್ಲೇನ್ ಪಾಲಿಸ್ಟರ್ ಬಟ್ಟೆ, ಕಾಟನ್ ದಾರ ಹಾಗೂ ಸೂಜಿ ಮತ್ತು ವೈಟ್ ಅಥವಾ ಗೋಲ್ಡ್ ಬಣ್ಣದ ಬೀಡ್ಸ್ ಗಳು. ನೀವು ಪಾಲಿಸ್ಟರ್ ಬಟ್ಟೆಯನ್ನು ಬೇಕಾದರೆ ಅಂಗಡಿಗೆ ಹೋಗಿ ನಿಮ್ಮ ಆಯ್ಕೆಯ ಬಣ್ಣದನ್ನು ಖರೀದಿಸಿ ತರಬಹುದು.
ಇಲ್ಲವಾದಲ್ಲಿ ಮನೆಯಲ್ಲಿ ಇರುವ ಅರಿಶಿಣ ಕುಂಕುಮಕ್ಕೆ ಕೊಡುವ ಬ್ಲೌಸ್ ಪೀಸ್ ಗಳಿದ್ದರೇ ಅದನ್ನೇ ಬಳಸುವುದು ಉತ್ತಮ. ಯಾಕೆಂದರೆ ಖರ್ಚೇ ಇಲ್ಲದೇ ರೆಡಿ ಆಗುತ್ತದೆ. ಅದರಲ್ಲಿ ಒಂದೇ ತರಹದ ಬಣ್ಣಗಳು ಇರುವ ಬ್ಲೌಸ್ ಪೀಸ್ ಗಳನ್ನು ಸೆಲೆಕ್ಟ್ ಮಾಡಿಕೊಳ್ಳಿ ಇದು ತುಂಬಾ ಉದ್ದವಾಗಿ ಇದ್ದಷ್ಟು ನಿಮಗೆ ಕೆಲಸಕ್ಕೆ ಸಮಯ ಕಡಿಮೆ ಹಿಡಿಯುತ್ತದೆ
ಹಾಗಾಗಿ ಆದಷ್ಟು ಉದ್ದವಾಗಿ ಫೋಲ್ಡ್ ಮಾಡಿ 2Cm ಗೆ ಅಳತೆ ಮಾಡಿ ಸ್ಕೇಲ್ ಸಹಾಯದಿಂದ ಲೈನ್ ಎಳೆದು ನೀಟಾಗಿ 2Cm ಗೆ ಬಟ್ಟೆಗಳನ್ನು ಟೇಪ್ ರೀತಿ ಕಟ್ ಮಾಡಿಕೊಳ್ಳಿ.
ಮೊದಲಿಗೆ ನೀವು ಸೆಲೆಕ್ಟ್ ಮಾಡುವ ಬಣ್ಣಗಳ ಮೇಲೆ ಗಮನವಿರಲಿ. ಮನೆ ಡೋರ್ ಗೆ ಹಾಕುವ ಹೂವಿನ ಹಾರಗಳಾದರೆ ಅದು ಹೂವಿನ ಮತ್ತು ಎಲೆಯ ಬಣ್ಣದಲ್ಲಿ ಇದ್ದರೆ ಹೆಚ್ಚು ಲುಕ್ ಕೊಡುತ್ತದೆ. ಹಾಗಾಗಿ ಕೇಸರಿ, ಕೆಂಪು, ಗುಲಾಬಿ, ಹಳದಿ, ಕ್ರೀಮ್ ಈ ಬಣ್ಣಗಳನ್ನು ಸೆಲೆಕ್ಟ್ ಮಾಡಿ. ಜೊತೆಗೆ ತಿಳಿ ಹಸಿರು ಅಥವಾ ಗಾಢ ಹಸಿರು ಈ ರೀತಿಯ ಬಟ್ಟೆಯನ್ನು ಕೂಡ ಕಟ್ ಮಾಡಿಕೊಳ್ಳಿ.
ಗ್ಯಾಸ್ ಸ್ಟವ್ ಉರಿ ಸ್ಲೋ ಆಗಿದ್ರೆ ಈ ವಿಧಾನದಿಂದ ಬರ್ನರ್ ಕ್ಲೀನ್ ಮಾಡಿ.!
ಮಧ್ಯೆ ಇದನ್ನು ಮಿಕ್ಸ್ ಮಾಡಿದರೆ ಕಾಂಬಿನೇಷನ್ ಇನ್ನೂ ಚೆನ್ನಾಗಿ ಕಾಣುತ್ತದೆ. ಎಲ್ಲಾ ಬಟ್ಟೆಗಳನ್ನು ಮಾರ್ಕ್ ಕಟ್ ಮಾಡಿಕೊಂಡು ಮೇಲೆ ಒಂದು ದೀಪ ಅಥವಾ ಮೇಣದಬತ್ತಿ ಸಹಾಯದಿಂದ ಆದರ ತುದಿಗಳನ್ನು ಸುಡಬೇಕು, ಈ ರೀತಿ ಮಾಡುವುದರಿಂದ ಬಟ್ಟೆ ಎಳೆ ಬಿಟ್ಟುಕೊಳ್ಳುವುದಿಲ್ಲ. ಇದಾದ ಮೇಲೆ ಒಂದು ಕಾಟನ್ ದಾರವನ್ನು ತೆಗೆದುಕೊಳ್ಳಿ ಈಗ ನೀವು ಕಟ್ ಮಾಡಿ ಇಟ್ಟುಕೊಂಡಿರುವ ಬಣ್ಣವನ್ನು ಯಾವ ರೀತಿ ಕಾಂಬಿನೇಷನ್ ಮಾಡಬೇಕು ಎನ್ನುವುದನ್ನು ಲೆಕ್ಕಾಚಾರ ಹಾಕಿಕೊಂಡು ಎಮ್ಮಿಂಗ್ ಮಾಡಿ.
ಮೊದಲಿಗೆ ಎಡಗಡೆಗೆ ಫೋಲ್ಡಿಂಗ್ ಬರುವ ಹಾಗೆ ನಂತರ ಬಲಗಡೆಗೆ ಬರುವ ಹಾಗೆ ಚಿಕ್ಕ ನೆರಿಗೆಗಳನ್ನು ಮಾಡಿ ಸೂಜಿಯ ಸಹಾಯದಿಂದ ಬಟ್ಟೆಯನ್ನು ಪೋಣಿಸಬೇಕು. ಆಗ ಎರಡು ಕಡೆ ಫೋಲ್ಡಿಂಗ್ ಬರುವುದರಿಂದ ಅದು ಫ್ಲವರ್ ಶೇಪ್ ಆಗುತ್ತದೆ, ಮಧ್ಯೆ ಮಧ್ಯೆ ಅದನ್ನು ತಿರುಗಿಸಿಕೊಳ್ಳುವುದರಿಂದ ಇನ್ನೂ ಲುಕ್ ಬರುತ್ತದೆ.
ಗರ್ಭಕೋಶ ತೆಗೆದ ನಂತರ ಮಹಿಳೆಯರಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತೆ ಗೊತ್ತ.?
ಆದಷ್ಟು ಬಿಗಿಯಾಗಿ ಪೋಣಿಸಿ ಮತ್ತು ಒಂದು ಕಲರ್ ನಿಂದ ಇನ್ನೊಂದು ಕಲರ್ ಮಧ್ಯೆ ಸಣ್ಣ ಸಣ್ಣ ಬೀಡ್ ಗಳನ್ನು ಬಳಸಿ ಗ್ಯಾಪ್ ಕೊಡಿ ಇದೇ ಮಾದರಿಯಲ್ಲಿ ಗೊಂಡೆಗಳನ್ನು ತಯಾರಿಸಿಕೊಂಡು ಮ್ಯಾಚ್ ಮಾಡಿಕೊಳ್ಳಿ. ಹೊಸ್ತಿಲು ಮೇಲೆ ತೋರಣ ರೀತಿ ಹಾಕಲು, ಸೈಡ್ ಗೆ ಬಿಡಲು ಅಥವಾ ಫೋಟೋಗಳಿಗೆ ಹಾರ ಮಾಡಿಕೊಳ್ಳಲು ಈ ವಿಧಾನ ಬಹಳ ಸುಲಭ. ಒಮ್ಮೆ ಟ್ರೈ ಮಾಡಿ ನೋಡಿ.
https://youtu.be/3vbRmMGXuAg?si=pFKmzZESsQeoXhIB