ಈಗಿನ ಕಾಲದಲ್ಲಿ ಆಗುತ್ತಿರುವ ದೇಹದ ತೂಕದ ಅಸಮತೋಲನ, ಹಾರ್ಮೋನ್ ವೇರಿಯೇಶನ್ ಮತ್ತು ಶುಗರ್, ರಕ್ತದೊತ್ತಡ, ಥೈರಾಯ್ಡ್ ಒಬೆಸಿಟಿ ಮುಂತಾದ ದೇಹದ ಡಿಸ್ ಆರ್ಡರ್ ಗಳಿಗೆಲ್ಲ ನಾವು ಅಳವಡಿಸಿಕೊಂಡಿರುವ ತಪ್ಪಾದ ಜೀವನ ಶೈಲಿ ಹಾಗೂ ವಿಷಯಯುಕ್ತವಾದ ಆಹಾರ ಪದ್ಧತಿಯ ಕಾರಣ ಎಂದು ಹೇಳಬಹುದು.
ಭಾರತದಂತಹ ಸಂಪ್ರದಾಯಬದ್ಧ ದೇಶದ ಬೇರನ್ನು ಇಂದು ಪಾಶ್ಚಿಮಾತ್ಯ ಆಹಾರ ಪದ್ಧತಿಗೆ ಬದಲಾಯಿಸಿ ಅಲುಗಾಡುತ್ತಿರುವುದು ದುರ್ದೈವವೇ ಸರಿ. ನಮ್ಮ ದೇಶವು ರೋಗ ನಿರೋಧಕ ಶಕ್ತಿಯಲ್ಲಿ ನಂ.1 ಆಗಿತ್ತು, ಹಾಗಾಗಿ ಕರೋನಂತಹ ಸಾಂಕ್ರಾಮಿಕ ದ ಸಂದರ್ಭದಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ಅತಿ ಕಡಿಮೆ ಸಾ’ವು ನೋ’ವು ಸಂಭವಿಸಿತು.
ಆಗಿನ ಕಾಲದ ಜನರು ಯಾವುದೇ ಆಡಂಬರವಿಲ್ಲದೆ ವಿದ್ಯಾಭ್ಯಾಸದ ಕಡಿಮೆ ಇದ್ದರೂ ಇದ್ದಿದ್ದರಲ್ಲೇ ತೃಪ್ತರಾಗಿ ಗಟ್ಟಿ ಮುಟ್ಟಾಗಿ ನೂರಾರು ವರ್ಷ ಕಾಯಿಲೆ ಕಸಾಲೆ ಇಲ್ಲದೆ ಬದುಕುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಎಜುಕೇಟೆಡ್ ಫೂಲ್ ಗಳಂತೆ ಅಜ್ಞಾನಿಗಳಾಗಿ ತಮ್ಮ ಕೈಯಾರೆ ತಾವೇ ತಮ್ಮ ದೇಹಕ್ಕೆ ವಿ’ಷ ಸೇರಿಸುತ್ತಿದ್ದಾರೆ.
ಇದೇ ಕಾರಣಕ್ಕೆ 30, 40ರ ವಯಸ್ಸಿನಲ್ಲಿಯೇ ಹೃ’ದ’ಯ’ಘಾ’ತ ಅದಕ್ಕಿಂತ ಕಡಿಮೆ ಹರೆಯದವರಿಗೆ ಕಿಡ್ನಿ ಲಿವರ್ ಡ್ಯಾಮೇಜ್ ಸ್ಟ್ರೋಕ್ ಬಂದೊದಗಿ ಆಸ್ಪತ್ರೆ ಸೇರಿ ನರಳುವಂಥಾಗಿದೆ. ಈ ಎಲ್ಲಾ ಸಮಸ್ಯೆಗಳಿಂದ ದೂರವಿದ್ದು ನಾವು ಕೂಡ ಆರೋಗ್ಯವಂತರವಾಗಿ ಸಂತೋಷವಾಗಿ ದೀರ್ಘಕಾಲದ ಜೀವನ ಜೀವಿಸಬೇಕು ಎಂದರೆ ಮೊದಲು ನಮ್ಮ ಆಹಾರ ಪದ್ಧತಿಯನ್ನು ಸರಿ ಮಾಡಿಕೊಳ್ಳಬೇಕು.
ರಾತ್ರೋರಾತ್ರಿ ಈ ಬದಲಾವಣೆ ಅಸಾಧ್ಯವಾದರೂ ಬಹಳ ಗಂಭೀರವಾಗಿ ತೆಗೆದುಕೊಂಡು ದಿನದಿಂದ ದಿನಕ್ಕೆ ಕಟ್ಟುನಿಟ್ಟಾಗಿ ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳುತ್ತಾ ಬನ್ನಿ ನಿಮಗೆ ಭಾಧಿಸುತ್ತಿರುವ ಯಾವುದೇ ಆರೋಗ್ಯ ಸಮಸ್ಯೆ ಆದರೂ ಹೇಗೆ ಕಣ್ಮರೆಯಾಗುತ್ತದೆ ಎನ್ನುವುದನ್ನು ನೀವೇ ಪರೀಕ್ಷೆ ಮಾಡಿ ನೋಡಿ.
* ಉದಾಹರಣೆಗೆ ಹೇಳಬೇಕು ಎಂದರೆ ಕಿಡ್ನಿಯಲ್ಲಿ ಕಲ್ಲಾಗುವ ಸಮಸ್ಯೆ, ಸಕ್ಕರೆ ಕಾಯಿಲೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಸಕ್ಕರೆ ಹಾಗೂ ರಾಸಾಯನಿಕ ಯುಕ್ತ ಬೆಲ್ಲಗಳ ಬಳಕೆ. ನೀವು ಗಮನಿಸಿದರೆ ಆ ಬೆಲ್ಲಗಳ ಮೇಲೆ ಜೇನು ಹುಳ, ಇರುವೆಗಳು ಕೂಡ ಹೋಗುವುದಿಲ್ಲ ಎನ್ನುವುದನ್ನು ಅರಿಯಬಹುದು.
ಹಾಗಾಗಿ ಸ್ವಾಭಾವಿಕವಾಗಿ ತಯಾರಾದ ಬೆಲ್ಲಗಳ ಕಡೆ ಮುಖ ಮಾಡಿ ಸಾವಯವ ಬಲ್ಲವನ್ನು ಬಳಸಿದರೆ ಹೊಟ್ಟೆಯಲ್ಲಿ ಜಂತು ಹುಳುಗಳು ಕೂಡ ಬರುವುದಿಲ್ಲ ರಕ್ತ ಹೀನತೆ ಚರ್ಮದ ಸಮಸ್ಯೆಯಿಂದ ಹಿಡಿದು ಅನೇಕ ರೋಗಗಳಿಗೆ ಇದು ಉತ್ತಮ ಪರಿಹಾರವಾಗಿದೆ.
* ಅಡುಗೆ ಎಣ್ಣೆ ರಾಸಾಯನಿಕಯುಕ್ತವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತು. ಪೆಟ್ರೋಲಿಯಂ ಉತ್ಪನ್ನಗಳಿಗೆ ಬಂದ ಕಚ್ಚಾ ವಸ್ತುಗಳಲ್ಲಿ ಉಳಿದ ವಿಸರ್ಜಿತವಾದ ಅಂಶವು ಇಂದು ಆಡುಗೆ ಎಣ್ಣೆಗಳಾಗಿ ಮನುಷ್ಯರ ಹೊಟ್ಟೆ ಸೇರುತ್ತಿದೆ, ಗೊತ್ತಿದ್ದು ನಾವೇ ಖರೀದಿಸುತ್ತಿದ್ದೇವೆ ಎಂದರೆ ನಾವು ಇಂದು ಯಾವ ರೀತಿಯ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದು ಗಾ’ಬ’ರಿ ಆಗದೆ ಇರದು.
ಇಲ್ಲಿ ಯಾರು ಕೂಡ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡುವುದಿಲ್ಲ. ಕಡಲೆ ಕಾಯಿ ಎಣ್ಣೆ, ಕೊಬ್ಬರಿ ಎಣ್ಣೆ, ಹುಚ್ಚಳ್ಳು ಸೂರ್ಯಕಾಂತಿ ಯಾವುದೇ ಎಣ್ಣೆಯನ್ನು ಬಳಸಿದರೂ ಕೂಡ ನಾವೇ ಆ ಪದಾರ್ಥಗಳನ್ನು ತೆಗೆದುಕೊಂಡು ಹೋಗಿ ಗಿರಣಿ ಅಂಗಡಿಯಲ್ಲಿ ಎಣ್ಣೆ ತೆಗೆಸಿಕೊಂಡು ಬಂದು ಬಳಕೆ ಮಾಡುವುದು 90% ರಷ್ಟು ಕಾಯಿಲೆಗಳಿಗೆ ಔಷಧಿಯಾಗಿದೆ.
* ಇದರೊಂದಿಗೆ ಎಲ್ಲರೂ ಮಾಡುವ ಸಣ್ಣ ತಪ್ಪು ಏನೆಂದರೆ, ಜಾಹೀರಾತುಗಳಿಗೆ ಮಾರು ಹೋಗುವುದುಕ್ರಿಕೆಟ್ ಸ್ಟಾರ್ ಅಥವಾ ಸಿನಿಮಾ ಸ್ಟಾರ್ ಒಂದು ಕೂಲ್ ಡ್ರಿಂಕ್ ಅಡ್ವರ್ಟೈಸ್ ಮಾಡಿದರು ಎಂದರೆ ಎಲ್ಲರೂ ಕೂಡ ಅದನ್ನೇ ಫಾಲೋ ಮಾಡುತ್ತಾರೆ. ಅದರಲ್ಲಿ ಬಳಸುವ ರಾಸಾಯನಿಕಗಳು ನಮ್ಮ ಮನೆಯ ಫೆನಾಯಿಲಾ, ಡಿಶ್ ವಾಷರ್ ಗಳಲ್ಲೂ ಕೂಡ ಬಳಕೆ ಆಗಿರುತ್ತವೆ ಆದರೆ ಅದರ ಡೀಟೇಲ್ಸ್ ನೋಡಲು ಯಾರಿಗೂ ಸಮಯವಿಲ್ಲ.
ದುಬಾರಿಯಾದರೂ ಅದನ್ನೇ ಕೊಂಡು ಕುಡಿಯುತ್ತಾರೆ, ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ. ಅದರ ಬದಲು ಎಳನೀರು ಪ್ರಕೃತಿ ಕೊಟ್ಟಿರುವ ಅತ್ಯದ್ಭುತ ಔಷಧಿ. ಒಂದು ಎಳನೀರಿಗೆ ಅರ್ಧ ಹೋಳು ನಿಂಬೆರಸ, ಎರಡು ಏಲಕ್ಕಿ ಜಜ್ಜಿ ಹಾಕಿ, ಎರಡು ಚಮಚ ಜೇನುತುಪ್ಪ ಸೇರಿಸಿ ಕುಡಿದರೆ ಇಡೀ ದಿನದ ಚೈತನ್ಯವಾಗಿ ಇರುವಷ್ಟು ಶಕ್ತಿ ಅದರಿಂದ ಬರುತ್ತದೆ.
ಈ ರೀತಿಯ ಬದಲಾವಣೆಗಳನ್ನು ಅಗತ್ಯವಾಗಿ ಮಾಡಿಕೊಂಡು ನಿಮ್ಮ ಆರೋಗ್ಯವನ್ನು ನೀವೇ ಸುಧಾರಿಸಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬದೊಡನೆ ಶೇರ್ ಮಾಡಿ.