ಮನೆಯಲ್ಲಿ ದುಡ್ಡು ಇಡುವಂತಹ ಬೀರು ಆಗಿರಬಹುದು ಅಥವಾ ಹಣಕಾಸು ಇಡುವಂತಹ ಪೆಟ್ಟಿಗೆ ಆಗಿರಬಹುದು ಈ ದಿಕ್ಕಲಿ ಇಟ್ಟಿದ್ದೆ ಆದಲ್ಲಿ ಸಾಕ್ಷಾತ್ ಲಕ್ಷ್ಮಿ ಹಾಗೂ ಕುಬೇರ ದೇವನ ಅನುಗ್ರಹದಿಂದ ವಿಶೇಷವಾದಂತಹ ಬದಲಾವಣೆಗಳು ಉಂಟಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಯಾವ ರೀತಿಯಾಗಿ ಯಾವ ದಿಕ್ಕಿಗೆ ಹಣಕಾಸನ್ನು ಇಡಬೇಕು ಹಾಗೂ ಹಣಕಾಸು ಇಡುವಂತಹ ಬೀರುವನ್ನು ಇಟ್ಟ ಮೇಲೆ ಯಾವ ಕೆಲವು ನಿಯಮಗಳನ್ನು ಅನುಸರಿಸಬೇಕು ಎನ್ನುವುದನ್ನು ಈ ದಿನ ತಿಳಿಯೋಣ. ವಾಸ್ತು ಶಾಸ್ತ್ರಗಳಲ್ಲಿ ಪ್ರಧಾನವಾಗಿರುವಂತಹ ದಿಕ್ಕುಗಳು ಪೂರ್ವ ಪಶ್ಚಿಮ ಉತ್ತರ ಹಾಗೂ ದಕ್ಷಿಣ. ಲಕ್ಷ್ಮಿ ಕಟಾಕ್ಷ ಸಿಗಬೇಕು ಹಾಗೂ ಮನೆಯಲ್ಲಿ ಇರುವಂತಹ ಹಣಕಾಸಿನ ಸಮಸ್ಯೆಗಳು ಬಗೆಹರಿಯಬೇಕು.
ನಾವು ಮನೆಯಲ್ಲಿ ಇಟ್ಟಿರುವಂತಹ ಬೀರುವಿನಿಂದ ಅದೃಷ್ಟ ಎನ್ನುವುದು ಪ್ರಾಪ್ತಿಯಾಗಬೇಕು ಎಂದರೆ ಈ ಒಂದು ವಿಚಾರವನ್ನು ನೀವು ತಲೆಯಲ್ಲಿ ಇಟ್ಟುಕೊಳ್ಳಬೇಕು. ಹಾಗಾಗಿ ಯಾರೆಲ್ಲ ಮನೆಯಲ್ಲಿ ಬೀರುವನು ಯಾವ ದಿಕ್ಕಿನಲ್ಲಿ ಇಟ್ಟಿದ್ದೀರಿ ಹಾಗೇನಾದರೂ ವಿರುದ್ಧ ದಿಕ್ಕಿನಲ್ಲಿ ಇಟ್ಟಿದ್ದರೆ ಅದನ್ನು ಈಗಲೇ ಸರಿಪಡಿಸಬೇಕು ಹಾಗಾದರೆ ಆದಿಕ್ಕು ಯಾವುದು ಹಾಗೂ ಅದರ ಒಂದು ವಿಶೇಷತೆಗಳು ಏನು ಹಾಗೂ ಅದರಿಂದ ಆಗುವ ಲಾಭಗಳೇನು ನಷ್ಟಗಳೇನು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈಗ ತಿಳಿಯೋಣ.
* ನೀವು ಮನೆಯಲ್ಲಿ ಬೀರು ಇಡಬೇಕಾದರೆ ಮನೆಯ ನೈರುತ್ಯ ದಿಕ್ಕಿನಲ್ಲಿ ಇಡಬೇಕು. ಹಾಗೂ ಆ ಬೀರುವನ್ನು ತೆಗೆದರೆ ಅದರ ಮುಖ ಉತ್ತರ ದಿಕ್ಕನ್ನು ನೋಡಬೇಕು. ಅಂದರೆ ಕುಬೇರನ ದಿಕ್ಕಿಗೆ ಮುಖವನ್ನು ಮಾಡಿ ಆ ಒಂದು ಬಾಗಿಲನ್ನು ತೆರೆದಾಗ ವಿಶೇಷವಾಗಿ ಕುಬೇರ ದೇವನ ಅನು ಗ್ರಹ ಸಿಗುತ್ತದೆ. ಯಾವ ಜಾಗ ಖಾಲಿ ಇರುತ್ತದೆಯೋ ಆ ಒಂದು ಜಾಗ ದಲ್ಲಿ ಕುಬೇರ ದೇವ ಬಂದು ಸೇರುತ್ತಾನೆ.
ಅದೇ ರೀತಿಯಾಗಿ ನೀವು ಬೀರುವನ್ನು ತೆರೆದಾಗ ಉತ್ತರ ದಿಕ್ಕಿಗೆ ಬಾಗಿಲು ತೆರೆದುಕೊಂಡಾಗ ಬೇರೆ ದೇವನ ಅನುಗ್ರಹ ಆ ಒಂದು ಜಾಗಕ್ಕೆ ಬಂದು ಸೇರುತ್ತದೆ. ಹಾಗಾಗಿ ಈ ಒಂದು ಕಾರಣಕ್ಕಾಗಿಯೇ ನೀವು ನಿಮ್ಮ ಮನೆಯಲ್ಲಿ ಬೀರುವನ್ನು ನೈರುತ್ಯ ದಿಕ್ಕಿಗೆ ಇಡುವುದು ತುಂಬಾ ಒಳ್ಳೆಯದು.
ಹಾಗೇನಾದರೂ ನೀವು ಬೀರುವನ್ನು ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ ನಿಮ್ಮ ಬೀರುವಿನಲ್ಲಿರುವಂತಹ ಹಣ ನೀರು ಹರಿದುಕೊಂಡು ಹೋಗುವ ಹಾಗೆ ಖಾಲಿಯಾಗುತ್ತದೆ ನೀವು ಎಷ್ಟೇ ಪ್ರಯತ್ನ ಪಟ್ಟರೂ ಹಣಕಾಸನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಈಶಾನ್ಯ ದಿಕ್ಕಿಗೆ ಅಧಿಪತಿ ಜಲದೇವ ಆದ್ದರಿಂದ ನೀವೇನಾದರೂ ಈಶಾನ್ಯ ದಿಕ್ಕಿನಲ್ಲಿ ಬೀರು ಇಟ್ಟಿದ್ದರೆ ಅದನ್ನು ಈಗಲೇ ಬದಲಾಯಿಸಿ.
ಅದೇ ರೀತಿಯಾಗಿ ಇನ್ನು ಕೆಲವೊಂದಷ್ಟು ಜನ ಆಗ್ನೇಯ ದಿಕ್ಕಿಗೆ ಬೀರುವನ್ನು ಇಟ್ಟಿರುತ್ತಾರೆ. ಆದರೆ ಆಗ್ನೇಯ ದಿಕ್ಕಿನ ಅಧಿಪತಿ ಅಗ್ನಿ ದೇವ ಹೌದು ಸೂರ್ಯ ಯಾವ ರೀತಿಯಾಗಿ ಸುಡುತ್ತಾನೋ ಅದೇ ರೀತಿ ಯಾಗಿ ನಾವೇನಾದರೂ ಆ ದಿಕ್ಕಿನಲ್ಲಿ ಬೀರುವನ್ನು ಇಟ್ಟಿದ್ದರೆ ಅದರಲ್ಲಿ ಇರುವಂತಹ ಹಣಕಾಸು ಬೆಲೆ ಬಾಳುವಂತಹ ಚಿನ್ನ ಎಲ್ಲವೂ ಕೂಡ ಸುಟ್ಟು ಹೋಗುತ್ತದೆ ಎನ್ನುವುದರ ಅರ್ಥ ಇದಾಗಿದೆ.
ಆದ್ದರಿಂದ ಆಗ್ನೇಯ ದಿಕ್ಕಿನಲ್ಲಿಯೂ ಕೂಡ ಯಾವುದೇ ಕಾರಣಕ್ಕೂ ಬೀರುವನ್ನು ಇಡಬೇಡಿ. ಹಾಗೂ ಇನ್ನೂ ಕೆಲವೊಂದಷ್ಟು ಜನ ವಾಯುವ್ಯ ದಿಕ್ಕಿಗೆ ಬೀರುವನು ಇಟ್ಟಿರುತ್ತಾರೆ. ಆದರೆ ವಾಯುವ್ಯ ದಿಕ್ಕಿನ ಅಧಿಪತಿ ವಾಯುದೇವ ಹಾಗೇನಾದರೂ ನೀವು ವಾಯುವ್ಯ ದಿಕ್ಕಿನಲ್ಲಿ ಹಣಕಾಸನ್ನು ಇಟ್ಟರೆ ವಾಯು ಹೇಗೆ ಎಲ್ಲಾ ಕಡೆಯೂ ಹಬ್ಬುತ್ತದೆಯೋ ಅದೇ ರೀತಿ ನಿಮ್ಮ ಹಣಕಾಸು ಕೂಡ ಒಂದು ಕಡೆ ನೆಲೆಯಾಗುವುದಿಲ್ಲ ಒಂದಲ್ಲ ಒಂದು ರೀತಿಯಾಗಿ ಹಣ ಖರ್ಚಾಗುತ್ತ ಹೋಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.