ನಮ್ಮ ಅಂಗೈಯಲ್ಲಿಯೇ ನಮ್ಮ ಭವಿಷ್ಯ ಯಾವ ರೀತಿಯಾಗಿ ಇದೆ ಎಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಹೌದು. ಹಾಗಾದರೆ ಈ ದಿನ ನಮ್ಮ ಅಂಗೈಯನ್ನು ನಾವು ನೋಡಿಕೊಳ್ಳುವುದರಿಂದ ಹಾಗೂ ನಮ್ಮ ಅಂಗೈಯಲ್ಲಿ ಯಾವ ಸಂಕೇತಗಳು ಇರುವುದರಿಂದ ನಾವು ನಮ್ಮ ಜೀವನದಲ್ಲಿ ಎಷ್ಟು ಭಾಗ್ಯಶಾಲಿಗಳಾಗಿದ್ದೇವೆ ಎನ್ನುವುದನ್ನು ತಿಳಿದು ಕೊಳ್ಳಬಹುದು.
ಹಾಗಾದರೆ ಈ ದಿನ ಹೆಂಗಸರು ಯಾವ ಅಂಗೈಯನ್ನು ನೋಡಿಕೊಳ್ಳಬೇಕು ಎಂದರೆ ಎಡಗೈ ನೋಡಿಕೊಳ್ಳಬೇಕು ಅದೇ ರೀತಿ ಯಾಗಿ ಗಂಡಸರು ತಮ್ಮ ಬಲಗೈನಲ್ಲಿ ಈ ಸಂಕೇತಗಳನ್ನು ನೋಡುವು ದರ ಮೂಲಕ ನೀವು ಎಷ್ಟು ಭಾಗ್ಯಶಾಲಿಗಳಾಗಿದ್ದೀರಿ ಎನ್ನುವುದನ್ನು ತಿಳಿಯಬಹುದು.
ಹಾಗಾದರೆ ನಮ್ಮ ಅಂಗೈಯಲ್ಲಿ ಯಾವ 5 ಭಾಗ್ಯಶಾಲಿ ಸಂಖ್ಯೆಗಳು ಕಾಣಿಸುತ್ತದೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ. ಹಾಗಾದರೆ ಯಾವ ಸಂಕೇತಗಳು ನಮ್ಮ ಕಣ್ಣಿಗೆ ಕಾಣಿಸುತ್ತದೆ ಹಾಗೂ ಅದನ್ನು ಹೇಗೆ ತಿಳಿದುಕೊಳ್ಳುವುದು ಎಂದು ಈಗ ಒಂದೊಂದಾಗಿ ತಿಳಿಯೋಣ.
* ಪ್ರತಿಯೊಬ್ಬರೂ ಕೂಡ ತಮ್ಮ ಅಂಗೈಯನ್ನು ಅಂದರೆ ಬೆರಳನ್ನು ನೋಡಿಕೊಳ್ಳಬೇಕು. ಬೆರಳುಗಳಲ್ಲಿ ಹಲವಾರು ರೇಖೆಗಳನ್ನು ನಾವು ನೋಡಬಹುದು. ಹೌದು ಅಂಗೈಯನ್ನು ತೆಗೆದ ತಕ್ಷಣ ಬೆರಳುಗಳ ಕೆಳಭಾಗದಲ್ಲಿ ನೇರವಾದಂತಹ ರೇಖೆಗಳು ಹೆಚ್ಚಾಗಿ ಇದ್ದರೆ ಅದರಲ್ಲೂ ಹೆಬ್ಬೆರಳನ್ನು ಬಿಟ್ಟು ಮಿಕ್ಕ ನಾಲ್ಕು ಬೆರಳುಗಳಲ್ಲಿ ಈ ನೇರವಾದಂತಹ ರೇಖೆಗಳು ಇದ್ದರೆ ಅವರು ತುಂಬಾ ಅದೃಷ್ಟಶಾಲಿಗಳು ಎಂದೇ ಕೇಳಬಹುದು.
* ಇವರು ತಮ್ಮ ಮನಸ್ಸಿನಲ್ಲಿ ಯಾವ ಕೆಲಸ ಕಾರ್ಯಗಳು ಆಗಬೇಕು ಎಂದು ಪ್ರಯತ್ನಿಸುತ್ತಿರುತ್ತಾರೋ ಅವೆಲ್ಲವೂ ಕೂಡ ಸಂಪೂರ್ಣವಾಗಿ ನೇರವೇರುತ್ತದೆ. ಉದಾಹರಣೆಗೆ:- ನೀವು ಯಾವುದಾದರು ಹೊಸ ವಾಹನ ಖರೀದಿ ಇರ ಬಹುದು ಆಸ್ತಿ ಖರೀದಿ ಇರಬಹುದು ಇದ್ಯಾವುದೇ ಇರಲಿ ಅವೆಲ್ಲವನ್ನು ಸಹ ನೀವು ಪಡೆದುಕೊಳ್ಳುತ್ತೀರಿ. ಅಷ್ಟು ಅದೃಷ್ಟವನ್ನು ನೀವು ಪಡೆಯಲಿದ್ದೀರಿ ಎನ್ನುವುದೇ ಈ ರೇಖೆಯ ಸಂಕೇತ.
* ಅದೇ ರೀತಿಯಾಗಿ ನಿಮ್ಮ ಬೆರಳಿನ ಮಧ್ಯಭಾಗದಲ್ಲಿ ಈ ರೇಖೆಗಳು ಹೆಚ್ಚಾಗಿ ಇದ್ದರೆ ನಿಮ್ಮ ಮನಸ್ಸಿನ ಇಚ್ಛೆಗಳು ನಿಮ್ಮ ಕಡಿಮೆ ವಯಸ್ಸಿ ನಲ್ಲಿಯೇ ಪೂರ್ಣಗೊಳ್ಳುತ್ತದೆ ಎನ್ನುವುದರ ಅರ್ಥ ಇದಾಗಿದೆ.
* ಇನ್ನು ಎರಡನೆಯದಾಗಿ ನಿಮ್ಮ ಅಂಗೈಯಲ್ಲಿ ಶುಕ್ರ ಪರ್ವತವನ್ನು ನೋಡಬೇಕಾಗುತ್ತದೆ. ಇದನ್ನು ನಮ್ಮ ಜೀವನದ ರೇಖೆ ಎಂದು ಕೂಡ ಕರೆಯಲಾಗುತ್ತದೆ ಈ ಒಂದು ಶುಕ್ರ ಪರ್ವ ನಮ್ಮ ಹೆಬ್ಬೆಟ್ಟಿನ ಪಕ್ಕದಲ್ಲಿ ಇರುವಂತಹ ಸ್ಥಳ ಎಂದೇ ಹೇಳುತ್ತೇವೆ. ಆ ಒಂದು ಸ್ಥಳದ ಮಧ್ಯ ಭಾಗವನ್ನು ನಾವು ಶುಕ್ರ ಪರ್ವ ಎಂದು ಕರೆಯಲಾಗುತ್ತದೆ.
ನಿಮ್ಮ ಶುಕ್ರ ಪರ್ವದ ಮೇಲ್ಭಾಗದಲ್ಲಿ ಉದ್ದನೆಯ ರೇಖೆಗಳು ಕಾಣಿಸಿ ಕೊಂಡರೆ ಇದು ನಿಮ್ಮ ಹಣಕಾಸಿನ ಬಗ್ಗೆ ತಿಳಿಸುತ್ತದೆ. ಹೌದು ನಿಮಗೆ ಯಾವುದೇ ಸಂದರ್ಭದಲ್ಲಿಯೂ ಯಾವುದೇ ರೀತಿಯ ಹಣ ಕಾಸಿನ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ನಿಮ್ಮ ಜೀವನದ ಪ್ರಾರಂಭ ಹಂತದಲ್ಲಿ ಸ್ವಲ್ಪ ತೊಂದರೆಗಳು ಕಾಣಿಸಿಕೊಳ್ಳಬಹುದು ಆದರೆ ಜೀವನ ಸಾಗುತ್ತಾ ನಿಮ್ಮ ಯಾವುದೇ ಹಣಕಾಸಿನ ಸಮಸ್ಯೆಗಳು ಕೂಡ ಬಗೆ ಹರಿದು ಅತಿ ಹೆಚ್ಚು ಹಣಕಾಸು ನಿಮ್ಮ ಬಳಿ ಸೇರುತ್ತದೆ.
* ಅದೇ ರೀತಿಯಾಗಿ ಶುಕ್ರ ಪರ್ವದ ಮೇಲ್ಭಾಗದಲ್ಲಿ ಗೆರೆಗಳು ಅಡ್ಡವಾಗಿ ಇದ್ದರೆ ಈ ರೇಖೆಗಳು ನಿಮಗೆ ಕೆಲವೊಂದಷ್ಟು ಸಮಸ್ಯೆಗಳನ್ನು ತಂದೊ ಡ್ಡಬಹುದು. ಅದರಲ್ಲೂ ಹಣಕಾಸಿನ ವಿಚಾರವಾಗಿ ಕೆಲವೊಂದಷ್ಟು ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಅದರಲ್ಲೂ ನಿಮ್ಮ ಕುಟುಂಬದಲ್ಲಿ ಹಣಕಾಸಿನ ಅಗತ್ಯತೆ ಇದ್ದರೂ ಕೂಡ ನೀವು ಆ ಸಮಯಕ್ಕೆ ಹಣಕಾಸನ್ನು ಒದಗಿಸಲು ಸಾಧ್ಯವಾಗುವುದಿಲ್ಲ ಇದರಿಂದ ನೀವು ಅವರ ಮುಂದೆ ಕೆಟ್ಟವರಾಗುತ್ತೀರಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.