ಹೆಣ್ಣು ಮಕ್ಕಳು ಮಕ್ಕಳನ್ನು ಮನೆ ಬೆಳಗುವ ಮಹಾಲಕ್ಷ್ಮಿ ಎನ್ನುತ್ತಾರೆ. ಒಂದು ಹೆಣ್ಣು ಮನೆ ನೋಡಿಕೊಳ್ಳುವ ಹಾಗೂ ಮನೆಯನ್ನು ಇಟ್ಟುಕೊಳ್ಳುವ ಲಕ್ಷಣದಿಂದಲೇ ಆಕೆಯ ಗುಣ ಸ್ವಭಾವವನ್ನು ಅರಿಯಬಹುದು. ಅದರಲ್ಲೂ ಮದುವೆ ಆಗಿರುವ ಮಹಿಳೆಗೆ ಜವಾಬ್ದಾರಿಗಳು ಹೆಚ್ಚಿರುತ್ತವೆ. ಹಾಗಾಗಿ ಆಕೆ ಅನೇಕ ಕಟ್ಟುಪಾಡುಗಳ ಒಳಗೆ ಜೀವಿಸಬೇಕು. ಒಂದು ವೇಳೆ ಆಕೆ ತನ್ನ ಸ್ಥಿತಿಗತಿಗಳನ್ನು ಸ್ಥಾನಮಾನಗಳು ಮತ್ತು ಜವಾಬ್ದಾರಿಗಳನ್ನು ಮರೆತರೆ ಆ ಮನೆಗೆ ದಟ್ಟ ದಾರಿದ್ರ್ಯಗಳು ತಟ್ಟುವುದರಲ್ಲಿ ಅನುಮಾನವೇ ಇಲ್ಲ. ಅಂತಹ ಕೆಲವು ಅಭ್ಯಾಸಗಳು ಹಾಗೂ ಲಕ್ಷಣಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತೇವೆ. ನೀವು ಕೂಡ ಹೀಗಿದ್ದರೆ ನಿಮ್ಮ ತಪ್ಪುಗಳನ್ನು ತಿದ್ದುಕೊಂಡು ಬದಲಾಗಿ
● ಬೆಳಗ್ಗೆ ಬೇಗ ಏಳುವುದು ಆರೋಗ್ಯದ ವಿಷಯದಲ್ಲಿ ಕೂಡ ಬಹಳ ಒಳ್ಳೆಯದು ಇದು ಮನಸ್ಸಿಗೆ ಉಲ್ಲಾಸವನ್ನುಂಟು ಮಾಡುತ್ತದೆ ಮತ್ತು ನಾವು ಹೆಚ್ಚು ಚಟುವಟಿಕೆಯಿಂದ ಕೂಡಿರುವಂತೆ ಜೀವನದ ಬಗ್ಗೆ ಆಸಕ್ತಿ ಬರುವಂತೆ ಮಾಡುತ್ತದೆ. ಆದರೆ ಗೃಹಣಿ ಆದವಳು ಸೂರ್ಯೋದಯ ಆದ ಬಹಳ ಸಮಯದವರೆಗೂ ಕೂಡ ಮಲಗಿದ್ದರೆ ಆ ಮನೆಯ ಯಾವ ಕೆಲಸ ಕಾರ್ಯಗಳು ಸರಿಯಾದ ಸಮಯಕ್ಕೆ ಆಗುವುದಿಲ್ಲ. ಇದರಿಂದ ಮನಸ್ತಾಪ, ಜಗಳಗಳು ಬರುತ್ತದೆ, ಇದು ಮನೆಯ ಆರೋಗ್ಯಕರ ವಾತಾವರಣಕ್ಕೆ ಮಾರಕ.
ಹುಟ್ಟಿದ ವಾರದ ಆಧಾರದ ಮೇಲೆ ನಿಮ್ಮ ಗುಣಲಕ್ಷಣಗಳು ಹೇಗಿರುತ್ತದೆ ನೋಡಿ..!
● ಕೆಲವು ಹೆಣ್ಣು ಮಕ್ಕಳಿಗೆ ಇನ್ನೊಬ್ಬರಿಗೆ ಕಂಪೇರ್ ಮಾಡಿಕೊಳ್ಳುವ ಗುಣ ಇರುತ್ತದೆ. ಅಕ್ಕ ಪಕ್ಕದವರು ಅಥವಾ ನೆಂಟಸ್ಥರು, ಸ್ನೇಹಿತೆಯರಿಗೆ ಕಂಪೇರ್ ಮಾಡಿಕೊಂಡು ಎಷ್ಟು ಇದ್ದರೂ ಕೂಡ ನನಗೆ ಏನು ಇಲ್ಲ ಎಂದು ಕೊರಗುತ್ತಿರುತ್ತಾರೆ ಈ ರೀತಿ ನೆಗೆಟಿವ್ ಥಿಂಕಿಂಗ್ ಮನಸ್ಸಿನಲ್ಲಿ ಇದ್ದರೆ ಅದರ ಪರಿಣಾಮ ನಿಮ್ಮ ಮನೆಯ ವಾತಾವರಣವನ್ನು ನಕಾತ್ಮಕವಾಗಿಸುತ್ತದೆ. ನೀವು ಇರುವ ಪರಿಸ್ಥಿತಿಗಿಂತ ಆರ್ಥಿಕವಾಗಿ ಹಿನ್ನಡೆ ಹೊಂದುತ್ತಿದ್ದೀರಿ ಹಾಗಾಗಿ ಇರುವುದರ ಸಂತೋಷ ಪಟ್ಟು ನಗುನಗುತ್ತ ಇರುವುದನ್ನು ಕಲಿಯಬೇಕು
● ಮನೆಯನ್ನು ನಾವು ಎಷ್ಟು ಸ್ವಚ್ಛವಾಗಿ ಇಟ್ಟುಕೊಂಡು ಇರುತ್ತೇವೋ ಅಷ್ಟೇ ಮನೆಗೆ ಒಳ್ಳೆಯದು, ಮನೆಯ ವಾತಾವರಣ ಸಕಾರಾತ್ಮಕವಾಗುತ್ತದೆ. ಇದರ ಮೂಲಕ ಎಲ್ಲಾ ದನಾಕರ್ಷಣೆ ಹಾಗೂ ಅದೃಷ್ಟಗಳು ಹುಢುಕಿ ಬರುತ್ತವೆ. ಆದರೆ ಕೆಲವು ಹೆಣ್ಣು ಮಕ್ಕಳು ಮನೆ ಸ್ವಚ್ಛವಾಗಿ ಇಟ್ಟುಕೊಳ್ಳುವುದಿಲ್ಲ. ಎಷ್ಟೇ ಬಿಡುವು ಇದ್ದರೆ ಕೂಡ ಸಮಯ ವ್ಯರ್ಥ ಮಾಡುತ್ತಾರೆ ಹೊರತು ಮನೆಯ ಕಡೆ ಗಮನ ಕೊಡುವುದಿಲ್ಲ. ಈ ರೀತಿ ದುರಭ್ಯಾಸಗಳು ಇದ್ದರೆ ಅವರ ಕಾರಣದಿಂದಲೇ ಮನೆಗೆ ದರಿದ್ರ ಬರುತ್ತದೆ.
ಮನೆ ಸ್ವಚ್ಛಗೊಳಿಸುವ ಸುಲಭ ವಿಧಾನ.!
● ಕೆಲವು ಮಹಿಳೆಯರು ಮನೆಯಲ್ಲಿ ಸಣ್ಣಪುಟ್ಟ ಮಾತು ಬಂದರೂ ಕೂಡ ಅದನ್ನು ದೊಡ್ಡದು ಮಾಡಿ ಹಲವು ದಿನಗಳ ತನಕ ಅದನ್ನು ಎಳೆದಾಡುತ್ತ ಜಗಳ ಮಾಡುತ್ತಾರೆ, ಈ ರೀತಿ ಗುಣ ಇದ್ದರೆ ಬಿಟ್ಟುಬಿಡಬೇಕು. ಮನೆ ಎಂದ ಮೇಲೆ ಒಂದು ಮಾತು ಬರುತ್ತದೆ, ಹೋಗುತ್ತದೆ. ಬೇರೆಯವರು ಆಡಿದ ಮಾತು, ನಡೆದುಕೊಂಡ ರೀತಿ ತಪ್ಪಾಗಿದ್ದರೆ ಅದನ್ನು ಸಮಾಧಾನವಾಗಿ ಒಳ್ಳೆಯ ಮಾತಿನಿಂದ ತಿಳಿಸಬೇಕು ಹೊರತು ಎಲ್ಲದಕ್ಕೂ ರಂಪ ಮಾಡುವ ಬುದ್ದಿ ಇರಬಾರದು.
● ಗಂಡನಿಗೆ ಗೌರವ ಕೊಡದ, ಗಂಡನನ್ನು ಇಷ್ಟ ಬಂದ ಹಾಗೆ ಆಡಿಸುವ ಹೆಣ್ಣು ಕೂಡ ಮನೆಗೆ ಅದೃಷ್ಟ ತರುವುದಿಲ್ಲ. ಜೊತೆಗೆ ಮೂರು ಹೊತ್ತು ಅಳುತ್ತಾ ಕೂರುವ ಹೆಣ್ಣು ಕೂಡ ದರಿದ್ರಕ್ಕೆ ಕಾರಣವಾಗುತ್ತಾಳೆ ಹಾಗಾಗಿ ಇಂತಹ ಅಭ್ಯಾಸಗಳಿದ್ದರೆ ಬಿಟ್ಟುಬಿಡಿ.
ಉತ್ತಮ ಆರೋಗ್ಯ ಪಡೆಯಲು ನಿಮ್ಮ ಜೀವನದಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಿ.!
● ಇನ್ನೊಬ್ಬರ ಬಗ್ಗೆ ಚಾಡಿ ಹೇಳುವುದು, ಸದಾ ಯಾರನ್ನಾದರೂ ದೂರುತ್ತಲೇ ಇರುವುದು, ಕೆಟ್ಟ ಕೆಟ್ಟ ಮಾತುಗಳನ್ನು ಮನೆಯಲ್ಲಿ ಆಡುವುದು ಇದು ಕೂಡ ಮನೆ ಹೆಣ್ಣು ಮಕ್ಕಳಿಗೆ ಸೂಕ್ತವಲ್ಲ. ಹೆಣ್ಣು ಮಕ್ಕಳು ಆದಷ್ಟು ಸೌಮ್ಯ ಸ್ವಭಾವದಿಂದ ಇರಬೇಕು ಮತ್ತು ನಡೆನುಡಿ ಸ್ವಚ್ಛವಾಗಿಟ್ಟುಕೊಂಡು ಸಹೃದಯವಂತರಾಗಿ, ಗುಣವಂತರಾಗಿ ಪ್ರಾಮಾಣಿಕರಾಗಿ ಇರಬೇಕು. ಆಗ ಅವರಿಗೆ ಲಕ್ಷ್ಮಿ ಕಳೆ ಬರುತ್ತದೆ.