ಈಗಿನ ಕಾಲದಲ್ಲಿ ಮಕ್ಕಳು ಹುಟ್ಟಿದ ತಕ್ಷಣ ತಾಯಿಯ ಎದೆ ಹಾಲು ಕೊಡುವುದಕ್ಕೂ ಮೊದಲು ಜೇನುತುಪ್ಪ ಕೊಡುತ್ತಾರೆ ಅಥವಾ ಸಕ್ಕರೆ ನೀರು ಹಾಕುತ್ತಾರೆ ಅಥವಾ ತಮ್ಮ ಮನೆ ದೇವರ ಪ್ರಸಾದ ಎಂದು ತೀರ್ಥ ಹಾಕುತ್ತಾರೆ. ಈ ರೀತಿ ಮಾಡುವುದಕ್ಕಿಂತ ತಾಯಿ ಎದೆ ಹಾಲನ್ನು ಕೊಡಬೇಕು, ಯಾವುದೇ ಕಾರಣಕ್ಕೂ ತಾಯಿ ಎದೆ ಹಾಲಿಗಿಂತ ಮೊದಲು ಯಾವುದೇ ಆಹಾರವನ್ನು ಕೊಡದೆ ಇರುವುದು ಒಳ್ಳೆಯದು ಯಾಕೆಂದರೆ ಎದೆ ಹಾಲು ಪರಿಪೂರ್ಣ ಆಹಾರವಾಗಿರುತ್ತದೆ.
ಉಳಿದ ಎಲ್ಲಾ ಆಹಾರ ಪದಾರ್ಥಗಳಿಗಿಂತ ಹೆಚ್ಚು ಪೋಷಕಾಂಶವಿರುವ ಇದನ್ನು ಸೇವಿಸಿದಾಗ ಮಗು ಹೆಚ್ಚು ಆರೋಗ್ಯವಾಗಿರುತ್ತದೆ, ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಈಗಿನ ಕಾಲದಲ್ಲಿ ಕೆಲವು ಹೆಣ್ಣು ಮಕ್ಕಳು ಬೇಕೆಂದಲೇ ಎದೆ ಹಾಲು ಕೊಡುವುದಿಲ್ಲ, ಅದಕ್ಕಿಂತ ಪಾಪ ಬೇರೊಂದಿಲ್ಲ.
ಕೆಲವರು ಎದೆ ಹಾಲು ಬರುವುದೇ ಇಲ್ಲ ಎಂದು ಹೇಳುತ್ತಾರೆ ಆದರೆ ಮಕ್ಕಳಿಗೆ ಅಭ್ಯಾಸ ಮಾಡಿಸಿ ಮಕ್ಕಳು ಎದೆ ಹಾಲು ಕುಡಿಯಲು ಆರಂಭಿಸಿದಾಗ ತಾಯಿಯ ಎದೆಹಾಲಿನ ಗ್ರಂಥಿಗಳು ಪ್ರಚೋದನೆಯಾಗಿ ಹಾಲು ಉತ್ಪತ್ತಿ ಆಗುತ್ತದೆ. ಈ ರೀತಿ ಎದೆ ಹಾಲು ಕುಡಿದ ಮಕ್ಕಳು ಬಹಳ ಗಟ್ಟಿಮುಟ್ಟಾಗಿ ಇರುತ್ತಾರೆ ಇವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಗೆ ಇರುತ್ತದೆ.
ಆದರೆ ಕೆಲವರು ಈ ರೀತಿ ಹಾಲು ಬರಲಿಲ್ಲ ಎಂದರೆ ಬಹಳ ಬೇಗ ಇದನ್ನು ಡಿಸೈಡ್ ಆಗಿ ಬೇರೆ ಹಾಲುಗಳನ್ನು ಕುಡಿಸಲು ಆರಂಭಿಸುತ್ತಾರೆ. ಇದರಿಂದ ತಾಯಿ ಹಾಗೂ ಮಗುವಿನ ಆರೋಗ್ಯ ಎರಡಕ್ಕೂ ಕೂಡ ಒಳ್ಳೆಯದಲ್ಲ. ಮಗು ತಾಯಿಯ ಹಾಲು ಕುಡಿಯುವುದು ಅಭ್ಯಾಸ ಮಾಡಿಕೊಳ್ಳದೆ ಹೋದರೆ ಅದು ತಾಯಿಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ಹಾಕಿ ಇದೇ ಕಾರಣಕ್ಕಾಗಿ ವಿಪರೀತವಾದ ನೋವು ಜ್ವರ ಎಲ್ಲವನ್ನು ಅನುಭವಿಸಬೇಕಾಗುತ್ತದೆ ಮತ್ತು ಮಗು ಕೂಡ ತಾಯಿ ಎದೆ ಹಾಲನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳದೆ ಹೋದರೆ ನಂತರದ ದಿನಗಳಲ್ಲಿ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತದೆ ತಾಯಿಯ ಗರ್ಭದಲ್ಲಿ ಇರುವಾಗ ಮಗುವಿನ ಶ್ವಾಸಕೋಶ ಸಂಕುಚಿತಗೊಂಡಿರುತ್ತದೆ.
ಅದು ಆಚೆಗೆ ಬಂದ ಮೇಲೆ ನಿಧಾನವಾಗಿ ಈ ವಾತಾವರಣಕ್ಕೆ ಹೊಂದಿಕೊಳ್ಳುತ್ತಾ ಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ ತಾಯಿ ಎದೆ ಹಾಲು ಕೊಡುವಾಗ ಅದು ಉಸಿರು ತೆಗೆದುಕೊಳ್ಳುವ ರೀತಿಯಿಂದ ಶ್ವಾಸಕೋಶ ನಿಧಾನವಾಗಿ ಹಿಗ್ಗಲು ಶುರುವಾಗುತ್ತದೆ ಒಂದು ವೇಳೆ ಈ ಅಭ್ಯಾಸ ಆಗದೆ ಇದ್ದರೆ ಮಗು ಬೆಳೆದ ಬೆಳೆ ಅದಕ್ಕೆ ಅಸ್ತಮಾ ಗುರಲು ಮುಂತಾದ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುವುದು ಗ್ಯಾರಂಟಿ.
ಹಾಗಾಗಿ ಪ್ರತಿದಿನವೂ ಕೂಡ ಮಗುವಿಗೆ ಹಾಲು ಕುಡಿಯುವ ಅಭ್ಯಾಸ ಮಾಡಿಸಿ ಮಗು ಎಷ್ಟೇ ಅತ್ತರು ಅದು ಒಂದು ಹೊತ್ತು ತಿನ್ನದೇ ಇದ್ದರೂ ಈ ವಿಚಾರದಲ್ಲಿ ಸ್ವಲ್ಪ ಗಟ್ಟಿ ಮನಸ್ಸು ಮಾಡಬೇಕು, ಇದು ಮಗುವಿನ ಆರೋಗ್ಯ ದೃಷ್ಟಿಯಿಂದ ಬಹಳ ಒಳ್ಳೆಯದು.
ಆಗ ಮಗು ತಾನಾಗಿ ಹಾಲು ಕುಡಿಯಲು ಆರಂಭಿಸುತ್ತದೆ ಅದನ್ನು ಕಲಿಯುತ್ತದೆ. ಮಗು ಹೆಚ್ಚಾಗಿ ಅಳುತ್ತಿದೆ ಮಗುವಿಗೆ ಆಗುತ್ತಿಲ್ಲ ಎಂದು ನಾವೇ, ಬೇರೆ ಹಾಲು ಅಥವಾ ಜೇನುತುಪ್ಪವನ್ನು ತಿನಿಸಲು ಆರಂಭಿಸಿದರೆ ಮಗು ಅದನ್ನೇ ಕಲಿಯುತ್ತದೆ, ಮತ್ತೆ ಎಂದೂ ಅದು ಹಾಲು ಕುಡಿಯುವುದನ್ನು ಕಲಿಯುವುದಿಲ್ಲ.
ಈ ಕಾರಣಕ್ಕಾಗಿ ಪೌಷ್ಟಿಕಾಂಶದ ವಿಚಾರದಲ್ಲಿ ಮಾತ್ರವಲ್ಲದೆ ನಂತರದ ದಿನಗಳಲ್ಲಿ ದೇಹದ ಅಂಗಾಂಗ ಗಳಿಗೂ ಸಂಬಂಧ ಪಟ್ಟ ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ಹಾಗಾಗಿ ಇನ್ನು ಮುಂದೆ ಇಂತಹ ತಪ್ಪನ್ನು ಮಾಡಬೇಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.