ಕಣ್ಣಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರು ಈ ಟಿಪ್ಸ್ ಫಾಲೋ ಮಾಡಿ.!
ಕಣ್ಣು ಅತ್ಯಂತ ಪ್ರಮುಖ ಅಂಗ. ಹೌದು ಕಣ್ಣು ಪ್ರತಿಯೊಬ್ಬರಿಗೂ ಕೂಡ ಬಹಳ ಪ್ರಮುಖವಾದಂತಹ ಅಂಗವಾಗಿದ್ದು ಇದು ಸರಿ ಇದ್ದರೆ ಮಾತ್ರ ಆ ವ್ಯಕ್ತಿ ತನ್ನ ಜೀವನ ಪರ್ಯಂತ ಯಾವುದೇ ರೀತಿಯ ಸಮಸ್ಯೆ ಇಲ್ಲದೆ ಯಾರ ಸಹಾಯವೂ ಇಲ್ಲದೆ ಅವನು ಬದುಕಬಹುದು. ಹಾಗೇನಾದರೂ ಒಬ್ಬ ವ್ಯಕ್ತಿಯಲ್ಲಿ ಯಾವುದಾದರೂ ಕಣ್ಣಿನ ಸಮಸ್ಯೆ ಕಾಣಿಸಿಕೊಂಡರೆ ಅವನು ಜೀವನಪರ್ಯಂತ ಒಬ್ಬರ ಹಂಗಿನಲ್ಲಿ ಇರಬೇಕಾಗುತ್ತದೆ.
ಅಂದರೆ ಒಬ್ಬರ ಸಹಾಯವನ್ನು ಪಡೆದುಕೊಳ್ಳಲೇಬೇಕಾಗುತ್ತದೆ ಅಂತಹ ಪರಿಸ್ಥಿತಿ ನಮಗೆ ಈ ಕಣ್ಣಿನಿಂದ ಬರುತ್ತದೆ. ಆದ್ದರಿಂದ ಪ್ರತಿಯೊಬ್ಬರಿಗೂ ಕೂಡ ಕಣ್ಣು ಆರೋಗ್ಯವಾಗಿ ಇರುವುದು ಬಹಳ ಮುಖ್ಯವಾಗಿರುತ್ತದೆ. ಇದರ ಜೊತೆ ನಮ್ಮ ಕಣ್ಣು ಸರಿಯಾಗಿದ್ದು ಅದನ್ನು ನಾವು ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳಲಿಲ್ಲ ಎಂದರು ಕೂಡ ಅದರಿಂದ ಹಲವಾರು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.
ಹೌದು ನಾವು ನಮ್ಮ ಪ್ರತಿನಿತ್ಯದ ಜೀವನದಲ್ಲಿ ನಾವು ಪ್ರತಿಯೊಂದು ಕೆಲಸ ಕಾರ್ಯವನ್ನು ಹೇಗೆ ಮಾಡಬೇಕು ಎಂದು ಆಲೋಚನೆ ಮಾಡಿ ಮಾಡುತ್ತೇವೋ ಅದೇ ವಿಧವಾಗಿ ನಾವು ನಮ್ಮ ಕಣ್ಣಿನ ಆರೋಗ್ಯ ಚೆನ್ನಾಗಿರಲಿ ಅದು ಕ್ರಿಯಾ ಶೀಲವಾಗಿ ಇರಲಿ ಎನ್ನುವ ಉದ್ದೇಶದಿಂದ ಈಗ ನಾವು ಹೇಳುವಂತ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ.
ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಣ್ಣಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಯಾವ ಕೆಲವು ಉತ್ತಮ ವಿಧಾನಗಳನ್ನು ಅನುಸರಿಸಬೇಕು ಎಂದು ಈ ಕೆಳಗೆ ತಿಳಿಯೋಣ.
ಕಣ್ಣಿಗೆ ಹಲವು ಖಾಯಿಲೆಗಳ ಪರಿಹಾರಕ್ಕೆ ಅನುಸರಿಸಿರಿ ನಿಸರ್ಗ ಕ್ರಮ ಹಾಗೂ ಮನೆ ಮದ್ದು.
* ಕಣ್ಣನ್ನು ದಿನಾಲು ತಣ್ಣೀರಿನಲ್ಲಿ ಅದ್ದಿ ಪಿಳುಕಿಸುವುದು. ಅಂದರೆ ನಿಮ್ಮ ಅಂಗೈಯನ್ನು ಸ್ವಚ್ಛವಾಗಿ ತೊಳೆದು ಅಲ್ಲಿ ನೀರನ್ನು ಇಟ್ಟು ಅದರ ಒಳಗೆ ನಿಮ್ಮ ಕಣ್ಣುಗಳನ್ನು ಅದ್ದಿದರೆ ಕಣ್ಣಿನಲ್ಲಿ ಯಾವುದೇ ರೀತಿಯ ಸಣ್ಣ ಕ್ರಿಮಿ ಧೂಳು ಇದ್ದರೂ ಕೂಡ ಅದು ಆಚೆ ಬರುತ್ತದೆ. ಆದ್ದರಿಂದ ಈ ವಿಧಾನವನ್ನು ಪ್ರತಿಯೊಬ್ಬರು ಅನುಸರಿಸುವುದು ತುಂಬಾ ಒಳ್ಳೆಯದು.
* ದಿನಾಲು ತಲೆ ಸ್ನಾನವನ್ನು ಮಾಡಬೇಕು ನೀರು ತುಂಬಾ ಬಿಸಿ ಬೇಡಾ. ಇದು ಕಣ್ಣಿನ ಮೇಲೆ ಪರಿಣಾಮ ಬೀರುತ್ತದೆ.
* ಕಣ್ಣಿನ ಬಹುತೇಕ ತೊಂದರೆಗಳಿಗೆ ಸರ್ವಾಂಗಾಸನ, ಶಿರ್ಷಾಸನ ತುಂಬಾ ಒಳ್ಳೆಯದು. ಈ ಆಸನಗಳನ್ನು ಮಾಡುವುದರಿಂದ ಕಣ್ಣಿಗೆ ಸಂಬಂಧಿಸಿದ ನರಗಳು ಕ್ರಿಯಾಶೀಲವಾಗುತ್ತದೆ ಹಾಗೂ ರಕ್ತ ಸಂಚಾರವು ಸುಲಭವಾಗಿ ಹರಿಯುತ್ತದೆ ಇದರಿಂದ ಕಣ್ಣಿಗೆ ಸಂಬಂಧಿಸಿದೆ ಯಾವುದೇ ಸಮಸ್ಯೆಗಳು ಕೂಡ ಬರುವುದಿಲ್ಲ ಹಾಗೇನಾದರೂ ಸ್ವಲ್ಪ ಪ್ರಮಾಣದಲ್ಲಿ ಇದ್ದರೆ ಅದು ದಿನೇ ದಿನೇ ಸರಿಹೋಗುತ್ತಾ ಬರುತ್ತದೆ.
* ಬೆಳಗಿನ ಜಾವ ಸೂರ್ಯೋದಯ ನೋಡುವುದು ಒಳ್ಳೆಯದು. ಹೌದು ಸೂರ್ಯನ ಬೆಳಕಿನಲ್ಲಿ ನಮಗೆ ವಿಟಮಿನ್ ಡಿ ಅಂಶ ಸಿಗುವುದರಿಂದ ಬೆಳಗಿನ ಜಾವದ ಎಳೆ ಬಿಸಿಲನ್ನು ನೋಡುವುದರಿಂದ ಕಣ್ಣಿಗೆ ತುಂಬಾ ಒಳ್ಳೆಯದು.
* ಕಣ್ಣು ಮಂದವಾಗದಂತೆ ತಡೆಯಲು ಹಾಗೂ ದೃಷ್ಟಿ ಸುಧಾರಿಸಿ ಕೊಳ್ಳಲು ಬೇವಿನ ಮರದಲ್ಲಿ ಇಟ್ಟ ಜೇನು ತುಪ್ಪವನ್ನು ದಿನಾಲು ಕಣ್ಣಿ ನಲ್ಲಿ ತಲಾ ಒಂದು ಹನಿ ಹಾಕಿಕೊಳ್ಳುವುದು.
* ಕಣ್ಣಿನಲ್ಲಿ ಉರಿ ಹಾಗೂ ಕಣ್ಣು ಕೆಂಪಾಗಿದ್ದರೆ ದಿನ ಮೂರು ಹನಿ ಎಳನೀರು ಹಾಕುವುದು.
* ಕಣ್ಣಿನಲ್ಲಿ ಕಸ ಬಿದ್ದರೆ ಔಡಲ ಎಣ್ಣೆಯನ್ನು ಹಾಕಬೇಕು.
* ಕಣ್ಣಿನ ದೃಷ್ಟಿ ಚೆನ್ನಾಗಿರಲು ಹಸಿರು ತರಕಾರಿ, ಗಜ್ಜರಿ, (ಕ್ಯಾರೆಟ್) ನೆಲ್ಲಿಕಾಯಿ, ವಿಶೇಷವಾಗಿ ಹೊನ್ನೆಗೊನೆ ಸೊಪ್ಪು ಹಾಗೂ ಕಿರುತಸಾಲಿ ಸೊಪ್ಪು ಒಳ್ಳೆಯದು.
* ಇರುಳು ಗಣ್ಣು ತಡೆಯಲು ದಿನಾಲು 2 ತಿಂಗಳು ಕೃಷ್ಣ ತುಳಸಿ ರಸ ಎರಡು ಕಣ್ಣಿಗೆ ತಲಾ 1 ಹನಿ ಹಾಕಬೇಕು.