ನಾವು ಜೀವನದಲ್ಲಿ ಬಹಳ ಕ’ಷ್ಟ ಪಟ್ಟರು ಕೂಡ ಅಂದುಕೊಂಡ ಗುರಿ ತಲುಪಲು ಆಗುತ್ತಿಲ್ಲ ಎಂದರೆ ದೈವಬಲ ಕಡಿಮೆಯಾಗಿದೆ ಎಂದೇ ಅರ್ಥ ಮಾಡಿಕೊಳ್ಳಬಹುದು. ಕೊನೆ ಹಂತದವರೆಗೂ ಕೂಡ ಹೋಗಿ ಕಾರ್ಯ ಫಲಿಸುತ್ತಿಲ್ಲ ಎಂದರೆ ಆಗ ನಮಗೆ ದೇವರೇ ಸಹಾಯ ಮಾಡಬೇಕು. ಇಂತಹ ಸಮಯಗಳಲ್ಲಿ ಜನರು ದೇವರಿಗೆ ಪೂಜೆ ಮಾಡಿಸುತ್ತಾರೆ. ದೈವಗಳಿಗೆ ಹರಕೆ ಕಟ್ಟಿಕೊಳ್ಳುತ್ತಾರೆ.
ದೇವರ ರಥ ಎಳೆಸುವುದಾಗಿ, ಬ್ರಹ್ಮ ರಥೋತ್ಸವ ನೆರವೇರಿಸುವುದಾಗಿ, ವಿವಿಧ ರೀತಿಯ ಪೂಜೆ ಮಾಡಿಸುವುದಾಗಿ, ದರ್ಶನ ಮಾಡುವುದಾಗಿ, ಕಾಣಿಕೆ ಅರ್ಪಿಸುವುದಾಗಿ ಹೀಗೆ ನಾನಾ ರೀತಿ ಸೇವೆಯ ಹಲವು ವಿಧವಾದ ಹರಕೆಗಳನ್ನು ಕಟ್ಟಿಕೊಳ್ಳುತ್ತಾರೆ.
ನಮ್ಮ ದೇಶದಲ್ಲಿ ದೇವರು ನಂಬಿಕೆ ಭಕ್ತಿ ಹರಕೆ ಇವುಗಳು ಪುರಾತನ ಕಾಲದಿಂದಲೂ ಕೂಡ ರೂಢಿಯಲ್ಲಿ ಇರುವುದರಿಂದ ಕುಟುಂಬಗಳಲ್ಲಿ ಹಿರಿಯರು ಹರಕೆ ಮಾಡಿಕೊಂಡಿದ್ದನ್ನು ನೋಡಿ ಕಾಣಿಕೆ ಕಟ್ಟುತ್ತಿದ್ದನ್ನು ನೋಡಿ ಮುಂದಿನವರು ಅದನ್ನು ಪಾಲಿಸಿಕೊಂಡು ಹೋಗುತ್ತಾರೆ.
ಆಶ್ಚರ್ಯ ಎನ್ನುವ ರೀತಿಯಲ್ಲಿ ಈ ರೀತಿ ಹರಕೆ ಮಾಡಿಕೊಂಡ ನಂತರ ಕಾರ್ಯಗಳು ಕೂಡ ಕೈಕೊಡುತ್ತಿರುವುದರಿಂದ ನಂಬಿಕೆಗಳು ಹಿಮ್ಮಡಿಯಾಗುತ್ತಿದೆ. ಅದುವರೆಗೂ ಕೂಡ ಶತ ಪ್ರಯತ್ನ ಪಟ್ಟರು ಸಾಧಿಸಲು ಆಗದೆ ಇದ್ದದ್ದನ್ನು ಹರಕೆ ಮಾಡಿಕೊಂಡ ತಕ್ಷಣ ಹೂ ಎತ್ತಿದ ರೀತಿ ಸರಾಗವಾಗಿ ನೆರವೇರಿಸಿಕೊಂಡ ಉದಾಹರಣೆಗಳು ಕೂಡ ಇವೆ.
ಈ ರೀತಿ ನಮ್ಮ ಕಾರ್ಯಗಳು ಮುಗಿದ ಮೇಲೆ ಮಾಡಿದ ಹರಕೆಯನ್ನು ತೀರಿಸಲೇಬೇಕು. ಆದರೆ ಅನೇಕರು ಹರಕೆ ಮಾಡಿಕೊಂಡು ಕಾರ್ಯ ಸಿದ್ದಿಯಾದ ನಂತರ ಆ ಹರಕೆಯನ್ನೇ ಮರೆತುಬಿಡುತ್ತಾರೆ, ಹೀಗೆ ಮಾಡುವುದರಿಂದ ಬಹಳ ಕ’ಷ್ಟ ಅನುಭವಿಸಬೇಕಾಗುತ್ತದೆ. ಆದರೆ ಒಂದೇ ಬಾರಿಗೆ ಈ ಸಮಸ್ಯೆ ಬರುವುದಿಲ್ಲ ಮಾಡಿಕೊಂಡ ಹರಕೆಯನ್ನು ತೀರಿಸುವುದಕ್ಕೆ 12 ವರ್ಷಗಳ ಕಾಲ ಸಮಯವಕಾಶ ಇರುತ್ತದೆ.
ಅಷ್ಟರೊಳಗೆ ಹರಕೆ ತೀರಿಸಬೇಕು ಹರಕೆ ಎನ್ನುವುದು ದೈವಗಳಿಗೆ ಕೊಟ್ಟ ಭಾಷೆಯಂತೆ. ಈ ರೀತಿ ಹರಕೆ ಕಟ್ಟಿಕೊಂಡು ಹರಕೆಯನ್ನು ನಿರ್ಲಕ್ಷಿಸಿದರೆ ಅ’ಪಾ’ಯ ಕಟ್ಟುತ್ತ ಬುತ್ತಿ ದೈವಗಳಿಗೆ ಒಂದೇ ಬಾರಿಗೆ ಕೋಪ ಬರುವುದಿಲ್ಲ ಅವರು ಸಮಯ ಅವಕಾಶ ಕೊಟ್ಟು ನೋಡುತ್ತಾರೆ. ನೀವು ಅಷ್ಟರೊಳಗೆ ಅರಿತುಕೊಂಡು ಅದನ್ನು ನಡೆಸಲಿಲ್ಲ ಎಂದಾಗ ನೀವು ಪೂಜಿಸಿದ ದೇವರೇ ನಿಮ್ಮ ಎದುರಾಗಿ ನಿಲ್ಲುತ್ತಾರೆ.
ಆಗ ಅದುವರೆಗೂ ನಿಮ್ಮ ಮೇಲೆ ಇದ್ದ ಆ ದೈವ ಬಲ ಕಳೆದು ಹೋಗಬಹುದು. ಉದಾಹರಣೆಗೆ ನೀವೇನಾದರೂ ಒಂದು ಕಾರು ಖರೀದಿಸಬೇಕು ಎಂದು ಪ್ರಯತ್ನ ಪಟ್ಟು ಆಗದಿದ್ದಾಗ ಖರೀದಿಸುವಂತಾಗಲಿ ಎಂದು ಹರಕೆ ಕಟ್ಟಿಕೊಂಡು ನಂತರ ಮರೆತಾಗ ಅಥವಾ ಮನೆ ಕಟ್ಟಿಸಲು ಪ್ರಯತ್ನ ಪಟ್ಟು ಎಷ್ಟೇ ಕ’ಷ್ಟ ಪಟ್ಟರು ಆಗದೆ ನಿನಗೆ ಇಂಥಹ ಪೂಜೆ ಮಾಡುತ್ತೇನೆ.
ಅಥವಾ ಇಷ್ಟು ಬಾರಿ ದರ್ಶನ ಮಾಡುತ್ತೇನೆ ಎಂದು ಹರಕೆ ಕಟ್ಟಿಕೊಂಡ ನಂತರ ಅದನ್ನು ಮರೆತರೆ ಅದುವರೆಗೂ ಕೂಡ ಆ ಮನೆಯಲ್ಲಿ ಆರಾಮಾಗಿ ಇದ್ದ ನಿಮಗೆ ನಂತರ ಆ ಮನೆಯಲ್ಲಿ ಇರಲು ಕಿರಿಕಿರಿ ಆಗಬಹುದು ಅಥವಾ ಕಾರು ಅ’ಪ’ಘಾ’ತಕ್ಕೀಡಾಗಬಹುದು.
ಹಾಗಾಗಿ ಯಾವುದೇ ಕಾರಣಕ್ಕೂ ಈ ರೀತಿ ಮಾಡಿಕೊಂಡ ಹರಕೆಯನ್ನು ಮರೆಯಬೇಡಿ ಸಾಧ್ಯವಾದರೆ ನಿಮ್ಮ ಕಾರ್ಯ ಕೈ ಗೂಡಿದ ತಕ್ಷಣವೇ ಹರಕೆಯನ್ನು ತೀರಿಸಲು ಪ್ರಯತ್ನಿಸಿ. ನಿಮ್ಮನ್ನು ಕಾಯುವ ದೇವರಿಗೆ ನೀವು ಕೂಡ ಅದೇ ರೀತಿ ಭಯ ಭಕ್ತಿಯಿಂದ ನಡೆದುಕೊಳ್ಳಿ, ಹರಕೆಗಳನ್ನು ತಪ್ಪದೇ ತೀರಿಸಿ ಒಳ್ಳೆಯದಾಗುತ್ತದೆ. ಇದು ಬಹಳ ಉಪಯುಕ್ತ ಮಾಹಿತಿಯಾಗಿದ್ದು, ತಪ್ಪದೇ ಇದನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.