ಈಗಿನ ಕಾಲದಲ್ಲಿ ಯುವ ಜನತೆಯೂ ಕೂಡ ವಿಪರೀತವಾದ ಬೆನ್ನು ನೋವು ಹಾಗೂ ಸೊಂಟ ನೋವಿನಿಂದ ಬಳಲುತ್ತಾರೆ. ಬೆನ್ನು ನೋವು ಬರಲು ಸಾಕಷ್ಟು ಕಾರಣಗಳಿವೆ. ಯಾವಾಗಲೂ ನಿಂತುಕೊಂಡು ಕೆಲಸ ಮಾಡುವವರು ಅಥವಾ ಒಂದೇ ಕಡೆ ಕುಳಿತು ಕೆಲಸ ಮಾಡುವವರಿಗೆ ಬೆನ್ನು ನೋವು ಸಹಜವಾಗಿ ಬರುತ್ತದೆ.
ಇದನ್ನು ಬಿಟ್ಟು ಯಾವಾಗಲಾದರೂ ಬಿದ್ದು ಬೆನ್ನಿನ ಭಾಗಕ್ಕೆ ಹಾನಿ ಆಗಿದ್ದರೆ ಆಗಲೂ ಕೂಡ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ನಮಗಾಗಿರುವ ಸಮಸ್ಯೆ ಮೇಲ್ಬಾಗಕ್ಕೆ ಮಾತ್ರ ಆಗಿದ್ದರೆ ಬಹಳ ಬೇಗ ಗುಣ ಆಗುತ್ತದೆ. ಆದರೆ ಡಿಸ್ಕ್ ಗಳಿಗೆ ಡ್ಯಾಮೇಜ್ ಆಗಿದ್ದರೆ ಆ ಭಾಗದಲ್ಲಿರುವ ನರಸಮೂಹಕ್ಕೂ ಕೂಡ ತೊಂದರೆ ಆಗಿರುತ್ತದೆ ಆ ಮೂಲಕ ಹರಿದು ಹೋಗುವ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗಿ ನಿಧಾನಕ್ಕೆ ಕೆಲವು ಅಂಗಗಳು ಸ್ವಾಧೀನ ಕಳೆದುಕೊಳ್ಳಬಹುದು.
ಹಾಗಾಗಿ ವಿಪರೀತವಾದ ಬೆನ್ನು ನೋವು ಇದ್ದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಬೆನ್ನು ನೋವು ಸ್ವಲ್ಪ ಇದ್ದಾಗ ಅದು ಮೊದಲ ಹಂತದಲ್ಲಿ ಅಥವಾ ಎರಡನೇ ಹಂತದಲ್ಲಿ ಇದ್ದಾಗ ಕೆಲ ಮನೆ ಮದ್ದುಗಳನ್ನು ಮಾಡುವುದರಿಂದ ಗುಣವಾಗುತ್ತದೆ. ಆ ಮನೆಮದ್ದುಗಳಿಗೆ ಗುಣವಾಗದೆ ಇದ್ದರೆ ತಕ್ಷಣ ನೀವು ಸೂಕ್ತ ವೈದ್ಯರನ್ನು ಭೇಟಿ ಆಗಬೇಕು ಇಲ್ಲವಾದಲ್ಲಿ ನಂತರದ ದಿನಗಳಲ್ಲಿ ಆತ ಹಾಸಿಗೆ ಹಿಡಿಯುವ ಪರಿಸ್ಥಿತಿ ಬಂದರೂ ಬರಬಹುದು.
ಮಲಬದ್ಧತೆ, ಅಜೀರ್ಣ, ಮಾನಸಿಕ ಒತ್ತಡದಿಂದ ಕೂಡ ಬೆನ್ನು ನೋವು ಹಾಗೂ ಸೊಂಟ ನೋವು ಬರುತ್ತದೆ ಎಂದು ಆಯುರ್ವೇದ ಹೇಳುತ್ತದೆ. ಆಯುರ್ವೇದದ ಪಂಚಕರ್ಮ ಚಿಕಿತ್ಸೆಯೂ ಇದಕ್ಕೆ ಸೂಕ್ತ ಪರಿಹಾರ ಇದಲ್ಲದೆ ಆಯುರ್ವೇದದಲ್ಲಿ ಬೆನ್ನು ನೋವಿಗೆಂದೇ ವಿಶೇಷ ಚಿಕಿತ್ಸೆಗಳು ಇವೆ ಆ ಚಿಕಿತ್ಸೆಗಳನ್ನು ನೀಡುವ ಮೂಲಕ ಡಿಸ್ ಲೋಕೇಟ್ ಆಗಿರುವ ಡಿಸ್ಕ್ ಗಳನ್ನು ಮತ್ತೆ ಕ್ರಿಯಾಶೀಲಗೊಳಿಸಿ ದೇಹಕ್ಕೆ ಹೊಸ ಚೈತನ್ಯ ನೀಡಲಾಗುತ್ತದೆ.
ಕಾಟಿಭಸ್ತಿ, ಪತ್ರಪಿಂಡಸ್ವೇದ, ಯೋಗ ಬಸ್ತಿ, ಕಾಲ ಬಸ್ತಿ, ಕರ್ಮ ಬಸ್ತಿ ಚಿಕಿತ್ಸೆಗಳ ಮೂಲಕ, ತೂಕ ಹೆಚ್ಚಾಗಿ ಈ ಸಮಸ್ಯೆಗಳಾಗಿದ್ದರೆ ವಮನ ರೇಚನ ಚಿಕಿತ್ಸೆ ನೀಡಿ ಮತ್ತು ಈ ಮೇಲೆ ತಿಳಿಸಿದಂತೆ ಪಂಚಕರ್ಮ ಚಿಕಿತ್ಸೆಯಿಂದ ಗುಣಪಡಿಸಲಾಗುತ್ತದೆ. ಇದಕ್ಕೂ ಮುನ್ನ ಕೆಲ ಮನೆ ಮದ್ದುಗಳನ್ನು ಪ್ರಯೋಗಿಸಿ ನೋಡಿ.
* ಸಾಧಾರಣವಾದ ಬೆನ್ನು ನೋವು ಬಂದಿದ್ದರೆ ನೀಲಗಿರಿ ಎಣ್ಣೆ ಹಾಗೂ ಕೊಬ್ಬರಿ ಎಣ್ಣೆಯನ್ನು ಸಮಪ್ರಮಾಣದಲ್ಲಿ ಮಿಕ್ಸ್ ಮಾಡಿ ಅದಕ್ಕೆ ಸ್ವಲ್ಪ ಪಚ್ಚಕರ್ಪೂರ ಸೇರಿಸಿ ಅದನ್ನು ಸ್ವಲ್ಪ ಬಿಸಿ ಮಾಡಿ ಬೆನ್ನು ಹಾಗೂ ಸೊಂಟದ ಭಾಗಕ್ಕೆ ಚೆನ್ನಾಗಿ ಮಸಾಜ್ ಮಾಡಬೇಕು ಮರುದಿನ ಬಿಸಿನೀರಿನಲ್ಲಿ ಸ್ನಾನ ಮಾಡಬೇಕು ಮೊದಲನೇ ಹಂತದ ಬೆನ್ನು ನೋವಾಗಿದ್ದರೆ ಈ ಮನೆಮದ್ದಿಗೆ ಗುಣವಾಗುತ್ತದೆ.
* ನುಗ್ಗೆ ಸೊಪ್ಪು, ಬೇವಿನ ಸೊಪ್ಪು, ಹುಣಸೆ ಎಲೆ, ಹರಳೆಲೆ ಹಾಗೂ ಎಕ್ಕದ ಹೂವು ಇವುಗಳನ್ನು ಪೇಸ್ಟ್ ಮಾಡಿ 750 ಗ್ರಾಂ ನಷ್ಟು ಈ ಪೇಸ್ಟ್ ರೆಡಿಯಾದರೆ ಇದಕ್ಕೆ 250 ಗ್ರಾಂ ನಷ್ಟು ಬೆಳ್ಳುಳ್ಳಿ ಪೇಸ್ಟ್ ಬೇಕಾಗುತ್ತದೆ. ಮೊದಲಿಗೆ ಹರಳೆಣ್ಣೆಗೆ ಬೆಳ್ಳುಳ್ಳಿ ಪೇಸ್ಟ್ ಹಾಕಿ ನೀರಿನಾಂಶ ಆವಿಯಾಗಲು ಬಿಡಿ ನಂತರ ಸೊಪ್ಪಿನ ಪೇಸ್ಟ್ ಕೂಡ ಹಾಕಿ ಸ್ವಲ್ಪ ನೀರಿನಾಂಶ ಆವಿಯಾದ ಮೇಲೆ ಅದನ್ನು ಬೆನ್ನಿನ ಮೇಲೆ ಪಟ್ಟು ಹಾಕಬೇಕು.
ತೆಳು ಬಟ್ಟೆಯಲ್ಲಿ ಕವರ್ ಮಾಡಿ ರಾತ್ರಿ ಪೂರ್ತಿ ಹಾಗೆ ಇರಬೇಕು ಮರುದಿನ ಬೆಳಿಗ್ಗೆ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಎಷ್ಟೇ ಹಳೆಯ ನೋವಾಗಿದ್ದರು ಗುಣವಾಗುತ್ತದೆ. ಬೆನ್ನು ನೋವು ನಿವಾರಣೆಗೆ ಯೋಗಭ್ಯಾಸ ಮಾಡುವುದರಿಂದ ಕೂಡ ಕೆಲವರಿಗೆ ಗುಣವಾಗುತ್ತದೆ ಇದರೊಂದಿಗೆ ಕೆಲವು ಎಚ್ಚರಿಕೆಗಳನ್ನು ವಹಿಸಬೇಕು.
ಬೆನ್ನು ನೋವಿನ ಸಮಸ್ಯೆ ಇದ್ದರೆ ಹಾಸಿಗೆ ಮೇಲೆ ಮಲಗಬಾರದು ಚಾಪೆ ಮೇಲೆ ಮಲಗಬೇಕು ಮತ್ತು ಸಡನ್ ಆಗಿ ಏಳಬಾರದು, ನಿಧಾನಕ್ಕೆ ಎಡಗಡೆ ಅಥವಾ ಬಲಗಡೆ ಜರಗಿ ಏಳಬೇಕು ಈ ರೀತಿಯ ಬೆನ್ನು ನೋವು ಕಡಿಮೆ ಮಾಡಿಕೊಳ್ಳಬಹುದು. ಇವುಗಳಿಗೆ ಗುಣವಾಗದೆ ಇದ್ದರೆ ತಪ್ಪದೇ ಸೂಕ್ತ ವೈದ್ಯರನ್ನು ಭೇಟಿ ಮಾಡಿ.