ಮನೆಗೆ ಬಾಗಿಲ ತೋರಣವನ್ನು ತರುವುದೇ ಒಂದು ಚಾಲೆಂಜಿಂಗ್ ಕೆಲಸ. ಯಾಕೆಂದರೆ ನೂರಾರು ಡಿಸೈನ್ ಗಳು, ಹತ್ತಾರು ವಿಭಿನ್ನತೆಗಳು ಯಾವುದನ್ನು ಸೆಲೆಕ್ಟ್ ಮಾಡಬೇಕು ಎಂದು ಗೊತ್ತಾಗದೆ ಬರಿ ಕೈನಲ್ಲಿಯೇ ಮನೆಗೆ ಹಿಂದಿರುಗಿರುತ್ತೇವೆ. ಆಗ ಮನೆಯಲ್ಲಿ ಖಾಲಿ ಕುಳಿತ್ತಿದ್ದಾಗ ನಾವೇ ಯಾಕೆ ಮನೆ ತೋರಣ ರೆಡಿ ಮಾಡಬಾರದು ಎನ್ನುವ ಆಲೋಚನೆಯೂ ಕೂಡ ಬಂದಿರುತ್ತದೆ.
ಮತ್ತು ಹೀಗಂದು ಕೊಂಡಾಗಲೆಲ್ಲಾ ಮತ್ತೆ ಮರು ಕ್ಷಣವೇ ಇವುಗಳನ್ನು ಮಾಡಲು ದುಬಾರಿ ಬೆಲೆಯ ಸಾಮಗ್ರಿಗಳನ್ನು ಖರೀದಿಸಿ ಸಮಯ ಹಾಗೂ ಹಣ ಎರಡನ್ನು ವೇಸ್ಟ್ ಮಾಡಿಕೊಳ್ಳುವ ಬದಲು ಸುಮ್ಮನೆ ಅಂಗಡಿಯಿಂದಲೇ ತರೋಣ ಅಂದುಕೊಂಡು ಹೆಣ್ಣು ಮಕ್ಕಳು ಬೇಸರ ಮಾಡಿಕೊಂಡಿರುತ್ತಾರೆ. ಈ ರೀತಿ ಬೇಜಾರು ಮಾಡಿಕೊಳ್ಳುವುದು ಬೇಡ ನಿಮ್ಮ ಮನೆಯಲ್ಲಿರುವ ಒಂದು ಸೀರೆಯಿಂದ ನೀವೇ ಮನಸಾರೆ ಮನೆ ಬಾಗಿಲ ತೋರಣ ರೆಡಿ ಮಾಡಿ ಸಂತೋಷಪಡಬಹುದು.
ಹೆಣ್ಣು ಮಕ್ಕಳ ಬಳಿ ಸೀರೆಗೇನು ಕೊರತೆ ಅಂದಕೊಂದು ಚಂದಕೊಂದು ಸೀರೆ ಕೊಂಡುಕೊಂಡಿರುತ್ತಾರೆ. ಆದರೆ ಈಗಿನ ಕಾಲದಲ್ಲಿ ಸೀರೆ ಉಡುವುದು ಕಡಿಮೆ ಆಗಿರುವುದರಿಂದ ವರ್ಷಕ್ಕೊಮ್ಮೆ ಕೂಡ ಮೈ ಮೇಲೆ ಹಾಕಿಕೊಳ್ಳದೆ ಕಪಾಟಿನಲ್ಲಿ ಭದ್ರವಾಗಿ ಕೂತಿರುವ ಸೀರೆಗಳ ಸಂಖ್ಯೆ ಬೇಕಾದಷ್ಟಿದೆ.
ಈ ಸುದ್ದಿ ಓದಿ:- ವಿವಾಹ ವಿಳಂಬವಾಗುತ್ತಿದೆಯೇ? ಶೀಘ್ರವಾಗಿ ಕಂಕಣ ಬಲ ಕೂಡಿ ಬರಲು ಈ ಸಿಂಪಲ್ ರೆಮಿಡಿ ಮಾಡಿ ಸಾಕು.!
ಅದನ್ನು ನೋಡಿದಾಗೆಲ್ಲ ಎಷ್ಟು ಒಳ್ಳೆಯ ಕಲರ್ ಸೀರೆ ಎಂದು ಬೇಜಾರ್ ಮಾಡಿಕೊಳ್ಳುವುದು ಬೇಡ ಆ ಸೀರೆಗಳಲ್ಲಿ ಯಾವುದಾದರು ಒಂದನ್ನು ಸೆಲೆಕ್ಟ್ ಮಾಡಿ ನಿಮ್ಮ ಕೈಯಾರೆ ನಿಮ್ಮ ಮನೆಗೆ ಬೇಕಾದ ತೋರಣ ಮಾಡಿ ಸಮಾಧಾನ ಪಟ್ಟುಕೊಳ್ಳಿ. ಒಂದು ಬಾರಿ ಈ ರೀತಿ ಹಾಕಿ ಮನೆಗೆ ಬಂದವರಿಗೆ ನಾನೇ ಮಾಡಿದ್ದು ಎಂದು ಹೇಳುವ ಖುಷಿ ಆನಂದ ಎಷ್ಟೆಂದು ಪದಗಳಲ್ಲಿ ವಿವರಿಸಲು ಆಗದು.
ಹಾಗಾದರೆ ಇದನ್ನು ಮಾಡುವುದಾದರೂ ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಹೀಗಿದೆ. ಮೊದಲು ಸೀರೆ ಸೆಲೆಕ್ಟ್ ಮಾಡಿ, ಆ ಸೀರೆಯಲ್ಲಿ ಸೀರೆ ಒಂದು ಕಲರ್ ಬಾರ್ಡರ್ ಹಾಗೂ ಸೆರಗಿನ ಕಾಂಬಿನೇಷನ್ ಒಂದು ಕಲರ್ ಇದ್ದರೆ ಇನ್ನು ಚೆನ್ನ. ಈ ರೀತಿ ಒಳ್ಳೆಯ ಕಲರ್ ಕಾಂಬಿನೇಷನ್ನಲ್ಲಿ ಸೀರೆ ಸೆಲೆಕ್ಟ್ ಮಾಡಿ ಸೆರಗು ಹಾಗೂ ಬಾರ್ಡರ್ ಗಳನ್ನು ಕತ್ತರಿಸಿ ಇಟ್ಟುಕೊಳ್ಳಿ.
ಈಗ ಇಡೀ ಸೀರೆಯನ್ನು ಎರಡು ಇಂಚು ಅಳತೆಯಲ್ಲಿ ಟೇಪ್ ರೀತಿ ಕಟ್ ಮಾಡಿಕೊಳ್ಳಿ. ಸೆರಗೂ ಹಾಗೂ ಬಾರ್ಡರ್ ಕೂಡ ಇದೇ ರೀತಿ ಎರಡು ಇಂಚು ಅಳತೆಯಲ್ಲಿ ಉದ್ದಕ್ಕೆ ಕಟ್ ಮಾಡಿಕೊಳ್ಳಿ. ಒಂದು ಮೇಣದ ಬತ್ತಿ ಅಥವಾ ದೀಪದ ಸಹಾಯದಿಂದೇ ಕಟ್ ಮಾಡಿರುವ ಸೀರೆಯ ಟೇಪ್ ಎರಡು ತುದಿಗಳನ್ನು ಕೂಡ ಸುಡುತ್ತಾ ಬನ್ನಿ ಇಲ್ಲವಾದಲ್ಲಿ ಸೀರೆಯ ಎರಡು ಪಕ್ಕದಲ್ಲೂ ನೂಲಿನ ಎಳೆಗಳು ಎಳೆದುಕೊಳ್ಳುತ್ತಾ ಹೋಗುತ್ತವೆ ಆಗ ಅಂದ ಕೆಡುತ್ತದೆ.
ಈ ಸುದ್ದಿ ಓದಿ:- ಮನೆಯಲ್ಲಿ ಕಷ್ಟ ಕಳೆದು ಹಣ, ಬಂಗಾರ ಹರಿದು ಬರಬೇಕೆಂದರೆ ಇದೊಂದು ಕೆಲಸ ಮಾಡಿ ಸಾಕು.!
ಈಗ ಕೊನೆಯಲ್ಲಿ ಹ್ಯಾಂಗ್ ಮಾಡಲು ರಿಂಗ್ ರೀತಿ ಕಾಣುವ ಒಂದು ಬಡ್ ತೆಗೆದುಕೊಂಡು ಅದಕ್ಕೆ ಒಂದೈದು ಚೆಂದವಾಗಿ ಕಾಣುವ ಮುತ್ತುಗಳನ್ನು ಅಥವಾ ಸೀರೆ ಸೆರಗಿಗೆ ಕುಚ್ ಹಾಕುವಾಗ ಬಳಸುವ ಬಡ್ ಗಳನ್ನು ಹಾಕಿ ಒಂದು ಸೂಜಿಯ ಸಹಾಯದಿಂದ ಎರಡು ಇಂಚಿನ ಟೇಪ್ ನ್ನು ಒಂದು ಬಾರಿ ಆ ಕಡೆ ಒಂದು ಬಾರಿ ಈ ಕಡೆ ಫೋಲ್ಡ್ ಮಾಡಿ ಹೂವಿನ ಕುಚ್ಚಿನಂತೆ ಮಾಡಿ.
ಇದರ ಮಧ್ಯೆ ಮಧ್ಯದಲ್ಲಿ ಬಾರ್ಡರ್ ಹಾಗೂ ಸೆರಗಿನ ಕಾಂಬಿನೇಷನ್ ಬಳಸಿ ಅಥವಾ ಗೊಂಡೆಗಳಾಗಿ ಮಾಡಿಕೊಳ್ಳಲು ಇದನ್ನು ಬಳಸಿ ಈ ರೀತಿಯಾಗಿ ನೀವು ಒಂದು ಸುಂದರವಾದ ಮನೆ ತೋರಣವನ್ನು ಕೈಯಾರೆ ಕೆಲವೇ ಗಂಟೆಗಳಲ್ಲಿ ಮಾಡಿಕೊಳ್ಳಬಹುದು. ಒಮ್ಮೆ ಟ್ರೈ ಮಾಡಿ ಬಳಿಕ ಹೇಗೆ ಅನಿಸಿತು ಎಂದು ಕಮೆಂಟ್ ಮಾಡಿ ತಿಳಿಸಿ.
https://youtu.be/pjVidQK62Y0?si=U_xA_gj9HGADqLdU