ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಮುದ್ರಿಕ ಶಾಸ್ತ್ರ ಎನ್ನುವ ವಿಭಾಗವಿದೆ. ಸಾಮುದ್ರಿಕ ಶಾಸ್ತ್ರದಲ್ಲಿ ಮುಖ ಹಾಗೂ ದೇಹದ ಅಂಗಗಳ ಲಕ್ಷಣಗಳನ್ನು ನೋಡಿ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯಬಹುದು ಹಾಗೂ ಭವಿಷ್ಯವನ್ನು ಊಹಿಸಬಹುದು.
ನಮ್ಮ ಭಾರತ ದೇಶದಲ್ಲಿ ಬಹಳ ಹಿಂದಿನಿಂದಲೂ ಕೂಡ ಸಾಮುದ್ರಿಕ ಶಾಸ್ತ್ರಕ್ಕೆ ಹೆಚ್ಚು ಮಹತ್ವ ಕೊಡಲಾಗಿದ್ದು ಮುಖ್ಯವಾಗಿ ಮದುವೆ ಸಂದರ್ಭದಲ್ಲಿ ವಧು ಹಾಗೂ ವರುವಿನ ಆಯ್ಕೆ ಮಾಡುವಾಗ ಈ ರೀತಿ ಸಾಮೂಹಿಕ ಶಾಸ್ತ್ರದ ಕೆಲ ಲಕ್ಷಣಗಳನ್ನು ನೋಡಿ ಅಳೆಯುತ್ತಾರೆ ಹಾಗೂ ಮಕ್ಕಳಿಗೂ ಕೂಡ ಅವರ ಭವಿಷ್ಯವನ್ನು ಬೆಳೆಯುವಾಗ ಅವರ ದೇಹದ ರಚನೆಗಳನ್ನು ನೋಡಿ ಹೇಳುತ್ತಾರೆ.
ಆದರೆ ಇದುವರೆಗೂ ಕೂಡ ಹೆಣ್ಣು ಮಕ್ಕಳಿಗಷ್ಟೇ ಇದು ಅನ್ವಯಿಸುತ್ತದೆ ಎನ್ನುವ ರೀತಿ ಬಿಂಬಿಸಲಾಗಿತ್ತು ಆದರೆ ಸಾಮುದ್ರಿಕ ಶಾಸ್ತ್ರದ ಪ್ರಕಾರ ಪುರುಷರ ಕೆಲ ಲಕ್ಷಣಗಳು ಅವರು ಕೋಟ್ಯಾಧಿಪತಿಯಾಗುವ ಲಕ್ಷಣವನ್ನು, ಅವರು ಜೀವನದಲ್ಲಿ ಯಶಸ್ವಿಗಳಾಗುತ್ತಾರೆ ಎನ್ನುವುದನ್ನು ಹೇಳುತ್ತದೆ. ಅವುಗಳನ್ನು ಕೆಲವು ಪ್ರಮುಖ ಅಂಶಗಳು ಹೀಗಿವೆ.
1. ಯಾವ ಪುರುಷರ ಹಣೆ ಹೆಚ್ಚು ಅಗಲವಾಗಿರುತ್ತದೆ ನಾಲ್ಕು ಬೆರಳುಗಳು ಕೂಡ ಆ ವ್ಯಕ್ತಿಯ ಹಣೆಯಲ್ಲಿ ಇಡಬಹುದಾದಷ್ಟು ಅಗಲವಾಗಿರುತ್ತದೆ ಅಂತಹ ವ್ಯಕ್ತಿಗಳು ಜೀವನದಲ್ಲಿ ಯಶಸ್ವಿ ವ್ಯಕ್ತಿಗಳಾಗುತ್ತಾರೆ, ಅವರು ಬಹಳ ಅದೃಷ್ಟವನ್ನು ಹೊಂದಿರುತ್ತಾರೆ ಅವರು ಅಂದುಕೊಂಡ ಪ್ರಕಾರ ಅವರ ಭವಿಷ್ಯವನ್ನು ರೂಪಿಸಿಕೊಳ್ಳುವ ಸ್ಪಷ್ಟತೆಯನ್ನು ಹೊಂದಿ ಅದೇ ರೀತಿ ಪರಿಸ್ಥಿತಿಗಳ ಸಹಕಾರದಿಂದ ಯಶಸ್ವಿಯಾಗುತ್ತಾರೆ ಎಂದು ಸಾಮೂದ್ರಿಕ ಶಾಸ್ತ್ರ ಹೇಳುತ್ತದೆ. ಆದರೆ ಹಣೆಯು ಸ್ಪಷ್ಟವಾಗಿರಬೇಕು, ಹಣೆಯಲ್ಲಿ ಗಾಯದ ಗುರುತುಗಳಾಗಲಿ, ಗುಳ್ಳೆಗಳಾಗಲಿ, ವಿಕಾರವಾಗಲಿ ಇರಬಾರದು.
2. ಯಾವ ವ್ಯಕ್ತಿಯ ಎದೆ ಭಾಗದಲ್ಲಿ ದಟ್ಟವಾದ ಕೂದಲಗಳನ್ನು ಹೊಂದಿರುತ್ತಾರೆ ಅಂತಹ ವ್ಯಕ್ತಿಗಳು ಕೂಡ ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ಆ ವ್ಯಕ್ತಿಯ ದೇಹವೂ ದುರ್ವಾಸನೆಯಿಂದ ಕೂಡಿರಬಾರದು, ದೇಹವನ್ನು ಆತ ಸ್ವಚ್ಛವಾಗಿಟ್ಟುಕೊಂಡು ಆಕರ್ಷಣೀಯವಾಗಿ ನೋಡಿಕೊಂಡರೆ ಅಂತಹ ವ್ಯಕ್ತಿಗಳು ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎಂದು ಸಾಮುದ್ರಿಕ ಶಾಸ್ತ್ರ ಹೇಳುತ್ತದೆ.
3. ಯಾವ ವ್ಯಕ್ತಿ ಧ್ವನಿ ಜೋರಾಗಿ ಇರುತ್ತದೆ ಹಾಗೂ ಆತ ಹೇಳುವ ಮಾತುಗಳು ಸ್ಪಷ್ಟವಾಗಿರುತ್ತವೆ. ಅಂತಹ ವ್ಯಕ್ತಿಗಳು ಕೂಡ ಜೀವನದಲ್ಲಿ ಬಹಳ ಬೇಗ ಮುಂದೆ ಬರುತ್ತಾರೆ ಮತ್ತು ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸುತ್ತಾರೆ. ಅವರು ಹಣಕಾಸಿನ ವಿಷಯದಲ್ಲಿ ತೊಂದರೆಗಳನ್ನು ಎದುರಿಸುವುದಿಲ್ಲ ಮತ್ತು ಕೊಟ್ಟ ಮಾತಿಗೆ ಬದ್ಧರಾಗಿದ್ದು ನಂಬಿಕೆಗಳಿಗೆ ಅರ್ಹವಾಗಿರುವಂತಹ ವ್ಯಕ್ತಿ ಆಗಿರುತ್ತಾರೆ ಅವರು ಜೀವನದ ಜವಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುವಷ್ಟು ಸಮರ್ಥರಾಗಿರುತ್ತಾರೆ ಎಂದು ಸಾಮುದ್ರಿಕ ಶಾಸ್ತ್ರ ಹೇಳುತ್ತದೆ.
4. ಯಾವ ವ್ಯಕ್ತಿಯ ಕಣ್ಣುಗಳ ಗಾಢ ಕಪ್ಪಾಗಿದ್ದು, ಆಕರ್ಷಣೀಯವಾಗಿರುತ್ತವೆ ಮತ್ತು ಕಣ್ಣಿನ ಸುತ್ತ ಯಾವುದೇ ರೀತಿಯ ಕಲೆಗಳು ಇರುವುದಿಲ್ಲ ಅಂತಹ ವ್ಯಕ್ತಿಗಳು ಕೂಡ ಜೀವನದಲ್ಲಿ ಬಹಳ ಅದೃಷ್ಟ ಹೊಂದಿರುತ್ತಾರೆ ಎಂದು ಸಾಮುದ್ರಿಕ ಶಾಸ್ತ್ರ ಹೇಳುತ್ತದೆ.
5. ಯಾವ ವ್ಯಕ್ತಿಯ ನಗು ಮನಮೋಹಕವಾಗಿರುತ್ತದೆ, ಮನಸ್ಸಿನಿಂದ ಯಾವುದೇ ಕಲ್ಮಶವಿಲ್ಲದೆ ಮನಪೂರ್ವಕವಾಗಿ ನಗುತ್ತಾರೆ. ಅಂತಹ ವ್ಯಕ್ತಿಗಳಿಗೆ ತಾಯಿ ಮಹಾಲಕ್ಷ್ಮಿ ಅನುಗ್ರಹವಾಗುತ್ತದೆ ಎಂದು ಸಹ ಹೇಳಲಾಗುತ್ತದೆ.
6. ಯಾವ ಪುರುಷರು ಮಹಿಳೆಯರಿಗೆ ಹೆಚ್ಚು ಗೌರವ ಕೊಡುತ್ತಾರೆ ಮತ್ತು ಅವರನ್ನು ಪೂಜಾ ಸ್ಥಾನದಲ್ಲಿ ನೋಡುತ್ತಾರೆ ಅಂತಹವರ ಅದೃಷ್ಟ ಸಹ ಬಹಳ ಚೆನ್ನಾಗಿರುತ್ತದೆ, ಅವರಿಗೆ ದೇವಾನುದೇವತೆಗಳ ಆಶೀರ್ವಾದವಿರುತ್ತದೆ ಎಂದು ಸಾಮುದ್ರಿಕ ಶಾಸ್ತ್ರವು ಹೇಳುತ್ತದೆ.
7. ಯಾವ ವ್ಯಕ್ತಿಯ ನಡೆಯುವ ಶೈಲಿಯು ಸರಿಯಾಗಿ ಇರುವುದಿಲ್ಲ ಅಂತಹ ವ್ಯಕ್ತಿಗಳು ನಂಬಿಕೆಗೆ ಅರ್ಹರಾಗಿರುವುದಿಲ್ಲ.
8. ಪುರುಷರ ಕಾಲಿನ ಹೆಬ್ಬೆರಳಿನಿಂದ ಪಕ್ಕದ ಬೆರಳು ಉದ್ದವಾಗಿದ್ದರೆ ಅಂತಹ ವ್ಯಕ್ತಿಗಳು ಕೂಡ ಜೀವನದಲ್ಲಿ ಬಹಳ ಅದೃಷ್ಟಶಾಲಿಗಳಾಗಿರುತ್ತದೆ ಎಂದು ಹೇಳಲಾಗುತ್ತದೆ.