ನಮ್ಮ ಹಿಂದೂ ಸಂಸ್ಕೃತಿಯ ಪ್ರಕಾರ ಬೆಳಗಿನ ಬ್ರಾಹ್ಮಿ ಮುಹೂರ್ತ ಹಾಗೂ ಸಂಜೆಯ ಗೋಧೂಳಿ ಲಗ್ನವು ಬಹಳ ವಿಶೇಷವಾದದ್ದು. ಎರಡು ಸಮಯವೂ ಅಮೃತ ಘಳಿಗೆಯಾಗಿದ್ದು, ತಾಯಿ ಮಹಾಲಕ್ಷ್ಮಿಯು ಮನೆಗೆ ಬರುವ ಸಮಯ ಎಂದೇ ನಂಬಲಾಗಿದೆ. ಗೋಧೂಳಿ ಲಗ್ನ ಎಂದರೆ ಸಂಜೆ 5:00 ರಿಂದ 7:30ರವರೆಗೆ ಇರುತ್ತದೆ.
ಈ ರೀತಿ ಅದೃಷ್ಟ ದೇವತೆ ಮನೆ ಬರುವ ಸಮಯದಲ್ಲಿ ನಾವು ಗೊತ್ತಿದ್ದೋ, ಗೊತ್ತಿಲ್ಲದೆಯೋ ಕೆಲವು ತಪ್ಪಾದ ಕೆಲಸಗಳನ್ನು ಮಾಡುವುದರಿಂದ ತಾಯಿ ಕೋ’ಪಕ್ಕೆ ಗುರಿಯಾಗುತ್ತೇವೆ. ಅದರಲ್ಲೂ ಸಂಜೆ ಸಮಯದಲ್ಲಿ ಇವುಗಳನ್ನು ಮಾಡುವುದರಿಂದ ದಾ’ರಿ’ದ್ರ್ಯಕ್ಕೆ ಗುರಿಯಾಗುತ್ತೇವೆ ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ಹಾಗಾದರೆ ಯಾವ ಐದು ಕೆಲಸಗಳನ್ನು ಸಂಜೆ ಸಮಯದಲ್ಲಿ ಮಾಡಲೇಬಾರದು ಗೊತ್ತಾ?.
* ಸಂಜೆ ಸಮಯದಲ್ಲಿ ಯಾವುದೇ ಕಾರಣಕ್ಕೂ ಕಸ ಗುಡಿಸಬಾರದು. ಒಂದು ವೇಳೆ ಕಸ ಗುಡಿಸಲೇಬೇಕಾದ ಅನಿವಾರ್ಯತೆ ಇದ್ದರೆ ಪೊರಕೆ ಬದಲು ಒಂದು ಬಟ್ಟೆಯಿಂದ ಕಸಗಳನ್ನು ಒರೆಸಿಕೊಳ್ಳಬೇಕು ಮತ್ತು ಒಂದು ಕಡೆ ಇಟ್ಟು ಮರುದಿನ ಬೆಳಗ್ಗೆ ಅದನ್ನು ಹೊರಗೆ ಹಾಕಬೇಕು ಸಂಜೆ ಸಮಯ ದೀಪ ಹಚ್ಚಿದ ನಂತರ ಕಸ ತೆರೆದು ಹೊರಗೆ ಹಾಕಿದರೆ ತಾಯಿ ಮಹಾಲಕ್ಷ್ಮಿಯನ್ನು ನಾವೇ ಆಚೆ ಕಳಿಸಿದಂತೆ ಆಗುತ್ತದೆ. ಇದರಿಂದ ಕೆಟ್ಟ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.
ಈ ಸುದ್ದಿ ಓದಿ:- ರೈತರಿಗೆ 80% ಸಹಾಯಧನದಲ್ಲಿ ಸೌರ ಪಂಪ್ಸೆಟ್ ಅಳವಡಿಸಿಕೊಳ್ಳಲು ಅರ್ಜಿ ಆಹ್ವಾನ, ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತಾ.?
* ನಮ್ಮ ಪದ್ಧತಿಯ ಪ್ರಕಾರವಾಗಿ ಶುಭದಿನಗಳಂದು ನಾವು ಕೂದಲು ಕತ್ತರಿಸುವುದಿಲ್ಲ ಹಾಗೂ ಉಗುರುಗಳನ್ನು ಕೂಡ ಕತ್ತರಿಸುವುದಿಲ್ಲ. ಸಂಜೆ ಸಮಯವೂ ಕೂಡ ಶುಭಘಳಿಗೆ ಆಗಿದೆ. ಈ ಸಮಯದಲ್ಲಿ ಉಗುರುಗಳನ್ನು ಕತ್ತರಿಸುವುದರಿಂದ ಕೂದಲು ಕತ್ತರಿಸುವುದರಿಂದ ಆ ಗೃಹಣಿಗೆ ದಟ್ಟ ದಾರಿದ್ರ್ಯಗಳು ಬರುತ್ತವೆ ಮತ್ತು ಆ ಕುಟುಂಬಕ್ಕೆ ಅಮಂಗಳವಾಗುತ್ತದೆ ಎಂದು ಹೇಳಲಾಗುತ್ತದೆ. ಮಹಿಳೆಯರು ಮಾತ್ರವಲ್ಲದೆ ಪುರುಷರು ಕೂಡ ಇವುಗಳನ್ನು ಮಾಡಬಾರದು ಅವರಿಗೂ ಕೂಡ ಇಂತಹ ಕೆಟ್ಟ ಪರಿಣಾಮಗಳು ಎದುರಾಗುತ್ತವೆ ಎಂದು ತಿಳಿಸಲಾಗಿದೆ
* ಸಂಜೆ ದೀಪ ಹಚ್ಚಿದ ನಂತರ ಮನೆಯಿಂದ ಕೆಲವು ದ್ರವ್ಯಗಳನ್ನು ಬೇರೆಯವರಿಗೆ ಕೊಡಬಾರದು. ಹಾಲು, ಮೊಸರು, ತುಂಬಿದ ಕೊಡದಲ್ಲಿ ನೀರು, ಅಕ್ಕಿ, ಧಾನ್ಯ, ತುಪ್ಪ, ಬೆಣ್ಣೆ, ಉಪ್ಪು, ಅರಿಶಿಣ ಎಲೆ ಅಡಿಕೆ ಇನ್ನು ಮುಂತಾದ ದ್ರವ್ಯಗಳನ್ನು ಕೂಡ ತಾಯಿ ಮಹಾಲಕ್ಷ್ಮಿ ಸ್ವರೂಪ ಎಂದು ಹೇಳಲಾಗುತ್ತದೆ. ಇವುಗಳನ್ನು ಬೇರೆಯವರಿಗೆ ಕೊಡುವುದರಿಂದ ನಮ್ಮ ಮನೆಯ ಲಕ್ಷ್ಮಿ ಬೇರೆಯವರಿಗೆ ಕಳುಹಿಸಿದ ಕೊಟ್ಟ ರೀತಿ ಆಗುತ್ತದೆ ಆದರೆ ನೀವು ಅಡುಗೆ ಮಾಡಿ ಬೇರೆಯವರಿಗೆ ಆಹಾರ ಪದಾರ್ಥಗಳನ್ನು ಕೊಡಬಹುದು.
* ಮುಸ್ಸಂಜೆ ಸಮಯದಲ್ಲಿ ಮಲಗುವುದು ಕೂಡ ಒಂದು ಕೆಟ್ಟ ರೂಢಿ ಆಗಿದೆ. ತಾಯಿ ಮಹಾಲಕ್ಷ್ಮಿಯು ಮನೆಗೆ ಬರುವ ಸಮಯದಲ್ಲಿ ಮನೆಯನ್ನು ಶುದ್ಧವಾಗಿ ಇಟ್ಟುಕೊಳ್ಳದೆ ಮನೆಯಲ್ಲಿ ದೇವರ ಹೆಸರಲ್ಲಿ ದೀಪ ಹಚ್ಚಿ ಪ್ರಾರ್ಥಿಸುವ ಸಮಯದಲ್ಲಿ ಇದನ್ನು ಬಿಟ್ಟು ಸೋಮಾರಿ ರೀತಿ ಮಲಗಿದ್ದರೆ ಅಂತವರು ಕೂಡ ದೇವಿಯ ಅವಕೃಪೆಗೆ ಪಾತ್ರರಾಗುತ್ತಾರೆ. ಅವರಿಗೆ ಅನಾರೋಗ್ಯ ಸಮಸ್ಯೆಗಳು ಹಾಗೂ ಆರ್ಥಿಕ ಸಮಸ್ಯೆಗಳು ಕಾಡುತ್ತವೆ. ಸಂಜೆ ಸಮಯದಲ್ಲಿ ಆಹಾರ ಸೇವನೆ ಕೂಡ ನಿಷಿದ್ಧ. ಈ ಸಮಯದಲ್ಲಿ ಊಟ ಮಾಡಿದವರಿಗೆ ರಾಕ್ಷಸ ಗುಣಗಳು ಬರುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ಇದನ್ನು ಕೂಡ ತಪ್ಪಿಸಿ.
ಈ ಸುದ್ದಿ ಓದಿ:- ಸಾಲ ಬಾಧೆಯಿಂದ ನರಳುತ್ತಿರುವವರು ಮಂಗಳವಾರ ಈ ಉಪಾಯವನ್ನು ಮಾಡಿದರೆ ಸಾಕು, ಕೋಟಿ ಸಾಲ ಇದ್ದರೂ ತೀರುತ್ತದೆ.
* ಈ ಸಮಯದಲ್ಲಿ ಮನೆಯಲ್ಲಿ ಕೆಟ್ಟದಾಗಿ ಮಾತನಾಡುವುದು, ಜೋರಾಗಿ ಜಗಳ ಆಡುವುದು, ಹೆಣ್ಣುಮಕ್ಕಳು ಕ’ಣ್ಣೀ’ರು ಇರುವುದು ಈ ರೀತಿ ಕೂಡ ಮಾಡಬಾರದು ಈ ರೀತಿ ಮಾಡುವ ಮನೆಗೂ ಕೂಡ ತಾಯಿ ಮಹಾಲಕ್ಷ್ಮಿ ಕಾಲಿಡುವುದಿಲ್ಲ
https://www.youtube.com/live/S230blYffkg?si=J9_RnlxTDYQj5vx5