ತಂದೆ ಅಥವಾ ತಾತನ ಹೆಸರಿನಲ್ಲಿ ಹೆಸರುಗಳು ನೊಂದವಾಣಿಯಾಗಿರುತ್ತದೆ ಆದರೆ ಅವರು ಮರಣ ಹೊಂದಿದ್ದರೆ ಅದನ್ನ ಮನೆಯ ಸದಸ್ಯರ ಹೆಸರಿಗೆ ಹೇಗೆ ಪರಿವರ್ತನೆ ಮಾಡಬೇಕು ಎನ್ನುವುದನ್ನು ಅದನ್ನು ಹೇಗೆ ಬದಲಾಯಿಸಿಕೊಳ್ಳಬಹುದು ಎಂದು ತಿಳಿಯೋಣ.
ನಿಮ್ಮ ಮನೆಯಲ್ಲಿ ಇರುವ ವಿದ್ಯುತ್ ಕರೆಂಟ್ ಮೀಟರ್ ಸಂಖ್ಯೆ(Electric current meter) ನಿಮ್ಮ ತಾತ ಅಥವಾ ನಿಮ್ಮ ತಂದೆಯ ಹೆಸರಿನಲ್ಲಿದ್ದರೆ ಅಕಸ್ಮಾತಾಗಿ ಅವರು ಮರಣ ಹೊಂದಿದರೆ, ಆ ಮೀಟರ್ ಸಂಖ್ಯೆಯನ್ನು ಮನೆಯ ಹಿರಿಯ ಸದಸ್ಯರ ಹೆಸರಿಗೆ ಮಾಡಿಸಿಕೊಳ್ಳಬೇಕಾಗುತ್ತದೆ. ಹಾಗಾದರೆ, ವಿದ್ಯುತ್ ಮೀಟರ್ ಅನ್ನು ನಿಮ್ಮ ಹೆಸರಿಗೆ ಹೇಗೆ ಮಾಡಿಕೊಳ್ಳಬೇಕು. ಅದಕ್ಕೆ ಬೇಕಾದ ಆಧಾರಗಳು ಏನು ಮತ್ತು ಯಾವ ಅರ್ಜಿಯನ್ನು ಅಪ್ಲೈ ಮಾಡಬೇಕು ಯಾರಿಗೆ ಕೊಡಬೇಕು ಎಂದು ಇಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.
ತಂದೆ ಅಥವಾ ತಾತನ ಹೆಸರಲ್ಲಿ ವಿದ್ಯುತ್ ಕಲೆಕ್ಷನ್ ಇದ್ದರೆ ಅದನ್ನ ಒಂದಲ್ಲ ಒಂದು ದಿನ ಬದಲಾವಣೆ ಮಾಡಿಕೊಳ್ಳಲೇಬೇಕು. ವಿದ್ಯುತ್ ಮೀಟರ್ ಕಲೆಕ್ಷನ್ ಗೆ ನಾವು ವರ್ಗಾವಣೆ ಮಾಡಬೇಕು ಅಂದರೆ ಅಗತ್ಯವಾಗಿ ದಾಖಲೆಗಳು ಬೇಕು.
ವಿದ್ಯುತ್ ಕರೆಂಟ್ ನ ಹೆಸರು ಬದಲಿಸಲು ಬೇಕಾದ ದಾಖಲೆಗಳು.
ಯಾರು ಮೀಟರ್ ವರ್ಗಾವಣೆ ಮಾಡಿಕೊಳ್ಳಬೇಕು ಎನ್ನುತ್ತೀರ ಅವರು ನಿಮ್ಮ ಆಧಾರ್ ಕಾರ್ಡ್(Aadhar Card ) ಮತ್ತು ರೂ.200 ರ ಸ್ಟ್ಯಾಂಪ್ ಪೇಪರ್(Stamp Paper) ಮೇಲೆ ಒಪ್ಪಿಗೆ ಪತ್ರ ಬರೆಯಬೇಕು. ಮ.ರಣ ಹೊಂದಿದ ವ್ಯಕ್ತಿಯ ಮರಣ ಪತ್ರ(Death Certificate ) ಬೇಕಾಗುತ್ತದೆ. ನಂತರ ಇದಕ್ಕೆ ಬೇಕಾಕ ಪತ್ರ ಸಹ ಬೇಕಾಗುತ್ತದೆ. ನಂತರ ನೀವು ಇಷ್ಟೆಲ್ಲ ದಾಖಲೆಗಳನ್ನು ತೆಗೆದುಕೊಂಡ ಮೇಲೆ ಅರ್ಜಿ ಬರೆಯಬೇಕಾಗುತ್ತದೆ. ನಿಮ್ಮ ತಂದೆ ಅಥವಾ ತಾತನ ಹೆಸರಿನಲ್ಲಿರುವ ಮೀಟರ್ ಕನೆಕ್ಷನ್ (Meter connection) ಅನ್ನು ನಿಮ್ಮ ಹೆಸರಿಗೆ ಮಾಡಿಕೊಳ್ಳಬೇಕೆಂದರೆ ಇವೆಲ್ಲಾ ದಾಖಲೆಗಳು ಖಂಡಿತವಾಗಿಯೂ ಬೇಕೇ ಬೇಕು.
ಹೌದು, ಆಧಾರ್ ಕಾರ್ಡ್ ಮತ್ತು 200 ರುಪಾಯಿ ನ ಸ್ಟಾಪ್ ಪೇಪರ್ ನಿಮ್ಮ ತಂದೆ ಅಥವಾ ತಾತನ ಮರಣ ಪ್ರಮಾಣ ಪತ್ರ, ಒಂದು ಅರ್ಜಿಯನ್ನು ಬರೆಯಬೇಕು ಅದನ್ನು ಸ್ಟಾಂಡ್ ಪೇಪರ್ ಗಳಲ್ಲಿ ಬರೆಯಬೇಕು. ನೀವು ಆ ಸ್ಟ್ಯಾಂಡ್ ಪೇಪರ್ ನಲ್ಲಿ ನನ್ನ ತಂದೆ ಅಥವಾ ತಾತನ ಹೆಸರಿನಲ್ಲಿ ವಿದ್ಯುತ್ ಮೀಟರ್ ಅನ್ನು ಮಾಡಲಾಗಿತ್ತು. ಆದರೆ, ಅವರು ಮರಣ ಹೊಂದಿರುವ ಕಾರಣ ನನ್ನ ಹೆಸರಿಗೆ ವರ್ಗಾವಣೆ ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ಬರೆಯಬೇಕು.
ಒಪ್ಪಿಗೆ ಪತ್ರದಲ್ಲಿ ವಿಷಯವಾಗಿ ವಿದ್ಯುತ್ ಕನೆಕ್ಷನ್ ವರ್ಗಾವಣೆ ಅಥವಾ ಹೆಸರು ಬದಲಾವಣೆ ಕುರಿತು ಆ ಪತ್ರದಲ್ಲಿ ನಿಮ್ಮ ಹೆಸರನ್ನು ಬರೆಯಬೇಕು ಅನಂತ ಕಲೆಕ್ಷನ್ ನಲ್ಲಿರುವ ಹೆಸರನ್ನು ಬರೆದು ನಂತರ ನಿಮ್ಮ ಹೆಸರನ್ನು ಬರೆದು ಗ್ರಾಹಕರ ಸಂಖ್ಯೆಯನ್ನು ಬರೆದು, ನಿಮ್ಮ ತಂದೆ ಯಾವಾಗ ಮ.ರಣ ಹೊಂದಿದ್ದಾರೆ ಇಲ್ಲವೇ ಅವರ ಒಪ್ಪಿಗೆ ಇದೆ ಎಂಬುದನ್ನು ಬರೆಯಬೇಕು. ನಂತರ ಮೇಲಿನ ವಿಷಯಗಳು ಸಂಬಂಧಿಸಿದ ನನ್ನ ಹೆಸರು ಬದಲಾಯಿಸಿ ಕೊಡಿ ಎಂಬುದನ್ನು ಸ್ಪಷ್ಟಪಡಿಸಿ.
ನೀವು ಈ ಎಲ್ಲಾ ದಾಖಲಾತಿಗಳನ್ನು ಮೆಸ್ಕಾಂ ಅಥವಾ ವಿದ್ಯುತ್ ಗೆ ಸಂಬಂಧಿಸಿದಂತೆ ಹತ್ತಿರದಲ್ಲಿರುವವರಿಗೆ ಇದನ್ನ ನೀಡಬೇಕು. ಅಲ್ಲಿರುವ ಅಧಿಕಾರಿಗಳಿಗೆ ಈ ದಾಖಲೆಗಳನ್ನು ನೀಡಿದ ನಂತರ ಅಲ್ಲಿರುವ ಕಂಪ್ಯೂಟರ್ ಆಪರೇಟರ್ ಅವರು ಇದನ್ನ ಪರಿಶೀಲಿಸುತ್ತಾರೆ. ಪರಿಶೀಲಿಸಿದ ನಂತರ ನಿಮ್ಮ ಹೆಸರನ್ನು ಬದಲಾಯಿಸಿಕೊಳ್ಳಲು ಸಾಧ್ಯವಾಗುತ್ತದೆ. ತಂದೆಯ ಹೆಸರಿನಲ್ಲಿದ್ದರೆ ಅವರೇನಾದರೂ ಮರಣ ಹೊಂದಿದ್ರೆ ಮರಣ ಪತ್ರ ಇಲ್ಲವೇ ಜೀವಂತವಾಗಿದ್ದರೆ ಅವರ ಒಪ್ಪಿಗೆ ಪತ್ರ ಅಗತ್ಯವಾಗಿರಲೇಬೇಕು.
ವಿದ್ಯುತ್ ಬಿಲ್ ಬಾಕಿ ಇರುವಂತದ್ದನ್ನ ಎಂದಿಗೂ ಸಹ ಉಳಿಸಿಕೊಂಡಿರಬಾರದು. ಸದಸ್ಯರು ಸರಳವಾಗಿ ಅರ್ಜಿಯನ್ನು ಹಾಕಿ ತಮ್ಮ ಹೆಸರನ್ನು ವರ್ಗಾವಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ರೀತಿ ಮಾಡುವ ಮೂಲಕ ನಿಮ್ಮ ಹೆಸರನ್ನು ಬದಲಾವಣೆ ಮಾಡಿಕೊಂಡು ಸಾಧ್ಯವಾಗುತ್ತದೆ.
ಕೊನೆಯದಾಗಿ ನೀವು ಅರ್ಜಿಯ ಜೊತೆಗೆ ಮೇಲಿರುವ ಎಲ್ಲಾ ದಾಖಲೆಗಳನ್ನು ದಾಖಲಿಸಿ ನಿಮ್ಮ ಮನೆಗೆ ಹತ್ತಿರದಲ್ಲಿರುವ ವಿದ್ಯುತ್ ವಿತರಣಾ ಕೇಂದ್ರಕ್ಕೆ(Power distribution station) ಹೋಗಿ ಅಲ್ಲಿ ಅರ್ಜಿ ಕೊಟ್ಟು ನೀವು ಒಂದು ರಶೀದಿಯನ್ನು ಪಡೆದುಕೊಳ್ಳಿ. ಇಷ್ಟು ಮಾಡಿದ ಮೇಲೆ ನೀವು ಕೊಟ್ಟಿರುವ ದಾಖಲೆಗಳನ್ನು ಕಚೇರಿಯಲ್ಲಿರುವ ಕಂಪ್ಯೂಟರ್ ಆಪರೇಟರ್ ಅವರು ದಾಖಲಿಸಿ, ಪರಿಶೀಲಿಸಿ ವರ್ಗಾವಣೆ ಮಾಡುತ್ತಾರೆ. ಈ ರೀತಿ ಮಾಡಿದರೆ, ನಿಮ್ಮ ತಂದೆ ಅಥವಾ ತಾತನ ಹೆಸರಿನಲ್ಲಿರುವ ವಿದ್ಯುತ್ ಮೀಟರ್ ವರ್ಗಾವಣೆ ಆಗುತ್ತದೆ.