ಮನೆ ಎನ್ನುವುದು ಅದೆಷ್ಟೋ ಜನರ ಕನಸು. ಬೆಳಿಗ್ಗೆಯಿಂದ ಸಂಜೆಯವರೆಗೆ ನಾವು ಯಾವುದೇ ಕಚೇರಿಗಳಲ್ಲಿ ಅಲೆದಾಡಿದರು ಯಾವುದೇ ಪ್ರದೇಶಗಳಿಗೆ ಹೋದರೂ ಅಥವಾ ವಾರಗಟ್ಟಲೆ ತಿಂಗಳುಗಟ್ಟಲೆ ಕೆಲಸ ಅಥವಾ ಇನ್ನಿತರ ಉದ್ದೇಶಗಳಿಂದ ದೂರದ ಪ್ರಯಾಣ ಮಾಡಬೇಕಾದರೂ ಮನಸ್ಸು ಯಾವಾಗಲೂ ಮನೆಯ ಕಡೆ ಯೋಚಿಸುತ್ತಾ ಇರುತ್ತದೆ.
ಕೊನೆಗೆ ಯಾವಾಗ ನಾವು ನಮ್ಮ ಮನೆಗೆ ಹೋಗಿ ನೆಮ್ಮದಿಯಾಗಿ ಕುಳಿತುಕೊಳ್ಳುತ್ತೇವೆ ಎಂದು ಪದೇಪದೇ ಅನಿಸುತ್ತಿರುತ್ತದೆ. ಇದರಿಂದಲೇ ಮನೆ ಎನ್ನುವುದು ಎಷ್ಟು ಮುಖ್ಯವಾದ ಸ್ಥಳ ಎನ್ನುವುದು ಅರಿವಾಗುತ್ತದೆ. ಯಾಕೆಂದರೆ ಮನೆ ನಮಗೆ ಸುಖ ಶಾಂತಿ ನೆಮ್ಮದಿಯನ್ನು ಕೊಡುವ ಸ್ಥಳವಾಗಿದೆ, ಇಂತಹ ಮನೆ ಅದೃಷ್ಟದ ಸಂಕೇತವು ಹೌದು.
ಮನೆಗೆ ಗೃಹಪ್ರವೇಶ ಮಾಡಿ ಮಂಗಳಕರವಾಗಿ ಮನೆಗೆ ಹೋದಾಗ ಆ ಮನೆಯ ಮೂಲಕವೇ ಎಲ್ಲ ರೀತಿಯ ಕಷ್ಟ ಕಾರ್ಪಣ್ಯಗಳು ಕಳೆದು ಅದೃಷ್ಟವೂ ಬರಲು ಆರಂಭವಾಗುತ್ತದೆ. ಹಾಗಾಗಿ ಹೊಸ ಮನೆ ಕಟ್ಟಿ ಮನೆಗೆ ಹೋಗುವ ಗೃಹಪ್ರವೇಶದ ಸಂದರ್ಭದಲ್ಲಿ ಕೆಲ ವಿಷಯಗಳನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು ಮನೆ ಕಟ್ಟಿಸುವಾಗ ವಾಸ್ತು ಪ್ರಕಾರ ಕಟ್ಟಿಸುವಂತೆ ಮತ್ತು ಮನೆಯ ಯಜಮಾನನಿಗೆ ಹೊಂದಿಕೆ ಆಗುವಂತೆ ಶಾಸ್ತ್ರ ನೋಡಿ ಕಟ್ಟಿಸುವಂತೆ ಮನೆ ಗೃಹಪ್ರವೇಶ ಮಾಡುವಾಗಲು ಕೂಡ ಕೆಲ ಪದ್ದತಿಯನ್ನು ಪಾಲಿಸಬೇಕು.
ಈ ಪ್ರಕಾರವಾಗಿ ಸೋಮವಾರ ಮಂಗಳವಾರ ಗುರುವಾರ ಶುಕ್ರವಾರ ಮತ್ತು ಭಾನುವಾರದಂದು ಬ್ರಾಹ್ಮಿ ಮುಹೂರ್ತಗಳಲ್ಲಿ ಮನೆಯ ಗ್ರಹಪ್ರವೇಶ ಮಾಡಬೇಕು ಮನೆಯ ಗೃಹಪ್ರವೇಶ ಮಾಡಿ ಹಾಲು ಉಕ್ಕಿಸಬೇಕು ಈ ಸಂದರ್ಭದಲ್ಲಿ ಮನೆಯ ಸದಸ್ಯರು ಮತ್ತು ಆತ್ಮೀಯರಷ್ಟೇ ಇದ್ದರೆ ಸಾಕು ಇಷ್ಟಾದ ಮೇಲೆ ಬಂಧು-ಬಳಗದವರನ್ನು ಕರೆಸಿ ಶಕ್ತಿ ಅನುಸಾರ ಅವರ ಉಪಚಾರ ಮಾಡಿ.
ಹೀಗೆ ಮನೆಯ ಪ್ರವೇಶ ಮಾಡಬೇಕಾದಾಗ ಮೊದಲು ಮನೆಗೆ ಗೋವನ್ನು ಕರೆದುಕೊಂಡು ಪ್ರವೇಶ ಮಾಡಿಸಬೇಕು ಗೋವು ಬಹಳ ಸಾಧು ಪ್ರಾಣಿ ಮತ್ತು ಐಶ್ವರ್ಯದ ಸಂಕೇತವಾಗಿದೆ. ಕೋಟ್ಯಾನು ಕೋಟಿ ದೇವತೆಗಳು ಕೂಡ ಗೋವಿನಲ್ಲಿ ನೆಲೆಸುತ್ತಾರೆ ಮತ್ತು ಇದು ಹಿಂದೂಗಳ ಬಾಗಿಲಿಗೆ ಪವಿತ್ರವಾದ ಭಾವನೆಯಾಗಿದೆ. ಗೋವಿನ ಪ್ರವೇಶ ಮಾಡಿದ ಮೇಲೆ ಮನೆಯ ಒಡತಿಯು ಮನೆ ಪ್ರವೇಶ ಮಾಡಬೇಕು.
ಆಕೆ ತುಂಬಿದ ಕೊಡದೊಂದಿಗೆ ಸಕಾರಾತ್ಮಕವಾಗಿ ಭಗವಂತನನ್ನು ಪ್ರಾರ್ಥಿಸುತ್ತಾ ಮನೆ ಒಳಗೆ ಹೋಗಬೇಕು, ನಂತರ ಆಕೆಯ ಪತಿ ಗಣಪತಿಯನ್ನು ಹಿಡಿದುಕೊಂಡು ಆಕೆಯನ್ನು ಹಿಂಬಾಲಿಸಬೇಕು ಮತ್ತು ಮಕ್ಕಳು ಐಶ್ವರ್ಯ ಸೂಚಿಸುವ ದ್ರವ್ಯಗಳನ್ನು ತೆಗೆದುಕೊಂಡು ಮನೆಗೆ ಪ್ರವೇಶ ಮಾಡಬೇಕು. ಕೊನೆಯಲ್ಲಿ ಬಂಧುಗಳು ಹಾಗೂ ಸ್ನೇಹಿತರು ಮನೆಯ ಪ್ರವೇಶ ಮಾಡಬೇಕು.
ಮನೆ ಪ್ರವೇಶದ ವೇಳೆ ಮನೆಯ ಒಡೆಯ ಹಾಗೂ ಒಡತಿ ತೆಂಗಿನ ಕಾಯಿ, ಅರಿಶಿಣ, ಬೆಲ್ಲ, ಅಕ್ಕಿ, ಹಾಲನ್ನು ತಮ್ಮೊಂದಿಗೆ ತೆಗೆದುಕೊಂಡು ಮನೆ ಪ್ರವೇಶ ಮಾಡಬೇಕು. ಈ ರೀತಿ ಗೃಹಪ್ರವೇಶ ಮಾಡಿದಾಗ ಅವರು ಅಂದುಕೊಂಡಂತೆ ಆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯಿಂದ ಮತ್ತು ಅಷ್ಟೈಶ್ವರ್ಯಗಳನ್ನು ಪಡೆದು ಬದುಕುತ್ತಾರೆ ಆ ಮನೆಗೆ ಎಂತಹ ಕ’ಷ್ಟಗಳು ಬರುವುದಿಲ್ಲ, ಧನ ಧಾನ್ಯ ಐಶ್ವರ್ಯಗಳು ಸಮೃದ್ಧಿ ಆಗುತ್ತದೆ.
ಸ್ವಂತ ಮನೆ ಮಾತ್ರವಲ್ಲದೆ ಬಾಡಿಗೆ ಮನೆಗೆ ಹೋಗುವವರು ಕೂಡ ಬಾಡಿಗೆ ಮನೆಗೆ ಹೋಗುವ ಮುನ್ನ ಮನೆಯಲ್ಲಿ ಹಾಲು ಉಕ್ಕಿಸುತ್ತಾರೆ. ಅವರು ಸಹಾ ಶುಭದಿನವನ್ನು ನೋಡಿ ಶುಭ ಮುಹೂರ್ತದಲ್ಲಿ ಸಾಧ್ಯವಾಗದೇ ಇದ್ದರೆ ಬ್ರಾಹ್ಮಿ ಮುಹೂರ್ತದಲ್ಲಿ ಹಾಲು ಉಕ್ಕಿಸಿ ನಂತರ ಅವರ ಸಾಮಗ್ರಿಗಳನ್ನು ಶಿಫ್ಟ್ ಮಾಡಿಕೊಳ್ಳಬೇಕು. ಮತ್ತು ಈ ರೀತಿ ಬಾಡಿಗೆ ಮನೆಗೆ ಹೋಗುವಾಗ ಹೊಸ ಪೊರಕೆ, ಉಪ್ಪು, ಬೇಳೆಕಾಳು, ಅರಿಶಿಣ ಮತ್ತು ಕುಂಕುಮ ಮುಂತಾದವುಗಳನ್ನು ಖರೀದಿಸಿ ತೆಗೆದುಕೊಂಡು ಹೋಗಬೇಕು.