ಕೇಂದ್ರ ಸರ್ಕಾರವು ಇಂತಹ ಹಲವಾರು ಸ್ಕೀಮ್ ಗಳನ್ನು ತಂದಿದೆ. ಅದರಲ್ಲಿ ಗ್ರಾಮೀಣ ಭಾಗದ ಜನರಿಗೂ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ಜೊತೆಗೆ ದೇಶದಾದ್ಯಂತ ಸುಲಭವಾಗಿ ವಿಸ್ತರಿಸುವ ಉದ್ದೇಶದಿಂದ ಪೋಸ್ಟ್ ಆಫೀಸ್ ಅಲ್ಲಿ ಇಂತಹ ಹಲವಾರು ಸ್ಕೀಮ್ ಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದೆ.
ಪೋಸ್ಟ್ ಆಫೀಸ್ ಹಲವಾರು ಉದ್ದೇಶಗಳಿಂದ ಈಗಾಗಲೇ ದೇಶದ ನಾಗರಿಕರ ನಂಬಿಕೆ ಗಿಟ್ಟಿಸಿಕೊಂಡಿದೆ. ಪೋಸ್ಟ್ ಆಫೀಸ್ ಅಲ್ಲಿ ಹೂಡಿಕೆ ಮಾಡುವುದರಿಂದ ನಾವು ಹಾಕಿದ ಹಣಕ್ಕೆ ಸರ್ಕಾವೇ ಭದ್ರತೆ ಆಗಿರುತ್ತದೆ ಆದ್ದರಿಂದ ಕೇಂದ್ರ ಸರ್ಕಾರದ ಅಡಿಯಲ್ಲಿರುವ ಅಂಚೆ ಇಲಾಖೆಯು ಹಣ ಉಳಿಸುವವರ ಹಾಗೂ ಹಣ ಹೂಡಿಕೆ ಮಾಡುವವರ ನಂಬಿಕೆದಾರ ಸಂಸ್ಥೆ ಆಗಿದೆ.
ಈಗ ಪೋಸ್ಟ್ ಆಫೀಸ್ ಅಲ್ಲಿ ಈ ಹೊಸ ಸ್ಕೀಮ್ ಅಲ್ಲಿ ಹೂಡಿಕೆ ಮಾಡುವುದರಿಂದ ಹಿಂದೆಂದಿಗಿಂತ ಹೆಚ್ಚಿನ ರೂಪದ ಬಡ್ಡಿ ಹಣವನ್ನು ಪಡೆಯಬಹುದಾಗಿದೆ. PMMIS ಅಂದರೆ ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್ ಈ ಸ್ಕೀಮ್ ಅನ್ನು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪರಿಚಯಿಸಿದ್ದರು.
ಕೆಲವು ವರ್ಷಗಳಿಂದ ಇದು ಜಾರಿಯಲ್ಲಿ ಇದೆ ಆದರೆ ಈ ವರ್ಷದ ಕೇಂದ್ರ ಸರ್ಕಾರದ ಬಜೆಟ್ ಅಲ್ಲಿ ಈ ಸ್ಕೀಮ್ ಅನ್ನು ಇನ್ನಷ್ಟು ಸಡಿಲಿಕೆ ಮಾಡಿ ದೇಶದ ನಾಗರಿಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗಿದೆ. ಅದೇನೆಂದರೆ ಈವರಿಗೆ ಇದರಲ್ಲಿ ಹಿರಿಯ ನಾಗರಿಕರಿಗೆ ಹೂಡಿಕೆ ಮಾಡಲು ಅವಕಾಶ ಇರಲಿಲ್ಲ ಆದರೆ ನೂತನ ಆರ್ಥಿಕ ವರ್ಷದಿಂದ ಹಿರಿಯ ನಾಗರಿಕರೂ ಸಹ ಇದರಲ್ಲಿ ಹೂಡಿಕೆ ಮಾಡಬಹುದಾಗಿದೆ.
ಗೃಹಲಕ್ಷ್ಮಿ ಯೋಜನೆ ಹಣ ಆಗಸ್ಟ್ 2 ಸಿಗಲ್ಲ ಮುಖ್ಯಮಂತ್ರಿಗಳಿಂದ ಸ್ಪಷ್ಟನೆ ಮತ್ತೊಂದು ಹೊಸ ನಿರ್ಧಾರ ಕೈಗೊಂಡ ಸರ್ಕಾರ.!
ಜೊತೆಗೆ ಈ ಹೂಡಿಕೆಯಲ್ಲಿ ಹಣ ಇಡುವುದಕ್ಕೆ ಒಬ್ಬ ವ್ಯಕ್ತಿಗೆ 4.5 ಹಾಗೂ ಜಂಟಿಯಾಗಿ ಖಾತೆ ತೆಗೆಯುವುದಾದರೆ 9 ಲಕ್ಷಗಳ ಮಿತಿ ಇತ್ತು. ಅದನ್ನು ಒಬ್ಬ ವ್ಯಕ್ತಿಗೆ 7.5 ಲಕ್ಷ ಹಾಗೂ ಜಂಟಿಯಾಗಿ ತೆರೆಯುವವರಿಗೆ 15 ಲಕ್ಷದವರೆಗೆ ಗಡಿ ಕೊಡಲಾಗಿದೆ. ಈ ಸ್ಕೀಮ್ ಅಲ್ಲಿ ಹೂಡಿಕೆ ಮಾಡುವುದರಿಂದ 7.1% ಬಡ್ಡಿ ರೂಪದ ಹಣ ಪ್ರತಿ ತಿಂಗಳು ಕೂಡ ನಿಮ್ಮ ಖಾತೆಗೆ ಬರಲಿದೆ. ಉದಾಹರಣೆ ಜೊತೆ ಹೇಳುವುದಾದರೆ ನೀವು ಸ್ಕೀಮ್ ಅಲ್ಲಿ ಸಾವಿರದಿಂದ ನಾಲ್ಕುವರೆ ಲಕ್ಷದವರೆಗೆ ಎಷ್ಟು ಹಣವನ್ನು ಆದರೂ ಠೇವಣಿ ಅಥವಾ ಹೂಡಿಕೆ ಆಗಿ ಇಡಬಹುದು.
ಐದು ವರ್ಷಗಳವರೆಗೆ ಈ ಸ್ಕೀಮ್ ಇರುತ್ತದೆ ಐದು ವರ್ಷದವರೆಗೆ ನೀವು ಇದರಲ್ಲಿ ಹಣ ಹೂಡಿಕೆ ಮಾಡಿದಾಗ ನೀವು ಇಟ್ಟ ಹಣಕ್ಕೆ 7.1% ಬಡ್ಡಿ ರೂಪದ ಹಣವು ನಿಮಗೆ ಪ್ರತಿ ತಿಂಗಳಿಗೂ ನೀವು ಕೊಡುವ ಬ್ಯಾಂಕ್ ಖಾತೆಗೆ ಅಥವಾ ಅಂಚೆ ಕಚೇರಿಯಲ್ಲಿರುವ ಖಾತೆಗೆ ಬರುತ್ತದೆ. ಅದನ್ನು ನೀವು ನಿಮ್ಮ ಅನುಕೂಲತೆಗಳಿಗೆ ತಕ್ಕ ಹಾಗೆ ಪ್ರತಿ ತಿಂಗಳು ಬೇಕಾದರೂ ಹಿಂಪಡೆಯಬಹುದಾಗಿದೆ.
10 ವರ್ಷ ಮೇಲ್ಪಟ್ಟ ಯಾರಾದರೂ ಒಂಟಿಯಾಗಿ ಅಥವಾ ಜಂಟಿಯಾಗಿ ಈ ಯೋಜನೆಗೆ ಹೂಡಿಕೆ ಮಾಡಬಹುದಾಗಿದೆ. ಇದಕ್ಕೆ ಪೋಸ್ಟ್ ಆಫೀಸ್ನಲ್ಲಿ ಉಳಿತಾಯ ಖಾತೆ ಇರಬೇಕಾಗುತ್ತದೆ. ಇದುವರೆಗೆ ಇರುವ ಎಲ್ಲಾ ಉಳಿತಾಯ ಯೋಜನೆಗಳಿಗಿಂತ ಇದು ಹೆಚ್ಚಿನ ಲಾಭ ಕೂಡ ತರುತ್ತದೆ. ಐದು ವರ್ಷ ಆದ ಬಳಿಕ ನೀವು ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಬಹುದಾಗಿದೆ.
ನಾಮಿನಿ ಫೆಸಿಲಿಟಿ ಕೂಡ ಇರುವುದರಿಂದ ಹೂಡಿಕೆ ಮಾಡಿದ ವ್ಯಕ್ತಿ ಮೃತ ಪಟ್ಟಲ್ಲಿ ಕಾನೂನು ವಾರಸುದಾರರಿಗೆ ಠೇವಣಿ ಇಟ್ಟಿದ್ದ ಹಣ ಹಾಗೂ ಪ್ರತಿ ತಿಂಗಳ ಬಡ್ಡಿ ಹಣ ಸೇರುತ್ತದೆ ಯೋಜನೆ ಕುರಿತು ಹೆಚ್ಚಿನ ವಿವರಣೆಗೆ ಹತ್ತಿರದ ಅಂಚೆ ಕಛೇರಿಗೆ ಭೇಟಿಕೊಟ್ಟು ವಿಷಯ ತಿಳಿದು ಈ ಸ್ಕೀಮ್ ಅಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಪಡೆಯಿರಿ.