27 ನಕ್ಷತ್ರಪುಂಜಗಳಲ್ಲಿ ಕೆಲವೊಂದು ನಕ್ಷತ್ರಗಳಲ್ಲಿ ಜನಿಸಿದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅತ್ಯಂತ ಶುಭಫಲಗಳನ್ನು ಕೊಡುತ್ತವೆ ಆ ನಕ್ಷತ್ರಗಳು. ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಕೂಡ ಜಯ ಶೀಲರನ್ನಾಗಿ ಮಾಡುತ್ತದೆ. ಕೇವಲ ಅವರ ಕೆಲಸ ಕಾರ್ಯಗಳಷ್ಟೇ ಅಲ್ಲದೆ ಅವರ ಜೀವನದುದ್ದಕ್ಕೂ ಕೂಡ ಅವರು ಎಲ್ಲದರಲ್ಲಿಯೂ ಕೂಡ ಯಶಸ್ಸನ್ನೇ ಕಾಣಬಹುದು.
ಹೀಗೆ ಈ ವಿಚಾರವಾಗಿ ಸಂಬಂಧಿಸಿ ದಂತೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಅನುಗುಣವಾಗಿ ಯಾವ ನಕ್ಷತ್ರ ಹೊಂದಿದವರು ತಮ್ಮ ಜೀವನದಲ್ಲಿ ಅತಿ ಹೆಚ್ಚಿನ ಅದೃಷ್ಟವನ್ನು ಪಡೆಯುತ್ತಾರೆ ಹಾಗೂ ಯಾವುದೆಲ್ಲ ರೀತಿಯ ಲಾಭಗಳನ್ನು ಅವರು ಪಡೆದುಕೊಳ್ಳುತ್ತಾರೆ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.
ಅಶ್ವಿನಿ ನಕ್ಷತ್ರದಿಂದ ಪ್ರಾರಂಭವಾಗಿ ರೇವತಿ ನಕ್ಷತ್ರದವರೆಗೆ 27 ನಕ್ಷತ್ರ ಗಳು ಬರುತ್ತದೆ. ವಿಶೇಷವಾಗಿ ನಕ್ಷತ್ರಗಳು ಚಂದ್ರನ ಚಿನ್ಹೆಗಳಾಗಿದ್ದು ಆದ್ಯತೆಯ ಪಟ್ಟಿಯಲ್ಲಿ ಚಂದ್ರನಿಗೆ ಅಗ್ರಸ್ಥಾನ ಇರುವಂತದ್ದು. ಈ ಚಂದ್ರ ಒಂದು ನಕ್ಷತ್ರದಿಂದ ಇನ್ನೊಂದು ನಕ್ಷತ್ರಕ್ಕೆ ಚಲಿಸುತ್ತಾ ಇರುತ್ತಾನೆ. ಮನುಷ್ಯ ಹುಟ್ಟಿದಂತಹ ಸಂದರ್ಭದಲ್ಲಿ ಚಂದ್ರನು ಯಾವ ಸ್ಥಾನದಲ್ಲಿ ಅಂದರೆ ಯಾವ ನಕ್ಷತ್ರದಲ್ಲಿ ಇರುತ್ತಾನೋ ಆ ನಕ್ಷತ್ರ ನಿಮ್ಮ ಜನ್ಮ ನಕ್ಷತ್ರ ಎಂದು ಪರಿಗಣಿಸಲಾಗುತ್ತದೆ ಶಾಸ್ತ್ರದ ಪ್ರಕಾರ.
ಈ ಸುದ್ದಿ ಓದಿ:- ಹೆಣ್ಣು ಮಕ್ಕಳಿಗೆ ಈ ಹೆಸರುಗಳನ್ನು ಇಟ್ಟರೆ ತೊಂದರೆಗಳೇ ಹೆಚ್ಚು.!
ಕೆಲವು ಜನ್ಮ ನಕ್ಷತ್ರದ ಪ್ರಭಾವ ಕಡಿಮೆ ಇರುತ್ತದೆ ಲಾಭದಾಯಕವಾಗಿ ಅಂದರೆ ಮಧ್ಯಮ ಪ್ರಭಾವದಲ್ಲಿ ಇರುತ್ತದೆ. ಇನ್ನು ಕೆಲವೊಂದು ನಕ್ಷತ್ರಗಳಲ್ಲಿ ಜನನವಾದರೆ ಶುಭಫಲ ಅತ್ಯಂತ ಅದ್ಭುತವಾಗಿರುತ್ತದೆ ಎಂದು ಶಾಸ್ತ್ರಗಳಲ್ಲಿ ಪರಿಗಣ ನೆಗೆ ತೆಗೆದುಕೊಳ್ಳಲಾಗುತ್ತದೆ. ಹಾಗಾದರೆ ಯಾವ ನಕ್ಷತ್ರದಲ್ಲಿ ಹುಟ್ಟಿದರೆ ಅತ್ಯಂತ ಶುಭ ಫಲ ಸಿಗುತ್ತದೆ. ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಮಾಹಿತಿಯನ್ನು ಈ ದಿನ ತಿಳಿಯೋಣ.
ನಕ್ಷತ್ರಗಳಲ್ಲಿ ಪ್ರಥಮ ಅದೃಷ್ಟ ನಕ್ಷತ್ರ ಅಶ್ವಿನಿ ನಕ್ಷತ್ರ ಎಂದು ಹೇಳುತ್ತಾರೆ. ಈ ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರು ಅತ್ಯಂತ ಶಕ್ತಿ ಹಾಗೂ ಒಳ್ಳೆಯ ಘನತೆ ಹಾಗೂ ಗೌರವನ್ನು ಹೊಂದಿರುತ್ತಾರೆ ಎಂದು ಹೇಳಬಹುದು. ಕೆಲಸ ಕಾರ್ಯ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಉತ್ತಮ ಆಲೋ ಚನೆಯನ್ನು ಹೊಂದಿರುತ್ತಾರೆ.
ಈ ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರು ಉತ್ತಮವಾದ ಚಟುವಟಿಕೆಗಳಿಂದ ಇವರು ಜೀವನ ನಡೆಸುತ್ತಿರುತ್ತಾರೆ. ಒಳ್ಳೆಯ ಮನಃಶಾಂತಿ ಇಚ್ಛಾಶಕ್ತಿಯನ್ನು ಹೊಂದಿರುತ್ತಾರೆ. ಅಂದರೆ ಇವರಿಗೆ ಮನೋಬಲ ತುಂಬಾ ಚೆನ್ನಾಗಿರುತ್ತದೆ ಎಂದು ಹೇಳಬಹುದು. ಹಾಗೆಯೇ ಕೇತುವಿನ ಪ್ರಭಾವದಿಂದ ಚೈತನ್ಯದಿಂದ ಯಾವುದೇ ಕೆಲಸ ಕಾರ್ಯಗಳಲ್ಲಾದರೂ ಕೂಡ ಅದರಲ್ಲಿ ಯಾವುದೇ ಅಡೆತಡೆ ಬಂದರೂ ಅದನ್ನು ನಿಭಾಯಿಸುವಂತಹ ಬುದ್ಧಿಶಕ್ತಿ ಇವರಲ್ಲಿ ಇರುತ್ತದೆ.
ಈ ಸುದ್ದಿ ಓದಿ:- ಹುಟ್ಟಿದ ತಿಂಗಳಿನ ಆಧಾರದ ಮೇಲೆ ನಿಮ್ಮ ಗುಣ ಸ್ವಭಾವ ತಿಳಿದುಕೊಳ್ಳಿ.!
ಇನ್ನು ಎರಡನೆಯ ಅದೃಷ್ಟವಂತ ನಕ್ಷತ್ರ ಯಾವುದು ಎಂದರೆ ಭರಣಿ ನಕ್ಷತ್ರ. ಭರಣಿ ನಕ್ಷತ್ರ ಹೊಂದಿರುವಂತಹ ಜನರು ಬಹಳ ಪ್ರಾಮಾಣಿ ಕರು ಬಹಳ ನಿಯತ್ತಿನ ಜನ ಎಂದೇ ಹೇಳಬಹುದು. ಈ ನಕ್ಷತ್ರದವರು ಯಾವಾಗಲೂ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾರೆ. ಯಾವುದೇ ಒಳ್ಳೆಯ ಕೆಲಸ ಕಾರ್ಯಗಳು ಇದ್ದರೂ ಅದರಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುತ್ತಾರೆ.
ಮೊದಲೇ ಹೇಳಿದಂತೆ ಭರಣಿ ನಕ್ಷತ್ರ ಹೊಂದಿರುವವರು ಬಹಳ ಅದೃಷ್ಟವಂತರು ಆದ್ದರಿಂದಲೇ ಇವರು ಧನವಂತರು ಕೂಡ ಆಗುತ್ತಾರೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಅದೇ ರೀತಿ ಇವರು ತಮ್ಮ ಜೀವನದಲ್ಲಿ ಯಾವುದೇ ಕೆಲಸವಾಗಿರಬಹುದು ಅದನ್ನು ಸದಾ ಕಾಲ ಮಾಡುತ್ತಾ ಸದಾ ಕಾಲ ಹಣವನ್ನು ಸಂಪಾದನೆ ಮಾಡುತ್ತಿರುತ್ತಾರೆ. ಇದರಿಂದ ಅವರು ತಮ್ಮ ಜೀವನದಲ್ಲಿ ಅಂದುಕೊಂಡಂತಹ ರೀತಿಯಲ್ಲಿಯೇ ಐಷಾರಾಮಿ ಜೀವನವನ್ನು ನಡೆಸುತ್ತಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.